ಹೆಲ್ಮೆಟ್​ ಜಾಗೃತಿ: ಪುನೀತ್​ ರಾಜ್​ಕುಮಾರ್​ ವಿಡಿಯೋ ನೋಡಿ ಪೊಲೀಸರ ಎದುರು ಅಶ್ವಿನಿ ಭಾವುಕ

‘ಗುಣಮಟ್ಟದ ಹೆಲ್ಮೆಟ್​ ಧರಿಸೋಣ ಪ್ರಾಣ ಉಳಿಸೋಣ’ ಅಭಿಯಾನವನ್ನು ಮಾಡಲಾಗುತ್ತಿದೆ. ಇದರ ಉದ್ಘಾಟನಾ ಸಮಾರಂಭದಲ್ಲಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರು ಭಾಗಿ ಆಗಿದ್ದರು.

TV9kannada Web Team

| Edited By: Madan Kumar

Mar 16, 2022 | 2:07 PM

ಪುನೀತ್​ ರಾಜ್​ಕುಮಾರ್​ (Puneeth Rajkumar) ಅವರನ್ನು ಪ್ರತಿ ದಿನವೂ ಅಭಿಮಾನಿಗಳು ಮಿಸ್​ ಮಾಡಿಕೊಳ್ಳುತ್ತಿದ್ದಾರೆ. ಸಿನಿಮಾ ಮಾತ್ರವಲ್ಲದೇ ಅನೇಕ ಸಮಾಜಮುಖಿ ಕಾರ್ಯಗಳ ಕಾರಣದಿಂದ ಅಪ್ಪು ಫೇಮಸ್​ ಆಗಿದ್ದರು. ಹಾಗಾಗಿ ಅವರು ಎಲ್ಲರಿಗೂ ಮಾದರಿ ವ್ಯಕ್ತಿ. ಹೆಲ್ಮೆಟ್​ ಧರಿಸುವ ಬಗ್ಗೆ ಜಾಗೃತಿ ಸಂದೇಶವನ್ನು ಪುನೀತ್​ ರಾಜ್​ಕುಮಾರ್​ ನೀಡಿದ್ದರು. ಆ ವಿಡಿಯೋವನ್ನು ಇಟ್ಟುಕೊಂಡು ಬೆಂಗಳೂರು ನಗರ ಸಂಚಾರ ಪೊಲೀಸರು ಜನರಿಗೆ ಅರಿವು ಮೂಡಿಸುತ್ತಿದ್ದಾರೆ. ‘ಗುಣಮಟ್ಟದ ಹೆಲ್ಮೆಟ್ ಧರಿಸೋಣ ಪ್ರಾಣ ಉಳಿಸೋಣ’ ಅಭಿಯಾನವನ್ನು ಮಾಡಲಾಗುತ್ತಿದೆ. ಇದರ ಉದ್ಘಾಟನಾ ಸಮಾರಂಭದಲ್ಲಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ (Ashwini Puneeth Rajkumar) ಅವರು ಭಾಗಿ ಆಗಿದ್ದರು. ಈ ವೇಳೆ ‘ಗೊಂಬೆ ಹೇಳುತೈತೆ..’ ಹಾಡಿನ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಹೆಲ್ಮೆಟ್​ ಜಾಗೃತಿ ಮತ್ತು ಸಂಚಾರ ನಿಯಮಗಳ ಬಗ್ಗೆ ಪುನೀತ್​ ರಾಜ್​ಕುಮಾರ್​ ಅವರು ಈ ಹಿಂದೆ ಮಾತನಾಡಿದ್ದ ವಿಡಿಯೋವನ್ನು (Puneeth Rajkumar Video) ಬಿತ್ತರ ಮಾಡಲಾಯಿತು. ಅದನ್ನು ನೋಡಿ ಅಶ್ವಿನಿ ಪುನೀತ್​ ರಾಜ್​ಕುಮಾರ್​ ಅವರು ಭಾವುಕರಾದರು.

ಇದನ್ನೂ ಓದಿ:

ಪುನೀತ್​ ರಾಜ್​ಕುಮಾರ್​ ಜನ್ಮದಿನದ ಪ್ರಯುಕ್ತ 202 ಕಿ.ಮೀ. ಸೈಕಲ್​ ಜಾಥಾ ಹೊರಟ ಅಪ್ಪು ಫ್ಯಾನ್ಸ್​

‘ಕನ್ನಡದ ಕೋಟ್ಯಧಿಪತಿ’ಯಿಂದ ಪುನೀತ್​ಗೆ ಸಿಕ್ಕ ಸಂಭಾವನೆ ಎಷ್ಟು ಕೋಟಿ? ಆ ದುಡ್ಡಲ್ಲಿ ಆಗ್ತಿದೆ ಪುಣ್ಯದ ಕೆಲಸ

Follow us on

Click on your DTH Provider to Add TV9 Kannada