AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಖ್ಯಾತ ನಟಿಯ ಜತೆ ಮಲಗಿದ್ದೆ ಎಂದು ಹೇಳಲು 50 ಲಕ್ಷ ರೂಪಾಯಿ ಆಫರ್; ಹೊರಬಿತ್ತು ಶಾಕಿಂಗ್​ ವಿಚಾರ

ಅಮೆರಿಕದ ನಟ ಸೈಮನ್​ ರೆಕ್ಸ್​ ಅವರು ಈ ಮೊದಲು ಅಮೆರಿಕದ ನಟಿ ಮೇಘನ್​ ಮಾರ್ಕೆಲ್​ ಜತೆ ನಟಿಸಿದ್ದರು. ಇವರ ಜತೆ ಅನೈತಿಕ ಸಂಬಂಧ ಹೊಂದಿದ್ದೇನೆ ಎಂದು ಹೇಳಿಕೆ ನೀಡುವಂತೆ ಸೈಮನ್​ ರೆಕ್ಸ್​ಗೆ ಒತ್ತಾಯ ಹೇರಲಾಗಿತ್ತು.

ಖ್ಯಾತ ನಟಿಯ ಜತೆ ಮಲಗಿದ್ದೆ ಎಂದು ಹೇಳಲು 50 ಲಕ್ಷ ರೂಪಾಯಿ ಆಫರ್; ಹೊರಬಿತ್ತು ಶಾಕಿಂಗ್​ ವಿಚಾರ
TV9 Web
| Edited By: |

Updated on: Mar 19, 2022 | 2:40 PM

Share

ಚಿತ್ರರಂಗಕ್ಕೆ (Cinema Industry) ಕಾಲಿಟ್ಟ ನಂತರ ನಟ/ನಟಿಯರಿಗೆ ಒಂದಷ್ಟು ವಿವಾದಗಳು ಸುತ್ತಿಕೊಳ್ಳುತ್ತವೆ. ಕೆಲವೊಮ್ಮೆ ತಪ್ಪು ಮಾಡದಿದ್ದರೂ ಕೆಟ್ಟ ಹೆಸರು ಅಂಟಿಕೊಳ್ಳುತ್ತದೆ. ಕೆಲವೊಮ್ಮೆ ಮಾಧ್ಯಮಗಳಲ್ಲಿ (Media) ವರದಿ ಆಗುವ ಗಾಸಿಪ್​ಗಳ ಬಗ್ಗೆ ಸೆಲೆಬ್ರಿಟಿಗಳು ಗಂಭೀರವಾಗಿ ಚಿಂತಿಸುವ ಸಂದರ್ಭ ಬರುತ್ತದೆ. ಈಗ ಇದೇ ರೀತಿಯ ವಿಚಾರದಲ್ಲಿ ನಟನೋರ್ವ ನೀಡಿದ ಹೇಳಿಕೆ ಶಾಕಿಂಗ್​ ಆಗಿದೆ. ನಟಿಯೊಬ್ಬರ ಜತೆ ಮಲಗಿದ್ದೇನೆ ಎನ್ನುವ ಹೇಳಿಕೆ ನೀಡಿದರೆ 50 ಲಕ್ಷ ರೂಪಾಯಿ ನೀಡುವುದಾಗಿ ಟ್ಯಾಬ್ಲಾಯ್ಡ್ (Tabloid)​ ಒಂದು ಆಫರ್ ನೀಡಿತ್ತು ​ಎಂಬುದಾಗಿ ಅಮೆರಿಕದ ನಟನೋರ್ವ ಹೇಳಿಕೊಂಡಿದ್ದಾರೆ.

ಅಮೆರಿಕದ ನಟ ಸೈಮನ್​ ರೆಕ್ಸ್​ ಅವರು ಈ ಮೊದಲು ಅಮೆರಿಕದ ನಟಿ ಮೇಘನ್​ ಮಾರ್ಕೆಲ್​ ಜತೆ ನಟಿಸಿದ್ದರು. ಇವರ ಜತೆ ಅನೈತಿಕ ಸಂಬಂಧ ಹೊಂದಿದ್ದೇನೆ ಎಂದು ಹೇಳಿಕೆ ನೀಡುವಂತೆ ಸೈಮನ್​ ರೆಕ್ಸ್​ಗೆ ಒತ್ತಾಯ ಹೇರಲಾಗಿತ್ತು. ಈ ಸುಳ್ಳು ಹೇಳಿದರೆ 50 ಲಕ್ಷ ರೂಪಾಯಿ ನೀಡುವ ಆಫರ್​ ಕೂಡ ನೀಡಲಾಗಿತ್ತು. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನವೊಂದರಲ್ಲಿ ಸೈಮನ್​ ಈ ವಿಚಾರವನ್ನು ಬಾಯ್ಬಿಟ್ಟಿದ್ದಾರೆ. ದುಡ್ಡಿನ ಆಸೆಗೆ ಬೀಳದೆ, ಅವರು ಈ ಸುಳ್ಳನ್ನು ಹೇಳಿರಲಿಲ್ಲ ಅನ್ನೋದು ಇಲ್ಲಿ ಮೆಚ್ಚುವಂತಹ ವಿಷಯ.

2005ರಲ್ಲಿ ಪ್ರಸಾರವಾದ ‘ಕಟ್ಸ್​ ಬ್ಯಾಕ್​’ ಸರಣಿಯ ಒಂದು ಎಪಿಸೋಡ್​ನಲ್ಲಿ ಸೈಮನ್​ ಹಾಗೂ ಮೇಘನ್​ ಒಟ್ಟಾಗಿ ನಟಿಸಿದ್ದರು. ಮೇಘನ್​ ಆಗಲೇ ದೊಡ್ಡ ಮಟ್ಟದ ಹೆಸರು ಮಾಡಿದ್ದರು. ಆದರೆ, ಸೈಮನ್​ ಅವರು ಇನ್ನೂ ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳೋಕೆ ಒದ್ದಾಡುತ್ತಿದ್ದರು. ಅವರಿಗೆ ಆರ್ಥಿಕವಾಗಿ ತೊಂದರೆ ಇದೆ ಎಂಬುದನ್ನು ತಿಳಿದ ಕೆಲವರು ಹಣದ ಆಫರ್ ನೀಡಿದ್ದರು.

‘ನನಗೆ ನಿಜವಾಗಿಯೂ ಹಣದ ಅಗತ್ಯವಿತ್ತು. ಈ ವೇಳೆ ಮೇಘನ್​ ಜತೆ ಮಲಗಿದ್ದೇನೆ ಎನ್ನುವ ಹೇಳಿಕೆ ನೀಡೋಕೆ ಕೆಲವರು ಒತ್ತಾಯ ಹೇರಿದ್ದರು. ನಾನು ಇದಕ್ಕೆ ಒಪ್ಪಿಲ್ಲ. ನಾನು ಹಾಗೂ ಮೇಘನ್​ ಇಬ್ಬರೂ ಒಟ್ಟಿಗೆ ಊಟ ಮಾಡಿದ್ದೇವೆ. ನಮ್ಮ ಗೆಳೆತನ ಅಷ್ಟಕ್ಕೆ ಸೀಮಿತವಾಗಿದೆ. ನಾನು ಟ್ಯಾಬ್ಲಾಯ್ಡ್​ಗಳು ನೀಡಿದ ಪ್ರಸ್ತಾಪವನ್ನು ನಿರಾಕರಿಸಿದ್ದನ್ನು ತಿಳಿದ ನಂತರ, ಮೇಘನ್ ಅವರು ನನಗೆ ಧನ್ಯವಾದ ಪತ್ರವನ್ನು ಕಳುಹಿಸಿದ್ದರು. ‘ಈಗಲೂ ಒಳ್ಳೆಯ ಜನರಿದ್ದಾರೆ ಎಂಬುದನ್ನು ತಿಳಿದು ಸಂತೋಷವಾಯಿತು’ ಎಂದು ಅವರು ಪತ್ರದಲ್ಲಿ ಬರೆದಿದ್ದರು’ ಎಂಬುದಾಗಿ ಸೈಮನ್ ಹೇಳಿಕೊಂಡಿದ್ದಾರೆ.

ಮೇಘನ್​ ಅವರು 2000ರಲ್ಲಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ಆರಂಭದಲ್ಲಿ ಟಿವಿ ಶೋಗಳಲ್ಲಿ ಚಿಕ್ಕಪುಟ್ಟ ಪಾತ್ರಗಳಲ್ಲಿ ನಟಿಸಿದರು. ‘ಸ್ಯೂಟ್ಸ್​’ ಶೋನಲ್ಲಿ ರಚೆಲ್​ ಆಗಿ ಕಾಣಿಸಿಕೊಂಡು ಸಾಕಷ್ಟು ಖ್ಯಾತಿ ಪಡೆದರು. 2018ರಲ್ಲಿ ಪ್ರಿನ್ಸ್​ ಹ್ಯಾರಿ ಅವರನ್ನು ಮದುವೆ ಆದ ನಂತರ ಚಿತ್ರರಂಗದಿಂದ ನಿವೃತ್ತಿ ಪಡೆದರು.

ಇದನ್ನೂ ಓದಿ: Alia Bhatt: ‘ಗಂಗೂಬಾಯಿ’ ಯಶಸ್ಸಿನ ಬೆನ್ನಲ್ಲೇ ಹಾಲಿವುಡ್ ಕಡೆ ಮುಖ ಮಾಡಿದ್ರಾ ಆಲಿಯಾ? ಇಲ್ಲಿದೆ ಹೊಸ ಸಮಾಚಾರ

ಅಕ್ಷಯ್​​ ಕುಮಾರ್ ನಟನೆಯ ‘ಬಚ್ಚನ್​ ಪಾಂಡೆ’ಯಲ್ಲಿ ‘ಕೆಜಿಎಫ್​’ ಚಿತ್ರದ ಬಗ್ಗೆ ಉಲ್ಲೇಖ; ಇಲ್ಲಿದೆ ವಿಡಿಯೋ

‘ಗಂಡನ ಪಕ್ಕ ಮಲಗೋದು ಬಿಡಿ, ಹತ್ರ ಕುಳಿತುಕೊಳ್ಳಲೂ ಬಿಡ್ತಿರ್ಲಿಲ್ಲ ಅತ್ತೆ!’
‘ಗಂಡನ ಪಕ್ಕ ಮಲಗೋದು ಬಿಡಿ, ಹತ್ರ ಕುಳಿತುಕೊಳ್ಳಲೂ ಬಿಡ್ತಿರ್ಲಿಲ್ಲ ಅತ್ತೆ!’
14 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಗೆದ್ದ ಇಂಗ್ಲೆಂಡ್..!
14 ವರ್ಷಗಳ ಬಳಿಕ ಟೆಸ್ಟ್ ಪಂದ್ಯ ಗೆದ್ದ ಇಂಗ್ಲೆಂಡ್..!
ತಡರಾತ್ರಿ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಪುಂಡರು
ತಡರಾತ್ರಿ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಪುಂಡರು
ಮಕ್ಕಳ‌ ಕಳ್ಳಿಯರು ಎಂದು 7 ಮಹಿಳೆಯರಿಗೆ ಹಿಗ್ಗಾಮುಗ್ಗಾ ಥಳಿಸಿದ ಸಾರ್ವಜನಿಕರು
ಮಕ್ಕಳ‌ ಕಳ್ಳಿಯರು ಎಂದು 7 ಮಹಿಳೆಯರಿಗೆ ಹಿಗ್ಗಾಮುಗ್ಗಾ ಥಳಿಸಿದ ಸಾರ್ವಜನಿಕರು
ಅರಮನೆ ಬಳಿ ಭಾರಿ ಭದ್ರತಾ ಲೋಪ? ಸಿಸಿಟಿವಿ ಕ್ಯಾಮರಾದಲ್ಲಿಲ್ಲ ಸ್ಫೋಟದ ದೃಶ್ಯ!
ಅರಮನೆ ಬಳಿ ಭಾರಿ ಭದ್ರತಾ ಲೋಪ? ಸಿಸಿಟಿವಿ ಕ್ಯಾಮರಾದಲ್ಲಿಲ್ಲ ಸ್ಫೋಟದ ದೃಶ್ಯ!
60 ದಿನಗಳ ಬಳಿಕ ಬ್ಯಾಟ್ ಬೀಸಿದ ಶ್ರೇಯಸ್ ಅಯ್ಯರ್
60 ದಿನಗಳ ಬಳಿಕ ಬ್ಯಾಟ್ ಬೀಸಿದ ಶ್ರೇಯಸ್ ಅಯ್ಯರ್
ಟಾಸ್ಕ್ ಆಡಿಯೇ ಕ್ಯಾಪ್ಟನ್ ಆದ ಗಿಲ್ಲಿ; ನಿಯಮ ಮುರಿದಿದ್ದಕ್ಕೆ ಎಚ್ಚರಿಕೆ
ಟಾಸ್ಕ್ ಆಡಿಯೇ ಕ್ಯಾಪ್ಟನ್ ಆದ ಗಿಲ್ಲಿ; ನಿಯಮ ಮುರಿದಿದ್ದಕ್ಕೆ ಎಚ್ಚರಿಕೆ
ಸರಣಿ ಮನೆಕಳ್ಳತನ, ಪೊಲೀಸರು ಸ್ಪಂದಿಸದೇ ಇದ್ದಾಗ ಜನ ಮಾಡಿದ್ದೇನು ನೋಡಿ!
ಸರಣಿ ಮನೆಕಳ್ಳತನ, ಪೊಲೀಸರು ಸ್ಪಂದಿಸದೇ ಇದ್ದಾಗ ಜನ ಮಾಡಿದ್ದೇನು ನೋಡಿ!
ರಿಕೆಲ್ಟನ್ ಸೆಂಚುರಿ ಸಿಡಿಸಿದರೂ ಸೋತ ಎಂಐ ಪಡೆ
ರಿಕೆಲ್ಟನ್ ಸೆಂಚುರಿ ಸಿಡಿಸಿದರೂ ಸೋತ ಎಂಐ ಪಡೆ
ವಾಹನ ಸವಾರರೇ ಎಚ್ಚರ: ಎಲ್ಲೆಡೆ ಹದ್ದಿನ ಕಣ್ಣಿಟ್ಟಿದ್ದಾರೆ ಟ್ರಾಫಿಕ್ ಪೊಲೀಸ್
ವಾಹನ ಸವಾರರೇ ಎಚ್ಚರ: ಎಲ್ಲೆಡೆ ಹದ್ದಿನ ಕಣ್ಣಿಟ್ಟಿದ್ದಾರೆ ಟ್ರಾಫಿಕ್ ಪೊಲೀಸ್