Bengaluru Crime: ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಬೈಕನ್ನೇ ಕದ್ದ ಕಳ್ಳ, ತಡರಾತ್ರಿ ನಡೆದ ಕೊಲೆ ಪ್ರಕರಣದ 5 ಆರೋಪಿಗಳು ಅರೆಸ್ಟ್
ಖದೀಮನ ಕಳ್ಳತನ ಕೃತ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಕೆಎಸ್ಆರ್ಪಿ 4ನೇ ಬೇಟಾಲಿಯನ್ ಹೆಡ್ ಕಾನ್ಸ್‌ಟೇಬಲ್ ಆಗಿರುವ ಉಮೇಶ್ ಬೈಕ್ ಕಳವಾಗಿದೆ. ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿಕೊಂಡು ಖದೀಮನಿಗೆ ಬಲೆ ಬೀಸಿದ್ದಾರೆ.
ಬೆಂಗಳೂರು: ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಉಮೇಶ್ ಎಂಬವರ ಬೈಕ್ನ್ನೇ ಕಳ್ಳನೊಬ್ಬ ಕದ್ದು ಪರಾರಿಯಾಗಿರುವ ಘಟನೆ ನಗರದಲ್ಲಿ ನಡೆದಿದೆ. ಇಲ್ಲಿನ ಕೋರಮಂಗಲದ ಮಹಾರಾಜ ಸಿಗ್ನಲ್ ಬಳಿ ಫೆಬ್ರವರಿ 9 ರಂದು ಘಟನೆ ನಡೆದಿದೆ. ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಪೊಲೀಸ್ ಕಾನ್ಸ್‌ಟೇಬಲ್ ಬ್ಯಾಂಕ್ಗೆ ಹೋಗಿ ಬರುವಷ್ಟರಲ್ಲಿ ಖದೀಮ ಕೈಚಳಕ ತೋರಿಸಿದ್ದಾನೆ. ಕೋರಮಂಗಲದ ಮಹಾರಾಜ ಸಿಗ್ನಲ್ ಬ್ಯಾಂಕ್ ಮುಂದೆ ಘಟನೆ ನಡೆದಿದೆ. ಖದೀಮನ ಕಳ್ಳತನ ಕೃತ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಕೆಎಸ್ಆರ್ಪಿ 4ನೇ ಬೇಟಾಲಿಯನ್ ಹೆಡ್ ಕಾನ್ಸ್‌ಟೇಬಲ್ ಆಗಿರುವ ಉಮೇಶ್ ಬೈಕ್ ಕಳವಾಗಿದೆ. ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿಕೊಂಡು ಖದೀಮನಿಗೆ ಬಲೆ ಬೀಸಿದ್ದಾರೆ.
ಇತ್ತ ಹುಳಿಮಾವು ಪೊಲೀಸರಿಂದ 8 ಕೋಟಿ ಮೌಲ್ಯದ ಹ್ಯಾಶಿಶ್ ಆಯಿಲ್, ಗಾಂಜಾ ವಶಕ್ಕೆ ಪಡೆದ ಪ್ರಕರಣಕ್ಕೆ ಸಂಬಂಧಿಸಿ ಇದೀಗ ಮತ್ತಷ್ಟು ಮಾಹಿತಿ ಲಭಿಸಿದೆ. 12 ಲೀಟರ್ 940 ಗ್ರಾಂ ಹ್ಯಾಶಿಶ್ ಆಯಿಲ್, 26 ಕೆಜಿ 250 ಗ್ರಾಂ ಗಾಂಜಾ ವಶಕ್ಕೆ ಪಡೆದಿದ್ದ ಪೊಲೀಸರಿಗೆ ಆರೋಪಿಗಳ ಮೊಬೈಲ್ನಲ್ಲಿ ಕೆಲವಷ್ಟು ವಿಡಿಯೋಗಳು ಲಭಿಸಿವೆ. ಮೊಬೈಲ್ ನಲ್ಲಿ ಮತ್ತೇರಿಸಕೊಳ್ತಿರೊ ವಿಡಿಯೋ ಸಿಕ್ಕಿದ್ದು ಆರೋಪಿಗಳು ಮೊಬೈಲ್ ಮೇಲೆ ಡ್ರಗ್ಸ್ ಹಾಕಿ ಮೂಗಿನ ಮೂಲಕ ಎಳೆದುಕೊಳ್ಳುತ್ತಿರುವುದು ಕಂಡುಬಂದಿದೆ. ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿ ಡ್ರಗ್ಸ್ ದಂಧೆ ನಡೆಸುತ್ತಿದ್ದ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಮಹಮ್ಮದ್ ಉಸ್ಮಾನ್ ಕೊಲೆ ಪ್ರಕರಣ; ಐವರು ಆರೋಪಿಗಳನ್ನು ಬಂಧಿಸಿದ ಪೊಲೀಸರು
ಬೆಂಗಳೂರಿನಲ್ಲಿ ತಡರಾತ್ರಿ ವ್ಯಕ್ತಿಯೊಬ್ಬನ ಕೊಲೆ ನಡೆದಿದೆ. ಬೆಂಗಳೂರಿನ ಪುಲಕೇಶಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಕೆಜಿ ಹಳ್ಳಿ ನಿವಾಸಿ ಮಹಮ್ಮದ್ ಉಸ್ಮಾನ್ ಕೊಲೆಯಾಗಿರುವ ವ್ಯಕ್ತಿ. ರಾತ್ರಿ ಹನ್ನೊಂದು ಗಂಟೆ ಸಮಯದಲ್ಲಿ ಮೋಹಿನ್ ಮತ್ತು ಉಸ್ಮಾನ್ ಎಂಬವರ ನಡುವೆ ಗಲಾಟೆ ನಡೆದಿತ್ತು. ಬಳಿಕ ಶಿವಾಜಿ ನಗರದಿಂದ ಅರೋಪಿಗಳು ಹುಡುಗರನ್ನು ಕರೆಸಿದ್ದರು. ಹುಡುಗಿ ವಿಚಾರಕ್ಕೆ ಇಬ್ಬರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.
ರಾತ್ರಿ ಹನ್ನೊಂದು ಮೂವತ್ತಕ್ಕೆ ಪುಲಕೇಶಿ ನಗರದ ಡೌನ್ಟೌನ್ ಬಳಿ ಕೊಲೆ ನಡೆದಿದೆ. ಬೆಳಗಿನ ಜಾವ ಕೊಲೆ ಅರೋಪಿಗಳ ಬಂಧನಕ್ಕೆ ತೆರಳಿದ್ದ ಪೊಲೀಸರ ಮೇಲೂ ಆರೋಪಿ ಅಟ್ಯಾಕ್ ಮಾಡಲು ಯತ್ನಿಸಿದ್ದ. ಪೊಲೀಸರು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗಲು ಸೂಚಿಸಿದ್ದರು. ಆಗಲೂ ಹಲ್ಲೆಗೆ ಮುಂದಾದ ಆರೋಪಿಗಳಾದ ಸೈಯದ್ ಮೋಹಿನ್ ಮತ್ತು ಅದ್ನಾನ್ ಖಾನ್ ಕಾಲುಗಳಿಗೆ ಗುಂಡು ಹಾರಿಸಿ ಅರೆಸ್ಟ್ ಮಾಡಲಾಗಿದೆ. ಬಳಿಕ ಉಳಿದ ಮೂರು ಅರೋಪಿಗಳನ್ನು ಬಂಧಿಸಲಾಗಿದೆ.
ಇದನ್ನೂ ಓದಿ: Crime News: ಬೆಂಗಳೂರಿನಲ್ಲಿ ಮುಂಬೈನ ಗ್ಯಾಂಗ್ಸ್ಟರ್ ಬಂಧನ, ಮೈಸೂರು ದೇವು ಹತ್ಯೆ ಪ್ರಕರಣದ 11 ಆರೋಪಿಗಳಿಗೆ ಜೀವಾವಧಿ ಶಿಕ್ಷೆ
ಇದನ್ನೂ ಓದಿ: Bengaluru Crime: ಹಣ, ಚಿನ್ನ ಮುಟ್ಟದೆ ಕೇವಲ ಲ್ಯಾಪ್ಟಾಪ್, ಮೊಬೈಲ್ ಕದಿಯುವ ಡಿಫರೆಂಟ್ ಕಳ್ಳ ಪೊಲೀಸರ ಬಲೆಗೆ!
Published On - 8:39 am, Wed, 9 March 22