ಮಂಟಪಕ್ಕೆ ಬರುವ ವಧುವನ್ನು ತನ್ನ ನೃತ್ಯದ ಮೂಲಕ ಬರ ಮಾಡಿಕೊಂಡ ವರ; ಇಲ್ಲಿದೆ ನೆಟ್ಟಿಗರು ಮೆಚ್ಚಿಕೊಂಡ ವೈರಲ್ ವಿಡಿಯೋ

ವೈರಲ್​ ಆದ ವಿಡಿಯೋದಲ್ಲಿ ವರ ತನ್ನ ಮದುವೆಯಾಗುವ ಹುಡುಗಿಗಾಗಿ ವಿಶೇಷ ರೀತಿಯಲ್ಲಿ ನೃತ್ಯ ಮಾಡುವುದನ್ನು ಕಾಣಬಹುದು. ಮಂಟಪಕ್ಕೆ ಬರುವ ವಧು, ವರನ ನೃತ್ಯ ಕಂಡು ಆಶ್ಚರ್ಯಗೊಂಡಿದ್ದನ್ನು ನಾವು ಈ ವಿಡಿಯೋದಲ್ಲಿ ನೋಡಬಹುದು.

ಮಂಟಪಕ್ಕೆ ಬರುವ ವಧುವನ್ನು ತನ್ನ ನೃತ್ಯದ ಮೂಲಕ ಬರ ಮಾಡಿಕೊಂಡ ವರ; ಇಲ್ಲಿದೆ ನೆಟ್ಟಿಗರು ಮೆಚ್ಚಿಕೊಂಡ ವೈರಲ್ ವಿಡಿಯೋ
ನೃತ್ಯದ ಮೂಲಕ ಬರಮಾಡಿಕೊಂಡ ವರ
Follow us
TV9 Web
| Updated By: preethi shettigar

Updated on:Mar 17, 2022 | 8:41 PM

ಸಾಮಾಜಿಕ ಜಾಲತಾಣಗಳಲ್ಲಿ ಮದುವೆಗೆ ಸಂಬಂಧಿಸಿದ ವಿಡಿಯೋಗಳು ಇತ್ತೀಚೆಗೆ ಹೆಚ್ಚು ವೈರಲ್ ಆಗುತ್ತಿವೆ. ಕೆಲವು ವಿಡಿಯೋಗಳು ತುಂಬಾ ಭಾವನಾತ್ಮಕವಾಗಿರುತ್ತವೆ. ಇನ್ನೂ ಕೆಲವು ವಿಡಿಯೋಗಳು ತಮಾಷೆಯಾಗಿರುತ್ತವೆ. ಅದರಲ್ಲೂ ಮದುವೆ(Marriage) ಎಂದು ಬಂದಾಗ ನಡೆಯುವ ಕೆಲವು ಆಚರಣೆಗಳು ಅಥವಾ ಈ ವಿಶೇಷ ದಿನವನ್ನು ಮತ್ತಷ್ಟು ವಿಶೇಷಗೊಳಿಸುವ ನಿಟ್ಟಿನಲ್ಲಿ ಮಾಡುವ ಪ್ರಯತ್ನಗಳು ಎಲ್ಲರ ಗಮನ ಸೇಳೆಯುತ್ತದೆ. ಸಾಮಾನ್ಯವಾಗಿ ಮದುವೆಗಳಲ್ಲಿ ವಧುವಿನ(Bride) ಪ್ರವೇಶದ ಬಗ್ಗೆ ಜನರಲ್ಲಿ ಹೆಚ್ಚಿನ ಕುತೂಹಲ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ವಧು ನೃತ್ಯ(Dance) ಮಾಡುತ್ತಾ ಮದುವೆ ಮಂಟಪ ಪ್ರವೇಶಿಸುವುದು ಸಾಮಾನ್ಯ ಎನ್ನುವಂತೆ ಆಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ವಿಡಿಯೋದಲ್ಲಿ ವಧು ಮಂಟಪಕ್ಕೆ ಬರುವಾಗ ವರ ನೃತ್ಯ ಮಾಡುವ ಮೂಲಕ ಆಕೆಯನ್ನು ಸ್ವಾಗತಿಸಿದ್ದಾನೆ.

ವೈರಲ್​ ಆದ ವಿಡಿಯೋದಲ್ಲಿ ವರ ತನ್ನ ಮದುವೆಯಾಗುವ ಹುಡುಗಿಗಾಗಿ ವಿಶೇಷ ರೀತಿಯಲ್ಲಿ ನೃತ್ಯ ಮಾಡುವುದನ್ನು ಕಾಣಬಹುದು. ಮಂಟಪಕ್ಕೆ ಬರುವ ವಧು, ವರನ ನೃತ್ಯ ಕಂಡು ಆಶ್ಚರ್ಯಗೊಂಡಿದ್ದನ್ನು ನಾವು ಈ ವಿಡಿಯೋದಲ್ಲಿ ನೋಡಬಹುದು. ತನ್ನ ಬಾಳ ಸಂಗಾತಿಯಾಗುವವಳಿಗಾಗಿ ವಿಶೇಷ ರೀತಿಯಲ್ಲಿ ನೃತ್ಯ ಮಾಡಿದ ವಿಡಿಯೋ ಕಂಡ ನೆಟ್ಟಿಗರು ಕೂಡ ಖುಷಿಪಟ್ಟಿದ್ದಾರೆ.

ಸಲ್ಮಾನ್ ಖಾನ್ ಅವರ ತೆನು ಲೇಕೆ ಮೈ ಜವಾಂಗಾ ಹಾಡಿಗೆ ವರ ತನ್ನ ಸಹೋದರಿಯರೊಂದಿಗೆ ಸೇರಿ ನೃತ್ಯ ಮಾಡಿದ್ದು, ವಧು ಈ ನೃತ್ಯವನ್ನು ತುಂಬಾ ಖುಷಿಪಟ್ಟು ನೋಡುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದು.

ವೈರಲ್ ಆಗುತ್ತಿರುವ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋವನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಈಗಾಗಲೇ ಸಾವಿರಾರು ಲೈಕ್ಸ್​ ಬಂದಿದ್ದು, ಹೆಚ್ಚಿನ ವ್ಯೂವ್ಸ್​ ಪಡೆದುಕೊಂಡಿದೆ. ಇನ್ನು ನೆಟ್ಟಿಗರು ಕಮೆಂಟ್​ ಮೂಲಕ ತಮ್ಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ತುಂಬಾ ಸಂತೋಷವಾಗಿದೆ ಎಂದು ಒಬ್ಬರು ಕಮೆಂಟ್ ಮಾಡಿದರೆ, ಇನ್ನೋಬ್ಬರು ವಧುವಿನ ಅದೃಷ್ಟ ನಿಜವಾಗಿಯೂ ಚೆನ್ನಾಗಿದೆ ಎಂದಿದ್ದಾರೆ. ಮತ್ತೊಬ್ಬರು ನನ್ನ ವರನೂ ಮದುವೆಯ ದಿನ ಹೀಗೆ ನೃತ್ಯ ಮಾಡಬೇಕೆಂದು ನಾನು ಬಯಸುತ್ತೇನೆ ಎಂದು ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ:

ಒಂದೇ ರೀತಿಯ ಸೀರೆಯುಟ್ಟ ಮಹಿಳೆಯರ ನಡುವೆ ಅಮ್ಮನನ್ನು ಹುಡುಕಿದ ಮಗು: ವಿಡಿಯೋ ವೈರಲ್​

Viral Video: ನದಿಯಲ್ಲಿ ಹಿಡಿದ ಮೀನನ್ನು ಈಜುತ್ತಾ ದಡಕ್ಕೆ ಎಳೆದು ತಂದ ಹದ್ದು; ಇಲ್ಲಿದೆ ವೈರಲ್​ ವಿಡಿಯೋ

Published On - 8:40 pm, Thu, 17 March 22

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್