ಹುಲಿಯಾಗಿ ಘರ್ಜಿಸಿದ ಶಿವಣ್ಣ; ‘ಜೇಮ್ಸ್​’ ಬಿಡುಗಡೆಗೂ ಮುನ್ನ ಬಂತು ‘ಬೈರಾಗಿ’ ಸಿನಿಮಾದ ಟೀಸರ್​

Bairagee movie teaser: ಶಿವರಾಜ್​ಕುಮಾರ್​ ನಟನೆಯ ‘ಬೈರಾಗಿ’ ಸಿನಿಮಾ ಟೀಸರ್​ ಬಿಡುಗಡೆ ಆಗಿದೆ. ಮಾ.17ರಂದು ಚಿತ್ರಮಂದಿರದಲ್ಲಿ ಈ ಟೀಸರ್​ ಪ್ರದರ್ಶನ ಆಗಲಿದೆ.

ಹುಲಿಯಾಗಿ ಘರ್ಜಿಸಿದ ಶಿವಣ್ಣ; ‘ಜೇಮ್ಸ್​’ ಬಿಡುಗಡೆಗೂ ಮುನ್ನ ಬಂತು ‘ಬೈರಾಗಿ’ ಸಿನಿಮಾದ ಟೀಸರ್​
ಶಿವರಾಜ್​ಕುಮಾರ್
Follow us
TV9 Web
| Updated By: ಮದನ್​ ಕುಮಾರ್​

Updated on:Mar 16, 2022 | 12:17 PM

‘ಸೆಂಚುರಿ ಸ್ಟಾರ್​’ ಶಿವರಾಜ್​ಕುಮಾರ್​ (Shivarajkumar) ಅವರು ಅನೇಕ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಆ ಪೈಕಿ ‘ಬೈರಾಗಿ’ ಸಿನಿಮಾ (Bairagee Movie) ಹೆಚ್ಚು ನಿರೀಕ್ಷೆ ಮೂಡಿಸಿದೆ. ಈ ಚಿತ್ರದಲ್ಲಿ ಡಾಲಿ ಧನಂಜಯ ಮತ್ತು ಶಿವರಾಜ್​ಕುಮಾರ್​ ನಟಿಸುತ್ತಿರುವುದು ವಿಶೇಷ. ‘ದಿಯಾ’ ಖ್ಯಾತಿಯ ನಟ ಪೃಥ್ವಿ ಅಂಬರ್​ ಅವರು ಸಹ ಬಣ್ಣ ಹಚ್ಚಿದ್ದಾರೆ. ಅಭಿಮಾನಿಗಳ ಪಾಲಿನ ಖುಷಿಯ ವಿಚಾರ ಏನೆಂದರೆ, ಈಗ ‘ಬೈರಾಗಿ’ ಸಿನಿಮಾ ಟೀಸರ್ (Bairagee movie teaser)​ ಬಿಡುಗಡೆ ಆಗಿದೆ. ಹುಲಿ ವೇಷದಲ್ಲಿ ಶಿವಣ್ಣ ಅಬ್ಬರಿಸಿದ್ದಾರೆ. ಈ ಚಿತ್ರಕ್ಕೆ ವಿಜಯ್​ ಮಿಲ್ಟನ್​ ನಿರ್ದೇಶನ ಮಾಡುತ್ತಿದ್ದು, ಚಿಕ್ಕ ಟೀಸರ್​ ಮೂಲಕ ತಮ್ಮ ಸಿನಿಮಾದ ಝಲಕ್​ ತೋರಿಸಿದ್ದಾರೆ. ಅದ್ದೂರಿ ಆ್ಯಕ್ಷನ್​ ದೃಶ್ಯಗಳು ಈ ಸಿನಿಮಾದಲ್ಲಿ ಇರಲಿವೆ ಎಂಬುದಕ್ಕೆ ಟೀಸರ್​ ಮೂಲಕ ಅವರ ಸಾಕ್ಷಿ ಒದಗಿಸಿದ್ದಾರೆ. ‘ಬೈರಾಗಿ’ ಟೀಸರ್​ ನೋಡಿ ಅಭಿಮಾನಿಗಳಿಗೆ ಖುಷಿ ಆಗಿದೆ. ನಾಳೆಯಿಂದ (ಮಾ.17) ಚಿತ್ರಮಂದಿರಗಳಲ್ಲೂ ಸಹ ಈ ಟೀಸರ್​ ಬಿತ್ತರ ಆಗಲಿದೆ. ದೊಡ್ಡ ಪರದೆಯಲ್ಲಿ ನೋಡಿ ಎಂಜಾಯ್​ ಮಾಡಲು ‘ಹ್ಯಾಟ್ರಿಕ್​ ಹೀರೋ’ ಶಿವರಾಜ್​ಕುಮಾರ್​ ಫ್ಯಾನ್ಸ್​ ಸಜ್ಜಾಗಿದ್ದಾರೆ.

ಜೆಪಿ ಮ್ಯೂಸಿಕ್​ ಮೂಲಕ ‘ಬೈರಾಗಿ’ ಟೀಸರ್​ ಬಿಡುಗಡೆ ಆಗಿದೆ. ಈ ಚಿತ್ರಕ್ಕೆ ಕೃಷ್ಣ ಸಾರ್ಥಕ್​ ಅವರು ಬಂಡವಾಳ ಹೂಡಿದ್ದಾರೆ. ಅನೂಪ್​ ಸೀಳಿನ್​ ಸಂಗೀತ ನಿರ್ದೇಶನ, ದೀಪು ಎಸ್​. ಕುಮಾರ್​ ಸಂಕಲನದಲ್ಲಿ ಈ ಸಿನಿಮಾ ತಯಾರಾಗುತ್ತಿದೆ. ಗುರುವಾರ (ಮಾ.17) ಪುನೀತ್​ ರಾಜ್​ಕುಮಾರ್​ ಜನ್ಮದಿನ. ಆ ಪ್ರಯುಕ್ತ ಅದ್ದೂರಿಯಾಗಿ ‘ಜೇಮ್ಸ್​’ ಸಿನಿಮಾ ಬಿಡುಗಡೆ ಆಗುತ್ತಿದೆ. ಇದೇ ಸಂದರ್ಭದಲ್ಲಿ ‘ಜೇಮ್ಸ್​’ ಜೊತೆ ಚಿತ್ರಮಂದಿರದಲ್ಲಿ ‘ಬೈರಾಗಿ’ ಟೀಸರ್​ ಅಬ್ಬರಿಸಲಿರುವುದು ವಿಶೇಷ.

‘ಬೈರಾಗಿ’ ಚಿತ್ರಕ್ಕೆ ಗುರು ಕಶ್ಯಪ್​ ಸಂಭಾಷಣೆ ಬರೆದಿದ್ದಾರೆ. ಟೀಸರ್​ನಲ್ಲಿ ಡೈಲಾಗ್​ಗಳು ಗಮನ ಸೆಳೆಯುತ್ತಿವೆ. ‘ವೇಷ ಹಾಕ್ದಾಗ ಮಾತ್ರ ಅಲ್ಲ, ನಾವು ಯಾವಾಗಲೂ ಹುಲಿನೇ ಅಂತ ಹೇಳಿ ದೊಡ್ಡೋರು ಬೆಳೆಸಿದ್ರು. ನಾನು ಬೆಳೀತಾ ಬೆಳೀತಾ ಆ ಹುಲಿನೂ ನನ್​ ಜೊತೆ ಬೆಳೆದುಬಿಡ್ತು’ ಎಂಬ ಖಡಕ್​ ಡೈಲಾಗ್​ ಮೂಲಕ ಟೀಸರ್​ ಆರಂಭ ಆಗುತ್ತದೆ. ‘ಹುಲಿ ಎಂದರೆ ಯಾವಾಗಲೂ ಕೋಪದಲ್ಲೇ ಇರಬೇಕಾ? ಕಾಯೋದು ಮಲಗೋದು ಕೂಡ ಅದರ ಗುಣ ತಾನೇ? ಮಲಗಿರಲಿ.. ಒಂದು ಕಣ್ಣು ತೆಗೆದುಕೊಂಡು ಮಲಗಿರಲಿ. ಯಾವಾಗ ಬೇಕೋ ಆಗ ಎದ್ದೇಳಲಿ’ ಎಂಬ ಕೌಂಟರ್​ ಸಹ ಗಮನ ಸೆಳೆಯುತ್ತಿದೆ.

ಇದು ಶಿವರಾಜ್​ಕುಮಾರ್​ ನಟನೆಯ 123ನೇ ಸಿನಿಮಾ. ಇದರಲ್ಲಿ ಅವರು ಡಿಫರೆಂಟ್​ ಗೆಟಪ್​ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹುಲಿ ವೇಷದಲ್ಲಿ ಅಭಿಮಾನಿಗಳಿಗೆ ಮಸ್ತ್​ ಮನರಂಜನೆ ನೀಡಲಿದ್ದಾರೆ. ಅಂಜಲಿ, ಯಶ ಶಿವಕುಮಾರ್​, ಶಶಿ ಕುಮಾರ್​ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಪುನೀತ್​ ರಾಜ್​ಕುಮಾರ್​ ಅವರ ಜನ್ಮದಿನ ಸೆಲೆಬ್ರೇಷನ್​ಗೆ ಕೊಡುಗೆಯಾಗಿ ‘ಬೈರಾಗಿ’ ಸೀಸರ್​ ಬಿಡುಗಡೆ ಆಗಿದೆ.

‘ಬೈರಾಗಿ’ ಈಗಾಗಲೇ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟಿಸಿರುವ ಸಿನಿಮಾ. ಶಿವರಾಜ್​ಕುಮಾರ್ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಈ ಚಿತ್ರದ ಪೋಸ್ಟರ್​ಗಳು ಈಗಾಗಲೇ ಕ್ರೇಜ್ ಹುಟ್ಟಿಸಿವೆ. ಕಲರ್​ಫುಲ್ ಲುಕ್ ಮೂಲಕ ಶಿವಣ್ಣ ಗಮನ ಸೆಳೆದಿದ್ದಾರೆ. ಅಷ್ಟೇ ಅಲ್ಲ. ತಮ್ಮ 123ನೇ ಚಿತ್ರದಲ್ಲಿ ಶಿವರಾಜ್​ಕುಮಾರ್ ಹಲವು ಅವತಾರ ತಾಳಿದ್ದಾರೆ. ಈ ಮೊದಲು ಹುಲಿ ಮುಖದಲ್ಲಿ ಶಿವಣ್ಣ ಕಾಣಿಸಿಕೊಂಡಿದ್ದ ಪೋಸ್ಟರ್​ ವೈರಲ್ ಆಗಿತ್ತು.

ಇದನ್ನೂ ಓದಿ:

‘ಪುನೀತ್​ ಪಾತ್ರಕ್ಕೆ ಡಬ್​ ಮಾಡುವಾಗ ಭಯವಾಯ್ತು’; ‘ಜೇಮ್ಸ್​’ ಕಾರ್ಯಕ್ರಮದಲ್ಲಿ ಶಿವಣ್ಣ ಭಾವುಕ ನುಡಿ

‘ಸ್ವಲ್ಪ ನೋವು, ಬೇಜಾರು ಆಯ್ತು’: ‘ಜೇಮ್ಸ್​’ ಚಿತ್ರದ ಪ್ರೀ-ರಿಲೀಸ್​ ಇವೆಂಟ್​ ಬಳಿಕ ಶಿವಣ್ಣ ಭಾವುಕ ಮಾತು

Published On - 12:11 pm, Wed, 16 March 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ