ಹರ್ಷನಿಗೆ ಭುವಿ ಕಡೆಯಿಂದ ಸಿಗಲಿದೆ ಬಿಗ್​ ಸರ್​​ಪ್ರೈಸ್​​; ಟಿವಿ9ಗೆ ರಂಜನಿ ರಾಘವನ್ ಎಕ್ಸ್​ಕ್ಲೂಸಿವ್ ಮಾಹಿತಿ

ಹರ್ಷನಿಗೆ ಭುವಿ ಕಡೆಯಿಂದ ಸಿಗಲಿದೆ ಬಿಗ್​ ಸರ್​​ಪ್ರೈಸ್​​; ಟಿವಿ9ಗೆ ರಂಜನಿ ರಾಘವನ್ ಎಕ್ಸ್​ಕ್ಲೂಸಿವ್ ಮಾಹಿತಿ
ರಂಜನಿ-ಕಿರಣ್​

ಸೋಮವಾರದ (ಜನವರಿ 31) ಎಪಿಸೋಡ್​ನಲ್ಲಿ ಹರ್ಷನಿಗೆ ಭುವಿ ಲವ್​ ಲೆಟರ್​ ಬರೆದಿದ್ದಾಳೆ. ಇದು ಆಕೆಯಿಂದ ಹರ್ಷನಿಗೆ ಬಂದ ಮೊದಲ ಪ್ರೇಮ ಬರಹ. ಈ ವಿಚಾರದಲ್ಲಿ ಆತ ಸಖತ್ ಖುಷಿಪಟ್ಟಿದ್ದಾನೆ. ಮುಂದಿನ ದಿನಗಳಲ್ಲಿ ಭುವಿ ಮತ್ತಷ್ಟು ಚೇಂಜ್​ ಆಗಲಿದ್ದಾಳೆ.

TV9kannada Web Team

| Edited By: Rajesh Duggumane

Jan 31, 2022 | 5:48 PM


ಕನ್ನಡತಿ ಧಾರಾವಾಹಿ (Kannadathi Serial) ಹೊಸಹೊಸ ತಿರುವುಗಳನ್ನು ಪಡೆದುಕೊಂಡು ಮುಂದೆ ಸಾಗುತ್ತಿದೆ. ಹರ್ಷ ಈಗಾಗಲೇ ಭುವಿಗೆ ಪ್ರೀತಿ ವ್ಯಕ್ತಪಡಿಸಿ ಆಗಿದೆ. ಭುವಿ ಇದನ್ನು ಒಪ್ಪಿಕೊಂಡಿದ್ದಾಳೆ. ಪ್ರೀತಿ ವಿಚಾರದಲ್ಲಿ ಹರ್ಷ ತುಂಬಾನೇ ಎಫರ್ಟ್​ ಹಾಕುತ್ತಿದ್ದಾನೆ. ಇದು ವೀಕ್ಷಕರಿಗೂ ಎದ್ದು ಕಾಣುತ್ತಿದೆ. ಭುವಿಯ ನಾಚಿಕೆ ಸ್ವಭಾವ ಇನ್ನೂ ಪೂರ್ತಿಯಾಗಿ ಹೋಗಿಲ್ಲ. ಆಕೆ, ವರುಧಿನಿಯ ಫ್ರೆಂಡ್​ಶಿಪ್​ಗೆ ಕೊಂಚ ಅಂಜುತ್ತಾಳೆ. ಆದರೆ, ದಿನ ಕಳೆದಂತೆ ಭುವಿ ನಿಧಾನವಾಗಿ ಬದಲಾಗುತ್ತಿದ್ದಾಳೆ. ಇದಕ್ಕೆ ಸಾಕ್ಷ್ಯ ಎಂಬಂತೆ ಆಕೆ ಹರ್ಷನಿಗೆ ಒಂದು ಲವ್​ ಲೆಟರ್​ ಬರೆದಿದ್ದಾಳೆ. ಮುಂದಿನ ದಿನಗಳಲ್ಲಿ ಒಂದು ದೊಡ್ಡ ಬದಲಾವಣೆ ಭುವಿಯ ಕಡೆಯಿಂದ ಆಗಲಿದೆಯಂತೆ. ಈ ಬಗ್ಗೆ ರಂಜನಿ ರಾಘವನ್ (Ranjani Raghavan)​ ಅವರು ಟಿವಿ9 ಕನ್ನಡದ ಜತೆಗೆ ಮಾಹಿತಿ ಹಂಚಿಕೊಂಡಿದ್ದಾರೆ.

ರಂಜನಿ ಅವರು ಭುವಿ ಪಾತ್ರವನ್ನು ಅದ್ಭುತವಾಗಿ ನಿರ್ವಹಿಸುತ್ತಿದ್ದಾರೆ. ಇದು ಎಲ್ಲರಿಗೂ ಇಷ್ಟವಾಗುತ್ತಿದೆ. ಇತ್ತೀಚೆಗೆ ಅವರಿಗೆ ಕೊವಿಡ್​ ಕಾಣಿಸಿಕೊಂಡಿತ್ತು. ಈ ಕಾರಣದಿಂದ ಅವರ ಪಾತ್ರ ಅಷ್ಟಾಗಿ ಪರದೆಮೇಲೆ ಬಂದಿರಲಿಲ್ಲ. ಆದರೆ, ಈಗ ಅವರು ಕೊವಿಡ್​ನಿಂದ ಗುಣಮುಖರಾಗಿದ್ದಾರೆ. ಈ ಕಾರಣಕ್ಕೆ ರಂಜನಿ ಆಗಿ ಮತ್ತೆ ಕಾಣಿಸಿಕೊಳ್ಳುತ್ತಿದ್ದಾರೆ. ಇದು ಅಭಿಮಾನಿಗಳಿಗೆ ಖುಷಿ ನೀಡಿದೆ.

ಸೋಮವಾರದ (ಜನವರಿ 31) ಎಪಿಸೋಡ್​ನಲ್ಲಿ ಹರ್ಷನಿಗೆ ಭುವಿ ಲವ್​ ಲೆಟರ್​ ಬರೆದಿದ್ದಾಳೆ. ಇದು ಆಕೆಯಿಂದ ಹರ್ಷನಿಗೆ ಬಂದ ಮೊದಲ ಪ್ರೇಮ ಬರಹ. ಈ ವಿಚಾರದಲ್ಲಿ ಆತ ಸಖತ್ ಖುಷಿಪಟ್ಟಿದ್ದಾನೆ. ಮುಂದಿನ ದಿನಗಳಲ್ಲಿ ಭುವಿ ಮತ್ತಷ್ಟು ಚೇಂಜ್​ ಆಗಲಿದ್ದಾಳೆ! ಈ ವಿಚಾರವನ್ನು ಸ್ವತಃ ಭುವಿ ಪಾತ್ರ ಮಾಡಿರುವ ರಂಜನಿ ರಾಘವನ್​ ಹೇಳಿಕೊಂಡಿದ್ದಾರೆ.

ಭುವಿಗೆ ಅದ್ದೂರಿಯಾಗಿ ಪ್ರಪೋಸ್​ ಮಾಡಿದ್ದು ಹರ್ಷ. ಆ ಬಳಿಕ ಭುವಿಯ ಮನ ಒಲಿಸಲು ಆತ ಸಾಕಷ್ಟು ಕಷ್ಟಪಟ್ಟಿದ್ದಾನೆ. ಆದರೆ, ಭುವಿ ನಾಚಿಕೆ ಸ್ವಭಾವದವಳು. ಹೀಗಾಗಿ, ಅವಳು ಅಷ್ಟಾಗಿ ಓಪನ್​ಅಪ್​ ಆಗಿಲ್ಲ. ಇದು ವೀಕ್ಷಕರ ಗಮನಕ್ಕೂ ಬಂದಿದೆ. ಆದರೆ, ಮುಂದಿನ ದಿನಗಳಲ್ಲಿ ಆ ರೀತಿ ಇರುವುದಿಲ್ಲವಂತೆ. ಹಾಗಾದರೆ, ಭುವಿ ಮುಂದೆ ಏನು ಮಾಡುತ್ತಾಳೆ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

‘ಪ್ರೀತಿ ಹೇಳಿಕೊಳ್ಳುವುದರಲ್ಲಿರಬಹುದು ಅಥವಾ ಎಲ್ಲಾದರೂ ಕರೆದುಕೊಂಡು ಹೋಗುವುದರಲ್ಲಿರಬಹುದು, ಹರ್ಷನೇ ತುಂಬಾ ಎಫರ್ಟ್​ ಹಾಕುತ್ತಿದ್ದ. ಆದರೆ, ಭುವಿ ತನ್ನ ವ್ಯಕ್ತಿತ್ವವನ್ನು ಬದಲಾವಣೆ ಮಾಡಿಕೊಂಡು, ಹರ್ಷನನ್ನು ಕರೆದುಕೊಂಡು ಒಂದಷ್ಟು ಪ್ಲ್ಯಾನಿಂಗ್​ ಮಾಡಿದ್ದಾಳೆ. ಅದೇನು ಎಂಬುದನ್ನು ಧಾರಾವಾಹಿಯಲ್ಲಿ ನೋಡಿ’ ಎಂದಿದ್ದಾರೆ ರಂಜನಿ ರಾಘವನ್​.

ಇದನ್ನೂ ಓದಿ: ‘ಕನ್ನಡತಿ’ ನಟಿ ರಂಜನಿ ರಾಘವನ್​ ಬಳಿ ಎಷ್ಟು ದುಡ್ಡಿದೆ? ಅಚ್ಚರಿಯ ವಿಚಾರ ಬಾಯ್ಬಿಟ್ಟ ಭುವಿ

‘ಪುಟ್ಟಗೌರಿ ಮದುವೆ’ ಬಗ್ಗೆ ಪುನೀತ್​ ಮಾತಾಡಿದ್ದರು; ಆ ದಿನಗಳನ್ನು ನೆನಪಿಸಿಕೊಂಡ ನಟಿ ರಂಜನಿ ರಾಘವನ್​

Follow us on

Related Stories

Most Read Stories

Click on your DTH Provider to Add TV9 Kannada