‘ಕನ್ನಡತಿ’ಯಲ್ಲಿ ಟ್ವಿಸ್ಟ್​​: ಭುವಿಯನ್ನು ಕೊಲ್ಲಲು ಸಾನಿಯಾ ಸುಪಾರಿ; ಇದಕ್ಕೆ 5 ಲಕ್ಷ ನೀಡಿದ್ದು ರತ್ನಮಾಲಾ

ರತ್ನಮಾಲಾ ಮನೆಯ ಆಸ್ತಿ ಸೌಪರ್ಣಿಕಾ ಹೆಸರಲ್ಲಿದೆ. ಈ ಹೆಸರಿನ ಮತ್ತೊಂದು ಯುವತಿಯನ್ನು ಹರ್ಷ ಕರೆತಂದಿದ್ದ. ಆ ಸಂದರ್ಭದಲ್ಲಿ ನಕಲಿ ಸೌಪರ್ಣಿಕಾಳನ್ನು ನಿಜವಾದ ಸೌಪರ್ಣಿಕ ಎಂದು ತಿಳಿದು ಕೊಲೆ ಮಾಡೋಕೆ ಸುಪಾರಿ ಕೊಟ್ಟಿದ್ದು ಇದೇ ಸಾನಿಯಾ.

‘ಕನ್ನಡತಿ’ಯಲ್ಲಿ ಟ್ವಿಸ್ಟ್​​: ಭುವಿಯನ್ನು ಕೊಲ್ಲಲು ಸಾನಿಯಾ ಸುಪಾರಿ; ಇದಕ್ಕೆ 5 ಲಕ್ಷ ನೀಡಿದ್ದು ರತ್ನಮಾಲಾ
ಸಾನಿಯಾ-ರತ್ನಾಮಾಲಾ-ಭುವಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Feb 25, 2022 | 3:00 PM

‘ಕನ್ನಡತಿ’ ಧಾರಾವಾಹಿಯಲ್ಲಿ (Kannadathi Serial) ಹರ್ಷ ಮತ್ತು ಭುವಿ ಪ್ರೀತಿಯನ್ನು ತುಂಬಾನೇ ಗುಟ್ಟಾಗಿ ಇಡಲಾಗಿದೆ. ಹರ್ಷನ ತಾಯಿ ರತ್ನಮಾಲಾ ಕುಟುಂಬದ ಕೆಲವರಿಗೆ ಈ ವಿಚಾರ ಗೊತ್ತಿಲ್ಲ. ಈ ವಿಚಾರದಲ್ಲಿ ಗುಟ್ಟು ಮಾಡುವುದಕ್ಕೂ ಒಂದು ಕಾರಣ ಇದೆ. ಈ ವಿಚಾರ ಎಲ್ಲರಿಗೂ ಗೊತ್ತಾದರೆ ಭುವಿಗೆ ಯಾವ ಕ್ಷಣದಲ್ಲಿ ಬೇಕಾದರೂ ತೊಂದರೆ ಎದುರಾಗಬಹುದು. ಆದರೆ, ಧಾರಾವಾಹಿಯ ವಿಲನ್​ ಸಾನಿಯಾಗೆ ಈ ವಿಷಯ ತಿಳಿದು ಹೋಗಿದೆ. ಹರ್ಷ-ಭುವಿ ವಿಚಾರ ಗೊತ್ತಾಗಿದೆ ಎಂಬುದನ್ನು ಆಕೆ ತಾಯಿಯನ್ನು ಬಿಟ್ಟು ಮತ್ತಾರಿಗೂ ಹೇಳಿಲ್ಲ. ಈಗ ಸಾನಿಯಾ (Saniya) ಒಳಗೊಳಗೆ ಸಂಚು ರೂಪಿಸುತ್ತಿದ್ದಾಳೆ. ಈಗ ಸಾನಿಯಾ ತಲೆಯಲ್ಲಿ ಕ್ರಿಮಿನಲ್​ ಐಡಿಯಾ ಬಂದಿದೆ. ಭುವಿಯನ್ನು ಕೊಲ್ಲೋಕೆ ಸುಪಾರಿ ನೀಡಿದ್ದಾಳೆ. ಇದಕ್ಕೆ ಆಕೆ ರತ್ನಮಾಲಾಳಿಂದ ಹಣ ಪಡೆದಿದ್ದಾಳೆ!

ರತ್ನಮಾಲಾ ಮನೆಯ ಆಸ್ತಿ ಸೌಪರ್ಣಿಕಾ ಹೆಸರಲ್ಲಿದೆ. ಈ ಸೌಪರ್ಣಿಕಾ ಬೇರಾರು ಅಲ್ಲ ಹರ್ಷನ ಲವರ್​ ಭುವಿ. ಅವಳ ಮೂಲ ಹೆಸರು ಸೌಪರ್ಣಿಕಾ. ಈ ಹೆಸರಿನ ಮತ್ತೊಂದು ಯುವತಿಯನ್ನು ಹರ್ಷ ಕರೆತಂದಿದ್ದ. ಆ ಸಂದರ್ಭದಲ್ಲಿ ನಕಲಿ ಸೌಪರ್ಣಿಕಾಳನ್ನು ನಿಜವಾದ ಸೌಪರ್ಣಿಕ ಎಂದು ತಿಳಿದು ಕೊಲೆ ಮಾಡೋಕೆ ಸುಪಾರಿ ಕೊಟ್ಟಿದ್ದು ಇದೇ ಸಾನಿಯಾ. ಈ ಆಲೋಚನೆ ಹೊಳೆದಿದ್ದು ಅವಳ ತಾಯಿಯಿಂದ. ಈಗ ಭುವಿಯನ್ನು ರೇಸ್​ನಿಂದ ಹಿಂದೆ ಸರಿಸಲು ಸಾನಿಯಾ ಸುಪಾರಿ ನೀಡಿದ್ದಾಳೆ.

ಹಿಂದಿನ ಬಾರಿ ಸುಪಾರಿ ನೀಡುವಾಗ ಸಾನಿಯಾ ರತ್ನಮಾಲಾಳ ಸಂಸ್ಥೆಯ ಹಣ ಬಳಕೆ ಮಾಡಿಕೊಂಡಿದ್ದಳು. ಆದರೆ, ಈ ಬಾರಿ ಆ ರೀತಿ ಮಾಡಿಲ್ಲ. ಬದಲಿಗೆ ರತ್ನಮಾಲಾ ಬಳಿಯೇ ಹಣ ಕೇಳಿದ್ದಾಳೆ. ‘ನನಗೆ ಐದು ಲಕ್ಷ ರೂಪಾಯಿ ಹಣ ಬೇಕು. ಏಕೆ ಎಂದು ಪ್ರಶ್ನೆ ಮಾಡಬೇಡಿ. ನಾನು ಈ ಹಣವನ್ನು ಒಳ್ಳೆಯ ಕೆಲಸಕ್ಕೆ ಬಳಕೆ ಮಾಡಿಕೊಳ್ಳುತ್ತೇನೆ. ಮುಂದೆ ಅದು ನಿಮಗೇ ತಿಳಿಯುತ್ತದೆ’ ಎಂದಳು ಸಾನಿಯಾ. ಇದಕ್ಕೆ ಮರುಮಾತಾಡದೆ ರತ್ನಮಾಲಾ ಹಣ ನೀಡಿದ್ದಾಳೆ.

ಈ ಹಣವನ್ನು ತೆಗೆದುಕೊಂಡು ಸಾನಿಯಾ ನೇರವಾಗಿ ಸುಪಾರಿ ಕಿಲ್ಲರ್​ ಬಳಿ ತೆರಳಿದ್ದಾಳೆ. ಐದು ಲಕ್ಷ ರೂಪಾಯಿ ಹಣವನ್ನು ಆತನಿಗೆ ನೀಡಿ ಭುವಿಯ ಫೋಟೋ ತೋರಿಸಿದ್ದಾಳೆ. ‘ಈಕೆ ಒಂದು ಗುಡ್ಡ ಇದೆ. ಆ ಪ್ರದೇಶಕ್ಕೆ ಇವಳು ಬರುತ್ತಾಳೆ. ಬಂದ ತಕ್ಷಣ ಅವಳನ್ನು ದೂಡಿ ಹತ್ಯೆ ಮಾಡಿಬಿಡು. ಇದು ನೋಡೋಕೆ ಅಪಘಾತ ಎಂದೇ ಅನಿಸಬೇಕು’ ಎಂದು ಸುಪಾರಿ ಕಿಲ್ಲರ್​ಗೆ ಹೇಳಿ ಬಂದಿದ್ದಾಳೆ ಸಾನಿಯಾ. ಸಾನಿಯಾ ಸಂಚು ಯಶಸ್ವಿಯಾಗುತ್ತದೆಯೋ ಅಥವಾ ವಿಫಲವಾಗುತ್ತದೆಯೋ ಎನ್ನುವುದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಸುಚಿ-ಭವಿಷ್​ ನಿಶ್ಚಿತಾರ್ಥ ನಿಲ್ಲಿಸಲು ಭುವಿಯ ಪ್ಲಾನ್​; ಸಾನಿಯಾಗೆ ತಲೆನೋವಾದ ರೇಚಲ್​

ಹರ್ಷನಿಗೆ ಭುವಿಯ ಅದ್ದೂರಿ ಪ್ರಪೋಸ್​; ಭಾನುವಾರ ‘ಕನ್ನಡತಿ’ ಧಾರಾವಾಹಿ 2 ಗಂಟೆಯ ವಿಶೇಷ ಸಂಚಿಕೆ  

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ