12ನೇ ಬೆಂಗಳೂರು ಇಂಡಿಯಾ ನ್ಯಾನೋ 2022 ಸಮ್ಮೇಳನಕ್ಕೆ ಚಾಲನೆ ನೀಡಿದ ಸಿಎಂ ಬಸವರಾಜ ಬೊಮ್ಮಾಯಿ
ನ್ಯಾನೋ ಸೈನ್ಸ್, ನ್ಯಾನೋ ಟೆಕ್ನಾಲಜಿ ಮೇಲೆ ಸಮ್ಮೇಳನದಲ್ಲಿ ಬೆಳಕು ಚೆಲ್ಲುತ್ತಿದೆ. ವರ್ಚುವಲ್ ಮೂಲಕ ನಡೆಯುತ್ತಿರುವ ನ್ಯಾನೋ ಸಮ್ಮೇಳನಕ್ಕೆ 2500ಕ್ಕೂ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ಪ್ರತಿನಿಧಿಗಳು ಭಾಗವಹಿಸಿದ್ದಾರೆ.
ಬೆಂಗಳೂರು: 12ನೇ ಬೆಂಗಳೂರು ಇಂಡಿಯಾ ನ್ಯಾನೋ 2022 ಸಮ್ಮೇಳನ (12th BENGALURU INDIA NANO 2022) ಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದಾರೆ. ಖಾಸಗಿ ಹೊಟೇಲಿನಲ್ಲಿ ಸಮ್ಮೇಳನ ನಡೆಯುತ್ತಿದೆ. ನ್ಯಾನೋ ಸೈನ್ಸ್, ನ್ಯಾನೋ ಟೆಕ್ನಾಲಜಿ ಮೇಲೆ ಸಮ್ಮೇಳನದಲ್ಲಿ ಬೆಳಕು ಚೆಲ್ಲುತ್ತಿದೆ. ವರ್ಚುವಲ್ ಮೂಲಕ ನಡೆಯುತ್ತಿರುವ ನ್ಯಾನೋ ಸಮ್ಮೇಳನಕ್ಕೆ 2500ಕ್ಕೂ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ಪ್ರತಿನಿಧಿಗಳು ಭಾಗವಹಿಸಿದ್ದಾರೆ. ನ್ಯಾನೋ ಸಮ್ಮೇಳನದಲ್ಲಿ ಭಾಷಣ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ, ವಿದ್ಯಾರ್ಥಿಗಳು ನ್ಯಾನೋ ಟೆಕ್ನಾಲಜಿಯನ್ನ ಬಳಸಬೇಕು. ಇದರಿಂದ ನಮ್ಮ ಬದುಕು ಸುಧಾರಿಸಲು ಸಾಧ್ಯವಾಗುತ್ತೆ. ನ್ಯಾನೋ ಮೇಳದಲ್ಲಿ 2000ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗಿದ್ದು, ಆಸಕ್ತರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು. ನ್ಯಾನೋ ಟೆಕ್ ಸಂಶೋಧನಾ ಕೇಂದ್ರ ಬೆಂಗಳೂರಿನಲ್ಲಿದೆ. 108 ವಿಶ್ವದರ್ಜೆಯ ಸಂಶೋಧನಾ ಕೇಂದ್ರಗಳಿವೆ. ಮೋದಿ ನ್ಯಾನೋ ಯೂರಿಯಾ ರೈತರಿಗೆ ಪರಿಚಯಿಸಿದ್ದಾರೆ. ಸಂಶೋಧನೆಯಿಂದ ಜನರ ಬದುಕು ಸುಧಾರಿಸಬೇಕು. ಇದೇ ಪ್ರಧಾನಿ ನರೇಂದ್ರ ಮೋದಿಯವರ ಕನಸಾಗಿದೆ. ನ್ಯಾನೋ ಟೆಕ್ನಾಲಜಿ ಮುಂದಿನ ಭವಿಷ್ಯವಾಗಿದೆ ಎಂದರು.
ಸಂಶೋಧನೆ, ಆವಿಷ್ಕಾರದಲ್ಲಿ ಕರ್ನಾಟಕವೂ ಮುಂದಿದೆ. ನ್ಯಾನೋ ತಂತ್ರಜ್ಞಾನವೂ ನಿರಂತರ ಕಲಿಕೆಯ ಭಾಗವಾಗಿದೆ. ಸಚಿವ ಡಾ.ಅಶ್ವತ್ಥ್ ನಾರಾಯಣ ಡೈನಾಮಿಕ್ ಲೀಡರ್. ಅವರು ಅದ್ಭುತ ಕಾರ್ಯಕ್ರಮ ಮಾಡಿರುವುದು ಸಂತಸ ತಂದಿದೆ. ವಿಜ್ಞಾನ ಕ್ಷೇತ್ರದಲ್ಲಿ ರಾಜ್ಯದ ಪ್ರೊ.ಸಿ.ಎನ್.ಆರ್.ರಾವ್ ಇದ್ದಾರೆ. ಅವರು ನಮ್ಮ ಕರ್ನಾಟಕದವರಾಗಿರುವುದು ನಮ್ಮ ಅದೃಷ್ಟ ಎಂದು ಹೇಳಿದರು.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಮಹಿಳಾ ಸ್ವ- ಸಹಾಯ ಸಂಸ್ಥೆಗಳು ತಯಾರಿಸಿರುವ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆಯುತ್ತಿರುವ ಮೇಳವನ್ನು ಸಿಎಂ ಬೊಮ್ಮಾಯಿ ಚಾಲನೆ ನೀಡಿದರು. ಇಂದಿನಿಂದ ಮೂರು ದಿನಗಳ ಕಾಲ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಲಿದೆ. ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ಮೇಳ ಆಯೋಜನೆ ಮೇಳದಲ್ಲಿ ಇಲಕಲ್ಲ ರೇಶ್ಮೆ ಸೀರೆ, ಗ್ರಾಮೀಣ ಭಾಗದ ಅಹಾರೋತ್ಪನ್ನಗಳು, ಕರಕುಶಲ ವಸ್ತುಗಳು, ಚನ್ನಪಟ್ಟಣ ಗೊಂಬೆ ಸಾಮಗ್ರಿಗಳು ಗಮನ ಸೆಳೆಯುತ್ತಿದೆ.
ಇದನ್ನೂ ಓದಿ:
ಯುದ್ಧ ಭೂಮಿಯಿಂದ ಸಾಕು ನಾಯಿಯೊಂದಿಗೆ ಬಂದ ಬೆಂಗಳೂರು ಮೂಲದ ವಿದ್ಯಾರ್ಥಿ