‘ಪಾರು’ ಧಾರಾವಾಹಿಯಲ್ಲಿ ಸಖತ್ ಆ್ಯಕ್ಷನ್; ಆದಿ ಮದುವೆಗೆ ಅಡ್ಡಿ ಆದ ಅರುಂಧತಿ
ಆದಿತ್ಯನಿಗೆ ಕಥಾ ನಾಯಕಿ ಪಾರುನ ಮೇಲೆ ಪ್ರೀತಿ ಇದೆ. ಆಕೆಯನ್ನು ಮನಸಾರೆ ಪ್ರೀತಿಸುತ್ತಿದ್ದಾನೆ ಆದಿ. ಆದರೆ, ಆಕೆ ಮನೆಯ ಕೆಲಸದವಳು. ಆಕೆಯನ್ನು ಅಖಿಲಾಂಡೇಶ್ವರಿ ಒಪ್ಪುವುದಿಲ್ಲ ಎಂಬುದು ಎಲ್ಲರಿಗೂ ಮನದಟ್ಟಾಗಿದೆ.
‘ಪಾರು’ ಧಾರಾವಾಹಿ (Paaru Serial) ಹೊಸಹೊಸ ಟ್ವಿಸ್ಟ್ಗಳನ್ನು ಪಡೆದುಕೊಂಡು ಸಾಗುತ್ತಿದೆ. ಇಡೀ ಧಾರಾವಾಹಿ ಪ್ರಮುಖ ಘಟ್ಟ ತಲುಪಿದೆ. ಕಥೆಯ ಹೀರೋ ಆದಿತ್ಯನ ಮದುವೆಗೆ ತಯಾರಿ ನಡೆದಿದೆ. ಅಖಿಲಾಂಡೇಶ್ವರಿ ತನ್ನ ಮಗ ಆದಿತ್ಯನ ಮದುವೆಯನ್ನು ಸಾಂಗತ್ಯವಾಗಿ ಮಾಡಲು ಸಿದ್ಧತೆ ಮಾಡಿಕೊಂಡಿದ್ದಳು. ಯಾಮಿನಿ ಜತೆ ಆದಿತ್ಯನ ಮದುವೆ ನಡೆಯುತ್ತಿದೆ. ಆದರೆ, ಇದನ್ನು ತಡೆಯಲು ವೀರಯ್ಯ ದೇವನ ಎಂಟ್ರಿ ಆಗಿದೆ. ಧಾರಾವಾಹಿಯಲ್ಲಿ (Serial) ದೊಡ್ಡ ಫೈಟ್ ಕೂಡ ನಡೆದಿದೆ. ಆದಿತ್ಯ-ಯಾಮಿನಿ ಮದುವೆ ಹೇಗೆ ನಿಲ್ಲಲಿದೆ ಎನ್ನುವ ಕುತೂಹಲ ವೀಕ್ಷಕರ ವಲಯದಲ್ಲಿದೆ.
ಆದಿತ್ಯನಿಗೆ ಕಥಾ ನಾಯಕಿ ಪಾರುನ ಮೇಲೆ ಪ್ರೀತಿ ಇದೆ. ಆಕೆಯನ್ನು ಮನಸಾರೆ ಪ್ರೀತಿಸುತ್ತಿದ್ದಾನೆ ಆದಿ. ಆದರೆ, ಆಕೆ ಮನೆಯ ಕೆಲಸದವಳು. ಆಕೆಯನ್ನು ಅಖಿಲಾಂಡೇಶ್ವರಿ ಒಪ್ಪುವುದಿಲ್ಲ ಎಂಬುದು ಎಲ್ಲರಿಗೂ ಮನದಟ್ಟಾಗಿದೆ. ಈ ಕಾರಣಕ್ಕೆ ಆದಿ ಹಾಗೂ ಪಾರು ಜತೆಗಿನ ಮದುವೆ ಅಸಾಧ್ಯ ಎಂದು ಎಲ್ಲರೂ ಭಾವಿಸಿದ್ದಾರೆ. ಅಖಿಲಾಂಡೇಶ್ವರಿ ತನ್ನ ಮಗ ಆದಿತ್ಯನ ಮದುವೆಯನ್ನು ಯಾಮಿನಿ ಜತೆ ಮಾಡುತ್ತಿದ್ದಾಳೆ. ಈ ಯಾಮಿನಿ ಅರುಂಧತಿ ಕಡೆಯವಳು. ಅರುಂಧತಿಗೂ ಯಾಮಿನಿಗೂ ಹಳೆಯ ದ್ವೇಷವಿದೆ. ಅಖಿಲಾಂಡೇಶ್ವರಿ ವಿರುದ್ಧ ಹಗೆ ತೀರಿಸಿಕೊಳ್ಳಲು ಅರುಂಧತಿ ಮದುವೆ ಪ್ಲ್ಯಾನ್ ಮಾಡಿದ್ದಾಳೆ.
ಆದಿಯನ್ನು ಮದುವೆ ಆಗಲು ಹೊರಟಿರುವ ಯಾಮಿನಿ ಹಿಂದೆ ಕೆಟ್ಟ ಉದ್ದೇಶ ಇದೆ ಎಂಬುದು ಅಖಿಲಾಂಡೇಶ್ವರಿಗೆ ಈಗ ಗೊತ್ತಾಗಿದೆ. ಅರಸನಕೋಟೆ ವಂಶಕ್ಕೆ ಆಪತ್ತು ಇದೆ ಎಂಬುದರ ಸೂಚನೆ ಸಹ ಸಿಕ್ಕಿದೆ. ಹೀಗಿರುವಾಗಲೇ ಅಖಿಲಾಂಡೇಶ್ವರಿಯನ್ನು ಅರುಂಧತಿ ಕಿಡ್ನ್ಯಾಪ್ ಮಾಡಿಸಿದ್ದಾಳೆ. ಇದನ್ನೇ ಇಟ್ಟುಕೊಂಡು ಆದಿತ್ಯನನ್ನು ಅರುಂಧತಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದಾಳೆ.
ಅಖಿಲಾಂಡೇಶ್ವರಿಯನ್ನು ಬಿಡುಗಡೆ ಮಾಡಬೇಕು ಎಂದರೆ ಯಾಮಿನಿ ಕತ್ತಿಗೆ ಆದಿತ್ಯ ತಾಳಿಕಟ್ಟಬೇಕು ಎನ್ನುವ ಕಂಡೀಷನ್ ಹಾಕಿದ್ದಾಳೆ ಅರುಂಧತಿ. ಅತ್ತ ಅರುಂಧತಿಯನ್ನು ಕೂಡಿಟ್ಟ ಜಾಗಕ್ಕೆ ವೀರಯ್ಯ ದೇವನ ಎಂಟ್ರಿ ಆಗಿದೆ. ಅಲ್ಲಿರುವ ಬೌನ್ಸರ್ಗಳ ಜತೆ ಫೈಟ್ ಮಾಡಿದ್ದಾನೆ ವೀರಯ್ಯ ದೇವ. ಈ ಮೂಲಕ ಆದಿ-ಯಾಮಿನಿ ಮದುವೆ ತಪ್ಪಿಸೋಕೆ ಪ್ರಯತ್ನಿಸುತ್ತಿದ್ದಾನೆ. ಈ ಧಾರಾವಾಹಿ ಮುಂದೆ ಯಾವ ರೀತಿಯ ತಿರುವು ಪಡೆದುಕೊಂಡು ಸಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ವೀಕ್ಷಕರ ವಲಯದಲ್ಲಿ ‘ಪಾರು’ ಧಾರಾವಾಹಿ ಹೆಚ್ಚು ಫೇಮಸ್ ಆಗಿದೆ. ತನ್ನದೇ ಆದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿರುವ ಈ ಸೀರಿಯಲ್ ಈಗಾಗಲೇ 800 ಎಪಿಸೋಡ್ಗಳನ್ನು ಪೂರೈಸಿದೆ. 800 ಕಂತುಗಳನ್ನು ಪೂರೈಸಿದ ಖುಷಿಗೆ ಇತ್ತೀಚೆಗೆ ಇಡೀ ತಂಡ ಸಂಭ್ರಮಿಸಿತ್ತು. ಶೂಟಿಂಗ್ ಸೆಟ್ನಲ್ಲಿ ಕೇಕ್ ಕತ್ತರಿಸುವ ಮೂಲಕ ಖಷಿಯ ಕ್ಷಣವನ್ನು ಸೆಲೆಬ್ರೇಟ್ ಮಾಡಿದ್ದರು ‘ಪಾರು’ ತಂಡದವರು. ಈಗ ಕಥೆಯಲ್ಲಿ ಹೊಸ ಹೊಸ ಟ್ವಿಸ್ಟ್ಗಳನ್ನು ನೀಡುವ ಮೂಲಕ ಪ್ರೇಕ್ಷಕರಿಗೆ ಈ ಸೀರಿಯಲ್ ಇನ್ನಷ್ಟು ಹತ್ತಿರವಾಗಿದೆ.
ಇದನ್ನೂ ಓದಿ: ಮೇಕಪ್ ಇಲ್ಲದ ಫೋಟೋ ಹಂಚಿಕೊಂಡ ‘ಕನ್ನಡತಿ’ ನಟಿ ರಂಜನಿ ರಾಘವನ್; ಅಭಿಮಾನಿಗಳಿಂದ ಮೆಚ್ಚುಗೆ
‘ಪಾರು’ ಕಥೆಗೆ ಟ್ವಿಸ್ಟ್ ನೀಡಲು ಮತ್ತೆ ಬಂದ ಎಸ್. ನಾರಾಯಣ್; ರೋಚಕತೆ ಮೂಡಿಸಿದ ಎಪಿಸೋಡ್
Published On - 9:11 pm, Mon, 21 February 22