ಸಕ್ಸಸ್ಮೀಟ್ ಬಗ್ಗೆ ಹೊಸ ಅಪ್ಡೇಟ್ ನೀಡಿದ ‘ಜೇಮ್ಸ್’ ನಿರ್ಮಾಪಕ
ಈ ಚಿತ್ರ ಯಶಸ್ಸು ಕಂಡಿದೆ. ಬಾಕ್ಸ್ ಆಫೀಸ್ನಲ್ಲೂ ಒಳ್ಳೆಯ ಗಳಿಕೆ ಮಾಡುತ್ತಿದೆ. ‘ಜೇಮ್ಸ್’ 25 ದಿನ ಪೂರೈಸಿದ ನಂತರದಲ್ಲಿ ಇದರ ಸಕ್ಸಸ್ಮೀಟ್ಅನ್ನು ಹೊಸಪೇಟೆಯಲ್ಲಿ ಆಚರಿಸಲು ನಿರ್ಧರಿಸಲಾಗಿದೆ.
ಪುನೀತ್ ರಾಜ್ಕುಮಾರ್ ನಟನೆಯ ‘ಜೇಮ್ಸ್’ ಸಿನಿಮಾ (James Movie) ತೆರೆಗೆ ಬಂದಿದೆ. ಈ ಸಿನಿಮಾಗೆ ಅಭಿಮಾನಿಗಳು ಅದ್ದೂರಿ ಸ್ವಾಗತವನ್ನೇ ನೀಡಿದ್ದಾರೆ. ಈ ಚಿತ್ರಕ್ಕೆ ಅಭಿಮಾನಿಗಳೇ ದೊಡ್ಡ ಮಟ್ಟದ ಪ್ರಚಾರ ನೀಡಿದ್ದಾರೆ. ಪುನೀತ್ ಹೀರೋ ಆಗಿ ಕಾಣಿಸಿಕೊಂಡ ಕೊನೆಯ ಸಿನಿಮಾ ಇದು. ಈ ಚಿತ್ರ ಯಶಸ್ಸು ಕಂಡಿದೆ. ಬಾಕ್ಸ್ ಆಫೀಸ್ನಲ್ಲೂ ಒಳ್ಳೆಯ ಗಳಿಕೆ ಮಾಡುತ್ತಿದೆ. ‘ಜೇಮ್ಸ್’ 25 ದಿನ ಪೂರೈಸಿದ ನಂತರದಲ್ಲಿ ಇದರ ಸಕ್ಸಸ್ಮೀಟ್ಅನ್ನು (James Success Meet ) ಹೊಸಪೇಟೆಯಲ್ಲಿ (Hosapete) ಆಚರಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ‘ಜೇಮ್ಸ್’ ನಿರ್ಮಾಪಕ ಕಿಶೋರ್ ಪತ್ತಿಕೊಂಡ ಮಾಹಿತಿ ನೀಡಿದ್ದಾರೆ. ‘ಶಿವರಾಜ್ಕುಮಾರ್ ಅವರು ಥಿಯೇಟರ್ ವಿಸಿಟ್ ಮಾಡಿ ಬಂದಿದ್ದಾರೆ. ಸಿನಿಮಾ 25 ದಿನ ಪೂರೈಸಿದ ನಂತರ ಹೊಸಪೇಟೆಯಲ್ಲಿ ಸಕ್ಸಸ್ಮೀಟ್ ಮಾಡೋಕೆ ಪ್ಲ್ಯಾನ್ ಇದೆ. ಶಿವರಾಜ್ಕುಮಾರ್ ಅವರು ಶೂಟಿಂಗ್ನಿಂದ ಬಂದ ನಂತರದಲ್ಲಿ ಈ ಬಗ್ಗೆ ಚರ್ಚೆ ಮಾಡಿ ನಿರ್ಧರಿಸುತ್ತೇವೆ’ ಎಂದಿದ್ದಾರೆ ಕಿಶೋರ್.
ಇದನ್ನೂ ಓದಿ: ‘ಲಕ್ಕಿ ಮ್ಯಾನ್’ ಚಿತ್ರದಲ್ಲಿ ಪುನೀತ್ ರಾಜ್ಕುಮಾರ್ ಅಭಿಮಾನಿಗಳಿಗೆ ಇದೆ ಸರ್ಪ್ರೈಸ್; ಏನದು?
James First Day Collection: ನಿಜಕ್ಕೂ ‘ಜೇಮ್ಸ್’ ಸಿನಿಮಾ ಗಳಿಸಿದ್ದೆಷ್ಟು? ಪಕ್ಕಾ ಲೆಕ್ಕ ಕೊಟ್ಟ ನಿರ್ಮಾಪಕ