ಹೊಳೆನರಸೀಪುರ ಬಳಿಯ ದೇವಸ್ಥಾನ ಉದ್ಘಾಟನಾ ಸಮಾರಂಭದಲ್ಲಿ ದೇವೇಗೌಡ, ರೇವಣ್ಣ, ಹೆಚ್ಡಿಕೆ ಜೊತೆಯಾಗಿ ಪಾಲ್ಗೊಂಡರು!
ಶುಕ್ರವಾರದಂದು ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಟಿ ಮಾಯಗೌಡನಹಳ್ಳಿಯಲ್ಲಿ ನಂಜುಂಡೇಶ್ವರ ದೇವಸ್ಥಾನದ ಉದ್ಘಾಟನಾ ಸಮಾರಂಭ ಏರ್ಪಡಿಸಲಾಗಿತ್ತು. ಸದರಿ ಕಾರ್ಯಕ್ರಮದಲ್ಲಿ ದೇವೇಗೌಡರ ಕುಟುಂಬ ಭಾಗಿಯಾಗಿತ್ತು.
ಹಾಸನ ಜಿಲ್ಲೆಯಲ್ಲಿ ನಡೆಯುವ ಯಾವುದೇ ಸಾರ್ವಜನಿಕ ಸಮಾರಂಭ, ಧಾರ್ಮಿಕ ಆಚರಣೆ ಮಾಜಿ ಪ್ರಧಾನಮಂತ್ರಿ ಹೆಚ್ ಡಿ ದೇವೇಗೌಡರ (HD Devegowda) ಕುಟುಂಬದ ಭಾಗವಹಿಸುವಿಕೆ ಇಲ್ಲದೆ ಪೂರ್ಣಗೊಳ್ಳಲಾರದು ಎಂದು ಹೇಳುತ್ತಾರೆ. ಈ ಮಾತಿನಲ್ಲಿ ಅತಿಶಯೋಕ್ತಿ ಇಲ್ಲ ಮಾರಾಯ್ರೇ. ದೇವೇಗೌಡರಿಂದ ಹಿಡಿದು ಪ್ರಜ್ವಲ್ ರೇವಣ್ಣನವರೆಗೆ (Prajwal Revanna) ಎಲ್ಲರೂ ದೈವಭಕ್ತರು, ಕುಟುಂಬದ ಎಲ್ಲ ಸದದ್ಯರ ಧಾರ್ಮಿಕ ನಿಷ್ಠೆ (religious loyalty) ಅನನ್ಯವಾದದ್ದು. ದೇವೇಗೌಡರು ಇಳಿವಯಸ್ಸಿನಲ್ಲೂ ತಮ್ಮ ಧರ್ಮಪತ್ನಿಯವರೊಂದಿಗೆ ರಾಜ್ಯದ ಹಲವಾರು ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಾರೆ. ಮಠಮಾನ್ಯಗಳಿಗೆ ಹೋಗಿ ಅಲ್ಲಿನ ಶ್ರೀಗಳ ಆಶೀರ್ವಾದ ಪಡೆಯುತ್ತಾರೆ. ಅಂತೆಯೇ ರೇವಣ್ಣ ಮತ್ತು ಕುಮಾರಸ್ವಾಮಿ ಅವರ ಕುಟುಂಬಗಳು ಸಹ. ರೇವಣ್ಣನವರಂತೂ ಬಾಕಿ ಸಮಯದಲ್ಲೂ ಕೈಯಲ್ಲಿ ನಿಂಬೆಹಣ್ಣು ಹಿಡಿದು ಓಡಾಡುತ್ತಿರುತ್ತಾರೆ.
ಇದನ್ನೆಲ್ಲ ಹೇಳೋದಿಕ್ಕೆ ಕಾರಣವಿದೆ. ಶುಕ್ರವಾರದಂದು ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಟಿ ಮಾಯಗೌಡನಹಳ್ಳಿಯಲ್ಲಿ ನಂಜುಂಡೇಶ್ವರ ದೇವಸ್ಥಾನದ ಉದ್ಘಾಟನಾ ಸಮಾರಂಭ ಏರ್ಪಡಿಸಲಾಗಿತ್ತು. ಸದರಿ ಕಾರ್ಯಕ್ರಮದಲ್ಲಿ ದೇವೇಗೌಡರ ಕುಟುಂಬ ಭಾಗಿಯಾಗಿತ್ತು. ಮಾಜಿ ಪ್ರಧಾನಿಗಳನ್ನು ನೀವು ವಿಡಿಯೋನಲ್ಲಿ ನೋಡಬಹುದು.
ಅವರು ಆಗಮಿಸಿದ ಕೆಲವೇ ನಿಮಿಷಗಳ ನಂತರ ರೇವಣ್ಣ ಮತ್ತು ಕುಮಾರಸ್ವಾಮಿ ಸಹ ದೇವಸ್ಥಾನಕ್ಕೆ ಆಗಮಿಸುತ್ತಾರೆ. ಗಣ್ಯರನ್ನು ನೋಡಲು ನೂಕುನುಗ್ಗಲು ಉಂಟಾಗದಿರಲಿ ಎಂಬ ಕಾರಣಕ್ಕೆ ಪೊಲೀಸರನ್ನು ನಿಯೋಜಿಸಲಾಗಿತ್ತು. ಆದರೂ ಜನ ಸೆಲ್ಫೀಗಳಿಗಾಗಿ ಗೌಡರ ಕುಟುಂಬದ ಸದಸ್ಯರನ್ನು ಮುಗಿಬೀಳುತ್ತಾರೆ. ವಿಡಿಯೋನಲ್ಲಿ ನೀವು ಅದನ್ನೂ ನೋಡಬಹುದು.
ಇದನ್ನೂ ಓದಿ: ಮಂಟಪಕ್ಕೆ ಬರುವ ವಧುವನ್ನು ತನ್ನ ನೃತ್ಯದ ಮೂಲಕ ಬರ ಮಾಡಿಕೊಂಡ ವರ; ಇಲ್ಲಿದೆ ನೆಟ್ಟಿಗರು ಮೆಚ್ಚಿಕೊಂಡ ವೈರಲ್ ವಿಡಿಯೋ