ಪುನೀತ್ ಬರ್ತ್ಡೇಗೂ ಮೊದಲು ‘ಪವರಿಸಮ್’ ಹಾಗೂ ‘ಮಹಾನುಭಾವ’ ಸಾಂಗ್ ರಿಲೀಸ್
ಪುನೀತ್ ಬರ್ತ್ಡೇಗೆ ನಾನಾ ಮಂದಿ ನಾನಾ ರೀತಿಯ ಗಿಫ್ಟ್ ನೀಡುತ್ತಿದ್ದಾರೆ. ಅವರ ಬರ್ತ್ಡೇ ಪ್ರಯುಕ್ತ ‘ಜೇಮ್ಸ್’ ರಿಲೀಸ್ ಆಗ್ತಿರೋದು ವಿಶೇಷ. ಇನ್ನು, ಪುನೀತ್ ಬಗ್ಗೆ ವಿಶೇಷ ಹಾಡುಗಳು ಕೂಡ ರಿಲೀಸ್ ಆಗುತ್ತಿವೆ.
ಪುನೀತ್ ರಾಜ್ಕುಮಾರ್ (Puneeth Rajkumar) ಅವರ ಜನ್ಮದಿನ ಸಮೀಪಿಸಿದೆ. ಮಾರ್ಚ್ 17ರಂದು ಅವರ ಬರ್ತ್ಡೇ. ಅಪ್ಪು ಬದುಕಿದ್ದರೆ 47 ವರ್ಷಕ್ಕೆ ಕಾಲಿಡುತ್ತಿದ್ದರು. ಆದರೆ, ಅವರಿಲ್ಲದೆ ಅಭಿಮಾನಿಗಳು ಪುನೀತ್ ಹುಟ್ಟುಹಬ್ಬ (Puneeth Birthday) ಆಚರಿಸುತ್ತಿದ್ದಾರೆ. ಅವರ ಬರ್ತ್ಡೇಗೆ ನಾನಾ ಮಂದಿ ನಾನಾ ರೀತಿಯ ಗಿಫ್ಟ್ ನೀಡುತ್ತಿದ್ದಾರೆ. ಅವರ ಬರ್ತ್ಡೇ ಪ್ರಯುಕ್ತ ‘ಜೇಮ್ಸ್’ (James Movie) ರಿಲೀಸ್ ಆಗ್ತಿರೋದು ವಿಶೇಷ. ಇನ್ನು, ಪುನೀತ್ ಬಗ್ಗೆ ವಿಶೇಷ ಹಾಡುಗಳು ಕೂಡ ರಿಲೀಸ್ ಆಗುತ್ತಿವೆ. ಈಗ ಬರ್ತ್ಡೇಗೂ ಮೊದಲು 2 ಸಾಂಗ್ ರಿಲೀಸ್ ಮಾಡಲಾಗಿದೆ.
ಪವರಿಸಮ್:
2019ರಲ್ಲಿ ಪುನೀತ್ ನಟನೆಯ, ರಾಕ್ಲೈನ್ ವೆಂಕಟೇಶ್ ನಿರ್ಮಾಣದ ‘ನಟಸಾರ್ವಭೌಮ’ ಸಿನಿಮಾ ತೆರೆಗೆ ಬಂದಿತ್ತು. ಈ ಚಿತ್ರದ ಟೈಟಲ್ ಸಾಂಗ್ ಸಖತ್ ಹಿಟ್ ಆಗಿತ್ತು. ಈಗ ಇದೇ ಟ್ಯೂನ್ ಇಟ್ಟುಕೊಂಡು ‘ಪವರಿಸಮ್..’ ಹಾಡನ್ನು ರಚಿಸಲಾಗಿದೆ. ಈ ಹಾಡಿಗೆ ಪವನ್ ಒಡೆಯರ್ ಸಾಹಿತ್ಯ ಬರೆದಿದ್ದಾರೆ. ಪುನೀತ್ ನಟನೆಯ ಹಳೆಯ ಸಿನಿಮಾ ಟೈಟಲ್ಗಳನ್ನು ಈ ಹಾಡಿನಲ್ಲಿ ಬಳಕೆ ಮಾಡಿಕೊಂಡಿರುವುದು ವಿಶೇಷ. ಡಿ. ಇಮ್ಮಾನ್ ಸಂಗೀತ ಸಂಯೋಜನೆ ಈ ಹಾಡಿಗೆ ಇದೆ.
ಮಹಾನುಭಾವ..:
‘ಮಹಾನುಭಾವ..’ ಸಾಂಗ್ ಕೂಡ ರಿಲೀಸ್ ಆಗಿದೆ. ಪುನೀತ್ ರಾಜ್ಕುಮಾರ್ ಅವರ ಮೇಲಿನ ಅಭಿಮಾನಕ್ಕಾಗಿ ಸೋನು ನಿಗಮ್, ಶಂಕರ್ ಮಹದೇವನ್, ವಿಜಯ್ ಪ್ರಕಾಶ್ ಹಾಗೂ ಕೈಲಾಶ್ ಖೇರ್ ಅವರು ಸಂಭಾವನೆ ಪಡೆಯದೇ ಈ ಹಾಡಿಗೆ ಧ್ವನಿ ನೀಡಿದ್ದಾರೆ. ಹಾಡನ್ನು ಕೇಳಿ ಎಲ್ಲರೂ ಇಷ್ಟಪಟ್ಟಿದ್ದಾರೆ. ಈ ನಾಲ್ವರು ಗಾಯಕರ ನಡುವಿನ ಜುಗಲ್ಬಂದಿ ಚೆನ್ನಾಗಿ ಮೂಡಿ ಬಂದಿದೆ. ಪುನೀತ್ ನಟನೆಯ ಒಂದು ಹೊಸ ಸಿನಿಮಾ ಬಂದರೆ, ಅದರಲ್ಲಿ ಹೀರೋ ಇಂಟ್ರಡಕ್ಷನ್ ಸಾಂಗ್ ಇದ್ದರೆ ಹೇಗೆ ಇರಬಹುದೋ ಅದೇ ರೀತಿಯಲ್ಲಿ ಈ ಗೀತೆ ಮೂಡಿಬಂದಿದೆ.
ಪುನೀತ್ ರಾಜ್ಕುಮಾರ್ ಜೊತೆ ಒಂದು ಸಿನಿಮಾ ಮಾಡಬೇಕು ಎಂಬುದು ಕಾಂತ ಅವರ ಕನಸಾಗಿತ್ತು. ಅದಕ್ಕೆ ‘ಮಹಾನುಭಾವ’ ಅಂತ ಟೈಟಲ್ ಇಡಲು ನಿರ್ಧರಿಸಲಾಗಿತ್ತು. ಆ ಕುರಿತು ಮಾತುಕತೆ ಆರಂಭ ಆಗಿತ್ತು. ಇನ್ನೇನು ಪುನೀತ್ ರಾಜ್ಕುಮಾರ್ ಅವರು ಕಥೆ ಕೇಳಲು ಟೈಮ್ ಫಿಕ್ಸ್ ಮಾಡುವುದು ಬಾಕಿ ಇತ್ತು. ಆದರೆ ಅಷ್ಟರಲ್ಲಾಗಲೇ ವಿಧಿ ತನ್ನ ಆಟ ಆಡಿತು. ‘ಮಹಾನುಭಾವ’ ಸಿನಿಮಾ ಮಾಡಲು ಸಾಧ್ಯವಾಗಲಿಲ್ಲ. ಕೊನೇ ಪಕ್ಷ ಅದೇ ಶೀರ್ಷಿಕೆ ಇಟ್ಟುಕೊಂಡು ಹಾಡಿನ ಮೂಲಕ ನಮನ ಸಲ್ಲಿಸಲು ಕಾಂತ ಕನ್ನಲ್ಲಿ ನಿರ್ಧರಿಸಿದರು. ಅದೇ ರೀತಿ ಈಗ ಸಾಂಗ್ ರಿಲೀಸ್ ಮಾಡಿದ್ದಾರೆ.
ಇದನ್ನೂ ಓದಿ: ‘ಕನ್ನಡದ ಕೋಟ್ಯಧಿಪತಿ’ಯಿಂದ ಪುನೀತ್ಗೆ ಸಿಕ್ಕ ಸಂಭಾವನೆ ಎಷ್ಟು ಕೋಟಿ? ಆ ದುಡ್ಡಲ್ಲಿ ಆಗ್ತಿದೆ ಪುಣ್ಯದ ಕೆಲಸ
ಪಟಾಕಿ ಯಾರದ್ದೇ ಆಗಿರ್ಲಿ, ಹಚ್ಚೋದು ಮಾತ್ರ ಪುನೀತ್ ರಾಜ್ಕುಮಾರ್: ವಂಶಿಕಾ ಸೂಪರ್ ಮಾತು