‘ಕನ್ನಡತಿ’ಯಲ್ಲಿ ಶೀಘ್ರವೇ ಭುವಿ-ಹರ್ಷನ ಮದುವೆ?; ಇದಕ್ಕಿದೆ ಮಹತ್ವದ ಕಾರಣ

ರತ್ನಮಾಲಾಗೆ ಅನಾರೋಗ್ಯ ಕಾಡಿರುವುದರಿಂದ ಶೀಘ್ರವೇ ಹರ್ಷ ಹಾಗೂ ಭುವಿ ಮದುವೆ ನಡೆಯಬಹುದು. ರತ್ನಮಾಲಾ ಕೂಡ ಮಗನ ಮದುವೆ ನೋಡೋಕೆ ಕಾತುರದಿಂದ ಕಾದಿದ್ದಾಳೆ.

 ‘ಕನ್ನಡತಿ’ಯಲ್ಲಿ ಶೀಘ್ರವೇ ಭುವಿ-ಹರ್ಷನ ಮದುವೆ?; ಇದಕ್ಕಿದೆ ಮಹತ್ವದ ಕಾರಣ
ಕಿರಣ್​ ರಾಜ್​-ರಂಜನಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Mar 01, 2022 | 9:26 PM

‘ಕನ್ನಡತಿ’ ಧಾರಾವಾಹಿ (Kannadathi Serial) ಹಲವು ಟ್ವಿಸ್ಟ್​ಗಳನ್ನು ಪಡೆದು ಸಾಗುತ್ತಿದೆ. ಹರ್ಷ ಹಾಗೂ ಭುವಿ ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರೆ. ಹರ್ಷನ ಹಲವು ಕೋರಿಕೆಗಳ ನಂತರದಲ್ಲಿ ಆತನ ಪ್ರೀತಿಯನ್ನು ಭುವಿ ಒಪ್ಪಿಕೊಂಡಿದ್ದಾಳೆ. ಹರ್ಷನನ್ನು ವರು ಸಾಕಷ್ಟು ಪ್ರೀತಿಸುತ್ತಾಳೆ. ಆತನಿಗೋಸ್ಕರ ಏನು ಮಾಡೋಕೂ ಆಕೆ ರೆಡಿ ಆಗಿದ್ದಾಳೆ. ಇದು ಭುವಿಯ ಚಿಂತೆಯನ್ನು ಹೆಚ್ಚಿಸಿದೆ. ಹೀಗಾಗಿ ಇಬ್ಬರೂ ಪ್ರೀತಿ ವಿಚಾರವನ್ನು ವರುಧಿನಿಗೆ ಇನ್ನೂ ಹೇಳಿಲ್ಲ. ಈ ಕಾರಣಕ್ಕೆ ಭುವಿ ಒಂದೊಂದೇ ಕಾರಣ ನೀಡಿ ಮದುವೆ ಮುಂದೂಡುತ್ತಿದ್ದಾಳೆ. ಆದರೆ, ಇಬ್ಬರ ಮದುವೆ ಶೀಘ್ರವೇ ನಡೆಯುವ ಸಾಧ್ಯತೆ ಇದೆ. ಇದಕ್ಕೆ ಇಂದಿನ (ಮಾರ್ಚ್​ 1) ಸಂಚಿಕೆಯಲ್ಲಿ ನಡೆದ ಘಟನೆಯೇ ಕಾರಣ. ಅಷ್ಟಕ್ಕೂ ಭುವಿ ಹಾಗೂ ಹರ್ಷನ ಮದುವೆ ಬೇಗ ಆಗೋಕೆ ನಡೆದಂತಹ ಘಟನೆ ಯಾವುದು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಹರ್ಷನ ತಾಯಿ ರತ್ನಮಾಲಾಗೆ ಭುವಿ ಕಂಡರೆ ಎಲ್ಲಿಲ್ಲದ ಪ್ರೀತಿ. ಇದಕ್ಕೆ ಕಾರಣವಾಗಿದ್ದು ಹಸಿರುಪೇಟೆ ಮತ್ತು ಭುವಿಯ ಗುಣ. ರತ್ನಮಾಲಾ ಕೂಡ ಹಸಿರುಪೇಟೆಯವಳು. ಅಲ್ಲಿಂದ ಬೆಂಗಳೂರಿಗೆ ಬಂದು ಈಗ ದೊಡ್ಡ ಸಂಸ್ಥೆಯನ್ನು ಮುನ್ನಡೆಸಿಕೊಂಡು ಹೋಗುತ್ತಿದ್ದಾಳೆ. ಅವರಿಗೆ ಈ ಮೊದಲಿನಿಂದಲೂ ಅನಾರೋಗ್ಯ ಕಾಡುತ್ತಲೇ ಇದೆ. ಈಗ ಅವರ ಆರೋಗ್ಯ ತುಂಬಾನೇ ಹದಗೆಟ್ಟಿದೆ. ಈ ಬಗ್ಗೆ ವೈದ್ಯರು ಎಚ್ಚರಿಕೆ ನೀಡಿದ್ದಾರೆ. ರತ್ನಮಾಲಾ ಯಾವಾಗ ಬೇಕಾದರೂ ಸಾಯಬಹುದು ಎಂದು ವೈದ್ಯರು ನೇರವಾಗಿಯೇ ಹೇಳಿದ್ದಾರೆ. ಇದರಿಂದ ಮನೆಯವರ ಆತಂಕ ಹೆಚ್ಚಾಗಿದೆ. ಆಕೆಯ ಮನವನ್ನು ನೋಯಿಸದಿರಲು ವೈದ್ಯರು ಸೂಚನೆ ನೀಡಿದ್ದಾರೆ. ಹೀಗಾಗಿ, ಅಮ್ಮನಿಗೋಸ್ಕರ ಹರ್ಷ ಏನು ಬೇಕಾದರೂ ಮಾಡೋಕೆ ರೆಡಿ ಆಗಿದ್ದಾನೆ.

ತಾಯಿ ಬಳಿ ಬಂದ ಹರ್ಷ ‘ನಿನ್ನನ್ನು ಎಲ್ಲಾದರೂ ಕರೆದುಕೊಂಡು ಹೋಗಬೇಕೆ?’ ಎಂದು ಪ್ರಶ್ನಿಸಿದ್ದಾನೆ.  ಸದ್ಯ, ಭುವಿ ತನ್ನ ತಂಗಿಯ ಜತೆ ಹಸಿರುಪೇಟೆಗೆ ತೆರಳಿದ್ದಾಳೆ. ಹೀಗಾಗಿ, ರತ್ನಮಾಲಾ ಕೂಡ ಹಸಿರುಪೇಟೆಗೆ ತೆರಳುವ ಇಂಗಿತ ವ್ಯಕ್ತಪಡಿಸಬಹುದು. ಹೀಗಾದಲ್ಲಿ, ಅಲ್ಲಿಯೇ ಮದುವೆ ಮಾತುಕತೆ ನಡೆಯಲಿದೆ.

ರತ್ನಮಾಲಾಗೆ ಅನಾರೋಗ್ಯ ಕಾಡಿರುವುದರಿಂದ ಶೀಘ್ರವೇ ಹರ್ಷ ಹಾಗೂ ಭುವಿ ಮದುವೆ ನಡೆಯಬಹುದು. ರತ್ನಮಾಲಾ ಕೂಡ ಮಗನ ಮದುವೆ ನೋಡೋಕೆ ಕಾತುರದಿಂದ ಕಾದಿದ್ದಾಳೆ. ಹೀಗಾಗಿ, ಮದುವೆ ಯಾವಾಗ ನಡೆಯಲಿದೆ ಎನ್ನುವ ಕುತೂಹಲ ವೀಕ್ಷಕರ ವಲಯದಲ್ಲಿದೆ. ಹರ್ಷ ಹಾಗೂ ಭುವಿಯ ಅದ್ದೂರಿ ಮದುವೆ ನೋಡೋಕೆ ಫ್ಯಾನ್ಸ್​ ಕಾದಿದ್ದಾರೆ.

ಇದನ್ನೂ ಓದಿ: ‘ಕನ್ನಡತಿ’ ಭುವಿಗೆ ಎದುರಾಯ್ತು ಹೊಸ ತಲೆನೋವು; ವರುಧಿನಿಗೆ ಗೊತ್ತಾಗಲಿದೆ ಆ ಸತ್ಯ?

‘ಕನ್ನಡತಿ’ಯಲ್ಲಿ ಟ್ವಿಸ್ಟ್​​: ಭುವಿಯನ್ನು ಕೊಲ್ಲಲು ಸಾನಿಯಾ ಸುಪಾರಿ; ಇದಕ್ಕೆ 5 ಲಕ್ಷ ನೀಡಿದ್ದು ರತ್ನಮಾಲಾ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ