AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹರ್ಷನಿಗೆ ಭುವಿಯ ಅದ್ದೂರಿ ಪ್ರಪೋಸ್​; ಭಾನುವಾರ ‘ಕನ್ನಡತಿ’ ಧಾರಾವಾಹಿ 2 ಗಂಟೆಯ ವಿಶೇಷ ಸಂಚಿಕೆ  

‘ಹವಿ’ ಹೆಸರಿನಲ್ಲಿ ಭಾನುವಾರ ‘ಕನ್ನಡತಿ’ ವಿಶೇಷ ಸಂಚಿಕೆ ಪ್ರಸಾರವಾಗಲಿದೆ. ‘ಹವಿ’ ಎಂದರೆ ಹರ್ಷ ಹೆಸರಿನ ಮೊದಲಾಕ್ಷರ ಹಾಗೂ ಭುವಿ ಹೆಸರಿನ ಎರಡನೇ ಅಕ್ಷರ. ಸಂಜೆ 5.30ಕ್ಕೆ ಈ ಸಂಚಿಕೆ ಪ್ರಸಾರವಾಗಲಿದ್ದು, ಎರಡು ಗಂಟೆ ಇರಲಿದೆ.

ಹರ್ಷನಿಗೆ ಭುವಿಯ ಅದ್ದೂರಿ ಪ್ರಪೋಸ್​; ಭಾನುವಾರ ‘ಕನ್ನಡತಿ’ ಧಾರಾವಾಹಿ 2 ಗಂಟೆಯ ವಿಶೇಷ ಸಂಚಿಕೆ  
TV9 Web
| Edited By: |

Updated on:Feb 05, 2022 | 3:10 PM

Share

ಕಿರುತೆರೆ ಜಗತ್ತಿನಲ್ಲಿ ಈಗ ಸ್ಪರ್ಧೆ ಜೋರಾಗಿದೆ. ಸಿನಿಮಾಗಳ ಗುಣಮಟ್ಟದಲ್ಲೇ ಧಾರಾವಾಹಿಗಳನ್ನು ನಿರ್ಮಾಣ ಮಾಡಿ, ವೀಕ್ಷಕರ ಮುಂದೆ ಇಡುವ ಕಾರ್ಯ ನಡೆಯುತ್ತಿದೆ. ಇದೇ ಕಾರಣಕ್ಕೆ ಧಾರಾವಾಹಿಯಲ್ಲಿ ಬರುವ ಮದುವೆಗಳನ್ನು ನಿಜ ಜೀವನದ ವಿವಾಹ ಸಂಭ್ರಮಕ್ಕಿಂತ ಅದ್ದೂರಿಯಾಗಿ ಆಯೋಜಿಸಲಾಗುತ್ತದೆ. ಸೀರಿಯಲ್​ ಮದುವೆಗೆ ಜನಸಾಮಾನ್ಯರನ್ನು ಕರೆದು ಊಟ ಹಾಕಿದ ಉದಾಹರಣೆ ಕೂಡ ಹಲವಿದೆ. ಕಲರ್ಸ್​ ಕನ್ನಡ ವಾಹಿನಿ ಕೂಡ ಇದಕ್ಕೆ ಹಿಂದೆ ಬಿದ್ದಿಲ್ಲ. ಹೊಸಹೊಸ ಧಾರಾವಾಹಿ ಹಾಗೂ ರಿಯಾಲಿಟಿ ಶೋ ಮೂಲಕ ಪ್ರೇಕ್ಷಕರಿಗೆ ಮತ್ತಷ್ಟು ಹತ್ತಿರವಾಗಲು ಪ್ರಯತ್ನಿಸುತ್ತಿದೆ. ಭಾನುವಾರದ ಮನರಂಜನೆಗೆ ಈ ವಾರ ಈ ವಾಹಿನಿ ‘ಕನ್ನಡತಿ’ ಧಾರಾವಾಹಿಯ  (Kannadathi Serial) ವಿಶೇಷ ಸಂಚಿಕೆಯೊಂದಿಗೆ ಬರುತ್ತಿದೆ. ಈ ಎಪಿಸೋಡ್​ನಲ್ಲಿ ಹರ್ಷನಿಗೆ (Harsha) ಭುವಿ (Bhuvi) ಪ್ರಪೋಸ್​ ಮಾಡಲಿದ್ದಾಳೆ ಅನ್ನೋದು ವಿಶೇಷ.

ಕನ್ನಡತಿ ಧಾರಾವಾಹಿ ಹೊಸಹೊಸ ತಿರುವುಗಳನ್ನು ಪಡೆದುಕೊಂಡು ಮುಂದೆ ಸಾಗುತ್ತಿದೆ. ಹರ್ಷ ಈಗಾಗಲೇ ಭುವಿಗೆ ಪ್ರೀತಿ ವ್ಯಕ್ತಪಡಿಸಿ ಆಗಿದೆ. ಭುವಿ ಇದನ್ನು ಒಪ್ಪಿಕೊಂಡಿದ್ದಾಳೆ. ಪ್ರೀತಿ ವಿಚಾರದಲ್ಲಿ ಹರ್ಷ ತುಂಬಾನೇ ಎಫರ್ಟ್​ ಹಾಕುತ್ತಿದ್ದಾನೆ. ಇದು ವೀಕ್ಷಕರಿಗೂ ಎದ್ದು ಕಾಣುತ್ತಿದೆ. ಭುವಿಯ ನಾಚಿಕೆ ಸ್ವಭಾವ ಇನ್ನೂ ಪೂರ್ತಿಯಾಗಿ ಹೋಗಿಲ್ಲ. ಆಕೆ, ವರುಧಿನಿಯ ಫ್ರೆಂಡ್​ಶಿಪ್​ಗೆ ಕೊಂಚ ಅಂಜುತ್ತಾಳೆ. ಆದರೆ, ದಿನ ಕಳೆದಂತೆ ಭುವಿ ನಿಧಾನವಾಗಿ ಬದಲಾಗುತ್ತಿದ್ದಾಳೆ. ಇದಕ್ಕೆ ಸಾಕ್ಷ್ಯ ಎಂಬಂತೆ ಆಕೆ ಹರ್ಷನಿಗೆ ಒಂದು ಲವ್​ ಲೆಟರ್​ ಬರೆದಿದ್ದಾಳೆ. ಮುಂದಿನ ದಿನಗಳಲ್ಲಿ ಒಂದು ದೊಡ್ಡ ಬದಲಾವಣೆ ಭುವಿಯ ಕಡೆಯಿಂದ ಆಗಲಿದೆ ಎಂದು ರಂಜನಿ ರಾಘವನ್​ ಟಿವಿ9 ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದರು. ಈಗ ಆ ಎಪಿಸೋಡ್​ ಪ್ರಸಾರವಾಗುತ್ತಿದೆ.

‘ಹವಿ’ ಹೆಸರಿನಲ್ಲಿ ಭಾನುವಾರ ‘ಕನ್ನಡತಿ’ ವಿಶೇಷ ಸಂಚಿಕೆ ಪ್ರಸಾರವಾಗಲಿದೆ. ‘ಹವಿ’ ಎಂದರೆ ಹರ್ಷ ಹೆಸರಿನ ಮೊದಲಾಕ್ಷರ ಹಾಗೂ ಭುವಿ ಹೆಸರಿನ ಎರಡನೇ ಅಕ್ಷರ. ಸಂಜೆ 5.30ಕ್ಕೆ ಈ ಸಂಚಿಕೆ ಪ್ರಸಾರವಾಗಲಿದ್ದು, ಎರಡು ಗಂಟೆ ಇರಲಿದೆ. ಈ ಎಪಿಸೋಡ್​ನಲ್ಲಿ ಹರ್ಷನಿಗೆ ಭುವಿ ಪ್ರಪೋಸ್​ ಮಾಡಲಿದ್ದಾಳೆ. ಈ ಪ್ರೋಮೋಗಳು ಈಗ ಸಾಕಷ್ಟು ವೈರಲ್​ ಆಗುತ್ತಿವೆ.

ಈ ಪ್ರೋಮೋಗಳಿಗೆ ನಾನಾ ರೀತಿಯ ಕಮೆಂಟ್​ಗಳು ಬರುತ್ತಿವೆ. ‘ಹರ್ಷನಿಗೆ ಭುವಿ ಪ್ರೊಪೋಸ್ ಮಾಡೋ ಸಂಭ್ರಮ. ನಮಗೆ ಅವರನ್ನು ಯಾವಾಗ ನೋಡ್ತೀವಿ ಅನ್ನೋ ಆತುರ’ ಎಂದು ಓರ್ವ ಅಭಿಮಾನಿ ಬರೆದುಕೊಂಡಿದ್ದಾನೆ. ‘ಇಬ್ಬರು ಸಿನಿಮಾದಲ್ಲಿ ಒಟ್ಟಿಗೆ ಆಕ್ಟಿಂಗ್ ಮಾಡೋದನ್ನು ನೋಡ್ಬೇಕು ಅನ್ಕೊಂಡಿದ್ವಿ. ಪರವಾಗಿಲ್ಲ, ಎರಡು ಗಂಟೆ ‘ಹವಿ’ ಸಿನಿಮಾ ಭಾನುವಾರ ನೋಡಬಹುದು’ ಎಂದು ರಜನಿ ಎಂಬುವವರು ಕಮೆಂಟ್​ ಮಾಡಿದ್ದಾರೆ.

‘ಪ್ರೀತಿ ಹೇಳಿಕೊಳ್ಳುವುದರಲ್ಲಿರಬಹುದು ಅಥವಾ ಎಲ್ಲಾದರೂ ಕರೆದುಕೊಂಡು ಹೋಗುವುದರಲ್ಲಿರಬಹುದು, ಹರ್ಷನೇ ತುಂಬಾ ಎಫರ್ಟ್​ ಹಾಕುತ್ತಿದ್ದ. ಆದರೆ, ಭುವಿ ತನ್ನ ವ್ಯಕ್ತಿತ್ವವನ್ನು ಬದಲಾವಣೆ ಮಾಡಿಕೊಂಡು, ಹರ್ಷನನ್ನು ಕರೆದುಕೊಂಡು ಒಂದಷ್ಟು ಪ್ಲ್ಯಾನಿಂಗ್​ ಮಾಡಿದ್ದಾಳೆ. ಅದೇನು ಎಂಬುದನ್ನು ಧಾರಾವಾಹಿಯಲ್ಲಿ ನೋಡಿ’ ಎಂದು ರಂಜನಿ ರಾಘವನ್ ಈ ಮೊದಲು​ ಟಿವಿ9 ಕನ್ನಡದ ಜತೆ ಮಾಹಿತಿ ಹಂಚಿಕೊಂಡಿದ್ದರು.

ಇದನ್ನೂ ಓದಿ: ಭುವಿ ಸೀರೆ ಬಗ್ಗೆ ಅನೇಕರಿಗೆ ಇದೆ ತಕರಾರು; ರಂಜನಿ ರಾಘವನ್​ ಬಿಚ್ಚಿಟ್ಟ ಅಚ್ಚರಿ ಮಾಹಿತಿ 

ಹರ್ಷನಿಗೆ ಭುವಿ ಕಡೆಯಿಂದ ಸಿಗಲಿದೆ ಬಿಗ್​ ಸರ್​​ಪ್ರೈಸ್​​; ಟಿವಿ9ಗೆ ರಂಜನಿ ರಾಘವನ್ ಎಕ್ಸ್​ಕ್ಲೂಸಿವ್ ಮಾಹಿತಿ

Published On - 3:09 pm, Sat, 5 February 22