AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಕ್ಷಯ್​​ ಕುಮಾರ್ ನಟನೆಯ ‘ಬಚ್ಚನ್​ ಪಾಂಡೆ’ಯಲ್ಲಿ ‘ಕೆಜಿಎಫ್​’ ಚಿತ್ರದ ಬಗ್ಗೆ ಉಲ್ಲೇಖ; ಇಲ್ಲಿದೆ ವಿಡಿಯೋ

ಸಾಲುಸಾಲು ಚಿತ್ರಗಳನ್ನು ಒಪ್ಪಿಕೊಂಡರೂ ಅಕ್ಷಯ್ ಪಾತ್ರಗಳ ಆಯ್ಕೆಯಲ್ಲಿ ಭಿನ್ನತೆಯನ್ನು ಕಾಯ್ದುಕೊಳ್ಳುತ್ತಾರೆ. ಒಂದು ಚಿತ್ರದಿಂದ ಮತ್ತೊಂದು ಚಿತ್ರಕ್ಕೆ ಭಿನ್ನ ಗೆಟಪ್​ನಲ್ಲಿ ಮಿಂಚುತ್ತಾರೆ. ಈಗ ಅವರ ನಟನೆಯ ‘ಬಚ್ಚನ್ ಪಾಂಡೆ’ ಸಿನಿಮಾ ತೆರೆಗೆ ಬಂದಿದೆ.

ಅಕ್ಷಯ್​​ ಕುಮಾರ್ ನಟನೆಯ ‘ಬಚ್ಚನ್​ ಪಾಂಡೆ’ಯಲ್ಲಿ ‘ಕೆಜಿಎಫ್​’ ಚಿತ್ರದ ಬಗ್ಗೆ ಉಲ್ಲೇಖ; ಇಲ್ಲಿದೆ ವಿಡಿಯೋ
ಯಶ್​-ಅಕ್ಷಯ್​ ಕುಮಾರ್
TV9 Web
| Edited By: |

Updated on: Mar 19, 2022 | 1:43 PM

Share

ಕೆಜಿಎಫ್​’ ಚಿತ್ರ (KGF Movie) ಭಾರತೀಯ ಚಿತ್ರರಂಗದಲ್ಲಿ ಮಾಡಿದ ಹವಾ ಅಷ್ಟಿಷ್ಟಲ್ಲ. ಈ ಸಿನಿಮಾದಿಂದ ಯಶ್​ (Yash) ಹಾಗೂ ನಿರ್ದೇಶಕ ಪ್ರಶಾಂತ್​ ನೀಲ್​ ಅವರ ಖ್ಯಾತಿ ಹೆಚ್ಚಾಗಿದೆ. ಏಪ್ರಿಲ್​ನಲ್ಲಿ ತೆರೆಗೆ ಬರುತ್ತಿರುವ ‘ಕೆಜಿಎಫ್​ 2’ ಚಿತ್ರದ ಬಗ್ಗೆ ದೊಡ್ಡಮಟ್ಟದ ನಿರೀಕ್ಷೆ ಹುಟ್ಟಿಕೊಂಡಿದೆ. ಹಲವು ಚಿತ್ರಗಳಲ್ಲಿ ‘ಕೆಜಿಎಫ್​’ ಸಿನಿಮಾದ ಬಗ್ಗೆ ಉಲ್ಲೇಖ ಮಾಡಲಾಗುತ್ತಿದೆ. ಏಪ್ರಿಲ್​ನಲ್ಲಿ ತೆರೆಗೆ ಬರುತ್ತಿರುವ ‘ಕೆಜಿಎಫ್​ 2’ ಬಗ್ಗೆ ಬಾಲಿವುಡ್​ ಅಂಗಳದಲ್ಲೂ ದೊಡ್ಡ ಮಟ್ಟದ ಚರ್ಚೆ ಆಗುತ್ತಿದೆ. ಅಚ್ಚರಿ ಎಂದರೆ, ಅಕ್ಷಯ್ ಕುಮಾರ್ (Akshay Kumar) ನಟನೆಯ ‘ಬಚ್ಚನ್​ ಪಾಂಡೆ’ ಸಿನಿಮಾದಲ್ಲಿ ‘ಕೆಜಿಎಫ್​’ ಚಿತ್ರವನ್ನು ಮಾದರಿಯಾಗಿ ತೆಗೆದುಕೊಳ್ಳಲಾಗಿದೆ. ಈ ಬಗ್ಗೆ ವಿಡಿಯೋ ಒಂದು ಸಖತ್ ವೈರಲ್ ಆಗುತ್ತಿದೆ.

ಸಾಲುಸಾಲು ಚಿತ್ರಗಳನ್ನು ಒಪ್ಪಿಕೊಂಡರೂ ಅಕ್ಷಯ್ ಪಾತ್ರಗಳ ಆಯ್ಕೆಯಲ್ಲಿ ಭಿನ್ನತೆಯನ್ನು ಕಾಯ್ದುಕೊಳ್ಳುತ್ತಾರೆ. ಒಂದು ಚಿತ್ರದಿಂದ ಮತ್ತೊಂದು ಚಿತ್ರಕ್ಕೆ ಭಿನ್ನ ಗೆಟಪ್​ನಲ್ಲಿ ಮಿಂಚುತ್ತಾರೆ. ಈಗ ಅವರ ನಟನೆಯ ‘ಬಚ್ಚನ್ ಪಾಂಡೆ’ ಸಿನಿಮಾ ತೆರೆಗೆ ಬಂದಿದೆ. ಅಕ್ಷಯ್ ಕುಮಾರ್, ಕೃತಿ ಸನೋನ್, ಜಾಕ್ವೆಲಿನ್ ಫರ್ನಾಂಡೀಸ್ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ತಮಿಳಿನ ‘ಜಿಗರ್​​ಥಂಡ’ ಚಿತ್ರದ ರಿಮೇಕ್​ ಇದಾಗಿದೆ. ‘ಜಿಗರ್​​ಥಂಡ’ ಕನ್ನಡಕ್ಕೂ ರಿಮೇಕ್​ ಆಗಿ ರಿಲೀಸ್ ಆಗಿತ್ತು. ಹಾಗಾದರೆ ‘ಬಚ್ಚನ್​ ಪಾಂಡೆ’ ಸಿನಿಮಾದಲ್ಲಿ ‘ಕೆಜಿಎಫ್​’ ಚಿತ್ರವನ್ನು ಉಲ್ಲೇಖ ಮಾಡಿದ್ದು ಏಕೆ? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

‘ಬಚ್ಚನ್​ ಪಾಂಡೆ’ ಸಿನಿಮಾದ ಕಥೆ ಹೀಗಿದೆ. ಬಚ್ಚನ್​ ಪಾಂಡೆ ಹೆಸರಿನ ವಿಲನ್ ಬಗ್ಗೆ ಸಿನಿಮಾ ಮಾಡೋಕೆ ಯುವ ನಿರ್ದೇಶಕನೋರ್ವ ನಿರ್ಧರಿಸುತ್ತಾನೆ. ಬಚ್ಚನ್​ ಪಾಂಡೆಯದ್ದು ದೊಡ್ಡ ಹೆಸರು. ಈ ಚಿತ್ರಕ್ಕೆ ನಾನೇ ಹೀರೋ ಆಗುತ್ತೇನೆ ಎಂದು ಹಠ ಬೀಳುತ್ತಾನೆ ವಿಲನ್​. ನಿರ್ದೇಶಕ ಇದಕ್ಕೆ ಅನಿವಾರ್ಯವಾಗಿ ಒಪ್ಪ ಬೇಕಾಗುತ್ತದೆ. ಹೀಗೆ ವಿಲನ್ ಕುರಿತು ತೆಗೆದ ಸಿನಿಮಾಗೆ ನಿರ್ದೇಶಕ ‘ಬಿ.ಪಿ.’ ಎಂದು ಶೀರ್ಷಿಕೆ ಇಟ್ಟಿರುತ್ತಾನೆ. ಈ ಬಿ.ಪಿ. ಎಂದರೇನು ಎನ್ನುವ ಬಗ್ಗೆ ಚರ್ಚೆ ಬರುತ್ತದೆ. ಅಷ್ಟೇ ಅಲ್ಲ, ಈ ಸಿನಿಮಾಗೆ ಶಾರ್ಟ್​ಫಾರ್ಮ್​ನಲ್ಲಿ ಟೈಟಲ್​​ ಇಟ್ಟಿದ್ದೇಕೆ ಎನ್ನುವ ಪ್ರಶ್ನೆಯೂ ಎದುರಾಗುತ್ತದೆ. ಆಗ, ಕೆಜಿಎಫ್​’ ಬಗ್ಗೆ ಉಲ್ಲೇಖ ಮಾಡಲಾಗಿದೆ.

ಈ ಸಿನಿಮಾದಲ್ಲಿ ಬರುವ ಸಂಭಾಷಣೆ ಹೀಗಿದೆ. ‘ನಿರ್ದೇಶಕರು ಈ ಸಿನಿಮಾಗೆ ಬಿ.ಪಿ. ಎಂದು ಯಾಕೆ ಇಟ್ಟಿದ್ದಾರೆ? ಬಚ್ಚನ್ ಪಾಂಡೆ ಎಂದು ನೇರವಾಗೇ ಇಡಬಹುದಿತ್ತಲ್ಲ’ ಎಂದು ಬಚ್ಚನ್ ಪಾಂಡೆಯ ಸಹಾಯಕ ಓರ್ವ ಕೇಳುತ್ತಾನೆ. ‘ಕೋಲಾರ್​ ಗೋಲ್ಡ್​ ಫೀಲ್ಡ್​ ಚಿತ್ರವನ್ನು ಕೆಜಿಎಫ್​ ಎಂದು ಶಾರ್ಟ್​ ಆಗಿ ಕರೆಯುತ್ತಾರಲ್ಲ, ಅದೇ ರೀತಿ ಬಚ್ಚನ್ ಪಾಂಡೆಗೆ ಬಿಪಿ ಎಂದು ಕರೆಯಲಾಗುತ್ತದೆ’ ಎನ್ನುತ್ತಾನೆ ಮತ್ತೊಬ್ಬ. ಈ ವೇಳೆ ಅಲ್ಲಿದ್ದವರು ‘ಹಾಗಿದ್ದರೆ ಬಿ.ಪಿ. ಕೇವಲ ಹಿಟ್ ಅಲ್ಲ ಸೂಪರ್ ಹಿಟ್​’ ಎಂದು ಸಂಭ್ರಮಿಸುತ್ತಾರೆ. ಸದ್ಯ, ಈ ವಿಡಿಯೋ ಸಖತ್​ ವೈರಲ್ ಆಗುತ್ತಿದೆ. ಇತ್ತೀಚೆಗೆ ರಿಲೀಸ್​ ಆದ ‘ಮಿಷನ್​ ಇಂಪಾಸಿಬಲ್​’ ಟ್ರೇಲರ್​ನಲ್ಲೂ ‘ಕೆಜಿಎಫ್​’ ಸಿನಿಮಾ ಬಗ್ಗೆ ಉಲ್ಲೇಖ ಮಾಡಲಾಗಿತ್ತು.

ಇದನ್ನೂ ಓದಿ: KGF Chapter 2: ಯಶ್​ ನಟನೆಯ ‘ಕೆಜಿಎಫ್​ 2’ ತಂಡದಿಂದ ಸರ್​ಪ್ರೈಸ್​; ಪವರ್​ಫುಲ್​ ಪೋಸ್ಟರ್​ ರಿಲೀಸ್​

ಮಾ.21ಕ್ಕೆ ಬರಲಿದೆ ದೊಡ್ಡ ‘ತೂಫಾನ್​..’; ಮೊದಲೇ ಸೂಚನೆ ನೀಡಿದ ‘ಕೆಜಿಎಫ್​: ಚಾಪ್ಟರ್​ 2’ ಟೀಮ್​

ವಾರಾಣಸಿ-ಲಕ್ನೋ ರೈಲಿನೊಳಗೆ ಎರಡು ಗುಂಪುಗಳ ನಡುವೆ ಹೊಡೆದಾಟ
ವಾರಾಣಸಿ-ಲಕ್ನೋ ರೈಲಿನೊಳಗೆ ಎರಡು ಗುಂಪುಗಳ ನಡುವೆ ಹೊಡೆದಾಟ
ಗಾಯಗೊಂಡಿದ್ದ ಚಾಲಕ ಮೊಹಮ್ಮದ್ ರಫೀಕ್ ಸಾವು, ಗೋಳಾಡಿದ ಪತ್ನಿ
ಗಾಯಗೊಂಡಿದ್ದ ಚಾಲಕ ಮೊಹಮ್ಮದ್ ರಫೀಕ್ ಸಾವು, ಗೋಳಾಡಿದ ಪತ್ನಿ
ಉಡುಪಿ ಕೃಷ್ಣನಿಗಾಗಿ ಸಿದ್ಧವಾಯ್ತು ಚೆಂದದ ಚಿನ್ನದ ರಥ! ಹೇಗಿದೆ ನೋಡಿ
ಉಡುಪಿ ಕೃಷ್ಣನಿಗಾಗಿ ಸಿದ್ಧವಾಯ್ತು ಚೆಂದದ ಚಿನ್ನದ ರಥ! ಹೇಗಿದೆ ನೋಡಿ
ಚಿತ್ರದುರ್ಗ ಬಸ್ ಅಪಘಾತದಲ್ಲಿ ಗಾಯಗೊಂಡಿದ್ದ ಚಾಲಕ ಸಾವು
ಚಿತ್ರದುರ್ಗ ಬಸ್ ಅಪಘಾತದಲ್ಲಿ ಗಾಯಗೊಂಡಿದ್ದ ಚಾಲಕ ಸಾವು
ಮೃತರ ಕುಟುಂಬಗಳಿಗೆ ಶಾಸಕ ಪ್ರದೀಪ್ ಈಶ್ವರ್ ನೆರವಿನ ಭರವಸೆ
ಮೃತರ ಕುಟುಂಬಗಳಿಗೆ ಶಾಸಕ ಪ್ರದೀಪ್ ಈಶ್ವರ್ ನೆರವಿನ ಭರವಸೆ
2026 ಗುರು ಗ್ರಹದ ಸಂಚಾರದಿಂದ ಮಕರ ರಾಶಿಯವರಿಗೆ ಗುರುಬಲ ಮತ್ತು ಅದೃಷ್ಟ
2026 ಗುರು ಗ್ರಹದ ಸಂಚಾರದಿಂದ ಮಕರ ರಾಶಿಯವರಿಗೆ ಗುರುಬಲ ಮತ್ತು ಅದೃಷ್ಟ
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಪಕ್ಷದ ನಿರ್ದೇಶನ ಪಾಲಿಸೋದು ಕಾರ್ಯಕರ್ತರ ಕರ್ತವ್ಯ: ಯತೀಂದ್ರ ಟಾಂಗ್
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಫಾರಂ ಕೋಳಿ, ಮೊಟ್ಟೆ ತಿನ್ನೋ ಮುನ್ನ ಎಚ್ಚರ: ಕೆಲವು ಕಡೆ ಹೀಗೆಲ್ಲ ಮಾಡ್ತಾರೆ!
ಮಕ್ಕಳಿಗೂ ಮಾಳು ಸ್ಟೈಲ್​​ನಲ್ಲೇ ಹೇರ್​ಸ್ಟೈಲ್; ಇಲ್ಲಿದೆ ಫನ್ ವಿಡಿಯೋ
ಮಕ್ಕಳಿಗೂ ಮಾಳು ಸ್ಟೈಲ್​​ನಲ್ಲೇ ಹೇರ್​ಸ್ಟೈಲ್; ಇಲ್ಲಿದೆ ಫನ್ ವಿಡಿಯೋ
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್
ಜಾತ್ರೆ, ಪೆಟ್ರೋಲ್ ಬಂಕ್, ಎಲ್ಲೆಲ್ಲೂ ಕೋಟಾ ನೋಟು ಚಲಾಯಿಸ್ತಿದ್ದವರು ಅಂದರ್