ಹಿಜಾಬ್ ಧರಿಸುವ ಅವಕಾಶವಿಲ್ಲ ಅಂತಾದರೆ ಪರೀಕ್ಷೆಗಳನ್ನೂ ಬರೆಯಲ್ಲ ಎಂದರು ಚಾಮರಾಜನಗರ ಕಾಲೇಜೊಂದರ ವಿದ್ಯಾರ್ಥಿನಿಯರು

ನಮಗೆ ಕಿತಾಬ್ ಜೊತೆ ಹಿಜಾಬ್ ಬೇಕು, ವಿ ಸ್ಟ್ಯಾಂಡ್ ವಿತ್ ಹಿಜಾಬ್, ನಮ್ಮನ್ನು ರಾಜಕೀಯ ದಾಳಗಳನ್ನಾಗಿ ಬಳಸಿಕೊಳ್ಳಲಾಗುತ್ತಿದೆ, ಕೋರ್ಟ್ ತೀರ್ಪು ನೀಡಿದೆ, ನಮಗೆ ನ್ಯಾಯ ಸಿಕ್ಕಿಲ್ಲ, ಮೊದಲಾದ ಘೋಷಣೆಗಳನ್ನು ಬರೆದಿದ್ದ ಪ್ಲಕಾರ್ಡ್​ಗಳನ್ನು ಕೈಯಲ್ಲಿ ಹಿಡಿದು ಕಾಲೇಜು ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಹಿಜಾಬ್ ಧರಿಸುವ ಅವಕಾಶವಿಲ್ಲ ಅಂತಾದರೆ ಪರೀಕ್ಷೆಗಳನ್ನೂ ಬರೆಯಲ್ಲ ಎಂದರು ಚಾಮರಾಜನಗರ ಕಾಲೇಜೊಂದರ ವಿದ್ಯಾರ್ಥಿನಿಯರು
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 16, 2022 | 4:07 PM

ಚಾಮರಾಜನಗರ: ಹಿಜಾಬ್ ಧಾರ್ಮಿಕ ಆಚರಣೆಯ (religious practice) ಭಾಗವಲ್ಲ, ಮುಸ್ಲಿಂ ಸಮುದಾಯದ (Muslim community) ವಿದ್ಯಾರ್ಥಿನಿಯರು ಶಾಲಾ ಕಾಲೇಜುಗಳ ನಿಗದಿಪಡಿಸಿರುವ ವಸ್ತ್ರಸಂಹಿತೆ (dress code) ಪಾಲಿಸಬೇಕು, ಹಿಜಾಬ್ (hijab) ಧರಿಸಿ ತರಗತಿಗಳಲ್ಲಿ ಕೂರುವುದಕ್ಕೆ ಅವಕಾಶವಿಲ್ಲ ಅಂತ ಹೈಕೋರ್ಟ್ ತೀರ್ಪು ನೀಡಿದ್ದರೂ ನಾವು ಅದನ್ನು ಧರಿಸದೆ ಕಾಲೇಜುಗಳಿಗೆ ಹೋಗಲಾರೆವು ಅಂತ ಹಲವು ಊರುಗಳಲ್ಲಿ ಕೆಲ ವಿದ್ಯಾರ್ಥಿನಿಯರು ಪ್ರತಿಭಟನೆ ಮಾಡುತ್ತಿದ್ದಾರೆ ಮತ್ತು ತರಗತಿಗಳ ಜೊತೆ ಪರೀಕ್ಷೆಗಳನ್ನೂ ಬಹಿಷ್ಕರಿಸುತ್ತಿದ್ದಾರೆ. ಬುಧವಾರದಂದು ಚಾಮರಾಜನಗರದ ಜೆ ಎಸ್ ಎಸ್ ಕಾಲೇಜಿನ ಕೆಲವು ವಿದ್ಯಾರ್ಥಿನಿಯರು ಪರೀಕ್ಷೆಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.

ನಮಗೆ ಕಿತಾಬ್ ಜೊತೆ ಹಿಜಾಬ್ ಬೇಕು, ವಿ ಸ್ಟ್ಯಾಂಡ್ ವಿತ್ ಹಿಜಾಬ್, ನಮ್ಮನ್ನು ರಾಜಕೀಯ ದಾಳಗಳನ್ನಾಗಿ ಬಳಸಿಕೊಳ್ಳಲಾಗುತ್ತಿದೆ, ಕೋರ್ಟ್ ತೀರ್ಪು ನೀಡಿದೆ, ನಮಗೆ ನ್ಯಾಯ ಸಿಕ್ಕಿಲ್ಲ, ಮೊದಲಾದ ಘೋಷಣೆಗಳನ್ನು ಬರೆದಿದ್ದ ಪ್ಲಕಾರ್ಡ್​ಗಳನ್ನು ಕೈಯಲ್ಲಿ ಹಿಡಿದು ಕಾಲೇಜು ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಮಾಧ್ಯಮದವರು ವಿದ್ಯಾರ್ಥಿನಿಯರನ್ನು ಮಾತಾಡಿದಾಗ ಅವರು ಅದನ್ನೇ ಪ್ರತಿಪಾದಿಸಿದರು. ಹಿಜಾಬ್ ಧರಿಸುವುದು ನಮ್ಮ ಸಂವಿಧಾನಾತ್ಮಕ ಹಕ್ಕು, ರಾಜ್ಯದ ಉಚ್ಚ ನ್ಯಾಯಾಲಯವೇನೋ ತೀರ್ಪು ನೀಡಿದೆ ಅದರೆ ನಮಗೆ ನ್ಯಾಯ ಸಿಕ್ಕಿಲ್ಲ. ಸುಪ್ರೀಮ್ ಕೋರ್ಟ್ ನಲ್ಲಿ ನಾವು ಮನವಿ ಸಲ್ಲಿಸಿದ್ದೇವೆ. ನಮಗೆ ನ್ಯಾಯ ಸಿಗುವ ಭರವಸೆ ಇದೆ ಎಂದು ವಿದ್ಯಾರ್ಥಿನಿಯರು ಹೇಳುತ್ತಾರೆ.

ಹಿಜಾಬ್ ಧರಿಸುವ ಅವಕಾಶ ನೀಡದಿದ್ದರೆ ನಾವು ಪರೀಕ್ಷೆಯನ್ನೂ ಬರೆಯುವುದಿಲ್ಲ ಎಂದು ಪಟ್ಟು ಹಿಡಿದು 8-10 ವಿದ್ಯಾರ್ಥಿನಿಯರು ಕಾಲೇಜು ಆವರಣದಿಂದ ಹೊರಬಂದಿದ್ದಾರೆ. ನಿಮಗೆ ಶಿಕ್ಷಣ ಮುಖ್ಯವಾ ಅಥವಾ ಹಿಜಾಬ್ ಎಂದು ನಮ್ಮನ್ನು ಕೇಳಲಾಗುತ್ತಿದೆ, ನಾವು ಅವರಿಗೆ ಹಿಜಾಬ್ ಮುಖ್ಯವಾ ಯೂನಿಫಾರ್ಮ್ ಮುಖ್ಯವಾ ಅಂತ ಕೇಳುತ್ತಿದ್ದೇವೆ. ಕೋರ್ಟ್ ಆದೇಶ ನಮ್ಮನ್ನು ನಿರಾಶೆಗೊಳಿಸಿದೆ, ನಮಗೆ ನ್ಯಾಯ ಬೇಕು, ಹಿಜಾಬ್ ಬೇಕು ಅಂತ ವಿದ್ಯಾರ್ಥಿನಿಯರು ಹೇಳುತ್ತಿದ್ದಾರೆ.

ಇದನ್ನು ಓದಿ:   ಕೋರ್ಟ್ ಆದೇಶ ಉಲ್ಲಂಘಿಸಿ ಕಾಲೇಜಿನಲ್ಲಿ ಹಿಜಾಬ್ ಧರಿಸಲು ಅವಕಾಶ; ಆಡಳಿತ ಮಂಡಳಿ ವಿರುದ್ಧ ಎಬಿವಿಪಿ ಆಕ್ರೋಶ

Follow us