Sign In

By signing in or creating an account, you agree with Associated Broadcasting Company's Terms & Conditions and Privacy Policy.

2019ರಲ್ಲೇ ‘ತಗ್ಗೋದೆ ಇಲ್ಲ’ ಸಿಗ್ನೇಚರ್​ ಸ್ಟೆಪ್​ ಮಾಡಿದ್ದ ಶೆಹನಾಜ್​ ಗಿಲ್; ವೈರಲ್​ ಆಗುತ್ತಿದೆ ಹಳೆಯ ವಿಡಿಯೋ

ಶೆಹನಾಜ್​ ಗಿಲ್​ ಅವರು ‘ಹಿಂದಿ ಬಿಗ್​ ಬಾಸ್​ 13’ರ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ಅವರು ಈ ವೇಳೆ ತುಂಬಾನೇ ಖ್ಯಾತಿ ಗಳಿಸಿಕೊಂಡರು. ಈ ಸೀಸನ್​ ವಿನ್ನರ್​ ಸಿದ್ದಾರ್ಥ್​ ಶುಕ್ಲಾ ಜತೆ ಪ್ರೀತಿಯಲ್ಲಿ ಬಿದ್ದಿದ್ದರು. ಈ ಕಾರಣಕ್ಕೂ  ಶೆಹನಾಜ್​ ಸುದ್ದಿಯಾಗಿದ್ದರು.

2019ರಲ್ಲೇ ‘ತಗ್ಗೋದೆ ಇಲ್ಲ’ ಸಿಗ್ನೇಚರ್​ ಸ್ಟೆಪ್​ ಮಾಡಿದ್ದ ಶೆಹನಾಜ್​ ಗಿಲ್; ವೈರಲ್​ ಆಗುತ್ತಿದೆ ಹಳೆಯ ವಿಡಿಯೋ
ಶೆಹನಾಜ್​ ಗಿಲ್​-ಅಲ್ಲು ಅರ್ಜುನ್​
Follow us
TV9 Web
| Updated By: ಮದನ್​ ಕುಮಾರ್​

Updated on:Feb 06, 2022 | 4:59 PM

‘ಪುಷ್ಪ’ ಸಿನಿಮಾ (Pushpa Movie) ತೆರೆಕಂಡು 50 ದಿನ ಕಳೆದಿದೆ. ಆದಾಗ್ಯೂ ಸಿನಿಮಾದ ಹವಾ ಮಾತ್ರ ಕಡಿಮೆ ಆಗಿಲ್ಲ. ವಿಶ್ವ ಮಟ್ಟದಲ್ಲಿ 300 ಕೋಟಿ ರೂಪಾಯಿಗೂ ಅಧಿಕ ಕಮಾಯಿ ಮಾಡಿರುವುದು ಈ ಚಿತ್ರದ ಹೆಚ್ಚುಗಾರಿಕೆ. ಈ ಚಿತ್ರ ಅಮೇಜಾನ್​ ಪ್ರೈಮ್​ ವಿಡಿಯೋದಲ್ಲೂ ರಿಲೀಸ್​ ಆಗಿ ಒಳ್ಳೆಯ ಮೆಚ್ಚುಗೆ ಪಡೆದುಕೊಳ್ಳುತ್ತಿದೆ. ಅಲ್ಲು ಅರ್ಜುನ್ (Allu Arjun)​ ಸಿನಿಮಾದಲ್ಲಿ ಮಾಡಿದ ಅನೇಕ ಸ್ಟೆಪ್​ಗಳನ್ನು ಕ್ರಿಕೆಟ್​ ರಂಗದವರು, ಸೆಲೆಬ್ರಿಟಿಗಳು ಅನುಕರಿಸುತ್ತಿದ್ದಾರೆ. ಅದರ ರೀಲ್ಸ್​ ಮಾಡಿ ವಿಡಿಯೋ ಹರಿಬಿಡುತ್ತಿದ್ದಾರೆ. ನಟಿ, ಬಿಗ್​ ಬಾಸ್​ ಸ್ಪರ್ಧಿ ಶೆಹನಾಜ್​ ಗಿಲ್​ ಅವರು 2019ರಲ್ಲಿ ಮಾಡಿದ್ದ ಆ್ಯಕ್ಷನ್​ ಒಂದು ವೈರಲ್​ ಆಗುತ್ತಿದೆ. ಇದನ್ನು ನೋಡಿ ಅಭಿಮಾನಿಗಳು ಅಚ್ಚರಿ ಹೊರಹಾಕಿದ್ದಾರೆ. ಈ ವಿಡಿಯೋದಿಂದ ಸಖತ್​ ಮಜಾ ತೆಗೆದುಕೊಳ್ಳುತ್ತಿದ್ದಾರೆ.

‘ಶ್ರೀವಲ್ಲಿ..’ ಹಾಡಿಗೆ ಅಲ್ಲು ಅರ್ಜುನ್​ ಹಾಕಿರುವ ಸ್ಟೆಪ್​ ಸಖತ್​ ವೈರಲ್​ ಆಗಿದೆ. ಅನೇಕರು ಇದೇ ಸ್ಟೆಪ್​ ಅನುಕರಿಸಿದ್ದಾರೆ. ‘ತಗ್ಗೋದೆ ಇಲ್ಲ’ ಎಂದು ಡೈಲಾಗ್​ ಹೇಳುವಾಗ ಬಳಕೆ ಆಗುವ ಸ್ಟೆಪ್​ ಕೂಡ ಸಾಕಷ್ಟು ಫೇಮಸ್​ ಆಗಿದೆ. ‘ತಗ್ಗೋದೆ ಇಲ್ಲ’ ಎಂದು ಹೇಳುತ್ತ ಗಡ್ಡಕ್ಕೆ ಕೈ ಹಾಕಿ ಸವರಿಕೊಳ್ಳುತ್ತಾರೆ ಅಲ್ಲು ಅರ್ಜುನ್​. ಇದೇ ಡೈಲಾಗ್​ಗೆ ಅನೇಕರು ರೀಲ್ಸ್​ ಮಾಡಿದ್ದರು. ಇದೇ ರೀತಿ ಮಾಡಿದ್ದ  ಶೆಹನಾಜ್​ ಅವರ ಹಳೆಯ ವಿಡಿಯೋ ಸಖತ್​ ವೈರಲ್​ ಆಗುತ್ತಿದೆ.

ಶೆಹನಾಜ್​ ಗಿಲ್​ ಅವರು ‘ಹಿಂದಿ ಬಿಗ್​ ಬಾಸ್​ 13’ರ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದರು. ಅವರು ಈ ವೇಳೆ ತುಂಬಾನೇ ಖ್ಯಾತಿ ಗಳಿಸಿಕೊಂಡರು. ಈ ಸೀಸನ್​ ವಿನ್ನರ್​ ಸಿದ್ದಾರ್ಥ್​ ಶುಕ್ಲಾ ಜತೆ ಪ್ರೀತಿಯಲ್ಲಿ ಬಿದ್ದಿದ್ದರು. ಈ ಕಾರಣಕ್ಕೂ  ಶೆಹನಾಜ್​ ಸುದ್ದಿಯಾಗಿದ್ದರು. ಈ ವೇಳೆ ಅವರು ಗಲ್ಲದ ಕೆಳಗೆ ಕೈ ಹಾಕಿ ಸವರಿಕೊಳ್ಳುವ ಆ್ಯಕ್ಷನ್​ ಮಾಡಿದ್ದರು. ಆ ವಿಡಿಯೋ ಈಗ ವೈರಲ್​ ಆಗುತ್ತಿದೆ. ಇದಕ್ಕೆ ಪುಷ್ಪ ಸಿನಿಮಾದ ಮ್ಯೂಸಿಕ್ ಕೊಟ್ಟು ಅಭಿಮಾನಿಗಳು ಈ ವಿಡಿಯೋ ಹಂಚಿಕೊಳ್ಳುತ್ತಿದ್ದಾರೆ.

ಪುಷ್ಪ ಹಾಡಿನ ಕವರ್​ ವರ್ಷನ್

ನೆದರ್​ಲೆಂಡ್​ ಮೂಲದ ಗಾಯಕಿ ಎಮ್ಮಾ ಹೀಸ್ಟರ್ಸ್​ ಅವರು ‘ಪುಷ್ಪ’ ಚಿತ್ರದ ಶ್ರೀವಲ್ಲಿ ಹಾಡಿಗೆ ಕವರ್​ ವರ್ಷನ್​ ಮಾಡಿದ್ದಾರೆ. ಅದನ್ನು ಕೇಳಿ ಜನಸಾಮಾನ್ಯರು ಮಾತ್ರವಲ್ಲದೇ ಸ್ವತಃ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್​ ಕೂಡ ಫಿದಾ ಆಗಿದ್ದಾರೆ. ಈ ಬಗ್ಗೆ ಅವರು ಟ್ವೀಟ್​ ಮಾಡಿದ್ದರು. ‘ಈ ಹಾಡು ನನಗೆ ತುಂಬ ಇಷ್ಟವಾಯಿತು. ಸಿದ್​ ಶ್ರೀರಾಮ್​ ಅವರೇ, ತಮಾಷೆಯಾಗಿ ಒಂದು ಇಂಗ್ಲಿಷ್​ ವರ್ಷನ್​ ಮಾಡೋಣ ಅಂತ ರೆಕಾರ್ಡಿಂಗ್​ ಶುರುಮಾಡಿದ್ದಾಗಲೇ ನಾನು ಹೇಳಿದ್ದೆ. ಆದರೆ ಈಗ ಎಮ್ಮಾ ಹೀಸ್ಟರ್ಸ್​ ಅವರು ತುಂಬ ಚೆನ್ನಾಗಿ ಕವರ್​ ಸಾಂಗ್​ ಮಾಡಿದ್ದಾರೆ. ನಾವು ಕೂಡ ನಮ್ಮ ವರ್ಷನ್​ ಮಾಡಬೇಕು ಎನಿಸುತ್ತದೆ’ ಎಂದು ಅವರು ಟ್ವಿಟರ್​​ನಲ್ಲಿ ಬರೆದುಕೊಂಡಿದ್ದರು.

‘ನೆನಪಿರಲಿ’ ಪ್ರೇಮ್​ ಜತೆ ನಟಿಸಿದ್ದ ಹೀರೋಯಿನ್​ಗೆ ಮದುವೆ; ವೈರಲ್​ ಆಯ್ತು ಫೋಟೋ

Published On - 6:30 am, Sun, 6 February 22

ಮಳೆಗಾಲದಲ್ಲಿ ಬೆಂಗಳೂರು ಹೇಗಿರಲಿದೆ ಅನ್ನೋದಿಕ್ಕೆ ಇದು ಟೀಸರ್ ಮಾತ್ರ!
ಮಳೆಗಾಲದಲ್ಲಿ ಬೆಂಗಳೂರು ಹೇಗಿರಲಿದೆ ಅನ್ನೋದಿಕ್ಕೆ ಇದು ಟೀಸರ್ ಮಾತ್ರ!
ಥಾಯ್ ಪ್ರಧಾನಿಯಿಂದ ಮೋದಿಗೆ ದಿ ವರ್ಲ್ಡ್ ಟಿಪಿಟಕ ಗ್ರಂಥ ಉಡುಗೊರೆ
ಥಾಯ್ ಪ್ರಧಾನಿಯಿಂದ ಮೋದಿಗೆ ದಿ ವರ್ಲ್ಡ್ ಟಿಪಿಟಕ ಗ್ರಂಥ ಉಡುಗೊರೆ
ವಕ್ಫ್ ತಿದ್ದುಪಡಿ ಬಿಲ್ ಬಗ್ಗೆ ನನ್ನ ಪಕ್ಷದ ಹಿರಿಯರು ಮಾತಾಡುತ್ತಾರೆ: ಸಚಿವೆ
ವಕ್ಫ್ ತಿದ್ದುಪಡಿ ಬಿಲ್ ಬಗ್ಗೆ ನನ್ನ ಪಕ್ಷದ ಹಿರಿಯರು ಮಾತಾಡುತ್ತಾರೆ: ಸಚಿವೆ
ಯಡಿಯೂರಪ್ಪ ಜೊತೆ ಬಸ್ಸಲ್ಲಿ ಹೋಗಲು ಬಿಜೆಪಿ ನಾಯಕರಲ್ಲಿ ಪೈಪೋಟಿ
ಯಡಿಯೂರಪ್ಪ ಜೊತೆ ಬಸ್ಸಲ್ಲಿ ಹೋಗಲು ಬಿಜೆಪಿ ನಾಯಕರಲ್ಲಿ ಪೈಪೋಟಿ
ಬ್ಯಾಂಕಾಕ್​ನಲ್ಲಿ ಥಾಯ್ ರಾಮಾಯಣ ವೀಕ್ಷಿಸಿದ ಪ್ರಧಾನಿ ಮೋದಿ
ಬ್ಯಾಂಕಾಕ್​ನಲ್ಲಿ ಥಾಯ್ ರಾಮಾಯಣ ವೀಕ್ಷಿಸಿದ ಪ್ರಧಾನಿ ಮೋದಿ
ವಕ್ಫ್ ಬಿಲ್​​ ಬಗ್ಗೆ ಮಾತಾಡುವ ರಾಜ್ಯ ಬಿಜೆಪಿಗೆ ನಾಚಿಕೆಯಾಗಬೇಕು: ಮುತಾಲಿಕ್
ವಕ್ಫ್ ಬಿಲ್​​ ಬಗ್ಗೆ ಮಾತಾಡುವ ರಾಜ್ಯ ಬಿಜೆಪಿಗೆ ನಾಚಿಕೆಯಾಗಬೇಕು: ಮುತಾಲಿಕ್
RCB vs GT: ನಾನು ಮ್ಯಾಚ್ ವಿನ್ನರ್ ಸಿರಾಜ್ ಅನ್ನು ಮಾತ್ರ ನಂಬುತ್ತೇನೆ..!
RCB vs GT: ನಾನು ಮ್ಯಾಚ್ ವಿನ್ನರ್ ಸಿರಾಜ್ ಅನ್ನು ಮಾತ್ರ ನಂಬುತ್ತೇನೆ..!
ಇಳಿವಯಸ್ಸಿನಲ್ಲೂ ಯಡಿಯೂರಪ್ಪ ಪಕ್ಷದ ಅತ್ಯಂತ ಪ್ರಭಾವಿ ನಾಯಕ
ಇಳಿವಯಸ್ಸಿನಲ್ಲೂ ಯಡಿಯೂರಪ್ಪ ಪಕ್ಷದ ಅತ್ಯಂತ ಪ್ರಭಾವಿ ನಾಯಕ
ಸಿದ್ದಗಂಗಾ ಮಠದ ಜೊತೆ ನನ್ನ ಕುಟಂಬಕ್ಕೆ ಅವಿನಾಭಾವ ಸಂಬಂಧ: ಪರಮೇಶ್ವರ್
ಸಿದ್ದಗಂಗಾ ಮಠದ ಜೊತೆ ನನ್ನ ಕುಟಂಬಕ್ಕೆ ಅವಿನಾಭಾವ ಸಂಬಂಧ: ಪರಮೇಶ್ವರ್
ಗುಜರಾತ್​ನಲ್ಲಿ ಐಎಎಫ್​ನ ಜಾಗ್ವಾರ್ ಯುದ್ಧ ವಿಮಾನ ಪತನ, ಪೈಲಟ್ ಸಾವು
ಗುಜರಾತ್​ನಲ್ಲಿ ಐಎಎಫ್​ನ ಜಾಗ್ವಾರ್ ಯುದ್ಧ ವಿಮಾನ ಪತನ, ಪೈಲಟ್ ಸಾವು