Radhe Shyam: ತೆಲುಗಿನಲ್ಲಿ ಗೆದ್ದು ಹಿಂದಿಯಲ್ಲಿ ಮುಗ್ಗರಿಸಿದ ‘ರಾಧೆ ಶ್ಯಾಮ್’; ಕಲೆಕ್ಷನ್ ವಿವರ ಇಲ್ಲಿದೆ

Radhe Shyam Box Office Day 2: ‘ರಾಧೆ ಶ್ಯಾಮ್’ ವಿಶ್ವಾದ್ಯಂತ ಎರಡೇ ದಿನದಲ್ಲಿ ಸುಮಾರು 100 ಕೋಟಿ ರೂ ಬಾಚಿಕೊಂಡಿದೆ ಎಂದು ವರದಿಗಳು ಹೇಳಿವೆ. ಆದರೆ ಇದರ ಬಹುತೇಕ ಪಾಲು ಬಂದಿರುವುದು ಆಂಧ್ರ ಪ್ರದೇಶ ಹಾಗೂ ತೆಲಂಗಾಣದಿಂದ. ಪ್ರಭಾಸ್​ಗೆ ಹಿಂದಿ ರಾಜ್ಯಗಳಲ್ಲಿ ದೊಡ್ಡ ಅಭಿಮಾನಿ ಬಳಗವಿದ್ದರೂ ಚಿತ್ರ ಅಲ್ಲಿ ಮುಗ್ಗರಿಸಿದೆ. ಉತ್ತರ ರಾಜ್ಯಗಳಲ್ಲಿ ಚಿತ್ರದ ಎರಡು ದಿನದ ಗಳಿಕೆ 9 ಕೋಟಿ ರೂ ಮೀರಿಲ್ಲ ಎನ್ನುತ್ತಿವೆ ವರದಿಗಳು! ಈ ನಡುವೆ ‘ದಿ ಕಾಶ್ಮೀರ್ ಫೈಲ್ಸ್’ 14 ಕೋಟಿ ರೂ ಬಾಚಿಕೊಂಡು ಮುನ್ನುಗ್ಗುತ್ತಿದೆ.

TV9 Web
| Updated By: shivaprasad.hs

Updated on:Mar 13, 2022 | 6:13 PM

ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ನಟನೆಯ  ‘ರಾಧೆ ಶ್ಯಾಮ್’ ಬಹಳಷ್ಟು ನಿರೀಕ್ಷೆ ಹುಟ್ಟುಹಾಕಿದ್ದ ಚಿತ್ರ. ಮಾರ್ಚ್ 11ರಂದು ತೆರೆ ಕಂಡಿದ್ದ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

1 / 5
ಪ್ರಭಾಸ್ ಅಭಿಮಾನಿಗಳು ಚಿತ್ರವನ್ನು ಇಷ್ಟಪಟ್ಟಿದ್ದರು. ಆದರೆ ಸಾಮಾನ್ಯ ಪ್ರೇಕ್ಷಕರು ಹಾಗೂ ವಿಮರ್ಶಕರು ಚಿತ್ರದ ಬಗ್ಗೆ ಕಟು ವಿಮರ್ಶೆ ಮಾಡಿದ್ದರು.

2 / 5
ಪ್ಯಾನ್ ಇಂಡಿಯಾ ಚಿತ್ರವಾದರೂ ದೇಶವಾರು ಗಳಿಕೆ ಗಮನಿಸಿದರೆ ಪ್ರದೇಶವಾರು ಅಜಗಜಾಂತರ ವ್ಯತ್ಯಾಸ ಕಂಡುಬಂದಿದೆ. ತೆಲುಗು ರಾಜ್ಯಗಳಾದ ಆಂಧ್ರ ಪ್ರದೇಶ ಹಾಗೂ ತೆಲಂಗಾಣದಲ್ಲಿ ‘ರಾಧೆ ಶ್ಯಾಮ್’ ಉತ್ತಮವಾಗಿ ಗಳಿಕೆ ಮಾಡಿದೆ. ಆದರೆ ಹಿಂದಿ ಅವತರಣಿಕೆ ಸದ್ದು ಮಾಡುತ್ತಿಲ್ಲ.

3 / 5
ಚಿತ್ರತಂಡಕ್ಕೆ ಸಮಾಧಾನಕರ ಸಂಗತಿಯೆಂದರೆ ‘ರಾಧೆ ಶ್ಯಾಮ್’ ಒಟ್ಟಾರೆ ಗಳಿಕೆ ಎರಡೇ ದಿನದಲ್ಲಿ 100 ಕೋಟಿ ರೂ ದಾಟಿದೆ. ಭಾರತದಲ್ಲಿ 72 ಕೋಟಿ ರೂ ಗಳಿಸಿದೆ.

4 / 5
ಆದರೆ ಹಿಂದಿಯಲ್ಲಿ ಚಿತ್ರದ ಎರಡೂ ದಿನದ ಗಳಿಕೆ 9 ಕೋಟಿ ರೂ ದಾಟಿಲ್ಲ. ಈ ಹಿಂದೆ ‘ಸಾಹೊ’ ಮೊದಲ ದಿನವೇ 25 ಕೋಟಿ ರೂ ಗಳಿಸಿದೆ ಎನ್ನಲಾಗಿತ್ತು. ಅದಕ್ಕೆ ಹೋಲಿಸಿದರೆ ‘ರಾಧೆ ಶ್ಯಾಮ್’ ಗಳಿಕೆ ಗಣನೀಯವಾಗಿ ತಗ್ಗಿದೆ. ಮುಂದಿನ ದಿನಗಳಲ್ಲೂ ಉತ್ತರದ  ಪ್ರೇಕ್ಷಕರು ‘ರಾಧೆ ಶ್ಯಾಮ್’ಗೆ ಒಲವು ತೋರುವುದು ಅನುಮಾನ ಎಂದು ವರದಿಗಳು ಹೇಳುತ್ತಿವೆ.

5 / 5

Published On - 6:12 pm, Sun, 13 March 22

Follow us