ತಾವೇ ಸ್ಥಾಪಿಸಿದ ನಿರ್ಮಾಣ ಸಂಸ್ಥೆಯಿಂದ ಹೊರನಡೆದ ಅನುಷ್ಕಾ ಶರ್ಮಾ; ಅಂಥದ್ದೇನಾಯ್ತು?

ತಾವೇ ಸ್ಥಾಪಿಸಿದ ನಿರ್ಮಾಣ ಸಂಸ್ಥೆಯಿಂದ ಹೊರನಡೆದ ಅನುಷ್ಕಾ ಶರ್ಮಾ; ಅಂಥದ್ದೇನಾಯ್ತು?
ಅನುಷ್ಕಾ ಶರ್ಮಾ

ಅನುಷ್ಕಾ ಹಾಗೂ ಅವರ ಸಹೋದರ ಕರ್ಣೇಶ್​​ ಶರ್ಮಾ ಇಬ್ಬರೂ ಒಟ್ಟಾಗಿ 2013ರಲ್ಲಿ ‘ಕ್ಲೀನ್​ ಸ್ಲೇಟ್​ ಫಿಲ್ಮ್ಸ್’ ನಿರ್ಮಾಣ ಸಂಸ್ಥೆ ಹುಟ್ಟು ಹಾಕಿದರು. ಇಬ್ಬರೂ ಸೇರಿ ಈ ಸಂಸ್ಥೆಯನ್ನು ನಡೆಸುತ್ತಿದ್ದರು.

TV9kannada Web Team

| Edited By: Rajesh Duggumane

Mar 19, 2022 | 4:16 PM

ಅನುಷ್ಕಾ ಶರ್ಮಾ (Anushka Sharma) ಅವರು ಸದ್ಯ ಮಗುವಿನ ಆರೈಕೆಯಲ್ಲಿ ಬ್ಯುಸಿ ಆಗಿದ್ದಾರೆ. ಅವರು ನಟನೆಗೆ ಕಂಬ್ಯಾಕ್​ ಮಾಡೋಕೆ ರೆಡಿ ಆಗಿದ್ದಾರೆ. ಇದರ ಜತೆಗೆ ‘ಕ್ಲೀನ್​ ಸ್ಲೇಟ್​ ಫಿಲ್ಮ್ಸ್​​’ (Clean Slate Filmz) ಬ್ಯಾನರ್​ ಸ್ಥಾಪಿಸಿ ಅದರ ಅಡಿಯಲ್ಲಿ ಹಲವು ಸಿನಿಮಾ ನಿರ್ಮಾಣ ಮಾಡಿದ್ದಾರೆ. ಅವರ ನಿರ್ಮಾಣದ ಹಲವು ಸಿನಿಮಾಗಳು, ವೆಬ್​ ಸೀರಿಸ್​ ರಿಲೀಸ್ ಆಗಿ ಹಿಟ್​ ಆಗಿವೆ. ‘ಪಾತಾಳ್​ ಲೋಕ್​’ ವೆಬ್​ ಸರಣಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಹಿಟ್​ ಆಗಿತ್ತು. ಇದನ್ನು ಅನುಷ್ಕಾ ಅವರೇ ನಿರ್ಮಾಣ ಮಾಡಿದ್ದರು. ಈಗ ಅನುಷ್ಕಾ ಶರ್ಮಾ ನಿರ್ಮಾಣ ಸಂಸ್ಥೆಯಿಂದ ಹೊರ ಬರುವ ನಿರ್ಧಾರಕ್ಕೆ ಬಂದಿದ್ದಾರೆ. ಇದಕ್ಕೆ ಅವರು ಕಾರಣವನ್ನೂ ನೀಡಿದ್ದಾರೆ.

ಅನುಷ್ಕಾ ಹಾಗೂ ಅವರ ಸಹೋದರ ಕರ್ಣೇಶ್​​ ಶರ್ಮಾ ಇಬ್ಬರೂ ಒಟ್ಟಾಗಿ 2013ರಲ್ಲಿ ‘ಕ್ಲೀನ್​ ಸ್ಲೇಟ್​ ಫಿಲ್ಮ್ಸ್’ ನಿರ್ಮಾಣ ಸಂಸ್ಥೆ ಹುಟ್ಟು ಹಾಕಿದರು. ಇಬ್ಬರೂ ಸೇರಿ ಈ ಸಂಸ್ಥೆಯನ್ನು ನಡೆಸುತ್ತಿದ್ದರು. ಕರ್ಣೇಶ್​​ ಕೂಡ ಹೆಚ್ಚಿನ ಜವಾಬ್ದಾರಿ ತೆಗೆದುಕೊಂಡು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ಒಟ್ಟಿಗೆ 8 ಸಿನಿಮಾಗಳನ್ನು ನಿರ್ಮಾಣ ಮಾಡುವ ಚಾಲೆಂಜ್​ಅನ್ನು ‘ಕ್ಲೀನ್​ ಸ್ಲೇಟ್​ ಫಿಲ್ಮ್ಸ್’ ತೆಗೆದುಕೊಂಡ ಬಗ್ಗೆ ವರದಿ ಆಗಿತ್ತು. ಹೀಗಿರುವಾಗಲೇ ಅನುಷ್ಕಾ ನಿರ್ಮಾಣ ಸಂಸ್ಥೆ ತೊರೆದಿದ್ದಾರೆ. ಹಾಗಾದರೆ ಮುಂದೆ ಇದನ್ನು ನೋಡಿಕೊಳ್ಳೋದು ಯಾರು? ಆ ಪ್ರಶ್ನೆಗೆ ಇಲ್ಲಿದೆ ಉತ್ತರ.

ಈ ಬಗ್ಗೆ ಬರೆದುಕೊಂಡಿರುವ ಅನುಷ್ಕಾ, ‘ನನ್ನ ಸಹೋದರ ಕರ್ಣೇಶ್ ಜತೆ ಸೇರಿ ‘ಕ್ಲೀನ್ ಸ್ಲೇಟ್ ಫಿಲ್ಮ್ಸ್​’ ಅನ್ನು ಪ್ರಾರಂಭಿಸಿದೆ. ನಿರ್ಮಾಣದ ವಿಚಾರದಲ್ಲಿ ನಾವು ಆಗ ಹೊಸಬರು. ನಮ್ಮ ಪ್ರಯಾಣದಲ್ಲಿ ಹಿಂತಿರುಗಿ ನೋಡಿದಾಗ ನಾವು ಸಾಧಿಸಿದ್ದನ್ನು ನೋಡಿ ಖುಷಿ ಆಗುತ್ತದೆ. ನಮ್ಮ ನಿರ್ಮಾಣ ಸಂಸ್ಥೆ ಸಾಕಷ್ಟು ಸಾಧನೆ ಮಾಡಿದೆ. ಇದಕ್ಕೆ ಕರ್ಣೇಶ್​ ಕೊಡುಗೆ ದೊಡ್ಡದು’ ಎಂದಿದ್ದಾರೆ ಅನುಷ್ಕಾ.

‘ನನ್ನ ಬಳಿ ಎಷ್ಟೇ ಸಮಯವಿದ್ದರೂ ಅದನ್ನು ನಾನು ನಟನೆಗೆ ಮೀಸಲಿಡಲು ಬಯಸುತ್ತೇನೆ. ಹೀಗಾಗಿ, ‘ಕ್ಲೀನ್ ಸ್ಲೇಟ್ ಫಿಲ್ಮ್ಸ್’ನಿಂದ ನಾನು ಹೊರಬರುತ್ತಿದ್ದೇನೆ. ಕರ್ಣೇಶ್​ ಇದನ್ನು ಮುನ್ನಡೆಸಿಕೊಂಡು ಹೋಗಲಿದ್ದಾರೆ’ ಎಂದು ಅನುಷ್ಕಾ ಅವರು ನಿರ್ಧಾರ ತಿಳಿಸಿದ್ದಾರೆ. 2018ರಲ್ಲಿ ತೆರೆಗೆ ಬಂದ ‘ಝೀರೋ’ ಚಿತ್ರದ ಬಳಿಕ ಅನುಷ್ಕಾ ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ. ಮದುವೆ, ಮಕ್ಕಳು ಎಂದು ಕುಟುಂಬದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.

ಅನುಷ್ಕಾ ಶರ್ಮಾ ಅವರು ‘ಚಕ್ದಾ ಎಕ್ಸ್​ಪ್ರೆಸ್​’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಕ್ರಿಕೆಟರ್​ ಝುಲನ್​ ಗೋಸ್ವಾಮಿ ಅವರ ಜೀವನ ಆಧರಿಸಿ ಈ ಸಿನಿಮಾ ಸಿದ್ಧಗೊಳ್ಳುತ್ತಿದೆ. ನೆಟ್​ಫ್ಲಿಕ್ಸ್​ನಲ್ಲಿ ಈ ಸಿನಿಮಾ ತೆರೆಗೆ ಬರುತ್ತಿದೆ. ‘ಕ್ಲೀನ್​ ಸ್ಲೇಟ್​ ಫಿಲ್ಮ್ಸ್’ ಅಡಿಯಲ್ಲಿ  ‘ಎನ್​ಎಚ್​10’, ‘ಪರಿ’, ‘ಪಾತಾಳ್​ ಲೋಕ್​’, ‘ಬುಲ್​ಬುಲ್​’ ಮೊದಲಾದವು ಪ್ರಾಜೆಕ್ಟ್​ಗಳು ನಿರ್ಮಾಣ ಆಗಿದೆ.

ಇದನ್ನೂ ಓದಿ: Virat Kohli: ಎಲ್ಲರೆದುರು ತರಲೆ ಮಾಡಿಕೊಂಡಿರುವ ವಿರಾಟ್, ಅನುಷ್ಕಾ ಎದುರು ಬಂದರೆ ಹೇಗೆ ವರ್ತಿಸುತ್ತಾರಂತೆ ಗೊತ್ತಾ?

Anushka Sharma: ಸಿಂಪಲ್ ಲುಕ್​ನಲ್ಲೇ ಅಭಿಮಾನಿಗಳ ಮನಗೆದ್ದ ಅನುಷ್ಕಾ ಶರ್ಮಾ

Follow us on

Related Stories

Most Read Stories

Click on your DTH Provider to Add TV9 Kannada