James First Day Collection: ನಿಜಕ್ಕೂ ‘ಜೇಮ್ಸ್​’ ಸಿನಿಮಾ ಗಳಿಸಿದ್ದೆಷ್ಟು? ಪಕ್ಕಾ ಲೆಕ್ಕ ಕೊಟ್ಟ ನಿರ್ಮಾಪಕ

ಸಾಮಾನ್ಯವಾಗಿ ಸ್ಟಾರ್​ ನಟರ ಚಿತ್ರಗಳು ಮೊದಲ ಮೂರು ದಿನ ದೊಡ್ಡ ಮೊತ್ತದ ಹಣ ಬಾಚಿಕೊಳ್ಳುತ್ತವೆ. ಕನ್ನಡದ ಚಿತ್ರಗಳು ಕೂಡ ಇದಕ್ಕೆ ಹೊರತಾಗಿಲ್ಲ. ದೊಡ್ಡ ಓಪನಿಂಗ್​ ಪಡೆದ ಹಲವು ಸಿನಿಮಾಗಳು ಕನ್ನಡದಲ್ಲಿ ಇವೆ.

James First Day Collection: ನಿಜಕ್ಕೂ ‘ಜೇಮ್ಸ್​’ ಸಿನಿಮಾ ಗಳಿಸಿದ್ದೆಷ್ಟು? ಪಕ್ಕಾ ಲೆಕ್ಕ ಕೊಟ್ಟ ನಿರ್ಮಾಪಕ
ಪುನೀತ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Mar 18, 2022 | 2:10 PM

ನಟ ಪುನೀತ್​ ರಾಜ್​ಕುಮಾರ್ (Puneeth Rajkumar) ಹಾಗೂ ನಿರ್ದೇಶಕ ಚೇತನ್​ ಕುಮಾರ್ (Chetan Kumar) ಕಾಂಬಿನೇಷನ್​ನಲ್ಲಿ ಮೂಡಿಬಂದ ‘ಜೇಮ್ಸ್’ ಸಿನಿಮಾ (James Movie) ಮೊದಲ ದಿನ ಬಿಗ್​ ಓಪನಿಂಗ್​ ಪಡೆದುಕೊಂಡಿದೆ. ಮುಂಜಾನೆ ನಾಲ್ಕು ಗಂಟೆಯಿಂದಲೇ ಚಿತ್ರದ ಶೋ ಪ್ರದರ್ಶನ ಕಂಡಿತ್ತು. ಈ ಸಿನಿಮಾವನ್ನು ಅಭಿಮಾನಿಗಳು ಮುಗಿಬಿದ್ದು ನೋಡಿದ್ದಾರೆ. ಬೆಂಗಳೂರು ಒಂದರಲ್ಲೇ 800ಕ್ಕೂ ಅಧಿಕ ಶೋಗಳು ಆರಂಭಗೊಂಡಿತ್ತು. ಈ ಸಿನಿಮಾ ಮೊದಲ ದಿನ ಎಷ್ಟು ಕಲೆಕ್ಷನ್ ಮಾಡಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಕಾಡಿತ್ತು. ಇದಕ್ಕೆ ಚಿತ್ರತಂಡದಿಂದಲೇ ಸ್ಪಷ್ಟನೆ ಸಿಕ್ಕಿದೆ. ಈ ಸಿನಿಮಾ ಎಷ್ಟು ಕಲೆಕ್ಷನ್ ಮಾಡಿದೆ ಎಂಬ ಬಗ್ಗೆ ‘ಜೇಮ್ಸ್’ ಚಿತ್ರದ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಮಾಹಿತಿ ನೀಡಿದ್ದಾರೆ.

ಸಾಮಾನ್ಯವಾಗಿ ಸ್ಟಾರ್​ ನಟರ ಚಿತ್ರಗಳು ಮೊದಲ ಮೂರು ದಿನ ದೊಡ್ಡ ಮೊತ್ತದ ಹಣ ಬಾಚಿಕೊಳ್ಳುತ್ತವೆ. ಕನ್ನಡದ ಚಿತ್ರಗಳು ಕೂಡ ಇದಕ್ಕೆ ಹೊರತಾಗಿಲ್ಲ. ದೊಡ್ಡ ಓಪನಿಂಗ್​ ಪಡೆದ ಹಲವು ಸಿನಿಮಾಗಳು ಕನ್ನಡದಲ್ಲಿ ಇವೆ. ಅದೇ ರೀತಿ, ‘ಜೇಮ್ಸ್’ ಸಿನಿಮಾ ಈ ದಾಖಲೆಗಳನ್ನು ಪುಡಿ ಮಾಡಿದೆ. ಯಾವ ಕನ್ನಡ ಚಿತ್ರವೂ ಮೊದಲ ದಿನ ಗಳಿಕೆ ಮಾಡದಷ್ಟು ಹಣವನ್ನು ಈ ಚಿತ್ರ ಗಳಿಕೆ ಮಾಡಿದೆ.

ಥಿಯೇಟರ್ ಕಲೆಕ್ಷನ್, ಸಿನಿಮಾ ಹಕ್ಕು ಸೇರಿ ‘ಜೇಮ್ಸ್​’ ಚಿತ್ರ 100 ಕೋಟಿ ರೂಪಾಯಿ ಬಾಚಿಕೊಂಡಿದೆ ಎಂದು ಹೇಳಲಾಗಿತ್ತು. ಇದನ್ನು ನಿರ್ಮಾಪಕ ಕಿಶೋರ್ ಪತ್ತಿಕೊಂಡ ಒಪ್ಪಿಕೊಂಡಿದ್ದಾರೆ. ಈ ಮೂಲಕ ‘ಜೇಮ್ಸ್’ ಸಿನಿಮಾ ಹೊಸ ದಾಖಲೆ ಸೃಷ್ಟಿ ಮಾಡಿದೆ. ‘ಜೇಮ್ಸ್’ ಚಿತ್ರಕ್ಕೆ ಒಟಿಟಿ ಹಾಗೂ ಟಿವಿಯಲ್ಲೂ ಬೇಡಿಕೆ ಇದೆ. ಈ ಕಾರಣಕ್ಕೆ ಚಿತ್ರಕ್ಕೆ ದೊಡ್ಡ ಬೇಡಿಕೆ ಬಂದಿದೆ ಎನ್ನಲಾಗಿದೆ. ಎಲ್ಲಾ ಸೇರಿ ಸಿನಿಮಾ ಉತ್ತಮ ಕಲೆಕ್ಷನ್​ ಮಾಡಿದ್ದು ಅಭಿಮಾನಿಗಳಿಗೆ ಖುಷಿ ನೀಡಿದೆ. ಚಿತ್ರಮಂದಿರಗಳಿಂದ ಈ ಸಿನಿಮಾ ಮೊದಲ ದಿನ 30 ಕೋಟಿ ಬಾಚಿಕೊಂಡಿದೆ ಎನ್ನಲಾಗಿದೆ. ಈ ಬಗ್ಗೆ ನಿರ್ಮಾಪಕರು ಮಾಹಿತಿ ನೀಡಿಲ್ಲ.

ಮುಂದೇನಾಗಲಿದೆ ಕಲೆಕ್ಷನ್​?

ಇಂದು (ಮಾರ್ಚ್​ 18) ಸಿನಿಮಾದ ಕಲೆಕ್ಷನ್ ಕೊಂಚ ತಗ್ಗಬಹುದು. ಇಂದು ಶುಕ್ರವಾರ. ಕಚೇರಿಗಳಿಗೆ ರಜೆ ಇರುವುದಿಲ್ಲ. ಗುರುವಾರದಂತೆ ಯಾವುದೇ ಮುಂಜಾನೇ ಶೋ ಇರುವುದಿಲ್ಲ. ಶನಿವಾರ (ಮಾರ್ಚ್​ 19) ಹಾಗೂ ಭಾನುವಾರ (ಮಾರ್ಚ್​ 20) ‘ಜೇಮ್ಸ್​’ ಸಿನಿಮಾ ಕಲೆಕ್ಷನ್​ ಹೆಚ್ಚಬಹುದು. ಈ ಚಿತ್ರದ ಜತೆಗೆ ಫ್ಯಾನ್ಸ್​ ಭಾವನಾತ್ಮಕವಾಗಿ ಕನೆಕ್ಟ್​ ಆಗುತ್ತಿದ್ದಾರೆ.

ಇದನ್ನೂ ಓದಿ: James Movie Review: ಜೇಮ್ಸ್​ ವಿಮರ್ಶೆ: ಗೆಳೆತನದ ಕಥೆ ಹೇಳುವ ಒಂದು ‘ಪವರ್​ಫುಲ್​’ ಶೋ

James Movie First Day Collection:​ ಮೊದಲ ದಿನ 30 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ ‘ಜೇಮ್ಸ್​’​

Published On - 2:06 pm, Fri, 18 March 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ