AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೋಯಿಂಗ್ ಮಾಫಿಯಾವನ್ನು ಕೊನೆಗಾಣಿಸುವ ಭರವಸೆ ನೀಡಿದ್ದಾರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಟೋಯಿಂಗ್ ಮಾಫಿಯಾವನ್ನು ಕೊನೆಗಾಣಿಸುವ ಭರವಸೆ ನೀಡಿದ್ದಾರೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Jan 31, 2022 | 8:34 PM

Share

ಪಾರ್ಕಿಂಗ್ ಗೆ ಅವಕಾಶವಿಲ್ಲದ ಸ್ಥಳಗಳಲ್ಲಿ ಸಾರ್ವಜನಿಕರು ವಾಹನಗಳನ್ನು ಪಾರ್ಕ್ ಮಾಡಿದ್ದರೆ ಟ್ರಾಫಿಕ್ ಪೊಲೀಸ್ ಧಾರಾಳವಾಗಿ ಟೋ ಮಾಡಿಕೊಂಡು ಹೋಗಲಿ, ಅದರಿಂದ ನಗರದ ನಿವಾಸಿಗಳಿಗೆ ಅಭ್ಯಂತರವಿಲ್ಲ. ಜನ ಜುಲ್ಮಾನೆ ತೆತ್ತು ತಮ್ಮ ವಾಹನ ಬಿಡಿಸಿಕೊಂಡು ಹೋಗಲು ತಯಾರಿದ್ದಾರೆ.

ಟೋಯಿಂಗ್ ಮಾಫಿಯಾ (Towing Mafia) ಬಗ್ಗೆ ನಾವು ಮೊನ್ನೆಯಷ್ಟೇ ಚರ್ಚೆ ಮಾಡಿದ್ದೆವು. ಅದು ಸರ್ಕಾರದ ಕಿವಿಗೂ ಬಿದ್ದಿರೋದು ಕನ್ನಡಿಗರಿಗೆ ಸಮಾಧಾನ ತಂದಿರುವ ವಿಷಯ. ಇದನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಅವರು ಸ್ಪಷ್ಟಪಡಿಸಿದರು. ಸೋಮವಾರ ಸಾಯಂಕಾಲ ಮುಖ್ಯಮಂತ್ರಿಗಳು ಬೆಂಗಳೂರು ಸಂಚಾರಿ ವಿಭಾಗದ ಕಮೀಶನರ್ (Traffic Police Commissioner) ಮತ್ತು ಇತರ ಸಂಬಂಧ ಅಧಿಕಾರಿಗಳೊಂದಿಗೆ ಮೀಟಿಂಗ್ ನಡೆಸುವುದಾಗಿ ಅವರು ಬೆಳಗ್ಗೆ ಕೆ ಅರ್ ಪುರಂ ಕ್ಷೇತ್ರದಲ್ಲಿ ವಿವಿದ ಅಭಿವೃದ್ಧಿ ಕಾಮಗಾರಿಳಿಗೆ ಚಾಲನೆ ನೀಡಲು ತೆರಳುವ ಮೊದಲು ಮಾಧ್ಯಮದವರಿಗೆ ಹೇಳಿದರು. ನಿಮಗೆ ಗೊತ್ತಿದೆ, ಸಂಚಾರಿ ವಿಭಾಗಕ್ಕೆ ಬಿ ರವಿಕಾಂತೇ ಗೌಡ (B R Ravikanthe Gowda) ಅವರಂಥ ದಕ್ಷ ಅಧಿಕಾರಿ ಜಂಟಿ ಆಯುಕ್ತರಾಗಿದ್ದರೂ ಟೋಯಿಂಗ್ ಮಾಫಿಯಾ ತಲೆಯೆತ್ತಿದೆ. ಅವರು ಯಾಕೆ ಇದುವರೆಗೆ ಕ್ರಮ ತೆಗೆದುಕೊಂಡಿಲ್ಲ ಅಂತ ಕನ್ನಡಿಗರಿಗೆ ಅರ್ಥವಾಗುವುದಿಲ್ಲ. ಅವರಿಗೆ ಕೆಟ್ಟ ಹೆಸರು ತರಲು ಟ್ರಾಫಿಕ್ ಪೊಲೀಸರು ಮತ್ತು ಟೋಯಿಂಗ್ ಸಿಬ್ಬಂದಿ ಹಗಲು ರಾತ್ರಿ ಕಾರ್ಯಪ್ರವೃತ್ತಗೊಂಡಿರುವುದನ್ನು ರವಿಕಾಂತೇ ಗೌಡರು ಅರ್ಥಮಾಡಿಕೊಳ್ಳಬೇಕು.

ಪಾರ್ಕಿಂಗ್ ಗೆ ಅವಕಾಶವಿಲ್ಲದ ಸ್ಥಳಗಳಲ್ಲಿ ಸಾರ್ವಜನಿಕರು ವಾಹನಗಳನ್ನು ಪಾರ್ಕ್ ಮಾಡಿದ್ದರೆ ಟ್ರಾಫಿಕ್ ಪೊಲೀಸ್ ಧಾರಾಳವಾಗಿ ಟೋ ಮಾಡಿಕೊಂಡು ಹೋಗಲಿ, ಅದರಿಂದ ನಗರದ ನಿವಾಸಿಗಳಿಗೆ ಅಭ್ಯಂತರವಿಲ್ಲ. ಜನ ಜುಲ್ಮಾನೆ ತೆತ್ತು ತಮ್ಮ ವಾಹನ ಬಿಡಿಸಿಕೊಂಡು ಹೋಗಲು ತಯಾರಿದ್ದಾರೆ. ಅದರೆ, ಗಾಡಿ ಬಿಡಿಸಿಕೊಳ್ಳಲು ಅವರು ಸಂಬಂಧಪಟ್ಟ ಪೊಲೀಸ್ ಠಾಣೆಗ ಹೋಗುತ್ತಿದ್ದಂತೆ ಟ್ರಾಫಿಕ್ ಪೊಲೀಸರ ಪರ ಟೋಯಿಂಗ್ ಸಿಬ್ಬಂದಿ ವ್ಯವಹಾರ ಕುದುರಿಸಲು ಮುಂದಾಗುತ್ತಾರೆ.

ನೋ ಪಾರ್ಕಿಂಗ್ ಸ್ಥಳದಲ್ಲಿ ವಾಹನ ಪಾರ್ಕ್ ಮಾಡಿದರೆ ರೂ. 1,500 ದಂಡ ಇದೆಯಂತೆ. ಆದರೆ ಟೋಯಿಂಗ್ ಸಿಬ್ಬಂದಿ ರೂ. 1,000 ಕೊಟ್ಟು ಬೈಕ್ ತೆಗೆದುಕೊಂಡು ಹೋಗಿ ಅಂತ ಶುರುವಿಟ್ಟುಕೊಳ್ಳುತ್ತಾರೆ. ಒಂದು ಸಾವಿರ ರೂ. ಯಿಂದ ಚೌಕಾಶಿ ಶುರುವಾಗುತ್ತದೆ. ಅದರೆ ರೂ. 500 ಕ್ಕಿಂತ ಕಡಿಮೆ ಇಸ್ಕೊಳ್ಳೋದು ಪೊಲೀಸರ ಪ್ರತಿಷ್ಠೆಗೆ ಧಕ್ಕೆಯಾದಂತೆ. ರೂ. 1,500 ಕ್ಕಿಂತ 10 ರೂ. ಕಡಿಮೆ ಕೊಟ್ಟರೂ ನಿಮಗೆ ರಸೀತಿ ಸಿಗುವುದಿಲ್ಲ.

ಟೋಯಿಂಗ್ ಮಾಫಿಯಾವನ್ನು ಕೊನೆಗಾಣಿಸುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದ್ದಾರೆ. ಅದು ನಿಲ್ಲುತ್ತೋ ಮುಂದುವರಿಯುತ್ತೋ ಅಂತ ಕಾದು ನೋಡಬೇಕು.

ಇದನ್ನೂ ಓದಿ: ಟೋಯಿಂಗ್ ವೇಳೆ ವಾಹನ ಮಾಲೀಕರಿಗೆ ಕಿರುಕುಳ ವಿಚಾರ: ಸ್ಪಷ್ಟನೆ ನೀಡಿದ ಬಿಆರ್ ರವಿಕಾಂತೇಗೌಡ