AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಮಾರ್ಚ್​ 16ರ ಮಧ್ಯರಾತ್ರಿ ನಾನು ಊರಲ್ಲಿ ಇರಲ್ಲ’; ವೈರಲ್​ ಆಯ್ತು ಅಪ್ಪು ಹಳೇ ವಿಡಿಯೋ

ಪುನೀತ್​ ರಾಜ್​ಕುಮಾರ್ (Puneeth Rajkumar) ಅವರನ್ನು ನಾವು ಕಳೆದುಕೊಂಡಿದ್ದೇವೆ. ಅವರು ಮತ್ತೆ ಮರಳುವುದಿಲ್ಲ ಎನ್ನುವ ಕಟುಸತ್ಯವನ್ನು ನಾವು ಒಪ್ಪಿಕೊಳ್ಳಲೇ ಬೇಕಿದೆ. ಅವರ ಹುಟ್ಟುಹಬ್ಬವನ್ನು (Puneeth Birthday) ಮಾರ್ಚ್​ 17ರಂದು ಅಭಿಮಾನಿಗಳು ನೋವಿನಲ್ಲೇ ಆಚರಿಸುತ್ತಿದ್ದಾರೆ. ಹಲವು ಸಾಮಾಜಿಕ ಕೆಲಸಗಳನ್ನು ಮಾಡೋಕೆ ಅಭಿಮಾನಿಗಳು ಭರದ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಮಧ್ಯೆ ಅಪ್ಪು ಕುರಿತ ಹಲವು ಹಳೆಯ ವಿಡಿಯೋಗಳು ವೈರಲ್ ಆಗುತ್ತಿವೆ. ಬರ್ತ್​ಡೇ ದಿನ ಫ್ಯಾನ್ಸ್​ಗೆ ಅಪ್ಪು ನೀಡಿದ್ದ ಸಂದೇಶದ ವಿಡಿಯೋ ಒಂದು ಈಗ ಮತ್ತೆ ಹರಿದಾಡುತ್ತಿದ್ದು, ಅಭಿಮಾನಿಗಳ ನೋವನ್ನು ಹೆಚ್ಚು […]

‘ಮಾರ್ಚ್​ 16ರ ಮಧ್ಯರಾತ್ರಿ ನಾನು ಊರಲ್ಲಿ ಇರಲ್ಲ’; ವೈರಲ್​ ಆಯ್ತು ಅಪ್ಪು ಹಳೇ ವಿಡಿಯೋ
ಪುನೀತ್
TV9 Web
| Edited By: |

Updated on:Mar 16, 2022 | 7:48 PM

Share

ಪುನೀತ್​ ರಾಜ್​ಕುಮಾರ್ (Puneeth Rajkumar) ಅವರನ್ನು ನಾವು ಕಳೆದುಕೊಂಡಿದ್ದೇವೆ. ಅವರು ಮತ್ತೆ ಮರಳುವುದಿಲ್ಲ ಎನ್ನುವ ಕಟುಸತ್ಯವನ್ನು ನಾವು ಒಪ್ಪಿಕೊಳ್ಳಲೇ ಬೇಕಿದೆ. ಅವರ ಹುಟ್ಟುಹಬ್ಬವನ್ನು (Puneeth Birthday) ಮಾರ್ಚ್​ 17ರಂದು ಅಭಿಮಾನಿಗಳು ನೋವಿನಲ್ಲೇ ಆಚರಿಸುತ್ತಿದ್ದಾರೆ. ಹಲವು ಸಾಮಾಜಿಕ ಕೆಲಸಗಳನ್ನು ಮಾಡೋಕೆ ಅಭಿಮಾನಿಗಳು ಭರದ ಸಿದ್ಧತೆ ಮಾಡಿಕೊಂಡಿದ್ದಾರೆ. ಈ ಮಧ್ಯೆ ಅಪ್ಪು ಕುರಿತ ಹಲವು ಹಳೆಯ ವಿಡಿಯೋಗಳು ವೈರಲ್ ಆಗುತ್ತಿವೆ. ಬರ್ತ್​ಡೇ ದಿನ ಫ್ಯಾನ್ಸ್​ಗೆ ಅಪ್ಪು ನೀಡಿದ್ದ ಸಂದೇಶದ ವಿಡಿಯೋ ಒಂದು ಈಗ ಮತ್ತೆ ಹರಿದಾಡುತ್ತಿದ್ದು, ಅಭಿಮಾನಿಗಳ ನೋವನ್ನು ಹೆಚ್ಚು ಮಾಡಿದೆ.

ಬೆಂಗಳೂರಿನ ಸದಾಶಿವ ನಗರದಲ್ಲಿ ಪುನೀತ್​ ರಾಜ್​ಕುಮಾರ್ ಅವರ ನಿವಾಸ ಇದೆ. ಪ್ರತಿ ವರ್ಷ ಮಾರ್ಚ್​ 16ರ ರಾತ್ರಿ ಅಭಿಮಾನಿಗಳು ಇಲ್ಲಿಗೆ ಆಗಮಿಸುತ್ತಿದ್ದರು. ಅಭಿಮಾನಿಗಳು ಮಧ್ಯರಾತ್ರಿವರೆಗೂ ಅಲ್ಲಿಯೇ ಇದ್ದು, ಪುನೀತ್​ ಜತೆ ಕೇಕ್​ ಕತ್ತರಿಸುತ್ತಿದ್ದರು. ಆದರೆ, ಈ ಬಾರಿ ಪುನೀತ್​ ಜತೆ ಬರ್ತ್​ಡೇ ಆಚರಿಸಿಕೊಳ್ಳೋಕೆ ಅವರು ನಮ್ಮ ಜತೆ ಇಲ್ಲ. ಈಗ ಪುನೀತ್​ ಮನೆಯ ಬಳಿ ಬರಬೇಡಿ ಎಂಬ ಹಳೇ ವಿಡಿಯೋ ವೈರಲ್​ ಆಗಿದೆ.

‘ಮಾರ್ಚ್​ 16ರ ಮಧ್ಯರಾತ್ರಿ ಯಾರೂ ಮನೆ ಸಮೀಪ ಬರಬೇಡಿ. ನಾನು ಊರಲ್ಲಿ ಇರುವುದಿಲ್ಲ. ಮಾರ್ಚ್​ 17ರ ಬೆಳಗ್ಗೆ ಬರುತ್ತೇನೆ’ ಎಂದು ಪುನೀತ್​ ರಾಜ್​ಕುಮಾರ್ ಹೇಳಿದ್ದರು. ಪುನೀತ್​ ಮಾತನಾಡಿದ ವಿಡಿಯೋ ಕೊನೆಯಲ್ಲಿ ಅಭಿಮಾನಿಗಳು ಕಣ್ಣೀರು ಇಡುವುದನ್ನು ಸೇರಿಸಲಾಗಿದೆ.

View this post on Instagram

A post shared by Allu Raghu (@allu__raghu)

ವಾಯ್ಸ್​ ನೋಟ್​ ವೈರಲ್​:

ಚೇತನ್​ ಕುಮಾರ್  ನಿರ್ದೇಶನದ ‘ಜೇಮ್ಸ್​’ ಸಿನಿಮಾ ಬಗ್ಗೆ ಪುನೀತ್​ ರಾಜ್​ಕುಮಾರ್​ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದರು. ಈ ಸಿನಿಮಾದಲ್ಲಿ ಸಖತ್​ ಆ್ಯಕ್ಷನ್ ದೃಶ್ಯಗಳಲ್ಲಿ ಅವರು ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಇದೇ ಮೊದಲ ಬಾರಿಗೆ ಪುನೀತ್ ಸೈನಿಕನ ಗೆಟಪ್​ನಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರಕ್ಕೆ ರವಿ ವರ್ಮ ಸ್ಟಂಟ್​ ಡೈರೆಕ್ಟರ್​. ಶೂಟಿಂಗ್​ ಸಂದರ್ಭದಲ್ಲಿ ಈ ಸಿನಿಮಾದ ಆ್ಯಕ್ಷನ್​ ದೃಶ್ಯ ನೋಡಿ ಪುನೀತ್​ ಸಖತ್​ ಖುಷಿ ಆಗಿದ್ದರು. ಈ ಬಗ್ಗೆ ರವಿವರ್ಮ ಅವರಿಗೆ ಅಪ್ಪು ವಾಯ್ಸ್​ನೋಟ್​ ಕಳಿಸಿದ್ದರು. ಅದು​ ಈಗ ಸಖತ್​ ವೈರಲ್​ ಆಗುತ್ತಿದೆ. ‘ಮಾಸ್ಟರ್​ ಸೂಪರ್ ಆಗಿದೆ. ಸೌಂಡ್​ ಎಫೆಕ್ಟ್​ ಸಿಕ್ಕರೆ ಇನ್ನೂ ಸಖತ್​ ಆಗಿ ಕಾಣುತ್ತದೆ. ಒಳ್ಳೆಯ ಕೆಲಸ. ಚೇಸಿಂಗ್​ ಸ್ಟೈಲ್​ ಅದ್ಭುತವಾಗಿ ಬಂದಿದೆ. ಗ್ರಾಫಿಕ್ಸ್​ ಆದ್ಮೇಲೆ ಇನ್ನೂ ಚೆನ್ನಾಗಿ’ ಕಾಣುತ್ತದೆ ಎಂದು ಪುನೀತ್​​ ಹೇಳಿದ್ದರು. ಈ ಸಿನಿಮಾ ಮಾರ್ಚ್​ 17ರಂದು ತೆರೆಗೆ ಬರುತ್ತಿದೆ.

ಇದನ್ನೂ ಓದಿ: ಪುನೀತ್​ ರಾಜ್​ಕುಮಾರ್​ ಜನ್ಮದಿನದ ಪ್ರಯುಕ್ತ 202 ಕಿ.ಮೀ. ಸೈಕಲ್​ ಜಾಥಾ ಹೊರಟ ಅಪ್ಪು ಫ್ಯಾನ್ಸ್​

ಹೆಲ್ಮೆಟ್​ ಜಾಗೃತಿ: ಪುನೀತ್​ ರಾಜ್​ಕುಮಾರ್​ ವಿಡಿಯೋ ನೋಡಿ ಪೊಲೀಸರ ಎದುರು ಅಶ್ವಿನಿ ಭಾವುಕ

Published On - 7:30 pm, Wed, 16 March 22

ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಬಾರ್​​​ನಲ್ಲಿ ಸಿಗರೇಟ್ ವಿಚಾರಕ್ಕೆ ಜಗಳ:ಚಾಕು ಇರಿದು ಯುವಕನಿಗೆ ಹಲ್ಲೆ
ಐದೇ ನಿಮಿಷ, ಪಕ್ಕಾ ಪ್ಲ್ಯಾನ್​​: ಕೆಜಿಗಟ್ಟಲೆ ಚಿನ್ನ ಕದ್ದು ಎಸ್ಕೇಪ್​
ಐದೇ ನಿಮಿಷ, ಪಕ್ಕಾ ಪ್ಲ್ಯಾನ್​​: ಕೆಜಿಗಟ್ಟಲೆ ಚಿನ್ನ ಕದ್ದು ಎಸ್ಕೇಪ್​
‘ಉತ್ತರ ಕರ್ನಾಟಕ ಅಳ್ತಿದೆ, ಯಾರನ್ನೂ ವಿನ್ನರ್ ಅಂತ ಒಪ್ಪಿಕೊಳ್ಳಲ್ಲ’; ಮಾಳು
‘ಉತ್ತರ ಕರ್ನಾಟಕ ಅಳ್ತಿದೆ, ಯಾರನ್ನೂ ವಿನ್ನರ್ ಅಂತ ಒಪ್ಪಿಕೊಳ್ಳಲ್ಲ’; ಮಾಳು
ಮೆಕ್ಸಿಕೋದಲ್ಲಿ ಹಳಿ ತಪ್ಪಿದ ರೈಲು, 13 ಮಂದಿ ಸಾವು, ಹಲವರಿಗೆ ಗಾಯ
ಮೆಕ್ಸಿಕೋದಲ್ಲಿ ಹಳಿ ತಪ್ಪಿದ ರೈಲು, 13 ಮಂದಿ ಸಾವು, ಹಲವರಿಗೆ ಗಾಯ
ಭೀಕರ ಅವಘಡದಿಂದ ಆಟಗಾರರು ಕೂದಲೆಳೆಯ ಅಂತರದಲ್ಲಿ ಪಾರು..!
ಭೀಕರ ಅವಘಡದಿಂದ ಆಟಗಾರರು ಕೂದಲೆಳೆಯ ಅಂತರದಲ್ಲಿ ಪಾರು..!
ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಮೇಲೆ ಉರುಳಿದ ಲಾರಿ
ವಿಭಜಕಕ್ಕೆ ಡಿಕ್ಕಿ ಹೊಡೆದು ಕಾರಿನ ಮೇಲೆ ಉರುಳಿದ ಲಾರಿ
ಕತ್ರಿಗುಪ್ಪೆಯಲ್ಲಿ ಗ್ಯಾಂಗ್​ ವಾರ್, ಲಾಂಗು ಮಚ್ಚಿನ ಹೊಡೆತಕ್ಕೆ ಕಾರು ಪೀಸ್!
ಕತ್ರಿಗುಪ್ಪೆಯಲ್ಲಿ ಗ್ಯಾಂಗ್​ ವಾರ್, ಲಾಂಗು ಮಚ್ಚಿನ ಹೊಡೆತಕ್ಕೆ ಕಾರು ಪೀಸ್!
ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಎಫ್ಐಆರ್ ದಾಖಲು
ಬಿಜೆಪಿ ಶಾಸಕ ಶರಣು ಸಲಗರ ವಿರುದ್ಧ ಎಫ್ಐಆರ್ ದಾಖಲು
ಪೊಲೀಸರ ಕಣ್ಣಿಗೆ ಬಿದ್ದ ಚಿರತೆ, ಗ್ರಾಮಸ್ಥರಲ್ಲಿ ಆತಂಕ
ಪೊಲೀಸರ ಕಣ್ಣಿಗೆ ಬಿದ್ದ ಚಿರತೆ, ಗ್ರಾಮಸ್ಥರಲ್ಲಿ ಆತಂಕ
ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ದರೋಡೆ ಪ್ರಕರಣಗಳ ಲಿಸ್ಟ್ ಇಲ್ಲಿದೆ ನೋಡಿ!
ಕರ್ನಾಟಕವನ್ನೇ ಬೆಚ್ಚಿ ಬೀಳಿಸಿದ ದರೋಡೆ ಪ್ರಕರಣಗಳ ಲಿಸ್ಟ್ ಇಲ್ಲಿದೆ ನೋಡಿ!