AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮದುವೆ ಬಳಿಕ ಮೊದಲ ಬಾರಿ ಜೋಡಿಯಾಗಿ ಟಿವಿ ಶೋಗೆ ಬರಲಿರುವ ಕತ್ರಿನಾ ಕೈಫ್​-ವಿಕ್ಕಿ ಕೌಶಲ್​?

‘ಸ್ಮಾರ್ಟ್​ ಜೋಡಿ’ ಕಾರ್ಯಕ್ರಮದ ಪ್ರೋಮೋಗಳು ವೀಕ್ಷಕರ ಗಮನ ಸೆಳೆದಿವೆ. ಇದೇ ಶೋಗೆ ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್ ಅವರನ್ನು ಕರೆತರಲು ಸಿದ್ಧತೆ ನಡೆದಿದೆ.

ಮದುವೆ ಬಳಿಕ ಮೊದಲ ಬಾರಿ ಜೋಡಿಯಾಗಿ ಟಿವಿ ಶೋಗೆ ಬರಲಿರುವ ಕತ್ರಿನಾ ಕೈಫ್​-ವಿಕ್ಕಿ ಕೌಶಲ್​?
ಕತ್ರಿನಾ ಕೈಫ್, ವಿಕ್ಕಿ ಕೌಶಲ್
TV9 Web
| Edited By: |

Updated on:Feb 21, 2022 | 12:57 PM

Share

ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಕತ್ರಿನಾ ಕೈಫ್​ (Katrina Kaif) ಹಾಗೂ ವಿಕ್ಕಿ ಕೌಶಲ್​ ಅವರು ಕೆಲವು ತಿಂಗಳ ಹಿಂದೆ ಹಸೆಮಣೆ ಏರಿದರು. ತಮ್ಮ ಪ್ರೀತಿ-ಪ್ರೇಮದ ಬಗ್ಗೆ ಈ ಜೋಡಿ ಎಲ್ಲಿಯೂ ಸಾರ್ವಜನಿಕವಾಗಿ ಮಾತನಾಡಿಲ್ಲ. ಮದುವೆಯ ವಿಡಿಯೋಗಳು ಕೂಡ ಬಹಿರಂಗ ಆಗಿಲ್ಲ. ಅವರಿಬ್ಬರ ಲವ್​ಸ್ಟೋರಿ ಹೇಗೆ ಶುರುವಾಯಿತು? ಮೊದಲು ಪ್ರಪೋಸ್​ ಮಾಡಿದ್ದು ಯಾರು? ಮದುವೆಗೆ (Katrina Kaif Vicky Kaushal Wedding) ಮನೆಯವರನ್ನು ಒಪ್ಪಿಸಿದ್ದು ಹೇಗೆ? ಇಂಥ ಹಲವು ಪ್ರಶ್ನೆಗಳಿಗೆ ಉತ್ತರ ಪಡೆಯಲು ಫ್ಯಾನ್ಸ್​ ಕಾಯುತ್ತಿದ್ದಾರೆ. ಹಾಗಾಗಿ ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್ (Vicky Kaushal)​ ಅವರು ಜೊತೆಯಾಗಿ ಯಾವುದಾದರೊಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿ ಎಂದು ಜನರು ಬಯಸುತ್ತಿದ್ದಾರೆ. ಅದನ್ನು ಅರ್ಥ ಮಾಡಿಕೊಂಡಿರುವ ಖಾಸಗಿ ಮನರಂಜನಾ ವಾಹಿನಿಯೊಂದು ಸೂಕ್ತ ವೇದಿಕೆ ಸಜ್ಜು ಮಾಡುತ್ತಿದೆ ಎಂಬ ಸುದ್ದಿ ಕೇಳಿಬಂದಿದೆ. ಶೀಘ್ರದಲ್ಲೇ ಈ ನವದಂಪತಿ ಜೊತೆಯಾಗಿ ಟಿವಿ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ. ಆ ಕ್ಷಣಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಆ ಚಾನೆಲ್​ ಯಾವುದು? ಕಾರ್ಯಕ್ರಮದ ಹೆಸರೇನು? ಈ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ..

ವಿಕ್ಕಿ ಕೌಶಲ್​ ಮತ್ತು ಕತ್ರಿನಾ ಕೈಫ್​ ಅವರನ್ನು ಹೊಸ ಕಾರ್ಯಕ್ರಮದ ಲಾಂಚಿಂಗ್​ ಎಪಿಸೋಡ್​ಗೆ ಅತಿಥಿಗಳಾಗಿ ಕರೆತರಲು ಹಿಂದಿಯ ‘ಸ್ಟಾರ್​ ಪ್ಲಸ್​’ ವಾಹಿನಿ ತಯಾರಿ ನಡೆಸುತ್ತಿದೆ ಎಂದು ‘ಬಾಲಿವುಡ್​ ಲೈಫ್​’ ವರದಿ ಮಾಡಿದೆ. ಸ್ಟಾರ್​ ಪ್ಲಸ್​ ವಾಹಿನಿಯಲ್ಲಿ ‘ಸ್ಮಾರ್ಟ್​ ಜೋಡಿ’ ಶೋ ಶೀಘ್ರವೇ ಆರಂಭ ಆಗಲಿದೆ. ಹೆಸರೇ ಸೂಚಿಸುವಂತೆ ಇದು ಸೆಲೆಬ್ರಿಟಿ ದಂಪತಿಗಳ ಕಾರ್ಯಕ್ರಮ. ಕನ್ನಡದಲ್ಲಿ ಮೂಡಿಬಂದ ‘ರಾಜಾ ರಾಣಿ’ ಶೋ ಮಾದರಿಯಲ್ಲಿ ‘ಸ್ಮಾರ್ಟ್​ ಜೋಡಿ’ ಶೋ ಪ್ರಸಾರ ಆಗಲಿದೆ. ಅದರ ಮೊದಲ ಎಪಿಸೋಡ್​ಗೆ ಕತ್ರಿನಾ ಕೈಫ್​ ಮತ್ತು ವಿಕ್ಕಿ ಕೌಶಲ್​ ಅತಿಥಿಗಳಾಗಿ ಬಂದರೆ ಹೆಚ್ಚು ಆಕರ್ಷಕವಾಗಿ ಇರಲಿದೆ ಎಂಬುದು ವಾಹಿನಿಯ ಲೆಕ್ಕಾಚಾರ.

‘ಸ್ಮಾರ್ಟ್​ ಜೋಡಿ’ ಕಾರ್ಯಕ್ರಮಕ್ಕೆ ಆಹ್ವಾನಿಸುವ ಕುರಿತು ವಿಕ್ಕಿ ಕೌಶಲ್​ ಮತ್ತು ಕತ್ರಿನಾ ಕೈಫ್​ ಜೊತೆಗೆ ಸ್ಟಾರ್​ ಪ್ಲಸ್​ ವಾಹಿನಿಯವರು ಮಾತುಕತೆ ನಡೆಸಿದ್ದಾರೆ. ಆದರೆ ಕತ್ರಿನಾ-ವಿಕ್ಕಿ ಕಡೆಯಿಂದ ಗ್ರೀನ್​ ಸಿಗ್ನಲ್​ ಸಿಗುವುದು ಇನ್ನೂ ಬಾಕಿ ಇದೆ ಎನ್ನಲಾಗಿದೆ. ಈಗಾಗಲೇ ಈ ಕಾರ್ಯಕ್ರಮದ ಪ್ರೋಮೋಗಳು ವೀಕ್ಷಕರ ಗಮನ ಸೆಳೆದಿವೆ. ಸೆಲೆಬ್ರಿಟಿ ದಂಪತಿಗಳು ವಿವಿಧ ಗೇಮ್ಸ್​ ಆಡುವುದರ ಜೊತೆಗೆ ಸಖತ್ ಮನರಂಜನೆ ನೀಡಲಿದ್ದಾರೆ. ಬಾಲಿವುಡ್​ನಲ್ಲಿ ಸಾಧನೆ ಮಾಡಿದ ವಿಕ್ಕಿ ಕೌಶಲ್​ ಹಾಗೂ ಕತ್ರಿನಾ ಕೈಫ್​ ಅವರು ಮದುವೆ ಆಗುವ ಮೂಲಕ ಬದುಕಿನ ಹೊಸ ಅಧ್ಯಾಯ ಆರಂಭಿಸಿದ್ದಾರೆ. ತಮ್ಮ ಮದುವೆ ಬಗ್ಗೆ ಅವರು ಸಾಕಷ್ಟು ಗೌಪ್ಯತೆ ಕಾಯ್ದುಕೊಂಡಿದ್ದರು. ವಿವಾಹದ ದೃಶ್ಯಗಳ ಪ್ರಸಾರದ ಹಕ್ಕುಗಳನ್ನು ಒಟಿಟಿ ಸಂಸ್ಥೆಯೊಂದಕ್ಕೆ ಮಾರಾಟ ಮಾಡಲಾಗಿದೆ ಎಂಬ ಮಾಹಿತಿ ಇದೆ. ಆದಷ್ಟು ಬೇಗ ಈ ಕುರಿತು ಅಧಿಕೃತ ಘೋಷಣೆ ಆಗಲಿದೆ. ಅದಕ್ಕಾಗಿಯೂ ಫ್ಯಾನ್ಸ್​ ಕಾದಿದ್ದಾರೆ.

ವಿಕ್ಕಿ ಕೌಶಲ್​ ಮತ್ತು ಕತ್ರಿನಾ ಕೈಫ್ ಅವರು ಹಲವು ವರ್ಷಗಳಿಂದ ಹಿಂದಿ ಚಿತ್ರರಂಗದಲ್ಲಿ ಮಿಂಚುತ್ತಿದ್ದರೂ ಕೂಡ ಈವರೆಗೂ ಅವರಿಬ್ಬರು ಜೋಡಿಯಾಗಿ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಆದರೂ ಅವರಿಬ್ಬರ ನಡುವೆ ಪ್ರೀತಿ ಚಿಗುರಿದ್ದು ವಿಶೇಷ. ‘ಜೀ ಲೇ ಝರಾ’ ಸಿನಿಮಾದಲ್ಲಿ ಕತ್ರಿನಾಗೆ ವಿಕ್ಕಿ ಕೌಶಲ್​ ಜೋಡಿ ಆಗುತ್ತಾರೆ ಎಂಬ ಸುದ್ದಿ ಹರಿದಾಡಿದೆ. ಆ ಬಗ್ಗೆ ತಿಳಿದುಕೊಳ್ಳಲು ಸಹ ಫ್ಯಾನ್ಸ್​ ಕಾಯುತ್ತಿದ್ದಾರೆ. ಸದ್ಯ ವಿಕ್ಕಿ ಕೌಶಲ್​ ಮತ್ತು ಕತ್ರಿನಾ ಕೈಫ್​ ಅವರು ಬೇರೆ ಬೇರೆ ಪ್ರಾಜೆಕ್ಟ್​ಗಳಲ್ಲಿ ಬ್ಯುಸಿ ಆಗಿದ್ದಾರೆ.

ಇದನ್ನೂ ಓದಿ:

ಗಂಡನ ಮನೆಯಲ್ಲಿ ಅಡುಗೆ ಕಲಿಯುತ್ತಿರುವ ಕತ್ರಿನಾ! ​ಮದುವೆ ಬಳಿಕ ವಿಕ್ಕಿ-ಕತ್ರಿನಾಗೆ ಮೊದಲ ಸಂಕ್ರಾಂತಿ

ನಟಿ ಕತ್ರಿನಾ ಕೈಫ್ ಮತ್ತು ನಟ ವಿಕ್ಕಿ ಕೌಶಲ್ ಮದುವೆಗೆ ಕೊನೆಗೂ ವಿಶ್ ಮಾಡಿದ ಸಲ್ಮಾನ್ ಖಾನ್

Published On - 12:47 pm, Mon, 21 February 22

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್