ಸೋಮಶೇಖರ ರೆಡ್ಡಿ ಬಳಿಕ ಅವರ ಸಹೋದರ ಜನಾರ್ಧನ ರೆಡ್ಡಿ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ

ಸೋಮಶೇಖರ ರೆಡ್ಡಿ ಬಳಿಕ ಅವರ ಸಹೋದರ ಜನಾರ್ಧನ ರೆಡ್ಡಿ ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jan 31, 2022 | 6:15 PM

ಮಾಜಿ ಸಚಿವ ಮತ್ತು ಬಳ್ಳಾರಿ ಗಣಿಗಾರಿಕೆಯ ಅನಭಿಷಿಕ್ತ ಸಾಮ್ರಾಟನೆನಿಸಿಕೊಂಡಿದ್ದ ಗಾಲಿ ಜನಾರ್ಧನ ರೆಡ್ಡಿ ಅವರು ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಿರುವುದು ಕುತೂಹಲ ಹುಟ್ಟಿಸಿದೆ. ಜನಾರ್ಧನ ರೆಡ್ಡಿ ಅವರು ಸೋಮವಾರದಂದು ಹಂಪಿ ವಿರೂಪಾಕ್ಷನ ದರ್ಶನ ಪಡೆದುಕೊಂಡಿದ್ದಾರೆ. ಅವರ ಜೊತೆ ಶ್ರೀರಾಮುಲು ಕೂಡ ಇದ್ದಿದ್ದು ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ರಾಜ್ಯ ರಾಜಕೀಯ ಸ್ಥಿತಿ ಗೊಂದಲಮಯ ಆಗುತ್ತಿದೆ. ರಾಜ್ಯ ಸಚಿವ ಸಂಪುಟ (council of ministers) ಪುನಾರಚನೆ ಅಗಲಿರುವ ಸಂಗತಿ ಹಲವಾರು ಸಚಿವರನ್ನು ದಿಗಿಲುಗೊಳಿಸಿದ್ದರೆ ಮಂತ್ರಿಯಾಗುವ ಕನಸು ಕಾಣುತ್ತಿರುವ ಬಹಳಷ್ಟು ಶಾಸಕರು (MLAs) ಭಾರಿ ಹುರುಪಿನಲ್ಲಿ ಕಾಣುತ್ತಿದ್ದಾರೆ. ಕೆಲವರಂತೂ ಅದಾಗಲೇ ಸಚಿವರಾದ ಹಾಗೆ ಬೀಗುತ್ತಿದ್ದಾರೆ! ನಾವು ಮೊನ್ನೆಯಷ್ಟೇ ಬಳ್ಳಾರಿ ಶಾಸಕ ಗಾಲಿ ಸೋಮಶೇಖರ ರೆಡ್ಡಿ  (Gali Somashekhar Reddy) ತಮ್ಮ ಕುಟುಂಬ ಮತ್ತು ಆಪ್ತರ ಜೊತೆ ಸಂಡೂರಿನ ದೇವಸ್ಥಾನವೊಂದಕ್ಕೆ ಭೇಟಿ ನೀಡಿದ ಕುರಿತು ಚರ್ಚೆ ಮಾಡಿದ್ದೆವು. ಸಂಕಷ್ಟ ಸಮಯದಲ್ಲಿ ಮತ್ತು ಇಷ್ಟಾರ್ಥ ನೆರವೇರಿಕೆ ಗಾಗಿ ಸಾರಿಗೆ ಸಚಿವ ಬಿ ಶ್ರೀರಾಮುಲು (B Sriramulu) ಅವರು ಸದರಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುವ ವಾಡಿಕೆ ಇಟ್ಟುಕೊಂಡಿದ್ದಾರೆ. ಸೋಮಶೇಖರ ರೆಡ್ಡಿ ಎರಡು ಬಾರಿ ಶಾಸಕರಾಗಿರುವುದು ನಿಜವಾದರೂ ಇದುವರೆಗೆ ಮಂತ್ರಿಯಾಗಿಲ್ಲ. ಅದೇ ಕಾರಣಕ್ಕೆ ಅವರು ದೇವಸ್ಥಾನಗಳನ್ನು ಸುತ್ತುತ್ತಿದ್ದಾರೆ ಅಂತ ರಾಜಕೀಯ ವಲಯದಲ್ಲಿ ಮಾತಾಡಿಕೊಳ್ಳಲಾಗುತ್ತಿದೆ.

ಅದು ಸರಿ, ಅವರ ಸಹೋದರ, ಮಾಜಿ ಸಚಿವ ಮತ್ತು ಬಳ್ಳಾರಿ ಗಣಿಗಾರಿಕೆಯ ಅನಭಿಷಿಕ್ತ ಸಾಮ್ರಾಟನೆನಿಸಿಕೊಂಡಿದ್ದ ಗಾಲಿ ಜನಾರ್ಧನ ರೆಡ್ಡಿ ಅವರು ಸಹ ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಿರುವುದು ಕುತೂಹಲ ಹುಟ್ಟಿಸಿದೆ. ಜನಾರ್ಧನ ರೆಡ್ಡಿ ಅವರು ಸೋಮವಾರದಂದು ಹಂಪಿ ವಿರೂಪಾಕ್ಷನ ದರ್ಶನ ಪಡೆದುಕೊಂಡಿದ್ದಾರೆ. ಅವರ ಜೊತೆ ಶ್ರೀರಾಮುಲು ಕೂಡ ಇದ್ದಿದ್ದು ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ನಮಗೆ ಲಭ್ಯವಿರುವ ಮಾಹಿತಿಯ ಪ್ರಕಾರ ಕಳೆದ ಹತ್ತು ವರ್ಷಗಳಿಂದ ಜನಾರ್ಧನ ರೆಡ್ಡಿ ವಿಶ್ವಪ್ರಸಿದ್ಧ ಐತಿಹಾಸಿಕ ಸ್ಥಳವಾಗಿರುವ ಹಂಪಿಗೆ ಭೇಟ ನೀಡಿರಲಿಲ್ಲ. ಈಗ ಇದ್ದಕ್ಕಿದ್ದಂತೆ ಅವರು ಕುಟುಂಬ ಮತ್ತು ಶ್ರೀರಾಮಲು ಅವರೊಂದಿಗೆ ವಿರೂಪಾಕ್ಷನ ದರ್ಶನ ಪಡೆದಿದ್ದಾರೆ.

ಜನಾರ್ಧನ ರೆಡ್ಡಿ ಅವರು ಬಿಜೆಪಿಗೆ ಮರಳಲು ಶತಪ್ರಯತ್ನ ನಡೆಸುತ್ತಿದ್ದಾರೆ. ಬಳ್ಳಾರಿ ಪ್ರಾಂತ್ಯದಲ್ಲಿ ನಡೆಯುತ್ತಿರುವ ಪಕ್ಷದ ಚಟುವಟಿಕೆಗಳ ಮೇಲೆ ತಮ್ಮ ಪ್ರಭಾವ ಬೀರುವ ಪ್ರಯತ್ನವನ್ನಂತೂ ಆವರು ನಡೆಸಿದ್ದಾರೆ. ಅವರು ಪಕ್ಷಕ್ಕೆ ವಾಪಸ್ಸಾಗಲು ರಾಜ್ಯ ಘಟಕದಿಂದ ಅಡಚಣೆ ಇಲ್ಲ. ಆದರೆ ದೆಹಲಿಯಲ್ಲಿರುವ ಪಕ್ಷದ ವರಿಷ್ಠರಿಗೆ ಖಂಡಿತ ಇದೆ. ನಿಮಗೆ ನೆನಪಿರಬಹುದು, 2018ರ ಕರ್ನಾಟಕ ವಿಧಾನ ಸಭಾ ಚುನಾನಣಎ ಸಂದರ್ಭದಲ್ಲಿ ಅಮಿತ್ ಶಾ ಅವರು ರೆಡ್ಡಿ ಮತ್ತು ಬಿಜೆಪಿ ನಡುವೆ ಯಾವುದೇ ಸಂಬಂಧ ಇಲ್ಲ ಎಂದಿದ್ದರು.

ಇದನ್ನೂ ಓದಿ:   ಸಚಿವಾಕಾಂಕ್ಷಿಗಳ ರೇಸ್​ನಲ್ಲಿ ಸೋಮಶೇಖರ್ ರೆಡ್ಡಿ, ಸಂಡೂರಿನ ಕುಮಾರಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ!