AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏಳನೇ ವಯಸ್ಸಿನಲ್ಲಿ ಟೀಚರ್ ಅವಮಾನಿಸಿದಕ್ಕೆ ಅವನು 30 ವರ್ಷಗಳ ನಂತರ ಅಕೆಯನ್ನು 101 ಬಾರಿ ಇರಿದು ಕೊಂದ!

ಗುಂಟರ್ ಉವೆಂಟ್ಸ್ ಹೆಸರಿನ ಅಪರಾಧಿಗೆ 1990 ರಲ್ಲಿ ಅಂದರೆ ಅವನು 7 ವರ್ಷದ ಬಾಲಕನಾಗಿದ್ದಾಗ ಟೀಚರ್ ವರ್ಲಿನ್ಡೆನ್ ಮಾಡಿದ ಅವಹೇಳನಕಾರಿ ಕಾಮೆಂಟ್​ಗಳನ್ನು ಮರೆಯುವುದು ಸಾಧ್ಯವೇ ಅಗಿಲಿಲ್ಲವಂತೆ.

ಏಳನೇ ವಯಸ್ಸಿನಲ್ಲಿ ಟೀಚರ್ ಅವಮಾನಿಸಿದಕ್ಕೆ ಅವನು 30 ವರ್ಷಗಳ ನಂತರ ಅಕೆಯನ್ನು 101 ಬಾರಿ ಇರಿದು ಕೊಂದ!
ಗುಂಟರ್ ಉವೆಂಟ್ಸ್ ಮತ್ತು ಮರಿಯಾ ವರ್ಲಿನ್ಡೆನ್
TV9 Web
| Edited By: |

Updated on: Mar 18, 2022 | 10:10 AM

Share

ಬ್ರಸ್ಸೆಲ್ಸ್, ಬೆಲ್ಲಿಯಂ: ಇದೊಂದು ವಿಚಿತ್ರ ಮತ್ತು ವಿಸ್ಮಯಕಾರಿ ಸತ್ಯ ಘಟನೆ ಮಾರಾಯ್ರೇ. ನಮ್ಮಲ್ಲೊಂದು ಮಾತು ಹೇಳ್ತಾರೆ, ಹಾವಿನ ದ್ವೇಷ ಹನ್ನೆರಡು ವರ್ಷ ಅಂತ. ಈ ಉಕ್ತಿಯ ಮೇಲೆ ಒಂದು ಹಾಡನ್ನು ಬರೆಸಿದ ಕನ್ನಡದ ಖ್ಯಾತ ನಿರ್ದೇಶಕ ದಿವಂಗತ ಪುಟ್ಟಣ್ಣ ಕಣಗಾಲ್ ಅವರು ತಮ್ಮ ‘ನಾಗರಹಾವು’ ಚಿತ್ರದಲ್ಲಿ ಅದನ್ನು ಅಳವಡಿಸಿಕೊಂಡರು. ಚಿತ್ರದಲ್ಲಿ ಌಂಗ್ರಿ ಯಂಗ್ ಮ್ಯಾನ್ ರಾಮಾಚಾರಿಯ ಪಾತ್ರ ನಿರ್ವಹಿಸಿದ್ದ ದಿವಂಗತ ವಿಷ್ಣುವರ್ಧನ್ ಅವರ ಮೇಲೆ ಚಿತ್ರಿಸಿದ್ದ ‘ಹಾವಿನ ದ್ವೇಷ ಹನ್ನೆರಡು ವರುಷ, ನನ್ನ ರೋಷ ನೂರು ವರುಷ…,’ ಹಾಡು ಚಿತ್ರ ಬಿಡುಗಡೆಯಾದ 50 ವರ್ಷಗಳ ನಂತರವೂ ಜನಪ್ರಿಯವಾಗಿ ಉಳಿದಿದೆ. ಇದನ್ನೆಲ್ಲ ಯಾಕೆ ಹೇಳಬೇಕಾಗಿದೆಯೆಂದರೆ, ಬೆಲ್ಜಿಯಂನಲ್ಲಿ (Belgium) 37 ವರ್ಷದ ವ್ಯಕ್ತಿಯೊಬ್ಬ ತಾನು 7 ವರ್ಷದನಾಗಿದ್ದಾಗ ಅವನ ಟೀಚರ್ (teacher) ಕ್ಲಾಸಿನಲ್ಲಿ ಅವಮಾನ ಮಾಡಿದರೆಂಬ ಕಾರಣಕ್ಕೆ 30 ವರ್ಷಗಳ ನಂತರ ಅವರನ್ನು ಇರಿದು (stabbed) ಕೊಂದು ಸೇಡು ತೀರಿಸಿಕೊಂಡಿದ್ದಾನೆ!

ನಂಬಲಾಗುತ್ತಿಲ್ಲ ಅಲ್ಲವೇ. ಅಂದಹಾಗೆ ಅವನು ತನ್ನ ಟೀಚರ್ ಮರಿಯಾ ವರ್ಲಿನ್ಡೆನ್ ರನ್ನು 2020 ರಲ್ಲಿ ಅವನು ಕೊಂದಾಗ ಅವರ ವಯಸ್ಸು 59 ಅಗಿತ್ತು. ಆ ವಯಸ್ಕ ಟೀಚರನ್ನು 101 ಬಾರಿ ತಿವಿದು ಕೊಂದನೆಂದು ಅವನು ಬೆಲ್ಜಿಯಂ ಪೊಲೀಸರಿಗೆ ಗುರುವಾರದಂದು ನೀಡಿರುವ ತಪ್ಪೊಪ್ಪಿಗೆ ಹೇಳಿಕೆಯಲ್ಲಿ ತಿಳಿಸಿದ್ದಾನೆ. ಇದೆಂಥಾ ದ್ವೇಷ ಮತ್ತು ಪ್ರತೀಕಾರದ ಬೆಂಕಿ ಮಾರಾಯ್ರೇ!

ಗುಂಟರ್ ಉವೆಂಟ್ಸ್ ಹೆಸರಿನ ಅಪರಾಧಿಗೆ 1990 ರಲ್ಲಿ ಅಂದರೆ ಅವನು 7 ವರ್ಷದ ಬಾಲಕನಾಗಿದ್ದಾಗ ಟೀಚರ್ ವರ್ಲಿನ್ಡೆನ್ ಮಾಡಿದ ಅವಹೇಳನಕಾರಿ ಕಾಮೆಂಟ್​ಗಳನ್ನು ಮರೆಯುವುದು ಸಾಧ್ಯವೇ ಅಗಿಲಿಲ್ಲವಂತೆ.

ಗುಂಟರ್ 2020ರಲ್ಲೇ ವರ್ಲಿನ್ಡೆನ್ ರನ್ನು ಆಂಟ್ ವೆರ್ಪ್ ಬಳಿಯ ಹೆರೆಂಟಲ್ಸ್ ಎಂಬ ಸ್ಥಳದಲ್ಲಿರುವ ಮನೆಯಲ್ಲಿ ಕೊಂದರೂ ಪೊಲೀಸರಿಗೆ ಸುಮಾರು ಎರಡು ವರ್ಷಗಳ ಕಾಲ ಪ್ರಕರಣವನ್ನು ಬೇಧಿಸುವುದು ಸಾಧ್ಯವಾಗಿರಲಿಲ್ಲ. ಅವರು ನೂರಾರು ಜನರ ವಿಚಾರಣೆ ನಡೆಸಿ ಡಿ ಎನ್ ಎ ಪರೀಕ್ಷೆಗಳನ್ನು ನಡೆಸಿದಾಗ್ಯೂ ಹಂತಕನನ್ನು ಪತ್ತೆ ಮಾಡುವುದು ಸಾಧ್ಯವಾಗಿರಲಿಲ್ಲ. ವರ್ಲಿನ್ಡೆನ್ ರ ಪತಿ ಸಾಕ್ಷ್ಯ ಒದಗಿಸಲು ಒಂದು ಸಾರ್ವಜನಿಕ ಮನವಿಯನ್ನೂ ಮಾಡಿದ್ದರು.

ವರ್ಲಿನ್ಡೆನ್ ರಕ್ತಸಿಕ್ತ ದೇಹ ಅವರ ಮನೆಯ ಡೈನಿಂಗ್ ಟೇಬಲ್ ಬಳಿ ಸಿಕ್ಕಿತ್ತು. ಆದರೆ, ಟೇಬಲ್ ಮೇಲಿದ್ದ ಅವರ ಪರ್ಸ್ನಿಂದ ಹಣವಾಗಲೀ ಅಥಾವಾ ಇನ್ನಿತರ ವಸ್ತುಗಳಾಗಲೀ ನಾಪತ್ತೆಯಾಗಿರಲಿಲ್ಲ. ಹಾಗಾಗಿ ಅವರ ಕೊಲೆ ದರೋಡೆ ಕಾರಣಕ್ಕೆ ಆಗಿಲ್ಲವೆಂಬ ನಿರ್ಣಯಕ್ಕೆ ಪೊಲೀಸರು ಬಂದಿದ್ದರು.

ವರ್ಲಿನ್ಡೆನ್ ಅವರನ್ನು ಗುಂಟರ್ ಕೊಂದಿದ್ದು ನವೆಂಬರ್ 20, 2020 ರಂದು. ಕೊಲೆ ಮಾಡಿದ 16 ತಿಂಗಳುಗಳ ಬಳಿಕ ಅವನು ತನ್ನ ಆಪ್ತ ಸ್ನೇಹಿತನೊಬ್ಬನ ಮುಂದೆ ಟೀಚರನ್ನು ಕೊಂದ ವಿಷಯ ಹೇಳಿಕೊಂಡು ಬಿಟ್ಟಿದ್ದಾನೆ. ಅವನ ಈ ಆಪ್ತಮಿತ್ರ ಪೊಲೀಸರಿಗೆ ವಿಷಯ ತಿಳಿಸಿದ್ದಾನೆ. ರವಿವಾರದಂದು (ಮಾರ್ಚ್ 13) ಅವನನ್ನು ಬಂಧಿಸಲಾಗಿದೆ.

ಹತ್ಯೆ ನಡೆದ ಸ್ಥಳದಲ್ಲಿ ದೊರತ ಕುರುಹುಗಳೊಂದಿಗೆ ತಾಳೆ ಮಾಡಲು ಗುಂಟರ್ ತನ್ನ ಡಿ ಎನ್ ಎ ಪೊಲೀಸರಿಗೆ ನೀಡಿದಾಗ ಅದು ಮ್ಯಾಚ್ ಆಗಿದೆ. ಅವನು ಸ್ನೇಹಿತನ ಮುಂದೆ ಹತ್ಯೆ ನಡೆಸಿದನ್ನು ಹೇಳಿಕೊಂಡಿರದಿದ್ದರೂ ಪೊಲೀಸರಿಗೆ ಸಿಕ್ಕಿಬೀಳುತ್ತಿದ್ದ. ಯಾಕೆಂದರೆ, ವರ್ಲಿನ್ಡೆನ್ ಅವರಿಂದ ಶಿಕ್ಷಣ ಪಡೆದ ಎಲ್ಲ ವಿದ್ಯಾರ್ಥಿಗಳ ಜೆನೆಟಿಕ್-ಸ್ಯಾಂಪಲ್ ಗಳನ್ನು ಸಂಗ್ರಹಿಸುವ ಪ್ರಕ್ರಿಯೆ ಪೊಲೀಸರು ಅರಂಭಿಸಿದ್ದರು.

ತಾನು ನಡೆಸಿದ ಕೃತ್ಯದ ಸಮಗ್ರ ವಿವರವನ್ನು ಗುಂಟರ್ ನ್ಯಾಯಮೂರ್ತಿಗಳ ಮುಂದೆ ಹೇಳಿಕೊಂಡಿದ್ದಾನೆ. ಅವನ ಹೇಳಿಕೆಯನ್ನು ತಪ್ಪೊಪ್ಪಿಗೆ ಎಂದು ಪರಿಗಣಿಸಲಾಗಿದೆ. ಪ್ರಾಥಮಿಕ ಶಿಕ್ಷಣ ಹಂತದಲ್ಲಿ ತಾನು ವರ್ಲಿನ್ಡೆನ್ ಮಾಡಿದ ಅವಮಾನದಿಂದ ಬಹಳ ಹಿಂಸೆ ಅನುಭವಿಸಿದೆ ಎಂದು ಅವನು ಹೇಳಿಕೊಂಡಿದ್ದಾನೆ.

ಅವನ ಹೇಳಿಕೆ ಮತ್ತು ಪೊಲೀಸರು ನಡೆಸುತ್ತಿರುವ ತನಿಖೆಯಲ್ಲಿ ಎಷ್ಟು ಸಾಮ್ಯತೆ ಇದೆ ಅಂತ ನಾವು ಪರಿಶೀಲಿಸಬೇಕಿದೆ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

ಮಂಗಳವಾರದಂದು ಗುಂಟರ್ ನನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿತ್ತು. ಕೊಲೆ ಆರೋಪದಲ್ಲಿ ಅವನನ್ನು ಸೆರೆಯಲ್ಲಿಡಲಾಗಿದೆ.

ಬೆಲ್ಜಿಯಂ ಮಾಧ್ಯಮಗಳ ಪ್ರಕಾರ ಗುಂಟರ್ ಒಬ್ಬ ಧರ್ಮನಿಷ್ಠ ಕ್ರಿಶ್ಚಿಯನ್ ಆಗಿದ್ದು ನಿರಾಶ್ರಿತರಿಗೆ ತನ್ನ ಶಕ್ತಿಮೀರಿ ಸಹಾಯ ಮಾಡುತ್ತಿದ್ದ.

ಇದನ್ನೂ ಓದಿ:   Crime News: ಮೂರು ತಿಂಗಳ ಗರ್ಭಿಣಿ ಪತ್ನಿಗೆ ಡೀಸೆಲ್ ಸುರಿದು ಕೊಲೆಯತ್ನ, ಪುಟ್ಟ ಮಗಳಿಗೂ ಕಿರುಕುಳ; ಆರೋಪಿ ಬಾಬು ಅರೆಸ್ಟ್

Follow Us
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ರೈಲ್ವೆ ನಿಲ್ದಾಣಗಳಲ್ಲಿ ಆಹಾರ ಸೇವಿಸುವವರೇ ಹುಷಾರ್: ವಿಡಿಯೋ ನೋಡಿ
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
ED ತನಿಖೆಯಲ್ಲಿ KPSC ಕರ್ಮಕಾಂಡ ಸ್ಫೋಟಕ ಸಂಗತಿ ಬಯಲು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
‘ಟಾಕ್ಸಿಕ್’ ಸ್ವಾಗತಕ್ಕೆ ಸಿದ್ಧವಾಗಿವೆ ‘ರಾಕಿಂಗ್ ಸ್ಟಾರ್’ ಯಶ್ ಕಟೌಟ್​ಗಳು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ರೈಲ್ವೆ ನಿಲ್ದಾಣಗಳ ಆಹಾರ ಮಳಿಗೆಗಳಲ್ಲಿ ತಪಾಸಣೆ: ಯುಟಿ ಖಾದರ್ ಹೇಳಿದ್ದಿಷ್ಟು
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
ವಿಧಾನಸಭೆಯಲ್ಲಿ ಆಕ್ಷೇಪಾರ್ಹ ಪದ ಬಳಸಿದ ಸಚಿವ ಶಿವಲಿಂಗೇಗೌಡ
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
KPSC Scam: ಇಡಿಯಿಂದಲೂ ಅಭ್ಯರ್ಥಿಗಳಿಗೆ ಟೆಸ್ಟ್
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ಮೌನದಿಂದಲೇ ಆಧ್ಯಾತ್ಮ: ರಾಷ್ಟ್ರಭಕ್ತಿ ಬಿತ್ತುವ ಹವಾ ಮಲ್ಲಿನಾಥ ಮಹಾರಾಜರು
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ವರಮಹಾಲಕ್ಷ್ಮಿ ವ್ರತ:ಇಷ್ಟಾರ್ಥ ಸಿದ್ಧಿಗಾಗಿ ಪೂಜಾ ವಿಧಿವಿಧಾನಗಳ ಮಾರ್ಗದರ್ಶಿ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಚಿತ್ರರಂಗಕ್ಕೆ ಬಂದು 10 ವರ್ಷ, ಅಭಿಮಾನಿಗಳೊಟ್ಟಿಗೆ ನಟಿ ಆಶಿಕಾ ಸಂಭ್ರಮಾಚರಣೆ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ
ಹೊಳೆ ಆಲೂರು - ಅಮರಗೋಳ ರಸ್ತೆ ಸಂಪೂರ್ಣ ಅದ್ವಾನ