Crime News: ಸಂಚಾರ ವಿಭಾಗ ಜಂಟಿ ಪೊಲೀಸ್ ಆಯಕ್ತರ ಕಚೇರಿಯಲ್ಲೇ ಕಳ್ಳತನ; ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ

20 ಸಾವಿರ ಮೌಲ್ಯದ ಎಕ್ಸೈಡ್ ಕಂಪನಿಯ 2 ಬ್ಯಾಟರಿ ಕಳ್ಳತನ ಆಗಿದೆ. ಫೆಬ್ರವರಿ 21 ರ ರಾತ್ರಿ 1.30 ಕ್ಕೆ ಬಂದು ಕಳ್ಳತನ ಮಾಡಿರುವುದು ತಿಳಿದುಬಂದಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.

Crime News: ಸಂಚಾರ ವಿಭಾಗ ಜಂಟಿ ಪೊಲೀಸ್ ಆಯಕ್ತರ ಕಚೇರಿಯಲ್ಲೇ ಕಳ್ಳತನ; ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ಸಾಂಕೇತಿಕ ಚಿತ್ರ
Follow us
TV9 Web
| Updated By: ganapathi bhat

Updated on: Mar 07, 2022 | 12:29 PM

ಬೆಂಗಳೂರು: ಸಂಚಾರ ವಿಭಾಗ ಜಂಟಿ ಪೊಲೀಸ್ ಆಯಕ್ತರ ಕಚೇರಿಯಲ್ಲೇ ಕಳ್ಳತನ ಮಾಡಿದ ಘಟನೆ ನಗರದಲ್ಲಿ ನಡೆದಿದೆ. ಟಿಎಂಸಿ ಕಚೇರಿಯಲ್ಲಿರುವ ಜನರೇಟರ್​ಗೆ ಅಳವಡಿಸಿದ್ದ ಬ್ಯಾಟರಿ ಕಳ್ಳತನ ಮಾಡಲಾಗಿದೆ. 20 ಸಾವಿರ ಮೌಲ್ಯದ ಎಕ್ಸೈಡ್ ಕಂಪನಿಯ 2 ಬ್ಯಾಟರಿ ಕಳ್ಳತನ ಆಗಿದೆ. ಫೆಬ್ರವರಿ 21 ರ ರಾತ್ರಿ 1.30 ಕ್ಕೆ ಬಂದು ಕಳ್ಳತನ ಮಾಡಿರುವುದು ತಿಳಿದುಬಂದಿದೆ. ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ.

ಹಣ, ಚಿನ್ನ ಮುಟ್ಟದೆ ಕೇವಲ ಲ್ಯಾಪ್​ಟಾಪ್, ಮೊಬೈಲ್ ಕದಿಯುವ ಡಿಫರೆಂಟ್ ಕಳ್ಳ

ಬೆಂಗಳೂರಿನಲ್ಲಿ ಒಬ್ಬ ಡಿಫರೆಂಟ್ ಕಳ್ಳನಿದ್ದಾನೆ. ಎಲ್ರೂ ಚಿನ್ನಾಭರಣ, ಹಣ ಕದ್ದರೆ ಈತ ಅದನ್ನು ಮುಟ್ಟೋದಿಲ್ಲ. ಮನೆಗೆ ನುಗ್ಗಿದರೂ ಒಡವೆ, ಹಣಕ್ಕೆ ಕೈ ಹಾಕದ ಖದೀಮ ಕೇವಲ ಮೊಬೈಲ್, ಲ್ಯಾಪ್ ಟಾಪ್ ಮಾತ್ರ ಕಳ್ಳತನ ಮಾಡುತ್ತಾನೆ. ಮನೆಗೆ ನುಗ್ಗಿ ಮೊಬೈಲ್ ಲ್ಯಾಪ್ ಟಾಪ್ ಕಳ್ಳತನ ನಡೆಸ್ತಾ ಇದ್ದ ಚಾಲಕಿ ಆರೋಪಿಯನ್ನು ಇದೀಗ ಬಂಧಿಸಲಾಗಿದೆ. ಬೈಯಪ್ಪನಹಳ್ಳಿ ಪೊಲೀಸರಿಂದ ಆರೋಪಿಯ ಬಂಧನ ಮಾಡಲಾಗಿದೆ. ನಾಗಲ್ಯಾಂಡ್ ಮೂಲದ ತಾಂಗ್ ಸೈನ್ ಬಂಧಿತ ಆರೋಪಿ ಆಗಿದ್ದಾನೆ. ಆರೋಪಿಯಿಂದ ಸುಮಾರು 9 ಲಕ್ಷ ಮೌಲ್ಯದ ಲ್ಯಾಪ್ ಟಾಪ್ ಹಾಗೂ ಮೊಬೈಲ್ ವಶಕ್ಕೆ ಪಡೆಯಲಾಗಿದೆ.

ಇತರ ಅಪರಾಧ, ಅಪಘಾತ ಸುದ್ದಿಗಳು

ರಾಯಚೂರು: ಪಾತ್ರೆ ತೊಳೆಯುವ ವೇಳೆ ಕಾಲುವೆಗೆ ಬಿದ್ದು ಗೃಹಿಣಿ ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ರಾಯಚೂರು ಜಿಲ್ಲೆ ಮಸ್ಕಿ ತಾಲ್ಲೂಕಿನ ಗೂಗೆಬಾಳ ಗ್ರಾಮದಲ್ಲಿ ಲಿಂಗಮ್ಮ(28) ಎಂಬ ಗೃಹಿಣಿ ಮೃತಪಟ್ಟಿದ್ದಾರೆ. ಬೆಳಿಗ್ಗೆ ಪಾತ್ರೆ ತೊಳಯಲು ಕಾಲುವೆಗೆ ಹೋಗಿದ್ದ ಲಿಂಗಮ್ಮ, ಆಯತಪ್ಪಿ ಕಾಲುವೆಗೆ ಬಿದ್ದು ಮೃತಪಟ್ಟಿದ್ದಾರೆ. ಅಕ್ಕ-ಪಕ್ಕ ಯಾರೂ ಇಲ್ಲದ ಕಾರಣ ಕಾಲುವೆಯಲ್ಲಿ ಮುಳುಗಿ‌ ಸಾವನ್ನಪ್ಪಿದ್ದಾರೆ. ಸ್ಥಳಕ್ಕೆ ಕವಿತಾಳ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.

ರಾಯಚೂರು: ಉದ್ಯೋಗ ಖಾತ್ರಿ ಕೆಲಸದ ವೇಳೆ ಮಹಿಳೆ ಅಸ್ವಸ್ತರಾದ ಘಟನೆ ನಡೆದಿದೆ. ರಾಯಚೂರು ಜಿಲ್ಲೆ ಲಿಂಗಸುಗೂರು ತಾಲ್ಲೂಕಿನ ಚಿಲ್ಕರಾಗಿಯಲ್ಲಿ ಘಟನೆ ನಡೆದಿದೆ. ಪಾಮನಕಲ್ಲೂರಿನ ಗಂಗಮ್ಮ (35) ಅಸ್ವತ್ಥ ಮಹಿಳೆ. ಆಕೆಗೆ ಹೃದಯ ಸಂಬಂಧಿ ಖಾಯಿಲೆ ಇದ್ದರೂ ಕೆಲಸಕ್ಕೆ ಹೋಗಲು ಒತ್ತಡ ಇತ್ತು. ವಿಶ್ರಾಂತಿಗೆ ಅನುಮತಿ ನೀಡದೇ ಒತ್ತಾಯಪೂರ್ವಕವಾಗಿ ಕೆಲಸ ಮಾಡಲು ಒತ್ತಡ ಹೇರಲಾಗಿತ್ತು. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯ ಕೆಲಸದಲ್ಲಿ ಘಟನೆ ನಡೆದಿದೆ.

ಈ ವೇಳೆ, ಗಂಗಮ್ಮರಿಗೆ ತೀವ್ರ ಹೃದಯಾಘಾತ ಸಂಭವಿಸಿದೆ. ಪಿಡಿಓ ಅಮರೇಶ ಕಾಳಾಪೂರ ಹಾಗೂ ಇಂಜಿನಿಯರ್ ಸೋಮಶೇಖರ್ ವಿರುದ್ಧ ಗ್ರಾಮಸ್ಥರ ಆಕ್ರೋಶ ಕೇಳಿಬಂದಿದೆ. ಸದ್ಯ ಸ್ಥಳೀಯ ಸರಕಾರಿ ಆಸ್ಪತ್ರೆಯಲ್ಲಿ ಗಂಗಮ್ಮಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಆನೇಕಲ್: ಬೈಕ್‌ ಸವಾರನಿಗೆ ಇನ್ನೋವಾ ಕಾರು ಡಿಕ್ಕಿ ಆಗಿ ಬೈಕ್‌ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ದುರ್ಘಟನೆ ಸಂಭವಿಸಿದೆ. ಆನೇಕಲ್ ತಾಲೂಕಿನ ಮುತ್ಯಾಲಮಡುವು ಗೇಟ್ ಬಳಿ ಘಟನೆ ನಡೆದಿದೆ. ಗೊಲ್ಲಹಳ್ಳಿ ನಿವಾಸಿ ವ್ಯಕ್ತಿ ರಘೇಶ್ (40) ಸಾವನ್ನಪ್ಪಿದ್ದಾರೆ. ನಿನ್ನೆ ರಾತ್ರಿ ಘಟನೆ ನಡೆದಿದೆ. ಭೀಕರ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಆನೇಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ‌ ದಾಖಲು ಮಾಡಲಾಗಿದೆ.

ಬಳ್ಳಾರಿ: ಅಪಘಾತ ತಪ್ಪಿಸಲು ಹೋಗಿ ರಸ್ತೆ ವಿಭಜಕಕ್ಕೆ ಲಾರಿ ಡಿಕ್ಕಿ ಆದ ಘಟನೆ ನಡೆದಿದೆ. ಸಿರುಗುಪ್ಪ ಪಟ್ಟಣದಲ್ಲಿ ಬಳಗ್ಗೆ ಲಾರಿ ಡಿವೈಡರ್​ಗೆ ಡಿಕ್ಕಿ ಆಗಿದೆ. ಚಿತ್ರದುರ್ಗದಿಂದ ಮಂತ್ರಾಲಯ ಕಡೆ ತೆರಳುತ್ತಿದ್ದ ಮೈನಿಂಗ್ ಲಾರಿ ಚಾಲಕನ ಯಡವಟ್ಟಿನಿಂದ ಅಪಘಾತಕ್ಕೆ ಒಳಗಾಗಿದೆ. ಬಸ್ ಆಟೊರಿಕ್ಷಾ ಅಡ್ಡ ಬಂದ ಪರಿಣಾಮ ಲಾರಿ ನಿಯಂತ್ರಣ ತಪ್ಪಿದೆ. ಘಟನೆಯಲ್ಲಿ ಯಾರಿಗೂ ಯಾವುದೇ ರೀತಿಯ ಅಪಾಯ ಆಗಿಲ್ಲ. ಸಿರಗುಪ್ಪ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: Crime Update: ಎಬಿವಿಪಿ ವಿದ್ಯಾರ್ಥಿಗೆ ಕೊಲೆ ಬೆದರಿಕೆ, ಕಿಟಕಿ ರಾಡ್ ಮುರಿದು ಕಳ್ಳತನ, ಡ್ರಗ್ಸ್​ ದಂಧೆಯಲ್ಲಿ ತೊಡಗಿದ್ದವರ ಬಂಧನ

ಇದನ್ನೂ ಓದಿ: Crime News: ಬೈಕ್ ಕಳ್ಳರ ಬಂಧನ, ಪತ್ರಕರ್ತನ ವಿರುದ್ಧ ಎಫ್​ಐಆರ್ ದಾಖಲು, ನಕಲಿ ಸಿಮೆಂಟ್ ಘಟಕದ ಮೇಲೆ ಪೊಲೀಸರ ದಾಳಿ