Crime News: ಬೆಂಗಳೂರಿನಲ್ಲಿ ಮುಂಬೈನ ಗ್ಯಾಂಗ್​ಸ್ಟರ್ ಬಂಧನ, ಮೈಸೂರು ದೇವು ಹತ್ಯೆ ಪ್ರಕರಣದ 11 ಆರೋಪಿಗಳಿಗೆ ಜೀವಾವಧಿ ಶಿಕ್ಷೆ

ದೇವು ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ 11 ಮಂದಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 32 ಸಾವಿರ ರೂಪಾಯಿ ದಂಡ ವಿಧಿಸಿ ಮೈಸೂರು ಜಿಲ್ಲಾ ಪ್ರಧಾನ ಜಿಲ್ಲಾ ನ್ಯಾಯಾಧೀಶ ಎಂ ಎಲ್ ರಘುನಾಥ್ ತೀರ್ಪು ನೀಡಿದ್ದಾರೆ. 2016ರಲ್ಲಿ ಪಡುವಾರಹಳ್ಳಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದ ಆರೋಪಿಗಳಿಗೆ ಶಿಕ್ಷೆ ನೀಡಲಾಗಿದೆ.

Crime News: ಬೆಂಗಳೂರಿನಲ್ಲಿ ಮುಂಬೈನ ಗ್ಯಾಂಗ್​ಸ್ಟರ್ ಬಂಧನ, ಮೈಸೂರು ದೇವು ಹತ್ಯೆ ಪ್ರಕರಣದ 11 ಆರೋಪಿಗಳಿಗೆ ಜೀವಾವಧಿ ಶಿಕ್ಷೆ
ಮುಂಬೈನ ಗ್ಯಾಂಗ್​ಸ್ಟರ್ ಬಂಧನ
Follow us
TV9 Web
| Updated By: ganapathi bhat

Updated on: Mar 08, 2022 | 8:57 AM

ಬೆಂಗಳೂರು: ಅತ್ತಿಬೆಲೆ ಪೊಲೀಸರಿಂದ ಮುಂಬೈ​ನ ಗ್ಯಾಂಗ್​ಸ್ಟರ್​ ಬಂಧಿಸಲಾಗಿದೆ. ಗ್ಯಾಂಗ್​ಸ್ಟರ್​ ಅಬ್ದುಲ್‌ ಅಜೀಜ್ ಖಾನ್ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಕೊಲೆ‌, ದರೋಡೆ, ಬೆದರಿಕೆ, ಡ್ರಗ್ಸ್ ಪ್ರಕರಣಗಳು ಸೇರಿ ಒಟ್ಟು 37‌ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಅಬ್ದುಲ್‌ ಅಜೀಜ್ ಖಾನ್ ಬಂಧನ ಮಾಡಲಾಗಿದೆ. ಅತ್ತಿಬೆಲೆ ರೆಸ್ಟೋರೆಂಟ್​ನಲ್ಲಿ ಅಡಗಿದ್ದ ವೇಳೆ ದಾಳಿ ಮಾಡಿ ಸೆರೆ ಹಿಡಿಯಲಾಗಿದೆ. ಗ್ಯಾಂಗ್​ಸ್ಟರ್​ ಬಳಿ ಪಿಸ್ತೂಲ್, ನಾಲ್ಕು ಜೀವಂತ ಗುಂಡು ವಶಕ್ಕೆ ಪಡೆಯಲಾಗಿದೆ. 15 ಸಿ‌ಮ್‌ ಕಾರ್ಡ್​ಗಳು, 6 ಮೊಬೈಲ್ ಫೋನ್​ಗಳು​ ಜಪ್ತಿ ಮಾಡಲಾಗಿದೆ.

ಮೈಸೂರು: ದೇವು ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ 11 ಮಂದಿಗೆ ಜೀವಾವಧಿ ಶಿಕ್ಷೆ 

ನಗರದ ದೇವು ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ 11 ಮಂದಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ 32 ಸಾವಿರ ರೂಪಾಯಿ ದಂಡ ವಿಧಿಸಿ ಮೈಸೂರು ಜಿಲ್ಲಾ ಪ್ರಧಾನ ಜಿಲ್ಲಾ ನ್ಯಾಯಾಧೀಶ ಎಂ ಎಲ್ ರಘುನಾಥ್ ತೀರ್ಪು ನೀಡಿದ್ದಾರೆ. 2016ರಲ್ಲಿ ಪಡುವಾರಹಳ್ಳಿಯಲ್ಲಿ ನಡೆದಿದ್ದ ಕೊಲೆ ಪ್ರಕರಣದ ಆರೋಪಿಗಳಿಗೆ ಶಿಕ್ಷೆ ನೀಡಲಾಗಿದೆ. ಪವನ್, ಸುನೀಲ್ ಕುಮಾರ್, ರಾಕೇಶ್, ಕಾರ್ತಿಕ್, ಮಂಜು, ನಾಗೇಂದ್ರ, ಸುನೀಲ್, ವಿಜಯಕುಮಾರ್, ಮಣಿಕಂಠ, ರಘು, ನವೀನ್‌ಗೆ ಶಿಕ್ಷೆ ವಿಧಿಸಲಾಗಿದೆ. ಲಾಂಗು ಮಚ್ಚುಗಳಿಂದ ಹಲ್ಲೆ ನಡೆಸಿ ದೇವು ಹತ್ಯೆ ನಡೆಸಲಾಗಿತ್ತು. ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮೈಸೂರು ರೈಲ್ವೇ ಕ್ವಾರ್ಟಸ್‌ನಲ್ಲಿ ಕ್ಲೋರಿನೇಷನ್ ಟ್ಯಾಂಕ್ ಲೀಕ್ ಪ್ರಕರಣ; ಮಕ್ಕಳಿಗೆ ಚಿಕಿತ್ಸೆ ಮುಂದುವರಿಕೆ

ಇತ್ತ ಮೈಸೂರು ರೈಲ್ವೇ ಕ್ವಾರ್ಟಸ್‌ನಲ್ಲಿ ಕ್ಲೋರಿನೇಷನ್ ಟ್ಯಾಂಕ್ ಲೀಕ್ ಪ್ರಕರಣಕ್ಕೆ ಸಂಬಂಧಿಸಿ ಮಕ್ಕಳಿಗೆ ಚಿಕಿತ್ಸೆ ಮುಂದುವರಿಸಲಾಗಿದೆ. ಒಬ್ಬ ಬಾಲಕನ‌ ಪರಿಸ್ಥಿತಿ ಗಂಭೀರವಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರೈಲ್ವೆ ಕ್ವಾಟ್ರಸ್​​ನ ಬಹುತೇಕ ನಿವಾಸಿಗಳಿಗೆ ತಲೆಸುತ್ತು, ವಾಂತಿ ಕಂಡುಬಂದಿದೆ. 10 ಮಕ್ಕಳು ಸೇರಿ‌ 15 ಜನರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ನಿನ್ನೆ ಮಧ್ಯಾಹ್ನ ಘಟನೆ ನಡೆದಿತ್ತು. ಕಿಡಿಗೇಡಿಗಳು ಟ್ಯಾಂಕ್ ವಾಲ್ ಒಡೆದು ಹಾಕಿದ್ದರು. ವಾಲ್ ಮೇಲೆ ಕಲ್ಲು ಎತ್ತಿಹಾಕಿದ ಪರಿಣಾಮ ಲಿಕ್ಬಿಡ್ ಲೀಕ್ ಆಗಿತ್ತು. ಟ್ಯಾಂಕ್ ಲೀಕ್ ಆಗುತ್ತಿದ್ದಂತೆ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಬಳಿಕ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿ ಕ್ಲೋರಿನೇಷನ್ ಟ್ಯಾಂಕ್ ಲೀಕೆಜ್ ಮುಚ್ಚಿದ್ದಾರೆ.

ತುಮಕೂರು: ಅಪ್ಪನ ಮನೆಗೆ ಬೆಂಕಿ ಹಚ್ಚಿದ ಮಗನಿಗೆ 8 ವರ್ಷ ಶಿಕ್ಷೆ

ಅಪ್ಪನ ಮನೆಗೆ ಬೆಂಕಿ ಹಚ್ಚಿದ ಮಗನಿಗೆ 8 ವರ್ಷ ಶಿಕ್ಷೆ ವಿಧಿಸಿ ತಿಪಟೂರು ಹೆಚ್ಚುವರಿ ಜಿಲ್ಲಾ ಸೆಷನ್ ನ್ಯಾಯಾಲಯ ಆದೇಶ ನೀಡಿದೆ. ಎರಡು ವರ್ಷದ ಹಿಂದೆ ತುರುವೇಕೆರೆ ತಾಲೂಕಿನ ಬೀಚನಹಳ್ಳಿಯ ಶಂಕರಪ್ಪ ಎಂಬ ಮಗ, ತಂದೆ ಸಣ್ಣಹುಚ್ಚಯ್ಯ ಹಾಗೂ ಪತ್ನಿ ಇದ್ದ ತೋಟದ ಸೋಗೆಯ ಮನೆಗೆ ಬೆಂಕಿ ಹಚ್ಚಿದ್ದ. ಸೋಗೆ ಉರಿಯುವ ಶಬ್ದಕ್ಕೆ ಎಚ್ಚರಗೊಂಡು ದಂಪತಿ ಮನೆಯಿಂದ ಹೊರಗಡೆ ಬಂದಿದ್ದರು. ಈ ವೇಳೆ ಶಂಕರಪ್ಪ ಓಡಿ ಹೋಗಿದ್ದನ್ನು ತಂದೆ ತಾಯಿ ನೋಡಿದ್ದರು. ಮನೆಯಲ್ಲಿದ್ದ ತೆಂಗಿನಕಾಯಿ, ರಾಗಿ ನಗದು ಸೇರಿದಂತೆ ಹಲವು ವಸ್ತುಗಳು ಸುಟ್ಟು ಹೋಗಿದ್ದವು. ಈ ಬಗ್ಗೆ ದಂಡಿನಶಿವರ ಪೊಲೀಸ್ ಠಾಣೆ ಯಲ್ಲಿ ದೂರು ದಾಖಲಾಗಿತ್ತು.

ಸಿಪಿಐ ಮೊಹಮ್ಮದ್ ಸಲೀಂ ತನಿಖೆ ನಡೆಸಿ ದೋಷಾರೋಪಣೆ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಬಿ ಶಿವಕುಮಾರ್​​ರಿಂದ ಈಗ ಶಿಕ್ಷೆ ಪ್ರಕಟ ಮಾಡಲಾಗಿದೆ. 8 ವರ್ಷ ಕಠಿಣ ಸಜೆ ಹಾಗೂ 30 ಸಾವಿರ ದಂಡ ವಿಧಿಸಿ ಆದೇಶ ನೀಡಲಾಗಿದೆ. ಆಸ್ತಿ ವಿಚಾರಕ್ಕೆ ತಂದೆ ತಾಯಿ ಇದ್ದ ಮನೆಗೆ ಬೆಂಕಿ ಹಚ್ಚಿದ್ದ ಮಗನಿಗೆ ಶಿಕ್ಷೆ ಪ್ರಕಟ ಮಾಡಲಾಗಿದೆ. 2019ರ ಮಾರ್ಚ್ 14 ರಂದು ಬೆಳಗಿನ ಜಾವ ಘಟನೆ ನಡೆದಿತ್ತು. ದಂಡಿನಶಿವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.

ತುಮಕೂರು: ಜೂಜು ಅಡ್ಡೆ ಮೇಲೆ ಪೊಲೀಸರ ದಾಳಿ ನಾಲ್ವರ ಸೆರೆ

ಜೂಜು ಅಡ್ಡೆ ಮೇಲೆ ಪೊಲೀಸರ ದಾಳಿ ನಡೆಸಿ ನಾಲ್ವರ ಸೆರೆ ಹಿಡಿಯಲಾಗಿದೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಮಾವಿನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ. ಗುಬ್ಬಿ ಸಿಪಿಐ ನದಾಪ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ನಾಲ್ವರ ಬಂಧಿಸಲಾಗಿದ್ದು, ಉಳಿದ ನಾಲ್ವರು ಪರಾರಿ ಆಗಿದ್ದಾರೆ. ಬಂಧಿತರಿಂದ 10.580 ರೂ ಹಾಗೂ 4 ಮೊಬೈಲ್ 5 ಬೈಕ್ ವಶಕ್ಕೆ ಪಡೆಯಲಾಗಿದೆ. ಸಿಎಸ್ ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಬೆಂಗಳೂರು: ಸಾಲ ನೀಡಿಲ್ಲವೆಂದು ಆಕೆಯ ಮಗನನ್ನು ಕಿಡ್ನ್ಯಾಪ್ ಮಾಡಿದ್ದ ಆರೋಪಿಗಳ ಬಂಧನ

ಮಹಿಳೆ ಸಾಲ ನೀಡಿಲ್ಲವೆಂದು ಆಕೆಯ ಮಗನನ್ನು ಕಿಡ್ನ್ಯಾಪ್ ಮಾಡಿದ್ದ ಆರೋಪಿಗಳ ಬಂಧನ ಮಾಡಲಾಗಿದೆ. ತಾಯಿ ಶಾಂತಾ ಸಾಲ ನೀಡಿಲ್ಲವೆಂದು ಮಾರ್ಚ್‌ 6ರಂದು ಮಗ ಪವನ್‌ನನ್ನು ಆರೋಪಿ ರವಿ ಅಪಹರಿಸಿದ್ದ. ಇದೀಗ ಆತನನ್ನು ಬಂಧಿಸಲಾಗಿದೆ. ವಿದ್ಯಾರಣ್ಯಪುರ ಪೊಲೀಸರು ಬಂಧನ ಮಾಡಿದ್ದಾರೆ.

ಇದನ್ನೂ ಓದಿ: Bengaluru Crime: ಹಣ, ಚಿನ್ನ ಮುಟ್ಟದೆ ಕೇವಲ ಲ್ಯಾಪ್​ಟಾಪ್, ಮೊಬೈಲ್ ಕದಿಯುವ ಡಿಫರೆಂಟ್ ಕಳ್ಳ ಪೊಲೀಸರ ಬಲೆಗೆ!

ಇದನ್ನೂ ಓದಿ: Crime News: ಸಂಚಾರ ವಿಭಾಗ ಜಂಟಿ ಪೊಲೀಸ್ ಆಯಕ್ತರ ಕಚೇರಿಯಲ್ಲೇ ಕಳ್ಳತನ; ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ