AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Accident: ಟೇಕಲ್​ ರೈಲು ನಿಲ್ದಾಣದಲ್ಲಿ ರೈಲು ದುರಂತ, ಯುವಕನ ಪ್ರಾಣ ತೆಗೆದ ಮೊಬೈಲ್​ ಹೆಡ್​ಫೋನ್​

ಎಕ್ಸ್‌ಪ್ರೆಸ್ ರೈಲು ಡಿಕ್ಕಿಯಾಗಿ ವ್ಯಕ್ತಿ ಸಾವನ್ನಪ್ಪಿದ್ದಾರೆ. ಅವಗಡಕ್ಕೆ ಸ್ಟೇಷನ್ ಮಾಸ್ಟರ್ ನಿರ್ಲಕ್ಷ್ಯ ಎಂದು ಸ್ಥಳೀಯರ ಆಕ್ರೋಶ ಕೇಳಿಬಂದಿದೆ. ಸ್ಥಳಕ್ಕೆ ಕಂಟ್ರೋನ್ಮೆಂಟ್ ಪೊಲೀಸರು ಭೇಟಿ ನೀಡಿದ್ದಾರೆ.

Accident: ಟೇಕಲ್​ ರೈಲು ನಿಲ್ದಾಣದಲ್ಲಿ ರೈಲು ದುರಂತ, ಯುವಕನ ಪ್ರಾಣ ತೆಗೆದ ಮೊಬೈಲ್​ ಹೆಡ್​ಫೋನ್​
ಎಕ್ಸ್‌ಪ್ರೆಸನ್ ರೈಲು ಡಿಕ್ಕಿ
TV9 Web
| Updated By: ಆಯೇಷಾ ಬಾನು|

Updated on:Mar 09, 2022 | 7:54 PM

Share

ಕೋಲಾರ: ಜಿಲ್ಲೆಯ ಮಾಲೂರು ತಾಲೂಕು ಟೇಕಲ್​ ರೈಲು ನಿಲ್ದಾಣದಲ್ಲಿ ಮಾರ್ಚ್​-9 ರ ಬೆಳಿಗ್ಗೆ ನಡೆದ ರೈಲು ಅಪಘಾತದಲ್ಲಿ ಓರ್ವ ಯುವಕ ಸಾವನ್ನಪ್ಪಿದ್ದಾರೆ. ಹತ್ತಾರು ಜನರು ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ. ನಿಜಕ್ಕೂ ಆ ಘಟನೆ ನೆನೆಸಿಕೊಂಡರೆ ಅದೃಷ್ಟವಶಾತ್​ ದೊಡ್ಡದೊಂದು ದುರಂತ ತಪ್ಪಿದೆ ಎಂದು ಎಲ್ಲರಿಗೂ ಅನಿಸುತ್ತದೆ. ಅಲ್ಲಿದ್ದ ನೂರಾರು ಜನರು ರೈಲು ಬಂದ ಕೂಡಲೇ ಚೆಲ್ಲಾಪಿಲ್ಲಿಯಾಗಿ ಓಡಿಹೋಗಿ ತಮ್ಮ ಪ್ರಾಣವನ್ನು ಉಳಿಸಿಕೊಂಡರು. ಆದರೆ ಆ ಒಬ್ಬ ಯುವಕ ಮಾತ್ರ ನೂರಾರು ಜನರ ಎದುರೇ ರೈಲಿಗೆ ಸಿಕ್ಕಿ ಸಾವನ್ನಪ್ಪಿದ ಅಷ್ಟಕ್ಕೂ ಅವನ ಸಾವಿಗೆ ಕಾರಣವಾಗಿದ್ದು ಅವನ ಬಳಿ ಇದ್ದ ಮೊಬೈಲ್​ ಮತ್ತು ಹೆಡ್​ ಫೋನ್​ ಅನ್ನೋದು ತಿಳಿದು ಬಂದಿದೆ.

ಏನದು ರೈಲು ದುರಂತ ನಿಜಕ್ಕೂ ಆಗಿದ್ದೇನು ಮಾರ್ಚ್​-9 ರಂದು ಕೆಜಿಎಫ್​ ಮಾರಿಕುಪ್ಪಂನಿಂದ ಹೊರಟ ಸ್ವರ್ಣ ಪ್ಯಾಸೆಂಜರ್​ ರೈಲು ಸಾವಿರಾರು ಪ್ರಯಾನಿಕರನ್ನು ಹೊತ್ತು ಬೆಂಗಳೂರಿನತ್ತ ಹೊರಟಿತ್ತು. ಆದರೆ ಮಾರ್ಗ ಮಧ್ಯೆ ಅಂದರೆ ಕೋಲಾರ ಜಿಲ್ಲೆ ಮಾಲೂರು ತಾಲೂಕು ಟೇಕಲ್ ರೈಲು ನಿಲ್ದಾಣದಲ್ಲಿ ಸಿಗ್ನಲ್​ ಸಮಸ್ಯೆಯಿಂದ ಸ್ವರ್ಣ ಪ್ಯಾಸೆಂಜರ್​ ರೈಲು ಸುಮಾರು ಒಂದು ಗಂಟೆಕಾಲ ನಿಂತಲ್ಲೇ ನಿಂತಿತ್ತು. ಈ ವೇಳೆ ರೈಲಿನಲ್ಲಿದ್ದ ಪ್ರಯಾಣಿಕರೆಲ್ಲ ರೈಲಿನಿಂದ ಇಳಿದು ಅಲ್ಲೇ ಪಕ್ಕದಲ್ಲಿದ್ದ ರೈಲು ಹಳಿಗಳ ಮೇಲೆ ಮತ್ತು ಪ್ಲಾಟ್​ ಫಾರಂ ಮೇಲೆ ಕುಳಿತಿದ್ದರು. ಎಲ್ಲರೂ ಬೆಳಿಗಿನ ಕೆಲಸಕ್ಕೆ ಹೋಗಲು ತಡವಾಯ್ತು ಎಂದು ತಮ್ಮದೇ ಮಾನಸಿಕ ಒತ್ತಡದಲ್ಲಿ ಕುಳಿತಿದ್ದರು. ಈ ವೇಳೆ ಏಕಾಏಕಿ ಮೈಸೂರಿನಿಂದ ಚೆನೈ ಕಡೆ ಹೊರಟಿದ್ದ ಶತಾಬ್ದಿ ಎಕ್ಸ್‌ಪ್ರೆಸ್‌ ರೈಲು ದಿಡೀರನೆ ಬಂದಿದೆ. ಈ ವೇಳೆ ಅಲ್ಲೇ ರೈಲು ಹಳಿಗಳ ಮೇಲೆ ಕುಳಿತಿದ್ದ ನೂರಾರು ಜನ ಪ್ರಯಾಣಿಕರು ಜೀವ ಉಳಿಸಿಕೊಳ್ಳಲು ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ. ಆದರೆ ಬಂಗಾರಪೇಟೆ ಪಟ್ಟಣದ ನಿವಾಸಿ ಶಹಬಾಜ್​ ಅಹಮದ್​ ಎಂಬಾತ ಮಾತ್ರ ವೇಗವಾಗಿ ಬಂದ ರೈಲಿಗೆ ಸಿಲುಕಿ ನೂರಾರು ಜನರ ಮುಂದೆ ಪ್ರಾಣಬಿಟ್ಟಿದ್ದಾನೆ.

ಹೆಡ್​ ಫೋನ್​ ಹಾಕಿಕೊಂಡು ಮೊಬೈಲ್​ನಲ್ಲಿ ಮಾತನಾಡುತ್ತಿದ್ದ ಯುವಕ ಟೇಕಲ್​ ರೈಲು ನಿಲ್ದಾಣದಲ್ಲಿ ರೈಲು ಸಿಗ್ನಲ್​ ಯಾವಾಗ ಸರಿಹೋಗುತ್ತೋ, ನಾವೆಲ್ಲಾ ಯಾವಾಗ ನಮ್ಮ ಕೆಲಸಗಳಿಗೆ ಹೋಗುತ್ತೇವೋ ಎಂದು ನೂರಾರು ಜನ ಪ್ರಯಾಣಿಕರು ರೈಲು ಹಳಿಗಳ ಮೇಲೆಯೇ ಕುಳಿತು ಕಾಯುತ್ತಿದ್ದಾರೆ, ಬಂಗಾರಪೇಟೆಯ ಶಹಬಾಜ್​ ಮಾತ್ರ ಹೆಡ್​ ಪೋನ್​ ಹಾಕಿಕೊಂಡು ಮೊಬೈಲ್​ ನಲ್ಲಿ ಮಾತಾಡಿಕೊಂಡು ಹಳಿಗಳ ಮೇಲೆ ಕುಳಿತಿದ್ದ ಈವೇಳೆ ಪೋನ್​ನಲ್ಲಿ ಮಾತಾಡುತ್ತಾ ಮೈಮರೆತಿದ್ದ, ಕಣ್ಣು ಮುಚ್ಚಿ ತೆರೆಯುವಷ್ಟರಲ್ಲಿ ಶರವೇಗದಲ್ಲಿ ಬಂದ ಶತಾಬ್ದಿ ರೈಲು ಕಂಡು ಅಲ್ಲಿದ್ದವರು ಚಿಲ್ಲಾಪಿಲ್ಲಿಯಾಗಿ ಓಡಿ ತಮ್ಮ ಜೀವ ಉಳಿಸಿಕೊಂಡರು ಆದರೆ ಪೋನ್​ ಸಂಬಾಷಣೆಯಲ್ಲಿ ಮೈ ಮರೆತಿದ್ದ ಶಹಬಾಜ್​ ಶತಾಬ್ದಿ ರೈಲಿಗೆ ಸಿಲುಕಿ ಸಾವನ್ನಪ್ಪಿದ್ದಾನೆ.

ರೈಲು ನಿಲ್ದಾಣದ ಸ್ಟೇಷನ್​ ಮಾಸ್ಟರ್​ ನಿರ್ಲ್ಯಕ್ಷ ಇನ್ನು ಘಟನೆ ನಂತರ ಅಲ್ಲಿದ್ದ ನೂರಾರು ಜನ ಪ್ರಯಾಣಿಕರು ಏಕಾಏಕಿ ಟೇಕಲ್​ ರೈಲು ನಿಲ್ದಾಣದ ಸ್ಟೇಷನ್​ ಮಾಸ್ಟರ್​ ಮೇಲೆ ಆಕ್ರೋಶ ವ್ಯಕ್ತ ಪಡಿಸಿದರು, ರೈಲು ಬರುವ ಮುನ್ಸೂಚನೆ ನೀಡದೆ, ಕನಿಷ್ಠ ಬೆಲ್​ ಹೊಡೆದಿದ್ದರೆ ಅಲ್ಲಿದ್ದ ಪ್ರಯಾಣಿಕರೆಲ್ಲಾ ಜಾಗೃತರಾಗಿ ದೂರ ಹೋಗುತ್ತಿದ್ದರು ಆದರೆ ಸ್ಟೇಷನ್​ ಮಾಸ್ಟರ್​ ಹಾಗೂ ಸಿಬ್ಬಂದಿಗಳು ನಿರ್ಲಕ್ಷ್ಯದಿಂದಾಗಿ ರೈಲು ಬರುವ ಮುನ್ಸೂಚನೆ ತಿಳಿದಯದೆ ಹತ್ತಾರು ಜನರು ಪ್ರಾಣ ಕಳೆದುಕೊಳ್ಳುವ ಸ್ಥಿತಿ ನಿರ್ಮಾಣವಾಗಿತ್ತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಧಾರವಾಡ: ರೈಲಿನಲ್ಲಿ ಪ್ರಯಾಣಿಕನಿಗೆ ಚಾಕು ಇರಿದು ದರೋಡೆ; ಆರೋಪಿ ಬಂಧನ

ರೈಲಿನಲ್ಲಿ ಪ್ರಯಾಣಿಕನಿಗೆ ಚಾಕು ಇರಿದು ದರೋಡೆ ಮಾಡಿದ್ದ ಆರೋಪಿ ಮೊಹಮ್ಮದ್ ರಫೀಕ್ (26) ಎಂಬಾತನನ್ನು ಬಂಧಿಸಲಾಗಿದೆ. ಘಟನೆ ಸಂಬಂಧ ಓರ್ವ ಅಪ್ರಾಪ್ತನನ್ನು ಹುಬ್ಬಳ್ಳಿ ರೈಲ್ವೆ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಫೆಬ್ರವರಿ 23 ರಂದು ಬೆಳಗಾವಿ- ಬೆಂಗಳೂರು ಎಕ್ಸ್‌ಪ್ರೆಸ್‌ ರೈಲಿನಲ್ಲಿ ದರೋಡೆ ಮಾಡಿದ್ದರು.

ನೆಲಮಂಗಲ: ಬೈಕ್​ಗೆ ಬಸ್ ಡಿಕ್ಕಿ; ಸವಾರ ಸ್ಥಳದಲ್ಲೇ ಸಾವು

ಬೈಕ್​ಗೆ ಹಿಂಬದಿಯಿಂದ ಬಸ್ ಡಿಕ್ಕಿ ಆಗಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನಲ್ಲಿ ನಡೆದಿದೆ. ಇಲ್ಲಿನ ರಾಷ್ಟ್ರೀಯ ಹೆದ್ದಾರಿ 4, ಗುಂಡೇನಹಳ್ಳಿ ಗ್ರಾಮದ ಬಳಿ ಘಟನೆ ಸಂಭವಿಸಿದೆ. ಕೆರೆಕತ್ತಿಗನೂರು ಗ್ರಾಮದ ರಾಮಯ್ಯ (65) ಮೃತ ದುರ್ದೈವಿ. ಶ್ರೀಶಿವಗಂಗಾ ಟ್ರಾವಲ್ಸ್​ಗೆ ಸೇರಿದ ಖಾಸಗಿ ಬಸ್ ಡಿಕ್ಕಿ ಆಗಿದ್ದು, ಅಪಘಾತ ಬಳಿಕ ಬಸ್ ನಿಲ್ಲಿಸಿ ಚಾಲಕ ಪರಾರಿ ಆಗಿದ್ದಾರೆ. ನೆಲಮಂಗಲ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಬಳ್ಳಾರಿ: ವೇಗವಾಗಿ ಬಂದ ಲಾರಿ ಟೋಲ್ ಗೇಟ್​ಗೆ ಡಿಕ್ಕಿ

ವೇಗವಾಗಿ ಬಂದ ಲಾರಿ ಟೋಲ್ ಗೇಟ್​ಗೆ ಡಿಕ್ಕಿ ಆದ ಘಟನೆ ಬಳ್ಳಾರಿ ಜಿಲ್ಲೆಯ ಸಂಡೂರು ಬಳಿಯ ಬಾವಿಹಳ್ಳಿ ಟೋಲ್ ಬಳಿ ಸಂಭವಿಸಿದೆ. ಲಾರಿ ಡಿಕ್ಕಿ ಆಗಿ ಟೋಲ್ ಪ್ಲಾಜಾ ಸಂಪೂರ್ಣವಾಗಿ ಧ್ವಂಸವಾಗಿದೆ. ಕಳೆದ ರಾತ್ರಿ 2 ಗಂಟೆ ಸುಮಾರಿಗೆ ಲಾರಿ ಟೋಲ್​ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಟೋಲ್ ಸಿಬ್ಬಂದಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಲಾರಿ ಬಿಟ್ಟು ಚಾಲಕ ಪರಾರಿಯಾಗಿದ್ದಾರೆ. ಸಂಡೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಭಾರಿ ಮಳೆಗೆ ಮಂಗಳೂರಿನ ರೋಝಾರಿಯೋ ರಸ್ತೆಯಲ್ಲಿ ಲಾರಿ ಮೇಲೆ ಉರುಳಿಬಿದ್ದ ಬೃಹತ್ ಮರ

ದಕ್ಷಿಣ ಕನ್ನಡದ ಹಲವೆಡೆ ಕಳೆದ ರಾತ್ರಿಯಿಂದ ಭಾರಿ ಮಳೆ ಉಂಟಾಗಿದೆ. ಮಂಗಳೂರಿನ ರೋಝಾರಿಯೋ ರಸ್ತೆಯಲ್ಲಿ ಲಾರಿ ಮೇಲೆ ಬೃಹತ್ ಮರವೊಂದು ಉರುಳಿಬಿದ್ದಿದೆ. ಅದೃಷ್ಟವಶಾತ್ ಲಾರಿ ಚಾಲಕ ಅಪಾಯದಿಂದ ಪಾರಾಗಿದ್ದಾರೆ. ಬಿಎಸ್‌ಎನ್‌ಎಲ್ ಕಾಂಪೌಂಡ್ ಮೇಲೆ ಬೃಹತ್ ಮರ ಉರುಳಿಬಿದ್ದಿದೆ.

ಇದನ್ನೂ ಓದಿ: Bengaluru Crime: ಪೊಲೀಸ್ ಹೆಡ್ ಕಾನ್ಸ್‌ಟೇಬಲ್ ಬೈಕ​ನ್ನೇ ಕದ್ದ ಕಳ್ಳ, ತಡರಾತ್ರಿ ನಡೆದ ಕೊಲೆ ಪ್ರಕರಣದ 5 ಆರೋಪಿಗಳು ಅರೆಸ್ಟ್

ಇದನ್ನೂ ಓದಿ: Suicide: ಪುತ್ರ ನಿಂದಿಸಿದ ಎಂದು ತಂದೆ ಆತ್ಮಹತ್ಯೆ, ತಂದೆ ಸಾವಿನ ಸುದ್ದಿ ಕೇಳಿ ಪುತ್ರನೂ ನೇಣಿಗೆ ಶರಣು

Published On - 11:20 am, Wed, 9 March 22

ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​