ಸುಚಿ-ಭವಿಷ್​ ನಿಶ್ಚಿತಾರ್ಥ ನಿಲ್ಲಿಸಲು ಭುವಿಯ ಪ್ಲಾನ್​; ಸಾನಿಯಾಗೆ ತಲೆನೋವಾದ ರೇಚಲ್​

ರೇಚಲ್​ ಹಾಗೂ ಭವಿಷ್​ ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದಾರೆ. ಇಬ್ಬರ ಮದುವೆಯೂ ನೆರವೇರಿದೆ. ರೇಚಲ್​ ಕತ್ತಿನಲ್ಲಿ ಇರುವ ತಾಳಿಯೊಂದೇ ಇದಕ್ಕೆ ಸಾಕ್ಷಿ. ಅದು ಬಿಟ್ಟರೆ ಅವಳ ಬಳಿ ಮತ್ತಾವುದೇ ಸಾಕ್ಷಿಯೂ ಉಳಿದಿಲ್ಲ.

ಸುಚಿ-ಭವಿಷ್​ ನಿಶ್ಚಿತಾರ್ಥ ನಿಲ್ಲಿಸಲು ಭುವಿಯ ಪ್ಲಾನ್​; ಸಾನಿಯಾಗೆ ತಲೆನೋವಾದ ರೇಚಲ್​
ಸುಚಿ-ಭುವಿ-ಭವಿಷ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Feb 22, 2022 | 6:06 PM

ಹರ್ಷ ಮತ್ತು ಭುವಿಯ ಲವ್​​ಸ್ಟೋರಿ ಟ್ರ್ಯಾಕ್​ನಲ್ಲಿ ಸಾಗುತ್ತಿದ್ದ ‘ಕನ್ನಡತಿ’ ಧಾರಾವಾಹಿ (Kannadathi Serial) ಈಗ ಹೊಸ ಟ್ರ್ಯಾಕ್​ಗೆ ಹೊರಳಿದೆ. ಹರ್ಷನ ತಂಗಿ ಸುಚಿ ಎಂಗೇಜ್​ಮೆಂಟ್​ ಹಾಗೂ ಮದುವೆ ವಿಚಾರ ಹೈಲೈಟ್​ ಆಗುತ್ತಿದೆ. ಸುಚಿಗೆ ಭವಿಷ್ ಜತೆ ಎಂಗೇಜ್​ಮೆಂಟ್​ ಮಾಡಲಾಗುತ್ತಿದೆ. ಇದು ಧಾರಾವಾಹಿಯನ್ನು ಹೊಸ ಮಗ್ಗುಲಿಗೆ ತೆಗೆದುಕೊಂಡುಹೋಗುತ್ತಿದೆ. ಭವಿಷ್​ ಕೆಟ್ಟವನು. ಆತನಿಗೆ ಈಗಾಗಲೇ ಒಂದು ಮದುವೆ ಕೂಡ ಆಗಿದೆ. ಆದಾಗ್ಯೂ ಈ ವಿಚಾರವನ್ನು ಗುಟ್ಟಾಗಿ ಇಡಲಾಗಿದೆ. ಭುವಿಗೆ (Kannadathi Bhuvi) ಅನುಮಾನ ಶುರುವಾಗಿದ್ದು, ಎಂಗೇಜ್​ಮೆಂಟ್​ ನಿಲ್ಲಿಸೋಕೆ ಪ್ಲಾನ್​ ರೂಪಿಸಿದ್ದಾಳೆ. ರೇಚಲ್​ ಹಾಗೂ ಭವಿಷ್​ ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದಾರೆ. ಇಬ್ಬರ ಮದುವೆಯೂ ನೆರವೇರಿದೆ. ರೇಚಲ್​ ಕೊರಳಿನಲ್ಲಿ ಇರುವ ತಾಳಿಯೊಂದೇ ಇದಕ್ಕೆ ಸಾಕ್ಷಿ. ಅದು ಬಿಟ್ಟರೆ ಅವಳ ಬಳಿ ಮತ್ತಾವುದೇ ಸಾಕ್ಷಿಯೂ ಉಳಿದಿಲ್ಲ. ಸುಚಿಗೆ ನೀಡಿದ ಬರ್ತ್​ಡೇ ಪಾರ್ಟಿ ದಿನದಂದು ಭವಿಷ್​ ನಿಜವಾದ ಮುಖ ಭುವಿಗೆ ತಿಳಿದಿತ್ತು. ಈ ವಿಚಾರದಲ್ಲಿ ಆಕೆ ಬೆನ್ನು ಬಿಡದೆ ತನಿಖೆ ನಡೆಸಿದ್ದಾಳೆ. ಈ ಸಂದರ್ಭದಲ್ಲಿ ಆತನ ನಿಜವಾದ ಮುಖ ಬಯಲಾಗಿದೆ.

ಈ ನಿಶ್ಚಿತಾರ್ಥವನ್ನು ಹೇಗಾದರೂ ತಡೆಯಬೇಕು ಎಂದು ಭುವಿ ನಿರ್ಧರಿಸಿದ್ದಾಳೆ. ಈ ಕಾರಣಕ್ಕೆ ರೇಚಲ್​​ನನ್ನು ಕರೆದುಕೊಂಡು ಭವಿಷ್​ ಮನೆಗೆ ಬಂದಿದ್ದಾಳೆ. ಅದೂ ಸುಚಿ-ಭವಿಷ್​ ನಿಶ್ಚಿತಾರ್ಥದಂದು. ಇದನ್ನು ನೋಡಿದ ಭವಿಷ್​ ಶಾಕ್​ ಆಗಿದ್ದಾನೆ. ರೇಚಲ್​​ನನ್ನು ಸಮಾಧಾನಪಡಿಸಲು ಎಲ್ಲಿಲ್ಲದ ಪ್ರಯತ್ನ ಮಾಡುತ್ತಿದ್ದಾನೆ. ಆದರೆ, ಅದು ಸಾಧ್ಯವಾಗುತ್ತಿಲ್ಲ. ಭುವಿಯ ಜತೆ ಸೇರಿ ರೇಚಲ್​ ನೇರವಾಗಿ ಮನೆ ಒಳಗೆ ಎಂಟ್ರಿ ಕೊಟ್ಟಿದ್ದಾಳೆ. ಅಲ್ಲಿಂದ ಚಿತ್ರಣ ಬದಲಾಗಿದೆ.

ಮನೆ ಒಳಗೆ ಭವಿಷ್​ ಹಾಗೂ ರೇಚಲ್​ ಮುಖಾಮುಖಿ ಆಗಿದ್ದಾರೆ. ರೇಚಲ್​ ಅಳೋಕೆ ಪ್ರಾರಂಭಿಸಿದ್ದಾಳೆ. ಭವಿಷ್​ ಆಕೆಯನ್ನು ಸಮಾಧಾನ ಮಾಡೋಕೆ ಹೋಗಿದ್ದಾನೆ. ಅದೇ ಸಂದರ್ಭದಲ್ಲಿ ಭವಿಷ್​ ತಂದೆಯ ಎಂಟ್ರಿ ಆಗಿದೆ. ‘ನಾನು ಅವಳನ್ನು ಪ್ರೀತಿಸುತ್ತಿಲ್ಲ. ಅವಳು ನನ್ನನ್ನು ಪ್ರೀತಿಸುತ್ತಿದ್ದಾಳೆ’ ಎಂಬ ಸುಳ್ಳು ಹೇಳಿದ್ದಾನೆ. ಈ ವಿಚಾರವನ್ನು ಭವಿಷ್​ ತಂದೆ ರತ್ನಮಾಲಾ ಬಳಿ ಹೇಳಿದ್ದಾನೆ.

ಭುವಿ ಕೂಡ ಸುಮ್ಮನೆ ಕೂತಿಲ್ಲ. ಭವಿಷ್ ಹಾಗೂ ರೇಚಲ್​ ಪ್ರೀತಿಸುತ್ತಿರುವ ಸಂಗತಿಯನ್ನು ಸುಚಿ ಮುಂದೆ ಇಟ್ಟಿದ್ದಾಳೆ. ಈ ವಿಚಾರ ಕೇಳಿ ಸುಚಿ ನಿಜಕ್ಕೂ ಶಾಕ್​ ಆಗಿದ್ದಾಳೆ. ಭವಿಷ್​ನನ್ನು ಮುಂದೆ ಬಿಟ್ಟಿದ್ದು ಸಾನಿಯಾ. ಇಬ್ಬರ ಮದುವೆ ನಡೆದರೆ ಸಾನಿಯಾಗೆ ಲಾಭ ಇದೆ. ಈಗ ರೇಚಲ್​ ಎಂಟ್ರಿ ಆಗಿರುವುದು ಆಕೆಗೆ ತಲೆನೋವಾಗಿದೆ. ಸುಚಿ ಮದುವೆಯ ಎಪಿಸೋಡ್​ಗಳು ಕೆಲವರಿಗೆ ಇಷ್ಟವಾಗುತ್ತಿಲ್ಲ. ‘ಈ ಕಥೆಯನ್ನು ಸುಮ್ಮನೆ ಎಳೆದಾಡಬೇಡಿ’ ಎನ್ನುವ ಕಮೆಂಟ್​ಗಳನ್ನು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡುತ್ತಿದ್ದಾರೆ.

ಇದನ್ನೂ ಓದಿ: ಹರ್ಷನಿಗೆ ಭುವಿಯ ಅದ್ದೂರಿ ಪ್ರಪೋಸ್​; ಭಾನುವಾರ ‘ಕನ್ನಡತಿ’ ಧಾರಾವಾಹಿ 2 ಗಂಟೆಯ ವಿಶೇಷ ಸಂಚಿಕೆ  

ಮೇಕಪ್ ಇಲ್ಲದ ಫೋಟೋ ಹಂಚಿಕೊಂಡ ‘ಕನ್ನಡತಿ’ ನಟಿ ರಂಜನಿ ರಾಘವನ್; ಅಭಿಮಾನಿಗಳಿಂದ ಮೆಚ್ಚುಗೆ

Published On - 6:04 pm, Tue, 22 February 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ