AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರೀತಿಗಾಗಿ ಅಪ್ಪ-ಅಮ್ಮನನ್ನೇ ಕೊಂದ ಮಗಳು; ಪ್ರಿಯಕರನ ಜೊತೆ ಸೇರಿ 17 ವರ್ಷದ ಯುವತಿಯಿಂದ ಡಬಲ್ ಮರ್ಡರ್!

ಒಂದೇ ವಾರದಲ್ಲಿ ಡಬಲ್ ಮರ್ಡರ್ ಆಗಿರುವುದು ಪೊಲೀಸರ ತಲೆ ಕೆಡಿಸಿತ್ತು. ಆ ಮನೆಯವರ ಮೇಲೆ ದ್ವೇಷ ಇರುವವರಾದರೆ ಆ 17 ವರ್ಷದ ಯುವತಿಯನ್ನೂ ಕೊಲೆ ಮಾಡುವ ಸಾಧ್ಯತೆಯಿದೆ ಎಂದು ಪೊಲೀಸರು ಲೆಕ್ಕಾಚಾರ ಹಾಕಿ ಆ ಮನೆಯ ಮೇಲೆ ಕಣ್ಣಿಟ್ಟಿದ್ದರು.

ಪ್ರೀತಿಗಾಗಿ ಅಪ್ಪ-ಅಮ್ಮನನ್ನೇ ಕೊಂದ ಮಗಳು; ಪ್ರಿಯಕರನ ಜೊತೆ ಸೇರಿ 17 ವರ್ಷದ ಯುವತಿಯಿಂದ ಡಬಲ್ ಮರ್ಡರ್!
ಪ್ರಾತಿನಿಧಿಕ ಚಿತ್ರ
TV9 Web
| Updated By: ಸುಷ್ಮಾ ಚಕ್ರೆ|

Updated on:Mar 17, 2022 | 8:26 PM

Share

ಬಿಜ್ನೋರ್: ಪ್ರೀತಿಯಲ್ಲಿ ಬಿದ್ದವರು ಕೆಲವೊಮ್ಮೆ ಎಂತಹ ಅಪಾಯಕಾರಿ ಕೆಲಸ ಬೇಕಾದರೂ ಮಾಡುತ್ತಾರೆ. ಪ್ರೀತಿಗಾಗಿ ಅವರಿಗೇ ಅರಿವಿಲ್ಲದೆ ಅಪಾಯವನ್ನು ಮೈಮೇಲೆ ಎಳೆದುಕೊಳ್ಳುವವರೂ ಇದ್ದಾರೆ. ಮಕ್ಕಳು ಹಾದಿ ತಪ್ಪಬಾರದು ಎಂದು ಬುದ್ಧಿ ಹೇಳುವ ಅಪ್ಪ-ಅಮ್ಮನೇ ಅವರ ಪಾಲಿಗೆ ವಿಲನ್ ಆಗಿಬಿಡುತ್ತಾರೆ. ಉತ್ತರ ಪ್ರದೇಶದಲ್ಲಿ 20 ವರ್ಷದ ಯುವಕನನ್ನು ಪ್ರೀತಿಸುತ್ತಿದ್ದ 17 ವರ್ಷದ ಅಪ್ರಾಪ್ತೆಗೆ ಆ ರೀತಿ ಮಾಡದಂತೆ ಆಕೆಯ ಅಪ್ಪ-ಅಮ್ಮ ಬುದ್ಧಿ ಹೇಳಿದ್ದರು. ಈ ವಿಷಯಕ್ಕೆ ಪೋಷಕರೊಂದಿಗೆ ಜಗಳವಾಡಿದ್ದ ಆಕೆ ಪ್ರೇಮಿಗಾಗಿ ಹೆತ್ತ ತಂದೆ-ತಾಯಿಯನ್ನೇ ಕೊಂದಿದ್ದಾಳೆ.

ಉತ್ತರ ಪ್ರದೇಶದಲ್ಲಿ ಬಿಜನೂರಿನಲ್ಲಿ ಈ ಭಯಾನಕ ಘಟನೆ ನಡೆದಿದೆ. ಅಮ್ರೋಹಾ ಎಂಬ ಗ್ರಾಮದ ಮನೆಯೊಂದರಲ್ಲಿ ಮಾರ್ಚ್ 6ರಂದು ಸುಮಾರು 44 ವರ್ಷದ ವ್ಯಕ್ತಿಯ ಶವ ಪತ್ತೆಯಾಗಿತ್ತು. ಆ ಮನೆಯಲ್ಲಿ ಅವರು ತಮ್ಮ ಮಗಳು ಮತ್ತು ಹೆಂಡತಿಯೊಂದಿಗೆ ವಾಸಸಿಸುತ್ತಿದ್ದರು. ಇದ್ದಕ್ಕಿದ್ದಂತೆ ಕೊಲೆಯಾಗಿದ್ದ ಅವರು ಸಾವನ್ನಪ್ಪಿದ ಒಂದು ವಾರಕ್ಕೆ ಅಂದರೆ ಜನವರಿ 15ರಂದು ಅವರ ಹೆಂಡತಿಯೂ ಅದೇ ರೀತಿಯಲ್ಲಿ ಮನೆಯೊಳಗೆ ಕೊಲೆಯಾಗಿದ್ದರು. ಇದರಿಂದ ಪೊಲೀಸರ ಅನುಮಾನ ಹೆಚ್ಚಾಗಿತ್ತು. ಎರಡೂ ಕೊಲೆಗೆ ಒಂದೇ ಕಾರಣವಿರಬಹುದು ಎಂಬುದು ಪೊಲೀಸರಿಗೆ ಖಚಿತವಾಗಿತ್ತು.

ಈ ಹಿನ್ನೆಲೆಯಲ್ಲಿ ತನಿಖೆಯನ್ನು ತೀವ್ರಗೊಳಿಸಿದ ಪೊಲೀಸರಿಗೆ ಆ ಮನೆಯಲ್ಲಿದ್ದ ಮೃತ ದಂಪತಿಯ ಮಗಳ ಮೇಲೆ ಅನುಮಾನ ಉಂಟಾಗಿತ್ತು. ಒಂದೇ ವಾರದಲ್ಲಿ ಡಬಲ್ ಮರ್ಡರ್ ಆಗಿರುವುದು ಪೊಲೀಸರ ತಲೆ ಕೆಡಿಸಿತ್ತು. ಆ ಮನೆಯವರ ಮೇಲೆ ದ್ವೇಷ ಇರುವವರಾದರೆ ಆ 17 ವರ್ಷದ ಯುವತಿಯನ್ನೂ ಕೊಲೆ ಮಾಡುವ ಸಾಧ್ಯತೆಯಿದೆ ಎಂದು ಪೊಲೀಸರು ಲೆಕ್ಕಾಚಾರ ಹಾಕಿ ಆ ಮನೆಯ ಮೇಲೆ ಕಣ್ಣಿಟ್ಟಿದ್ದರು. ಆದರೆ, ಅಪ್ಪ-ಅಮ್ಮನ ಕೊಲೆಯಾದರೂ ಆ ಆಘಾತ, ಬೇಸರ ಆ ಯುವತಿಯ ಮುಖದಲ್ಲಿ ಕಾಣದಿರುವುದು, ಆಕೆ ಮಾಮೂಲಿನಂತೆ ಓಡಾಡಿಕೊಂಡಿರುವುದನ್ನು ಗಮನಿಸಿದ ಪೊಲೀಸರು ಈ ಕೊಲೆಗಳ ಹಿಂದೆ ಆಕೆಯ ಕೈವಾಡವಿರಬಹುದು ಎಂದು ಅನುಮಾನಪಟ್ಟರು.

ಅದರಂತೆ ಆ ಯುವತಿಯನ್ನು ಪೊಲೀಸ್ ಠಾಣೆಗೆ ಕರೆಸಿ ವಿಚಾರಿಸಿದಾಗ ತಾನೇ ಅಪ್ಪ-ಅಮ್ಮನನ್ನು ಕೊಂದಿದ್ದಾಗಿ ಆಕೆ ಒಪ್ಪಿಕೊಂಡಿದ್ದಳು. 20 ವರ್ಷದ ಯುವಕನನ್ನು ಪ್ರೀತಿಸುತ್ತಿದ್ದ ಆಕೆಯ ಪ್ರೀತಿಗೆ ಅಪ್ಪ-ಅಮ್ಮ ಒಪ್ಪಿರಲಿಲ್ಲ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಂತಹದ್ದನ್ನೆಲ್ಲ ಮಾಡಬಾರದು, ಚೆನ್ನಾಗಿ ಓದಿ, ಕೆಲಸಕ್ಕೆ ಸೇರಿದ ಮೇಲೆ ಮದುವೆ ಮಾಡೋಣ ಎಂದು ಎಷ್ಟೇ ಹೇಳಿದರೂ ಕೇಳದೆ ಆಕೆ ಆತನೊಂದಿಗೆ ಸುತ್ತಾಡುತ್ತಿದ್ದಳು. ಈ ವಿಷಯಕ್ಕೆ ಮನೆಯಲ್ಲಿ ಸಾಕಷ್ಟು ಬಾರಿ ಜಗಳವೂ ಆಗಿತ್ತು ಎಂದು ಟೈಮ್ಸ್​ ಆಫ್ ಇಂಡಿಯಾ ವರದಿ ಮಾಡಿದೆ.

ಇದರಿಂದ ತನ್ನ ಪ್ರಿಯಕರನ ಜೊತೆ ಸೇರಿಕೊಂಡು ಆಕೆ ಡಬಲ್ ಮರ್ಡರ್ ಮಾಡಿದ್ದಾಳೆ. ಈ ಪ್ರಕರಣದಲ್ಲಿ 17 ವರ್ಷದ ಬಾಲಕಿ ಮತ್ತು ಆಕೆಯ ಪ್ರಿಯಕರನನ್ನು ಬಂಧಿಸಲಾಗಿದೆ. ಯುವತಿ ಅಪ್ರಾಪ್ತೆಯಾದ್ದರಿಂದ ಆಕೆಯನ್ನು ಬಾಲಾಪರಾಧಿಗೃಹಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Murder: ಪಬ್​ಜಿ ಆಟದ ಬಳಿಕ ಜಗಳವಾಗಿ ಮೂವರು ಗೆಳೆಯರಿಂದ 22 ವರ್ಷದ ವ್ಯಕ್ತಿಯ ಹತ್ಯೆ

Crime News: ಅತ್ಯಾಚಾರಿಯನ್ನು ಮರಕ್ಕೆ ಕಟ್ಟಿ, ಹೊಡೆದು ಕೊಂದ ಮಹಿಳೆಯರು!

Published On - 8:25 pm, Thu, 17 March 22

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ