ಕರ್ನಾಟಕದಲ್ಲಿ ಮಗಿಯಲಿದೆ ಪ್ರಭಾಸ್ ಆಟ; ‘ರಾಧೆ ಶ್ಯಾಮ್​’ ಬಹುತೇಕ ಶೋಗಳು ಅಂತ್ಯ?

‘ಜೇಮ್ಸ್​’ ಸಿನಿಮಾ ಬಗ್ಗೆ ಅಭಿಮಾನಿಗಳು ಭಾವನಾತ್ಮಕವಾಗಿ ಕನೆಕ್ಟ್ ಆಗಿದ್ದಾರೆ. ಹೀಗಾಗಿ, ಚಿತ್ರ ಸಖತ್​ ಹೈಪ್​ ಸೃಷ್ಟಿ ಮಾಡಿದೆ. ಈ ಸಿನಿಮಾ ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳು ಕಾದು ಕೂತಿದ್ದಾರೆ.

ಕರ್ನಾಟಕದಲ್ಲಿ ಮಗಿಯಲಿದೆ ಪ್ರಭಾಸ್ ಆಟ; ‘ರಾಧೆ ಶ್ಯಾಮ್​’ ಬಹುತೇಕ ಶೋಗಳು ಅಂತ್ಯ?
ರಾಧೆ ಶ್ಯಾಮ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Mar 15, 2022 | 6:31 PM

‘ರಾಧೆ ಶ್ಯಾಮ್​’ ಸಿನಿಮಾ (Radhe Shyam Movie) ಬಗ್ಗೆ ಪ್ರಭಾಸ್​ಗೆ (Prabhas) ದೊಡ್ಡ ಮಟ್ಟದ ನಿರೀಕ್ಷೆ ಇತ್ತು. ಈ ಚಿತ್ರ ನಿರ್ಮಾಣಕ್ಕೆ 300 ಕೋಟಿಗೂ ಹೆಚ್ಚಿನ ಮೊತ್ತವನ್ನು ನಿರ್ಮಾಪಕರು ಖರ್ಚು ಮಾಡಿದ್ದಾರೆ. ಆದರೆ, ಅಷ್ಟು ದೊಡ್ಡ ಮೊತ್ತದ ಹಣವನ್ನು ಬಾಕ್ಸ್​ ಆಫೀಸ್​ ಮೂಲಕ ಹಿಂಪಡೆಯೋಕೆ ಚಿತ್ರತಂಡಕ್ಕೆ ಸಾಧ್ಯವಾಗುತ್ತಿಲ್ಲ. ನೆಗೆಟಿವ್ ವಿಮರ್ಶೆ ಸಿಕ್ಕಿದ್ದು ಸಿನಿಮಾಗೆ ದೊಡ್ಡ ಹೊಡೆತ ನೀಡಿದೆ. ಕರ್ನಾಟಕದಲ್ಲಿ ‘ರಾಧೆ ಶ್ಯಾಮ್​’ ಸಿನಿಮಾದ ಆಟ ಈ ವಾರವೇ ಮುಗಿಯಲಿದೆ. ಸಿನಿಮಾ ಅಷ್ಟಾಗಿ ಬುಕ್​ ಆಗುತ್ತಿಲ್ಲ. ಇದರ ಜತೆಗೆ ಪುನೀತ್​ ನಟನೆಯ ‘ಜೇಮ್ಸ್​’ ಸಿನಿಮಾ (James Movie) ಅಬ್ಬರ ಶುರುವಾಗಲಿದೆ. ಪುನೀತ್ ಹೀರೋ ಆಗಿ ನಟಿಸಿರುವ ಕೊನೆಯ ಸಿನಿಮಾ ಇದಾಗಿರುವುದರಿಂದ ಅಭಿಮಾನಿಗಳು ಈ ಚಿತ್ರದ ರಿಲೀಸ್​ಗಾಗಿ ಕಾದು ಕೂತಿದ್ದಾರೆ. ಕರ್ನಾಟಕದ ಬಹುತೇಕ ಚಿತ್ರಮಂದಿರಗಳಲ್ಲಿ ಇದೇ ಸಿನಿಮಾ ರಾರಾಜಿಸಲಿದೆ.

‘ಜೇಮ್ಸ್​’ ಸಿನಿಮಾ ಬಗ್ಗೆ ಅಭಿಮಾನಿಗಳು ಭಾವನಾತ್ಮಕವಾಗಿ ಕನೆಕ್ಟ್ ಆಗಿದ್ದಾರೆ. ಹೀಗಾಗಿ, ಚಿತ್ರ ಸಖತ್​ ಹೈಪ್​ ಸೃಷ್ಟಿ ಮಾಡಿದೆ. ಈ ಸಿನಿಮಾ ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳು ಕಾದು ಕೂತಿದ್ದಾರೆ. ಬೆಂಗಳೂರಿನಲ್ಲಿ ಒಂದೇ  ಗುರುವಾರ 750ಕ್ಕೂ ಅಧಿಕ ಶೋ ನೀಡಲಾಗಿದೆ. ಇದರ ಸಂಖ್ಯೆ ನಾಳೆ (ಮಾರ್ಚ್​ 16) ಸಂಜೆ ವೇಳೆಗೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ. ಹೀಗಾಗಿ, ಗುರುವಾರದಿಂದ (ಮಾರ್ಚ್​ 17) ‘ಜೇಮ್ಸ್’ ಅಬ್ಬರ ಶುರುವಾಗಲಿದೆ.

ಕರ್ನಾಟಕದ ಶೇ. 80 ಚಿತ್ರಮಂದಿರಗಳಲ್ಲಿ ಪುನೀತ್​ ನಟನೆಯ ‘ಜೇಮ್ಸ್​’ ಪ್ರದರ್ಶನ ಕಾಣಲಿದೆ. ಸದ್ಯ, ಬೆಂಗಳೂರಿನ ಅನೇಕ ಚಿತ್ರಮಂದಿರಗಳಲ್ಲಿ ‘ರಾಧೆ ಶ್ಯಾಮ್​’ ಪ್ರದರ್ಶನ ಕಾಣುತ್ತಿದೆ. ಆ ಚಿತ್ರಮಂದಿರಗಳಲ್ಲಿ ಜೇಮ್ಸ್​ ಚಿತ್ರಕ್ಕಾಗಿ  ಪ್ರಭಾಸ್​ ಸಿನಿಮಾ ದಾರಿ ಬಿಟ್ಟುಕೊಡೋದು ಅನಿವಾರ್ಯ ಆಗಲಿದೆ. ಸಿನಿಮಾ ಉತ್ತಮವಾಗಿಲ್ಲ ಎನ್ನುವುದು ಒಂದು ಕಾರಣವಾದರೆ, ‘ಜೇಮ್ಸ್​’ ಅಬ್ಬರ ಜೋರಿರುವ ಕಾರಣಕ್ಕೆ ಪ್ರಭಾಸ್​ ಸಿನಿಮಾ ಈ ವಾರವೇ ಕರ್ನಾಟಕದಲ್ಲಿ ಬಹುತೇಕ ಆಟ ನಿಲ್ಲಿಸಲಿದೆ.

‘ರಾಧೆ ಶ್ಯಾಮ್​’ ಸಿನಿಮಾದಲ್ಲಿ ಪ್ರಭಾಸ್ ಹೀರೋ ಆಗಿ ಕಾಣಿಸಿಕೊಂಡರೆ, ಪೂಜಾ ಹೆಗ್ಡೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ರಾಧಾ ಕೃಷ್ಣ ಅವರು ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದಲ್ಲಿ ಒಂದೇ ಒಂದು ಫೈಟ್​ ಇಲ್ಲ ಎನ್ನುವ ವಿಚಾರ ಚಿತ್ರತಂಡಕ್ಕೆ ಹಿನ್ನಡೆ ತಂದಿದೆ. ಮಾಸ್​ ಅವತಾರ ಬಿಟ್ಟು ಪ್ರಭಾಸ್​ ಭಿನ್ನ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದರು. ಇದನ್ನು ಪ್ರೇಕ್ಷಕರು ಇಷ್ಟಪಟ್ಟಿಲ್ಲ.

ಇದನ್ನೂ ಓದಿ: ‘ರಾಧೆ ಶ್ಯಾಮ್’ಗೆ ಪ್ರಬಲ ಪೈಪೋಟಿ ನೀಡುತ್ತಿರುವ ‘ದಿ ಕಾಶ್ಮೀರ್ ಫೈಲ್ಸ್’; ಮೊದಲ ದಿನದ ಕಲೆಕ್ಷನ್ ಎಷ್ಟು? ಇಲ್ಲಿದೆ ಲೆಕ್ಕಾಚಾರ 

Radhe Shyam: ತೆಲುಗಿನಲ್ಲಿ ಗೆದ್ದು ಹಿಂದಿಯಲ್ಲಿ ಮುಗ್ಗರಿಸಿದ ‘ರಾಧೆ ಶ್ಯಾಮ್’; ಕಲೆಕ್ಷನ್ ವಿವರ ಇಲ್ಲಿದೆ

Published On - 6:17 pm, Tue, 15 March 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ