‘ಪಾರು’ ಕಥೆಗೆ ಟ್ವಿಸ್ಟ್​ ನೀಡಲು ಮತ್ತೆ ಬಂದ ಎಸ್​. ನಾರಾಯಣ್​; ರೋಚಕತೆ ಮೂಡಿಸಿದ ಎಪಿಸೋಡ್​

‘ಪಾರು’ ಸೀರಿಯಲ್​ ಕಥೆಯಲ್ಲಿ ಈಗ ಹೊಸ ಹೊಸ ಟ್ವಿಸ್ಟ್​ಗಳನ್ನು ನೀಡಲಾಗುತ್ತಿದೆ. ಆ ಮೂಲಕ ಪ್ರೇಕ್ಷಕರಿಗೆ ಈ ಧಾರಾವಾಹಿ ಇನ್ನಷ್ಟು ಹತ್ತಿರವಾಗಿದೆ.

‘ಪಾರು’ ಕಥೆಗೆ ಟ್ವಿಸ್ಟ್​ ನೀಡಲು ಮತ್ತೆ ಬಂದ ಎಸ್​. ನಾರಾಯಣ್​; ರೋಚಕತೆ ಮೂಡಿಸಿದ ಎಪಿಸೋಡ್​
ಮೋಕ್ಷಿತಾ ಪೈ, ಎಸ್​. ನಾರಾಯಣ್​, ವಿನಯಾ ಪ್ರಸಾದ್​
Follow us
TV9 Web
| Updated By: ಮದನ್​ ಕುಮಾರ್​

Updated on: Feb 18, 2022 | 7:54 AM

ಧಾರಾವಾಹಿಗಳ ನಡುವೆ ಈಗ ಭಾರಿ ಪೈಪೋಟಿ ಇದೆ. ಕನ್ನಡ ಕಿರುತೆರೆಯ ಎಲ್ಲ ಸೀರಿಯಲ್​ಗಳು ಬಗೆಬಗೆಯ ಪ್ರಯತ್ನಗಳನ್ನು ಮಾಡುತ್ತಿವೆ. ಸಿನಿಮಾದ ಗುಣಮಟ್ಟದಲ್ಲೇ ಧಾರಾವಾಹಿಗಳು ಮೂಡಿಬರುತ್ತಿವೆ. ಜೀ ಕನ್ನಡ ವಾಹಿನಿಯ ‘ಪಾರು’ ಸೀರಿಯಲ್​ (Paaru Kannada Serial) ಕೂಡ ಜನಮನ ಗೆಲ್ಲುವಲ್ಲಿ ಯಶಸ್ವಿ ಆಗುತ್ತಿದೆ. ಟಿಆರ್​ಪಿ ರೇಸ್​ನಲ್ಲಿ ಈ ಧಾರಾವಾಹಿ ಭರ್ಜರಿ ಪೈಪೋಟಿ ನೀಡುತ್ತಿದೆ. ಸಿನಿಮಾದಲ್ಲಿ ಫೇಮಸ್​ ಆದ ವಿನಯಾ ಪ್ರಸಾದ್​, ಎಸ್​. ನಾರಾಯಣ್​ ಮುಂತಾದ ಪ್ರತಿಭಾವಂತ, ಹಿರಿಯ ಕಲಾವಿದರ ನಟನೆಯಿಂದಾಗಿ ‘ಪಾರು’ ಧಾರಾವಾಹಿಯ ಹಿರಿಮೆ ಹೆಚ್ಚಿದೆ. ನಟ ಎಸ್​. ನಾರಾಯಣ್​ (S. Narayan) ಅವರು ಈ ಸೀರಿಯಲ್​ನಲ್ಲಿ ಒಂದು ಮುಖ್ಯವಾದ ಪಾತ್ರ ಮಾಡಿದ್ದಾರೆ. ಆದರೆ ಎಲ್ಲ ಎಪಿಸೋಡ್​ನಲ್ಲಿಯೂ ಅವರು ಕಾಣಿಸಿಕೊಂಡಿಲ್ಲ. ಕಿರುತೆರೆ ಪ್ರೇಕ್ಷಕರು ಆ ಪಾತ್ರವನ್ನು ಹಲವು ವಾರಗಳ ಕಾಲ ಮಿಸ್​ ಮಾಡಿಕೊಂಡಿದ್ದರು. ಆದರೆ ಇತ್ತೀಚಿನ ಎಪಿಸೋಡ್​ಗಳಲ್ಲಿ ಎಸ್​. ನಾರಾಯಣ್​ ಮತ್ತೆ ಪ್ರೇಕ್ಷಕರ ಎದುರು ಬಂದಿದ್ದಾರೆ. ಅವರ ಆಗಮನದಿಂದ ಕಥೆಗೆ ಟ್ವಿಸ್ಟ್​ (Paaru Serial Update) ಸಿಗುತ್ತಿದೆ. ಇದರಿಂದ ‘ಪಾರು’ ಸೀರಿಯಲ್​ ಕೌತುಕದ ಘಟ್ಟ ತಲುಪಿದೆ.

ವೀಕ್ಷಕರ ವಲಯದಲ್ಲಿ ‘ಪಾರು’ ಧಾರಾವಾಹಿ ಹೆಚ್ಚು ಫೇಮಸ್​ ಆಗಿದೆ. ತನ್ನದೇ ಆದ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡಿರುವ ಈ ಸೀರಿಯಲ್​ ಈಗಾಗಲೇ 800 ಎಪಿಸೋಡ್​ಗಳನ್ನು ಪೂರೈಸಿದೆ. 800 ಕಂತುಗಳನ್ನು ಪೂರೈಸಿದ ಖುಷಿಗೆ ಇತ್ತೀಚೆಗೆ ಇಡೀ ತಂಡ ಸಂಭ್ರಮಿಸಿತ್ತು. ಶೂಟಿಂಗ್​ ಸೆಟ್​ನಲ್ಲಿ ಕೇಕ್​ ಕತ್ತರಿಸುವ ಮೂಲಕ ಖಷಿಯ ಕ್ಷಣವನ್ನು ಸೆಲೆಬ್ರೇಟ್​ ಮಾಡಿದ್ದರು ‘ಪಾರು’ ತಂಡದವರು. ಈಗ ಕಥೆಯಲ್ಲಿ ಹೊಸ ಹೊಸ ಟ್ವಿಸ್ಟ್​ಗಳನ್ನು ನೀಡುವ ಮೂಲಕ ಪ್ರೇಕ್ಷಕರಿಗೆ ಈ ಸೀರಿಯಲ್​ ಇನ್ನಷ್ಟು ಹತ್ತಿರವಾಗಿದೆ.

ವೀರಯ್ಯ ದೇವ ಎಂಬ ಪಾತ್ರವನ್ನು ಮಾಡಿರುವ ಎಸ್​. ನಾರಾಯಣ್​ ಅವರು ಆದಿತ್ಯ ಮತ್ತು ಪಾರುಗೆ ಸಹಾಯ ಮಾಡಲು ಎಂಟ್ರಿ ನೀಡಿದ್ದಾರೆ. ವೀರಯ್ಯ ದೇವನ ಎಂಟ್ರಿಯಿಂದಾಗಿ ಅಖಿಲಾಂಡೇಶ್ವರಿಗೆ ಆತಂಕ ಹೆಚ್ಚಾಗಿದೆ. ಆದಿ ಮತ್ತು ಯಾಮಿನಿ ಮದುವೆಗೆ ಸಕಲ ಸಿದ್ಧತೆ ನಡೆದಿತ್ತು. ಆದರೆ ಅದನ್ನು ತಡೆಯಲು ವೀರಯ್ಯ ದೇವ ಪಣ ತೊಟ್ಟಿದ್ದಾರೆ. ಅವರ ವಿರುದ್ಧ ಸೂಕ್ತ ಸಂಚು ರೂಪಿಸಲು ಅಖಿಲಾಂಡೇಶ್ವರಿ ಕೂಡ ತಯಾರಾಗುತ್ತಿದ್ದಾಳೆ. ಆದರೆ ಅಸಲಿ ಟ್ವಿಸ್ಟ್​ ಬೇರೆಯೇ ಇದೆ.

ಆದಿಯನ್ನು ಮದುವೆ ಆಗಲು ಹೊರಟಿರುವ ಯಾಮಿನಿ ಹಿಂದೆ ಕೆಟ್ಟ ಉದ್ದೇಶ ಇದೆ ಎಂಬುದು ಅಖಿಲಾಂಡೇಶ್ವರಿಗೆ ಈಗ ಗೊತ್ತಾಗಿದೆ. ಅರಸನಕೋಟೆ ವಂಶಕ್ಕೆ ಆಪತ್ತು ಇದೆ ಎಂಬುದರ ಸೂಚನೆ ಸಹ ಸಿಕ್ಕಿದೆ. ಹಾಗಾದರೆ ಅಖಿಲಾಂಡೇಶ್ವರಿ ಈಗೇನು ಮಾಡುತ್ತಾಳೆ ಎಂಬ ಕೌತುಕದೊಂದಿದೆ ‘ಪಾರು’ ಧಾರಾವಾಹಿ ಸಾಗುತ್ತಿದೆ.

ಇದನ್ನೂ ಓದಿ:

ಮೇಕಪ್ ಇಲ್ಲದ ಫೋಟೋ ಹಂಚಿಕೊಂಡ ‘ಕನ್ನಡತಿ’ ನಟಿ ರಂಜನಿ ರಾಘವನ್; ಅಭಿಮಾನಿಗಳಿಂದ ಮೆಚ್ಚುಗೆ

ಬೆಳ್ಳಿತೆರೆ ಮೇಲೆ ಬರಲಿದೆ ‘ಶಕ್ತಿಮಾನ್​’ ಧಾರಾವಾಹಿ; ಹೀರೋ ಬಗ್ಗೆ ಗುಟ್ಟು ಕಾಯ್ದುಕೊಂಡ ಸೋನಿ ಪಿಕ್ಚರ್ಸ್​

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ