Ranjani Raghavan: ‘ಕನ್ನಡತಿ’ ರಂಜನಿಗೆ ಹೆಮ್ಮೆಯ ಕ್ಷಣ; ಖುಷಿ ಹಂಚಿಕೊಂಡ ಕಿರುತೆರೆ ನಟಿ
ರಂಜನಿ ಈ ಮೊದಲು ಸಾಕಷ್ಟು ಕಥೆಗಳನ್ನು ಬರೆದಿದ್ದಾರೆ. ಅವೆಲ್ಲವನ್ನೂ ಸೇರಿಸಿ ಈಗ ಪುಸ್ತಕದ ರೂಪದಲ್ಲಿ ಹೊರ ತಂದಿದ್ದಾರೆ. ಇದಕ್ಕೆ ‘ಕತೆ ಡಬ್ಬಿ’ ಎಂದು ಹೆಸರಿಟ್ಟಿದ್ದಾರೆ. ಇತ್ತೀಚೆಗೆ ಈ ಪುಸ್ತಕ ಲೋಕಾರ್ಪಣೆಗೊಂಡಿತ್ತು. ಈ ಪುಸ್ತಕವನ್ನು ಓದಿ ಸಾಕಷ್ಟು ಜನರು ಇಷ್ಟಪಟ್ಟಿದ್ದರು.
‘ಕನ್ನಡತಿ’ ರಂಜನಿ ರಾಘವನ್ ಅವರು ಸಾಕಷ್ಟು ಖ್ಯಾತಿ ಗಳಿಸಿಕೊಂಡಿದ್ದಾರೆ. ಧಾರಾವಾಹಿಯಲ್ಲಿ ಅವರು ನಿರ್ವಹಿಸುತ್ತಿರುವ ಭುವನೇಶ್ವರಿ ಪಾತ್ರ ಸಾಕಷ್ಟು ಜನರಿಗೆ ಇಷ್ಟವಾಗಿದೆ. ಈ ಧಾರಾವಾಹಿ ಮೂಲಕ ಕನ್ನಡವನ್ನು ಬೆಳೆಸುವ ಕಾರ್ಯ ಕೂಡ ಆಗುತ್ತಿದೆ. ಈ ಕಾರಣಕ್ಕೂ ಧಾರಾವಾಹಿ ಹೆಚ್ಚು ಜನರಿಗೆ ಇಷ್ಟವಾಗಿದೆ. ರಂಜನಿ ಕೇವಲ ನಟನೆ ಮಾತ್ರವಲ್ಲ ಬರಹದ ಮೂಲಕವೂ ಗುರುತಿಸಿಕೊಂಡಿದ್ದಾರೆ. ಅವರು ‘ಕತೆ ಡಬ್ಬಿ’ ಹೆಸರಿನ ಕಥಾ ಸಂಕಲವನ್ನು ಹೊರ ತಂದಿದ್ದಾರೆ. ಈಗ ಅವರಿಗೆ ಹೆಮ್ಮೆ ಆಗುವಂತಹ ಘಟನೆಯೊಂದು ನಡೆದಿದೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ರಂಜನಿ ಈ ಮೊದಲು ಸಾಕಷ್ಟು ಕಥೆಗಳನ್ನು ಬರೆದಿದ್ದಾರೆ. ಅವೆಲ್ಲವನ್ನೂ ಸೇರಿಸಿ ಈಗ ಪುಸ್ತಕದ ರೂಪದಲ್ಲಿ ಹೊರ ತಂದಿದ್ದಾರೆ. ಇದಕ್ಕೆ ‘ಕತೆ ಡಬ್ಬಿ’ ಎಂದು ಹೆಸರಿಟ್ಟಿದ್ದಾರೆ. ಇತ್ತೀಚೆಗೆ ಈ ಪುಸ್ತಕ ಲೋಕಾರ್ಪಣೆಗೊಂಡಿತ್ತು. ಈ ಪುಸ್ತಕವನ್ನು ಓದಿ ಸಾಕಷ್ಟು ಜನರು ಇಷ್ಟಪಟ್ಟಿದ್ದರು. ಈಗ ಚಂದನ ವಾಹಿನಿಯಲ್ಲಿ ಪ್ರಸಾರವಾಗುವ ‘ಥಟ್ ಅಂತ ಹೇಳಿ’ ಕಾರ್ಯಕ್ರಮದಲ್ಲಿಈ ಪುಸ್ತಕವನ್ನು ಬಹುಮಾನವಾಗಿ ನೀಡಲಾಗಿದೆ. ಇದು ರಂಜನಿ ಅಭಿಮಾನಿಗಳಿಗೆ ಖುಷಿ ನೀಡಿದೆ.
‘ಕನ್ನಡಿಗರ ಹೆಮ್ಮೆಯ ರಸಪ್ರಶ್ನೆ ಕಾರ್ಯಕ್ರಮ ‘ಥಟ್ ಅಂತ ಹೇಳಿ’ಅಲ್ಲಿ ಕತೆ ಡಬ್ಬಿ ಪುಸ್ತಕವನ್ನು ಬಹುಮಾನವಾಗಿ ಕೊಡುತ್ತಿದ್ದಾರೆ. ಈ ಪುಸ್ತಕವನ್ನು ಗುರುತಿಸಿದ್ದಕ್ಕಾಗಿ ‘ಥಟ್ ಅಂತ ಹೇಳಿ’ ತಂಡಕ್ಕೆ ನನ್ನ ನಮನಗಳು’ ಎಂದು ರಂಜನಿ ರಾಘವನ್ ಬರೆದುಕೊಂಡಿದ್ದಾರೆ. ಇದನ್ನು ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ‘ಈ ಕಾರ್ಯಕ್ರಮ ನೋಡಿದಾಗಲೆಲ್ಲ ನಿಮ್ಮ ಪುಸ್ತಕ ಜ್ಞಾಪಕ ಬರ್ತಿತ್ತು. ಈಗ ಅದನ್ನೇ ಬಹುಮಾನವಾಗಿ ಕೊಡುತ್ತಿದ್ದಾರೆ ಅಂತ ನೋಡಿ ಖುಷಿ ಆಗ್ತಿದೆ. ಹೀಗೆ ಬರೀತಿರಿ, ಬೆಳಿತಿರಿ’ ಎಂದು ಅಭಿಮಾನಿಗಳು ಹಾರೈಸಿದ್ದಾರೆ.
View this post on Instagram
‘ಕನ್ನಡತಿ’ ಧಾರಾವಾಹಿ ಸಾಕಷ್ಟು ಟ್ವಿಸ್ಟ್ಗಳನ್ನು ಪಡೆದುಕೊಳ್ಳುತ್ತಿದೆ. ರಂಜನಿ ನಿರ್ವಹಿಸುತ್ತಿರುವ ಭುವಿ ಪಾತ್ರ ದಿನಕಳೆದಂತೆ ಮತ್ತಷ್ಟು ಸ್ಟ್ರಾಂಗ್ ಆಗುತ್ತಿದೆ. ಭುವಿ ಎದುರು ಹರ್ಷ ಪ್ರೀತಿ ವ್ಯಕ್ತಪಡಿಸಿದ್ದಾನೆ. ಆದರೆ, ಅವಳ ಕಡೆಯಿಂದ ಯಾವುದೇ ಉತ್ತರ ಬಂದಿಲ್ಲ. ‘ಕನ್ನಡತಿ’ ಬಗ್ಗೆ ವೀಕ್ಷಕರಿಗೆ ಸಾಕಷ್ಟು ಕುತೂಹಲಗಳನ್ನು ಹುಟ್ಟು ಹಾಕುವ ಕೆಲಸವನ್ನು ಧಾರಾವಾಹಿ ತಂಡ ಮಾಡುತ್ತಿದೆ.
ಇದನ್ನೂ ಓದಿ: ನಟನೆಯಷ್ಟೇ ಅಲ್ಲದೆ ಸಾಹಿತ್ಯ ಕ್ಷೇತ್ರದಲ್ಲೂ ಛಾಪು ಮೂಡಿಸಿದ ಕನ್ನಡತಿ;, ಇಲ್ಲಿದೆ ರಂಜನಿ ರಾಘವನ್ ಅವರ ಮನದಾಳದ ಮಾತು