‘ರಾಧೆ ಶ್ಯಾಮ್’ಗೆ ಪ್ರಬಲ ಪೈಪೋಟಿ ನೀಡುತ್ತಿರುವ ‘ದಿ ಕಾಶ್ಮೀರ್ ಫೈಲ್ಸ್’; ಮೊದಲ ದಿನದ ಕಲೆಕ್ಷನ್ ಎಷ್ಟು? ಇಲ್ಲಿದೆ ಲೆಕ್ಕಾಚಾರ

The Kashmir Files Collection | Radhe Shyam: ‘ದಿ ಕಾಶ್ಮೀರ್ ಫೈಲ್ಸ್’ ಬಾಕ್ಸಾಫೀಸ್​ನಲ್ಲಿ ಉತ್ತಮವಾಗಿ ಗಳಿಸುತ್ತಿದ್ದು, ‘ರಾಧೆ ಶ್ಯಾಮ್’ಗೆ ಪ್ರಬಲ ಪೈಪೋಟಿ ನೀಡುತ್ತಿದೆ. ಎರಡೂ ಚಿತ್ರಗಳ ಗಳಿಕೆ ಹೇಗಿದೆ? ಮುಂದೆ ಏನಾಗಬಹುದು? ಇಲ್ಲಿದೆ ಲೆಕ್ಕಾಚಾರ.

‘ರಾಧೆ ಶ್ಯಾಮ್’ಗೆ ಪ್ರಬಲ ಪೈಪೋಟಿ ನೀಡುತ್ತಿರುವ ‘ದಿ ಕಾಶ್ಮೀರ್ ಫೈಲ್ಸ್’; ಮೊದಲ ದಿನದ ಕಲೆಕ್ಷನ್ ಎಷ್ಟು? ಇಲ್ಲಿದೆ ಲೆಕ್ಕಾಚಾರ
‘ದಿ ಕಾಶ್ಮೀರ್ ಫೈಲ್ಸ್’ ಹಾಗೂ ‘ರಾಧೆ ಶ್ಯಾಮ್’ ಪೋಸ್ಟರ್
TV9kannada Web Team

| Edited By: shivaprasad.hs

Mar 12, 2022 | 2:43 PM

ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ (The Kashmir Files) ಸಾಕಷ್ಟು ಸದ್ದು ಮಾಡುತ್ತಿದೆ. ಮಾರ್ಚ್ 11ರಂದು ಚಿತ್ರ ರಿಲೀಸ್ ಆಗಿದ್ದು, ಎಲ್ಲೆಡೆಯಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ. 1990ರ ಕಾಶ್ಮೀರ ಘಟನೆಗಳ, ಪಂಡಿತರ ವಲಸೆಯನ್ನು ಚಿತ್ರದಲ್ಲಿ ಕಟ್ಟಿಕೊಡಲಾಗಿದೆ. ಅನುಪಮ್ ಖೇರ್, ದರ್ಶನ್ ಕುಮಾರ್, ಮಿಥುನ್ ಚಕ್ರಮರ್ತಿ, ಪಲ್ಲವಿ ಜೋಶಿ, ಪ್ರಕಾಶ್ ಬೆಳವಾಡಿ ಮೊದಲಾದವರು ಬಣ್ಣಹಚ್ಚಿರುವ ಈ ಚಿತ್ರ ಬಾಕ್ಸಾಫೀಸ್​ನಲ್ಲೂ ಸದ್ದು ಮಾಡುತ್ತಿದೆ. ಹಿಂದಿಯಲ್ಲಿ ಮಾತ್ರ ತೆರೆಕಂಡಿರುವ ‘ದಿ ಕಾಶ್ಮೀರ್ ಫೈಲ್ಸ್’ ಒಳ್ಳೆಯ ಗಳಿಕೆ ಮಾಡಿದ್ದು, ಪ್ಯಾನ್ ಇಂಡಿಯಾ ಚಿತ್ರ ‘ರಾಧೆ ಶ್ಯಾಮ್’ಗೆ ಪೈಪೋಟಿ ನೀಡುತ್ತಿದೆ. ಎರಡೂ ಚಿತ್ರಗಳ ಮೊದಲ ದಿನದ ಪ್ರತಿಕ್ರಿಯೆಗಳನ್ನು ಗಮನಿಸಿದರೆ, ‘ದಿ ಕಾಶ್ಮೀರ್ ಫೈಲ್ಸ್’ ಗಳಿಕೆ ಕ್ರಮೇಣ ಮತ್ತಷ್ಟು ಏರುವ ನಿರೀಕ್ಷೆ ಇದೆ. ಸುಮಾರು 630ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಂಡಿರುವ ಕಾಶ್ಮೀರ್ ಫೈಲ್ಸ್ ಮೊದಲ ದಿನ₹ 3.55 ಕೋಟಿ ಬಾಚಿಕೊಂಡಿದೆ. ಹಿಂದಿ ಚಿತ್ರಗಳಿಗೆ 630 ಸ್ಕ್ರೀನ್​ಗಳು ಕಡಿಮೆಯೆಂದೇ ಹೇಳಬೇಕು. ಅದಾಗ್ಯೂ ಚಿತ್ರದ ಗಳಿಕೆ ಹೆಚ್ಚಿರುವುದು ದೊಡ್ಡ ಪ್ಲಸ್ ಆಗಲಿದೆ ಎನ್ನುವುದು ಬಾಕ್ಸಾಫೀಸ್ ಪಂಡಿತರ ಲೆಕ್ಕಾಚಾರ. ಅಲ್ಲದೇ ವೀಕೆಂಡ್ ಇರುವುದರಿಂದ ಮತ್ತು ಚಿತ್ರದ ಬಗ್ಗೆ ಬಹುತೇಕ ಒಳ್ಳೆಯ ವಿಮರ್ಶೆ ಇರುವುದರಿಂದ ಜನರು ಚಿತ್ರಮಂದಿರಗಳಿಗೆ ಬರಲು ಒಲವು ತೋರಬಹುದು ಎಂದು ಹೇಳಲಾಗಿದೆ.

‘ರಾಧೆ ಶ್ಯಾಮ್’ ಗಳಿಕೆ ಹೇಗಿದೆ?

ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ನಟನೆಯ ‘ರಾಧೆ ಶ್ಯಾಮ್’ ದೊಡ್ಡ ಮಟ್ಟದಲ್ಲಿ ನಿರೀಕ್ಷೆ ಹುಟ್ಟುಹಾಕಿತ್ತು. ಆದರೆ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ. ಪ್ರಭಾಸ್ ಪಾತ್ರ ಪೋಷಣೆ ಹಾಗೂ ಸ್ಕ್ರಿಪ್ಟ್ ಆಯ್ಕೆಯ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದ್ದರೂ, ಚಿತ್ರದ ಕತೆಯ ಬಗ್ಗೆಯೇ ಪ್ರೇಕ್ಷಕರು ಅಸಮಾಧಾನ ಹೊರಹಾಕುತ್ತಿದ್ಧಾರೆ. ಇದು ಕಲೆಕ್ಷನ್ ಮೇಲೂ ಹೊಡೆತ ಬಿದ್ದಿದೆ. ಬಿಡುಗಡೆಯಾದ ಮೊದಲ ದಿನ ಕಲೆಕ್ಷನ್ ತೀವ್ರ ಕುಸಿತವಾಗದಿದ್ದರೂ, ಮುಂದಿನ ದಿನಗಳಲ್ಲಿ ಚಿತ್ರದ ಗಳಿಕೆ ಏರುವುದು ಅನುಮಾನ ಎನ್ನುವುದು ಬಾಕ್ಸಾಫೀಸ್ ತಜ್ಞರ ಲೆಕ್ಕಾಚಾರ.

‘ರಾಧೆ ಶ್ಯಾಮ್’ ಮೊದಲ ದಿನ ಒಟ್ಟಾರೆ ₹ 48 ಕೋಟಿ ಬಾಚಿಕೊಂಡಿದೆ ಎಂದು ವರದಿಗಳು ಹೇಳಿವೆ. ಆದರೆ ಕಲೆಕ್ಷನ್​ನಲ್ಲಿ ಸಿಂಹಪಾಲು ಬಂದಿರುವುದು ಆಂಧ್ರ ಪ್ರದೇಶ ಹಾಗೂ ತೆಲಂಗಾಣದ ಮೂಲಕ. ಹಿಂದಿಯಲ್ಲಿ ‘ರಾಧೆ ಶ್ಯಾಮ್’ ನಿರೀಕ್ಷಿತ ಮಟ್ಟದಲ್ಲಿ ಸದ್ದು ಮಾಡುತ್ತಿಲ್ಲ.

ಮೊದಲ ದಿನ ಹಿಂದಿಯಲ್ಲಿ ‘ರಾಧೆ ಶ್ಯಾಮ್’ ಗಳಿಸಿರುವುದು ₹ 4.8 ಕೋಟಿ ಮಾತ್ರ. ‘ಸಾಹೋ’ ಹಿಂದಿಯಲ್ಲಿ ಮೊದಲ ದಿನ 25 ಕೋಟಿ ರೂ ಬಾಚಿಕೊಂಡಿತ್ತು. ಅದಕ್ಕೆ ಹೋಲಿಸಿದರೆ ‘ರಾಧೆ ಶ್ಯಾಮ್’ ಕಲೆಕ್ಷನ್ ತೀರಾ ಕಡಿಮೆ. ಜತೆಗೆ ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆ ಇರುವುದು ಚಿತ್ರದ ಕಲೆಕ್ಷನ್ ಇನ್ನಷ್ಟು ತಗ್ಗಲು ಕಾರಣವಾಗಬಹುದು ಎನ್ನಲಾಗಿದೆ.

‘ದಿ ಕಾಶ್ಮೀರ್ ಫೈಲ್ಸ್’ ಪ್ರದರ್ಶನಗಳಲ್ಲಿ ಏರಿಕೆ; ಮುಂದೇನಾಗಬಹುದು?

ಬಾಕ್ಸಾಫೀಸ್ ಇಂಡಿಯಾ ವರದಿಗಳ ಪ್ರಕಾರ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರದ ಸ್ಕ್ರೀನ್​ಗಳಲ್ಲಿ ಏರಿಕೆಯಾಗುತ್ತಿದೆ. ಮುಂದಿನ ದಿನಗಳಲ್ಲಿ ಇದು ಮತ್ತಷ್ಟು ಏರಬಹುದು. ‘ರಾಧೆ ಶ್ಯಾಮ್’ಗೆ ಪ್ರೇಕ್ಷಕರು ಆಗಮಿಸದಿದ್ದರೆ ಅದರ ಸ್ಕ್ರೀನ್​ಗಳಲ್ಲಿ ಇಳಿಕೆಯಾಗಬಹುದು. ಅಲ್ಲದೇ ವೀಕೆಂಡ್​ನಲ್ಲಿ ‘ದಿ ಕಾಶ್ಮೀರ್ ಫೈಲ್ಸ್​’ಗೆ ಹಿಂದಿ ಪ್ರೇಕ್ಷಕರು ಒಲವು ತೋರಬಹುದು. ಹಾಗಾಗಿ ಅದರ ಗಳಿಕೆ ಮತ್ತಷ್ಟು ಏರಿಕೆಯಾಗಬಹುದು. ಆದ್ದರಿಂದ ಹಿಂದಿ ಬಾಕ್ಸಾಫೀಸ್​ನಲ್ಲಿ ‘ದಿ ಕಾಶ್ಮೀರ್ ಫೈಲ್ಸ್’ ‘ರಾಧೆ ಶ್ಯಾಮ್’ಗಿಂತ ಉತ್ತಮವಾಗಿ ಗಳಿಸಲೂಬಹುದು ಎನ್ನುವ ಮಾತುಗಳು ಕೇಳಿಬಂದಿವೆ.

ಇದನ್ನೂ ಓದಿ:

Prakash Belawadi: ಕಾಶ್ಮೀರಿ ಪಂಡಿತರ ಕ್ಷಮೆಯಾಚಿಸಿದ ಪ್ರಕಾಶ್ ಬೆಳವಾಡಿ; ‘ದಿ ಕಾಶ್ಮೀರ್ ಫೈಲ್ಸ್’ ಬಗ್ಗೆ ನಟ ಹೇಳಿದ್ದೇನು?

ಮೊದಲ ದಿನ ‘ರಾಧೆ ಶ್ಯಾಮ್​’ ಕಲೆಕ್ಷನ್​ ಎಷ್ಟು? ನೆಗೆಟಿವ್​ ವಿಮರ್ಶೆ ಸಿಕ್ಕರೂ ಅಬ್ಬಬ್ಬಾ ಇಷ್ಟೊಂದು ಕಮಾಯಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada