Crime News: ಮೂರು ತಿಂಗಳ ಗರ್ಭಿಣಿ ಪತ್ನಿಗೆ ಡೀಸೆಲ್ ಸುರಿದು ಕೊಲೆಯತ್ನ, ಪುಟ್ಟ ಮಗಳಿಗೂ ಕಿರುಕುಳ; ಆರೋಪಿ ಬಾಬು ಅರೆಸ್ಟ್

ಮೀನಾ ಕೂಲಿ‌ ಮಾಡಿ ಕೂಡಿಟ್ಟ ಹಣವನ್ನು ಬಾಬು ಕುಡಿದು ಹಾಳು ಮಾಡ್ತಿದ್ದ ಎಂದು ತಿಳಿದುಬಂದಿದೆ. ಈ ವೇಳೆ ಜಗಳವಾಗಿ ದುಡ್ಡು ಕೇಳಿದ್ರೆ ಮೈಮೇಲೆ ಡೀಸೆಲ್ ಸುರಿದು ಸತ್ತೋಗುತ್ತೇನೆ ಎಂದು ಮೀನಾ ಹೇಳಿದ್ದರು. ನೀನ್ಯಾಕೆ ಸಾಯ್ತೀಯಾ ನಾನೆ ಸಾಯಿಸ್ತೇನೆಂದು ಸ್ಟೌನಲ್ಲಿದ್ದ ಡೀಸೆಲ್ ಸುರಿದು ಬೆಂಕಿ ಹಚ್ಚಲಾಗಿದೆ.

Crime News: ಮೂರು ತಿಂಗಳ ಗರ್ಭಿಣಿ ಪತ್ನಿಗೆ ಡೀಸೆಲ್ ಸುರಿದು ಕೊಲೆಯತ್ನ, ಪುಟ್ಟ ಮಗಳಿಗೂ ಕಿರುಕುಳ; ಆರೋಪಿ ಬಾಬು ಅರೆಸ್ಟ್
ಬಾಬು, ಮೀನಾ ಹಾಗೂ ಮಗಳು
Follow us
TV9 Web
| Updated By: ganapathi bhat

Updated on: Mar 11, 2022 | 9:10 AM

ಬೆಂಗಳೂರು: ಮೂರು ತಿಂಗಳ ಗರ್ಭಿಣಿ ಪತ್ನಿಗೆ ಡೀಸೆಲ್ ಸುರಿದು ಕೊಲೆಯತ್ನ ನಡೆಸಿದ ಹೇಯ ಕೃತ್ಯ ನಗರದಲ್ಲಿ ಸಂಭವಿಸಿದೆ. ಎರಡೂವರೆ ವರ್ಷದ ಪುಟ್ಟ ಮಗುವನ್ನು ಕಚ್ಚಿ ವಿಕೃತಿ ಮೆರೆಯಲಾಗಿದೆ. ಗಾಯಾಳು ಪತ್ನಿ‌ ಮೀನಾ (23) ಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಬಾಳು ಬಂಗಾರವಾಗುತ್ತೆ ಎಂದು ಮೀನಾ ಎಂಬ ಯುವತಿ ಎರಡನೇ ಮದುವೆ ಆಗಿದ್ದರು. ಬಾಬು (37) ಎಂಬಾತನನ್ನ ಎರಡನೇ ಮದುವೆ ಆಗಿದ್ದರು. ಮೀನಾ ಕೂಲಿ‌ ಮಾಡಿ ಕೂಡಿಟ್ಟ ಹಣವನ್ನು ಬಾಬು ಕುಡಿದು ಹಾಳು ಮಾಡ್ತಿದ್ದ ಎಂದು ತಿಳಿದುಬಂದಿದೆ. ಈ ವೇಳೆ ಜಗಳವಾಗಿ ಘಟನೆ ಸಂಭವಿಸಿದೆ.

ಏಳು ವರ್ಷದ ಹಿಂದೆ ವಿಜಯಕಾಂತ ಎಂಬುವವರನ್ನ ವರಿಸಿದ್ದ ಮೀನಾಗೆ 3 ಜನ ಹೆಣ್ಣು ಮಕ್ಕಳಿದ್ದಾರೆ. ಆದರೆ ದುರದೃಷ್ಟವಷಾತ್ ಮೂರು ವರ್ಷದ ಹಿಂದೆ ವಿಜಯಕಾಂತ್ ತೀರಿಹೋಗಿದ್ದರು. ನಂತರ ಮೀನಾಗೆ ಬಾಬು ಎಂಬಾತನ ಪರಿಚಯವಾಗಿತ್ತು. ಆತ ಮದುವೆ ಆಗ್ತೀನಿ ಎಂದು ತಿಳಿಸಿದ್ದ. ಬಳಿಕ, ಇಬ್ಬರು ಮದುವೆ ಆಗಿ ಬೈಯಪ್ಪನಹಳ್ಳಿಯಲ್ಲಿ ಒಂದು ವರ್ಷದಿಂದ ವಾಸವಿದ್ದರು. ಆದರೆ, ಮೀನಾ ಕೂಲಿ‌ ಮಾಡಿ ಕೂಡಿಟ್ಟ ಹಣವನ್ನು ಬಾಬು ಕುಡಿದು ಹಾಳು ಮಾಡ್ತಿದ್ದ ಎಂದು ತಿಳಿದುಬಂದಿದೆ. ಈ ವೇಳೆ ಜಗಳವಾಗಿ ದುಡ್ಡು ಕೇಳಿದ್ರೆ ಮೈಮೇಲೆ ಡೀಸೆಲ್ ಸುರಿದು ಸತ್ತೋಗುತ್ತೇನೆ ಎಂದು ಮೀನಾ ಹೇಳಿದ್ದರು. ಇದಕ್ಕೆ ಪ್ರತಿಯಾಗಿ, ನೀನ್ಯಾಕೆ ಸಾಯ್ತೀಯಾ ನಾನೆ ಸಾಯಿಸ್ತೇನೆಂದು ಸ್ಟೌನಲ್ಲಿದ್ದ ಡೀಸೆಲ್ ಸುರಿದು ಬೆಂಕಿ ಹಚ್ಚಲಾಗಿದೆ.

ಮಾರ್ಚ್ 9 ರಂದು‌ ಘಟನೆ ನಡೆದಿದೆ. ಮೂರು ತಿಂಗಳ‌ ಗರ್ಭಿಣಿ ಆಗಿರುವ ಮೀನಾ ಸುಟ್ಟ ಗಾಯಗಳೊಂದಿಗೆ ಆಸ್ಪತ್ರೆಯಲ್ಲಿ‌ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೀನಾ ಮೊದಲ ಪತಿಗೆ ಜನಿಸಿದ್ದ ಪುಟ್ಟ ಹೆಣ್ಣು ಮಗುವನ್ನು ಕಚ್ಚಿ ವಿಕೃತಿ ಮೆರೆದಿರುವ ಬಗ್ಗೆಯೂ ಹೇಳಲಾಗಿದೆ. ಇದೀಗ ಘಟನೆ ಸಂಬಂಧ ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಬೈಯಪ್ಪನಹಳ್ಳಿ ಪೊಲೀಸರಿಂದ ಆರೋಪಿ ಬಾಬು ಬಂಧನ ಮಾಡಲಾಗಿದೆ.

ಸಿಲಿಕಾನ್ ಸಿಟಿಯಲ್ಲಿ ಸೈಕಲ್ ಕಳ್ಳನ ಹಾವಳಿ

ಕಾರ್, ಬೈಕ್ ಅಷ್ಟೇ ಅಲ್ಲಾ ಸಿಲಿಕಾನ್ ಸಿಟಿಯಲ್ಲಿ ಸೈಕಲ್ ಕಳ್ಳನ ಹಾವಳಿ ಕೂಡ ಜೋರಾಗಿದೆ. ಐಷಾರಾಮಿ ಸೈಕಲ್​ಗಳನ್ನೇ ಟಾರ್ಗೆಟ್ ಮಾಡಿ ಕಳ್ಳತನ ಮಾಡುತ್ತಿದ್ದ ಆರೋಪಿ ಬಂಧಿಸಲಾಗಿದೆ. ಡೆಕತ್ಲಾನ್ ಬೈಸಿಕಲ್ ಸೇರಿಸಂತೆ ಐಷಾರಾಮಿ ಸೈಕಲ್​ಗಳು ಆತನ ಟಾರ್ಗೆಟ್ ಆಗಿದ್ದವು. ಸೈಕಲ್ ಜೊತೆಗೆ ಕೆಲವು ಬೈಕ್ ಹ್ಯಾಂಡ್ ಲಾಕ್ ಮುರಿದು ಕಳ್ಳತನ ನಡೆಸುತ್ತಿದ್ದ. ಸೈಕಲ್ ಕದ್ದು ಹಾವಳಿ ಇಡ್ತಿದ್ದ ಆಸಾಮಿ ರಮೇಶ್ (21) ಎಂಬಾತನನ್ನು ಬಂಧಿಸಲಾಗಿದೆ. ಹುಳಿಮಾವು ಠಾಣೆ ಪೊಲೀಸರಿಂದ ಆರೋಪಿ ಅರೆಸ್ಟ್ ಮಾಡಲಾಗಿದೆ.

ಬಂಧಿತನಿಂದ 4.50 ಲಕ್ಷ ಮೌಲ್ಯಸ ಬೈಸಿಕಲ್, 4.40 ಲಕ್ಷ ಮೌಲ್ಯದ ಬೈಕ್ ವಶಕ್ಕೆ ಪಡೆಯಲಾಗಿದೆ. ಕದ್ದ ಬೈಕ್​ಗಳನ್ನು ಆರ್.ಸಿ ಬುಕ್ ತಡವಾಗಿ ಕೊಡೋದಾಗಿ ಪರಿಚಯಸ್ಥರಿಗೆ ಮಾರಾಟ ಮಾಡಿದ್ದ ಎಂದು ತಿಳಿದುಬಂದಿದೆ. ಕದ್ದ ಸೈಕಲ್ ಅನ್ನು ಫೇಸ್ ಬುಕ್ ನಲ್ಲಿ ಮಾರಾಟಕ್ಕಿದೆ ಎಂದು ಪೋಸ್ಟ್ ಮಾಡಿದ್ದ ಆರೋಪಿ. ಅದನ್ನು ಫೇಸ್ ಬುಕ್ ನಲ್ಲಿ ಗಮನಿಸಿದ್ದ ಸೈಕಲ್ ಮಾಲೀಕ, ನಂತರ ಹುಳಿಮಾವು‌ ಠಾಣೆಗೆ ಬಂದು ದೂರು ದಾಖಲಿಸಿದ್ದ. ದೂರು ಆಧರಿಸಿ‌ ಪೊಲೀಸರು ಆರೋಪಿಯ ಹೆಡೆಮುರಿ ಕಟ್ಟಿದ್ದಾರೆ.

ವಿಜಯಪುರ: ವಿದ್ಯುತ್ ತಂತಿ ತಗುಲಿ ಕಾರ್ಮಿಕ ಸಾವು

ವಾಣಿಜ್ಯ ಸಂಕೀರ್ಣ ಕಟ್ಟಡ ನಿರ್ಮಾಣದ ವೇಳೆ ನಿರ್ಮಾಣ ಕೆಲಸದಲ್ಲಿ ತೊಡಗಿದ್ದ ಕಾರ್ಮಿಕ ವಿದ್ಯುತ್ ತಂತಿ ತಗುಲಿ ಸಾವನ್ನಪ್ಪಿದ ಅವಘಡ ಸಂಭವಿಸಿದೆ. ನಿರ್ಮಾಣ ಹಂತದ ಕಟ್ಟಡದ ಪಕ್ಕದಲ್ಲೇ ಹಾಯ್ದಿದ್ದ ವಿದ್ಯುತ್ ತಂತಿಗಳು ತಾಗಿ, ಕಾರ್ಮಿಕ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ಪಟ್ಟಣದಲ್ಲಿ ಘಟನೆ ಸಂಭವಿಸಿದೆ. ಬಸವಮಬಾಗೇವಾಡಿ ಪಟ್ಟಣದ ಶಿವಾಜಿ ಗಲ್ಲಿ ನಿವಾಸಿ ಚಂದ್ರಕಾಂತ ಗೋಡೆಕಟ್ಟಿ (45) ಮೃತ ಕಾರ್ಮಿಕ. ಕೆಲಸ ಮಾಡುತ್ತಿದ್ದ ವೇಳೆ ಆಯತಪ್ಪಿ ವಿದ್ಯುತ್ ತಂತಿ ತಗುಲಿದ ಕಾರಣ ಅವಘಡ ನಡೆದಿದೆ. ಘಟನಾ ಸ್ಥಳಕ್ಕೆ ಬಸವನಬಾಗೇವಾಡಿ ಪೊಲೀಸರು ಭೇಟಿ ನೀಡಿದ್ದಾರೆ. ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಹುಬ್ಬಳ್ಳಿ: ಪಾರ್ಕಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬದ ನಡುವೆ ಪರಸ್ಪರ ಗಲಾಟೆ

ಪಾರ್ಕಿಂಗ್ ವಿಷಯಕ್ಕೆ ಸಂಬಂಧಿಸಿದಂತೆ ಎರಡು ಕುಟುಂಬದ ನಡುವೆ ಪರಸ್ಪರ ಗಲಾಟೆ ಉಂಟಾಗಿದೆ. ಹುಬ್ಬಳ್ಳಿಯ ಉಣಕಲ್ ಬಳಿ ಘಟನೆ ಸಂಭವಿಸಿದೆ. ಸಾರ್ವಜನಿಕರೊಬ್ಬರು ರಸ್ತೆಯಲ್ಲಿ ಕಾರ್ ಪಾರ್ಕ್ ಮಾಡಿ ಹೋಟೆಲ್ ಗೆ ಹೋಗಿದ್ದರು. ಇದನ್ನು ಪ್ರಶ್ನಿಸಿದ ಮನೆಯವರು ಕಾರಿನ ಗ್ಲಾಸ್ ಒಡೆದು ಕಾರ್ ಚಾಲಕನಿಗೆ ಹೊಡೆದಿದ್ದಾರೆ. ಬಳಿಕ ಕಾರ್ ಚಾಲಕ ಪುನಃ ತನ್ನ ಕುಟುಂಬದ ಜೊತೆಗೆ ಬಂದು ಜಗಳ ತಗೆದಿದ್ದಾನೆ. ಎರಡೂ ಕುಟುಂಬಗಳು ಪರಸ್ಪರ ದೊಣ್ಣೆ, ಕಲ್ಲಿನಿಂದ ಹೊಡೆದಾಡಿಕೊಂಡಿವೆ. ನಿನ್ನ ಸಂಜೆ ನಡೆದ ಘಟನೆಯ ವಿಡಿಯೋ ವೈರಲ್ ಆಗಿದೆ. ಇದೀಗ ಪ್ರಕರಣ ವಿದ್ಯಾನಗರ ಪೊಲೀಸ್ ಠಾಣೆ ಮೆಟ್ಟಿಲೇರಿದೆ.

ಇದನ್ನೂ ಓದಿ: Bengaluru Crime: ಈಶಾನ್ಯ ರಾಜ್ಯದ ಮಹಿಳೆಯರನ್ನು ತಂದು ವೇಶ್ಯಾವಾಟಿಕೆ; ಮೂವರ ಬಂಧನ

ಇದನ್ನೂ ಓದಿ: Bengaluru Crime: ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಬೈಕ​ನ್ನೇ ಕದ್ದ ಕಳ್ಳ, ತಡರಾತ್ರಿ ನಡೆದ ಕೊಲೆ ಪ್ರಕರಣದ 5 ಆರೋಪಿಗಳು ಅರೆಸ್ಟ್

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ