‘ಪುಟ್ಟಗೌರಿ ಮದುವೆ’ ಬಗ್ಗೆ ಪುನೀತ್​ ಮಾತಾಡಿದ್ದರು; ಆ ದಿನಗಳನ್ನು ನೆನಪಿಸಿಕೊಂಡ ನಟಿ ರಂಜನಿ ರಾಘವನ್​

‘ನನ್ನ ರಾಜಹಂಸ ಸಿನಿಮಾದ ಪ್ರಮೋಷನ್​ ಸಂದರ್ಭದಲ್ಲಿ ಅಪ್ಪು ಸರ್​ ಅವರ ಮನೆಗೆ ಹೋದಾಗ ಪುಟ್ಟಗೌರಿ ಮದುವೆ ಬಗ್ಗೆ ಮಾತನಾಡಿದ್ದರು’ ಎಂದು ಆ ಭೇಟಿಯ ನೆನಪನ್ನು ರಂಜನಿ ರಾಘವನ್​ ಮೆಲುಕು ಹಾಕಿದ್ದಾರೆ.

TV9kannada Web Team

| Edited By: Madan Kumar

Jan 31, 2022 | 3:25 PM

ಕಿರುತೆರೆ ಮತ್ತು ಹಿರಿತೆರೆ ನಡುವೆ ಒಂದು ಒಡನಾಟ ಯಾವಾಗಲೂ ಇದ್ದೇ ಇರುತ್ತದೆ. ಅನೇಕ ಸೀರಿಯಲ್​ಗಳನ್ನು ಸಿನಿಮಾದ ಸ್ಟಾರ್​ ಕಲಾವಿದರು ಇಷ್ಟಪಡುತ್ತಾರೆ. ರಂಜನಿ ರಾಘವನ್​ ಅವರು ಈ ಹಿಂದೆ ನಟಿಸುತ್ತಿದ್ದ ‘ಪುಟ್ಟಗೌರಿ ಮದುವೆ’ (Putta Gowri Maduve) ಧಾರಾವಾಹಿ ತುಂಬ ಜನಪ್ರಿಯವಾಗಿತ್ತು. ಆ ಸೀರಿಯಲ್​ ಬಗ್ಗೆ ಒಮ್ಮೆ ಪುನೀತ್​ ರಾಜ್​ಕುಮಾರ್​ (Puneeth Rajkumar) ಕೂಡ ಮಾತನಾಡಿದ್ದರು. ಆ ದಿನಗಳನ್ನು ರಂಜನಿ ರಾಘವನ್​ (Ranjani Raghavan) ಅವರು ನೆನಪು ಮಾಡಿಕೊಂಡಿದ್ದಾರೆ. ‘ನಾನು 2-3 ಸಲ ಅಪ್ಪು ಸರ್​ ಭೇಟಿ ಮಾಡಿದ್ದೆ. ನನ್ನ ರಾಜಹಂಸ ಸಿನಿಮಾದ ಪ್ರಮೋಷನ್​ ಸಂದರ್ಭದಲ್ಲಿ ಅವರ ಮನೆಗೆ ಹೋದಾಗ ಪುಟ್ಟಗೌರಿ ಮದುವೆ ಬಗ್ಗೆ ಮಾತನಾಡಿದ್ದರು. ತಮ್ಮ ಮನೆಯವರು ಮತ್ತು ಮನೆ ಕೆಲಸದವರೆಲ್ಲ ಆ ಸೀರಿಯಲ್​ ನೋಡ್ತಾರೆ ಅಂತ ಪುನೀತ್​ ನಮ್ಮನ್ನು ಕರೆದು ಮಾತನಾಡಿಸಿದ್ದರು. ಅವರು ಬಹುಮುಖ ಪ್ರತಿಭೆ. ಅವರು ಕೇವಲ ನಟ ಆಗಿದ್ದರೆ ಇಷ್ಟು ಪ್ರೀತಿ ಇರುತ್ತಿರಲಿಲ್ಲ. ತೆರೆ ಆಚೆಗೂ ಕೂಡ ಅವರು ಹೀರೋ. ಇಡೀ ಚಿತ್ರರಂಗ ಬೆಳೆಯಬೇಕು ಎಂಬುದು ಅವರ ಉದ್ದೇಶ ಆಗಿತ್ತು. ಅದಕ್ಕಾಗಿಯೇ ಪಿಆರ್​ಕೆ ಆಡಿಯೋ ಮತ್ತು ಪ್ರೊಡಕ್ಷನ್ ಕಂಪನಿ ಆರಂಭಿಸಿದ್ದರು’ ಎಂದಿದ್ದಾರೆ ರಂಜನಿ ರಾಘವನ್​. ಪ್ರಸ್ತುತ ‘ಕನ್ನಡತಿ’ ಧಾರಾವಾಹಿ ಮೂಲಕ ರಂಜನಿ ಅವರ ಜನಪ್ರಿಯತೆ ಹೆಚ್ಚಿದೆ. ಅವರಿಗೆ ಜೋಡಿಯಾಗಿ ಕಿರಣ್​ ರಾಜ್​ ಅಭಿನಯಿಸುತ್ತಿದ್ದಾರೆ. ಭುವಿ ಪಾತ್ರದಲ್ಲಿ ರಂಜನಿ ನಟನೆ ಜನರಿಗೆ ಇಷ್ಟ ಆಗಿದೆ. ಬರಹಗಾರ್ತಿ ಆಗಿಯೂ ಅವರು ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ:

‘ಕನ್ನಡತಿ’ ನಟಿ ರಂಜನಿ ರಾಘವನ್​ ಬಳಿ ಎಷ್ಟು ದುಡ್ಡಿದೆ? ಅಚ್ಚರಿಯ ವಿಚಾರ ಬಾಯ್ಬಿಟ್ಟ ಭುವಿ

‘ಅಶ್ವಿನಿ ಅಕ್ಕ ಇನ್ನೂ ಮೌನವಾಗಿಯೇ ಇದ್ದಾರೆ’; ಪುನೀತ್​ ಗನ್​ಮ್ಯಾನ್​ ತೆರೆದಿಟ್ಟ ವಿವರಗಳು

Follow us on

Click on your DTH Provider to Add TV9 Kannada