ಒಟಿಟಿ ವಿಚಾರದಲ್ಲಿ ಶಾರುಖ್​ ಖಾನ್​ ಹೇಳಿದ್ದು ಸುಳ್ಳು?; ಹೊರಬಿತ್ತು ಅಸಲಿ ವಿಚಾರ

ಒಟಿಟಿ ವಿಚಾರದಲ್ಲಿ ಶಾರುಖ್​ ಖಾನ್​ ಹೇಳಿದ್ದು ಸುಳ್ಳು?; ಹೊರಬಿತ್ತು ಅಸಲಿ ವಿಚಾರ
ಎಸ್​ಆರ್​ಕೆ

ಎಸ್​ಆರ್​ಕೆ+ ಲೋಗೋವನ್ನು ಶಾರುಖ್​ ಖಾನ್​ ಶೇರ್​ ಮಾಡಿಕೊಂಡಿದ್ದರು. ‘ಒಟಿಟಿ ಜಗತ್ತಿನಲ್ಲಿ ಏನೇನೋ ಆಗಲಿದೆ’ ಎಂದು ಬರೆದುಕೊಂಡಿದ್ದರು. ಇದನ್ನು ನೋಡಿದ ಅಭಿಮಾನಿಗಳು ಸಖತ್​ ಥ್ರಿಲ್​ ಆಗಿದ್ದರು. ಆದರೆ, ಇದರ ಅಸಲಿಯತ್ತು ಬೇರೆ ಇದೆ.

TV9kannada Web Team

| Edited By: Rajesh Duggumane

Mar 16, 2022 | 1:59 PM

ಶಾರುಖ್​ ಖಾನ್ (Shah Rukh Khan) ಬಾಲಿವುಡ್​ನಲ್ಲಿ ಬಹುಬೇಡಿಕೆಯ ನಟ. ‘ಪಠಾಣ್​’ ಸಿನಿಮಾ (Pathan Movie) ಕೆಲಸದಲ್ಲಿ ಅವರು ಬ್ಯುಸಿ ಇದ್ದಾರೆ. ಈ ಸಿನಿಮಾ ಬಗ್ಗೆ ದೊಡ್ಡ ಮಟ್ಟದ ನಿರೀಕ್ಷೆ ಇದೆ. ಇದರ ಜತೆಗೆ ನಿರ್ಮಾಣದಲ್ಲೂ ಶಾರುಖ್​ ಖಾನ್​ ಬ್ಯುಸಿ ಆಗಿದ್ದಾರೆ. ‘ರೆಡ್​ ಚಿಲ್ಲೀಸ್ ಎಂಟರ್​ಟೇನ್​ಮೆಂಟ್​​’ (Red Chilies Entertainer) ಸ್ಟುಡಿಯೋಸ್​ ಅಡಿಯಲ್ಲಿ ಹಲವು ಸಿನಿಮಾ ನಿರ್ಮಾಣ ಮಾಡಿದ್ದಾರೆ. ಈಗ ಅವರು ಎಸ್​ಆರ್​ಕೆ+ (SRK+) ಹೆಸರಿನ ಒಟಿಟಿ ಪ್ಲಾಟ್​ಫಾರ್ಮ್​ ಲಾಂಚ್ ಮಾಡೋಕೆ ರೆಡಿ ಆಗಿದ್ದಾರೆ ಎನ್ನಲಾಗಿತ್ತು. ಖುದ್ದು ಶಾರುಖ್​ ಅವರೇ ಹೊಸ ಪೋಸ್ಟರ್​ ಹಂಚಿಕೊಂಡು ಈ ಬಗ್ಗೆ ಅಪ್​ಡೇಟ್​ ನೀಡಿದ್ದರು. ಆದರೆ, ಈ ವಿಚಾರದಲ್ಲಿ ಶಾರುಖ್​ ಖಾನ್​ ಅಭಿಮಾನಿಗಳಿಗೆ ಸುಳ್ಳು ಹೇಳಿದ್ದಾರೆ ಎನ್ನುವ ಬಗ್ಗೆ ವರದಿ ಆಗಿದೆ.

ಎಸ್​ಆರ್​ಕೆ+ ಲೋಗೋವನ್ನು ಶಾರುಖ್​ ಖಾನ್​ ಶೇರ್​ ಮಾಡಿಕೊಂಡಿದ್ದರು. ‘ಒಟಿಟಿ ಜಗತ್ತಿನಲ್ಲಿ ಏನೇನೋ ಆಗಲಿದೆ’ ಎಂದು ಬರೆದುಕೊಂಡಿದ್ದರು. ಇದನ್ನು ನೋಡಿದ ಅಭಿಮಾನಿಗಳು ಸಖತ್​ ಥ್ರಿಲ್​ ಆಗಿದ್ದರು. ನಟ ಸಲ್ಮಾನ್ ಖಾನ್​, ನಿರ್ಮಾಪಕ ಕರಣ್​ ಜೋಹರ್​ ಈ ಬಗ್ಗೆ ತಮ್ಮ ಎಗ್ಸೈಟ್​ಮೆಂಟ್​ ತೋರಿಸಿದ್ದರು. ಆದರೆ, ಈ ವಿಚಾರದ ಅಸಲಿಯತ್ತೇ ಬೇರೆ ಇದೆ ಎನ್ನಲಾಗುತ್ತಿದೆ.

ಇಟೈಮ್ಸ್​ ವರದಿ ಮಾಡಿದ ಪ್ರಕಾರ, ಎಸ್​​ಆರ್​ಕೆ+ ಅನ್ನೋದು ಶಾರುಖ್​ ಖಾನ್​ ನೀಡಿದ ಜಾಹೀರಾತು ಎನ್ನಲಾಗಿದೆ. ಡಿಸ್ನಿ+ ಹಾಟ್​ಸ್ಟಾರ್ ಜತೆಗೆ ಶಾರುಖ್​ ಖಾನ್​ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಕಾರಣಕ್ಕೆ ಅವರು ಈ ರೀತಿಯ ಪೋಸ್ಟರ್​ ಬಿಡುಗಡೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಇನ್ನೂ ಕೆಲ ವರದಿ ಪ್ರಕಾರ, ಶಾರುಖ್​ ಖಾನ್​ ಅವರು ಡಿಸ್ನಿ+ ಹಾಟ್​​ಸ್ಟಾರ್​ ಜತೆ ಹೊಸ ಸಿನಿಮಾ ಒಪ್ಪಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಅವರ ಕಡೆಯಿಂದ ಸ್ಪಷ್ಟನೆ ಬರಬೇಕಿದೆ.

‘ಪಠಾಣ್​’ ರಿಲೀಸ್​ ಬಗ್ಗೆ ಶಾರುಖ್​ ಈ ಮೊದಲು ಮಾಹಿತಿ ನೀಡಿದ್ದರು.ಆಕ್ಷನ್ ಥ್ರಿಲ್ಲರ್ ಮಾದರಿಯ ‘ಪಠಾಣ್’ನಲ್ಲಿ ಸ್ಪೈ ಆಗಿ ಶಾರುಖ್ ಕಾಣಿಸಿಕೊಂಡಿದ್ದಾರೆ. ಟೀಸರ್ ಶೇರ್ ಮಾಡಿದ್ದ ಶಾರುಖ್, ‘ಬಹಳ ತಡವಾಗಿ ನಿಮ್ಮೆದುರು ಬರುತ್ತಿದ್ದೇವೆ ಎನ್ನುವುದು ನನಗೆ ತಿಳಿದಿದೆ. ಆದರೆ ದಿನಾಂಕವನ್ನು ನೆನಪಿಟ್ಟುಕೊಳ್ಳಿ. 2023ರ ಜನವರಿ 25ರಂದು ‘ಪಠಾಣ್’ ರಿಲೀಸ್ ಆಗಲಿದೆ’ ಎಂದು ಬರೆದಿದ್ದರು.

ಇದನ್ನೂ ಓದಿ: ‘ಸ್ವಲ್ಪ ನೋವು, ಬೇಜಾರು ಆಯ್ತು’: ‘ಜೇಮ್ಸ್​’ ಚಿತ್ರದ ಪ್ರೀ-ರಿಲೀಸ್​ ಇವೆಂಟ್​ ಬಳಿಕ ಶಿವಣ್ಣ ಭಾವುಕ ಮಾತು

ಹುಲಿಯಾಗಿ ಘರ್ಜಿಸಿದ ಶಿವಣ್ಣ; ‘ಜೇಮ್ಸ್​’ ಬಿಡುಗಡೆಗೂ ಮುನ್ನ ಬಂತು ‘ಬೈರಾಗಿ’ ಸಿನಿಮಾದ ಟೀಸರ್​

Follow us on

Related Stories

Most Read Stories

Click on your DTH Provider to Add TV9 Kannada