ಮಾ.21ಕ್ಕೆ ಬರಲಿದೆ ದೊಡ್ಡ ‘ತೂಫಾನ್​..’; ಮೊದಲೇ ಸೂಚನೆ ನೀಡಿದ ‘ಕೆಜಿಎಫ್​: ಚಾಪ್ಟರ್​ 2’ ಟೀಮ್​

KGF Chapter 2: ‘ತೂಫಾನ್​..’ ಲಿರಿಕಲ್​ ಸಾಂಗ್​ ಬಿಡುಗಡೆ ಮಾಡಲು ‘ಕೆಜಿಎಫ್​: ಚಾಪ್ಟರ್​ 2’ ಚಿತ್ರತಂಡ ಸಕಲ ಸಿದ್ಧತೆ ಮಾಡಿಕೊಂಡಿದೆ. ಅದಕ್ಕಾಗಿ ಯಶ್​ ಅಭಿಮಾನಿಗಳು ಕಾದು ಕೂತಿದ್ದಾರೆ.

ಮಾ.21ಕ್ಕೆ ಬರಲಿದೆ ದೊಡ್ಡ ‘ತೂಫಾನ್​..’; ಮೊದಲೇ ಸೂಚನೆ ನೀಡಿದ ‘ಕೆಜಿಎಫ್​: ಚಾಪ್ಟರ್​ 2’ ಟೀಮ್​
ಕೆಜಿಎಫ್​: ಚಾಪ್ಟರ್​ 2
Follow us
TV9 Web
| Updated By: ಮದನ್​ ಕುಮಾರ್​

Updated on:Mar 18, 2022 | 1:42 PM

‘ಕೆಜಿಎಫ್​: ಚಾಪ್ಟರ್​ 2’ (KGF Chapter 2) ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಈಗಾಗಲೇ ಪ್ರಚಾರ ಕಾರ್ಯಕ್ಕೆ ಚುರುಕು ಮುಟ್ಟಿಸುವ ಕೆಲಸ ಆಗುತ್ತಿದೆ. ಮಾ.27ರಂದು ಟ್ರೇಲರ್​ ಬರಲಿದೆ. ಅದಕ್ಕಾಗಿ ‘ರಾಕಿಂಗ್​ ಸ್ಟಾರ್​’ ಯಶ್​ (Yash) ಅಭಿಮಾನಿಗಳು ಕಾದು ಕೂತಿದ್ದಾರೆ. ವಿಶೇಷ ಏನೆಂದರೆ ಸಡನ್​ ಆಗಿ ‘ಕೆಜಿಎಫ್​ 2’ ತಂಡ ಒಂದು ಬ್ರೇಕಿಂಗ್​​ ನ್ಯೂಸ್​ ನೀಡಿದೆ. ಮಾ.21ರಂದು ಈ ಸಿನಿಮಾದ ಮೊದಲ ಲಿರಿಕಲ್​ ವಿಡಿಯೋ ರಿಲೀಸ್​ ಆಗಲಿದೆ. ‘ತೂಫಾನ್​..’ ಎಂಬ ಲಿರಿಕಲ್​ ಸಾಂಗ್​ (Toofan Lyrical Video) ಬಿಡುಗಡೆ ಮಾಡಲು ಸಕಲ ಸಿದ್ಧತೆ ನಡೆದಿದೆ. ಈ ಮಾಹಿತಿಯನ್ನು ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಸ್ಮ್​ ಅಧಿಕೃತವಾಗಿ ಸೋಶಿಯಲ್​ ಮೀಡಿಯಾ ಮೂಲಕ ಪ್ರಕಟಿಸಿದೆ. ಪ್ರಶಾಂತ್​ ನೀಲ್​ ನಿರ್ದೇಶನದ ಈ ಚಿತ್ರದ ಬಗ್ಗೆ ದೇಶಾದ್ಯಂತ ನಿರೀಕ್ಷೆ ಸೃಷ್ಟಿ ಆಗಿದೆ. ಸಂಗೀತ ನಿರ್ದೇಶಕ ರವಿ ಬಸ್ರೂರು ಅವರ ಸಂಗೀತದಿಂದಾಗಿ ‘ಕೆಜಿಎಫ್​: ಚಾಪ್ಟರ್​ 1’ ಸಿನಿಮಾಗೆ ಹೊಸ ಮೆರುಗು ಬಂದಿತ್ತು. ಈಗ ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದ ಹಾಡುಗಳ ಮೂಲಕ ಅವರು ಯಾವ ರೀತಿ ಮೋಡಿ ಮಾಡಲಿದ್ದಾರೆ ಎಂಬುದನ್ನು ತಿಳಿಯುವ ಕೌತುಕ ನಿರ್ಮಾಣ ಆಗಿದೆ. ಸೋಮವಾರ (ಮಾ.21) ಬೆಳಗ್ಗೆ 11.07ಕ್ಕೆ ಈ ಸಾಂಗ್​ ರಿಲೀಸ್​ ಆಗಲಿದೆ.

ಪ್ರಶಾಂತ್​ ನೀಲ್​ ಆ್ಯಕ್ಷನ್​-ಕಟ್​ ಹೇಳಿರುವ ಈ ಚಿತ್ರ ಬಗ್ಗೆ ಅಭಿಮಾನಿಗಳಲ್ಲಿ ದೊಡ್ಡ ಮಟ್ಟದ ನಿರೀಕ್ಷೆ ಮನೆ ಮಾಡಿದೆ. ಟ್ರೇಲರ್​ ಬಿಡುಗಡೆ ಆದ ಬಳಿಕ ನಿರೀಕ್ಷೆ ಡಬಲ್​ ಆಗಲಿದೆ. ‘ಕೆಜಿಎಫ್​ 2’ ಸಿನಿಮಾದಿಂದ ಈವರೆಗೆ ಬಿಡುಗಡೆ ಆಗಿರುವುದು ಕೆಲವು ಪೋಸ್ಟರ್​ ಮತ್ತು ಒಂದೇ ಒಂದು ಟೀಸರ್​ ಮಾತ್ರ. ಈಗ ‘ತೂಫಾನ್​..’ ಲಿರಿಕಲ್​ ಸಾಂಗ್​ ಬಿಡುಗಡೆಯಾದರೆ ಸಿನಿಮಾ ಮೇಲಿನ ಕ್ರೇಜ್​ ಹೆಚ್ಚಲಿದೆ.

ಏಪ್ರಿಲ್​ 14ರಂದು ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾ ವಿಶ್ವಾದ್ಯಂತ ರಿಲೀಸ್​ ಆಗಲಿದೆ. ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆಯೇ ಪ್ರಚಾರ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ. ಅದಕ್ಕಾಗಿ ಈಗಾಗಲೇ ಭರದ ಸಿದ್ಧತೆ ನಡೆದಿದೆ. ಭಾರತ ಮಾತ್ರವಲ್ಲದೇ ವಿದೇಶದ ಚಿತ್ರಮಂದಿರಗಳಲ್ಲಿ ಸ್ಟ್ಯಾಂಡಿ ಮತ್ತು ಪೋಸ್ಟರ್​ಗಳನ್ನು ಪ್ರದರ್ಶಿಸಲು ತಯಾರಿ ನಡೆದಿದೆ. ‘ಕೆಜಿಎಫ್​: ಚಾಪ್ಟರ್​ 2’ ಚಿತ್ರದ ಸ್ಟ್ಯಾಂಡಿಗಳು ವಿಶೇಷವಾಗಿ ವಿನ್ಯಾಸಗೊಂಡಿವೆ.

ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಸಿನಿಮಾ ಬಿಡುಗಡೆ ಆಗಲಿರುವುದರಿಂದ ಅದೇ ರೀತಿಯಲ್ಲಿ ಭರ್ಜರಿ ಪ್ರಚಾರಕಾರ್ಯಕ್ಕೆ ಚಿತ್ರತಂಡ ಪ್ಲ್ಯಾನ್​ ಮಾಡಿಕೊಳ್ಳುತ್ತಿದೆ. ಬಾಲಿವುಡ್​ ಸ್ಟಾರ್​ ಕಲಾವಿದರಾದ ಸಂಜಯ್​ ದತ್​, ರವೀನಾ ಟಂಡನ್​ ಕೂಡ ನಟಿಸಿರುವುದರಿಂದ ಸಹಜವಾಗಿಯೇ ಹಿಂದಿ ಭಾಷಿಕ ರಾಜ್ಯಗಳಲ್ಲಿ ಹೈಪ್​ ಹೆಚ್ಚಿದೆ. ಅಧೀರ ಎಂಬ ಡಿಫರೆಂಟ್​ ಪಾತ್ರಕ್ಕೆ ಸಂಜಯ್​ ದತ್​ ಬಣ್ಣ ಹಚ್ಚಿದ್ದಾರೆ. ರಮಿಕಾ ಸೇನ್​ ಎಂಬ ಪವರ್​ಫುಲ್​ ಮಹಿಳೆಯಾಗಿ ರವೀನಾ ಟಂಡನ್​ ಕಾಣಿಸಿಕೊಳ್ಳಲಿದ್ದಾರೆ. ಆ ಪಾತ್ರದ ಝಲಕ್​ ಹೇಗಿರಲಿದೆ ಎಂಬುದನ್ನು ಈಗಾಗಲೇ ತೋರಿಸಲಾಗಿದೆ.

‘ಕೆಜಿಎಫ್​ನ ಮೊದಲ ಭಾಗ ಶೂಟ್​ ಮಾಡುವಾಗ ‘ಕೆಜಿಎಫ್​ 2’ನ ಕೆಲ ಪಾರ್ಟ್​ಗಳನ್ನು ಶೂಟ್​ ಮಾಡಲಾಗಿತ್ತು. ಇದು ಯಾವ ಭಾಷೆ ಅಥವಾ ಯಾವ ಮಾರುಕಟ್ಟೆ ಎನ್ನುವುದಲ್ಲ. ನಾವು ಎಷ್ಟು ಜನರಿಗೆ ರೀಚ್​ ಆಗುತ್ತೇವೆ ಎನ್ನುವುದು ಪ್ರಮುಖವಾಗುತ್ತದೆ. ಎಲ್ಲಾ ವಯಸ್ಸಿನವರು ಆನಂದಿಸಬಹುದಾದ ಕಥೆಯನ್ನು ಹೇಳುವ ಗುರಿಯನ್ನು ನಾನು ಹೊಂದಿದ್ದೇನೆ’ ಎಂದು ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಯಶ್​ ಹೇಳಿದ್ದಾರೆ​.

ಇದನ್ನೂ ಓದಿ:

‘ಕೆಜಿಎಫ್​ 2’ ನಟಿ ರವೀನಾ ಟಂಡನ್​ಗೆ ಮೋದಿ ಪತ್ರ; ಎಮೋಷನಲ್​ ಲೆಟರ್​ ಹಂಚಿಕೊಂಡ ರಮಿಕಾ ಸೇನ್​

‘ಕೆಜಿಎಫ್​ 2’ ಜತೆಗಿನ ರೇಸ್​​ನಿಂದ ಹಿಂದೆ ಸರಿದ ‘ಲಾಲ್​ ಸಿಂಗ್​ ಛಡ್ಡಾ’​; ಆಮಿರ್​ ಖಾನ್ ನೀಡಿದ ಕಾರಣ ಏನು?

Published On - 1:16 pm, Fri, 18 March 22

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ