AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬನಶಂಕರಿಯಲ್ಲಿ ಬೀದಿ ನಾಯಿಯ ಥಳಿಸಿ ಆ್ಯಸಿಡ್ ಹಾಕಲು ಯತ್ನ; ಐವರ ವಿರುದ್ಧ ಎಫ್‌ಐಆರ್‌ ದಾಖಲು

ಮಾರ್ಚ್ 4 ರ ರಾತ್ರಿ 10 ಗಂಟೆಗೆ ಬನಶಂಕರಿಯ ಅಂಬೇಡ್ಕರ್ ನಗರದಲ್ಲಿ ಕೆಲ ಕಿಡಿಗೇಡಿಗಳು ಬೀದಿ ನಾಯಿಯನ್ನು ಕಟ್ಟಿ ಹಾಕಿ ಅದಕ್ಕೆ ಹೊಡೆದು ಆ್ಯಸಿಡ್ ಹಾಕಲು ಯತ್ನಿಸಿದ್ದರೆ. ಇದನ್ನು ಗಮನಿಸಿದ ಸಫಿಯಾ ಎಂಬ ಮಹಿಳೆ ಕಿಡಿಗೇಡಿಗಳಿಗೆ ಪ್ರಶ್ನೆ ಮಾಡಿದ್ದಕ್ಕೆ ಕಿರಾತಕರು ಮಹಿಳೆಯ ಮೇಲೆಯೇ ಹಲ್ಲೆಗೆ ಯತ್ನಿಸಿದ್ದಾರೆ.

ಬನಶಂಕರಿಯಲ್ಲಿ ಬೀದಿ ನಾಯಿಯ ಥಳಿಸಿ ಆ್ಯಸಿಡ್ ಹಾಕಲು ಯತ್ನ; ಐವರ ವಿರುದ್ಧ ಎಫ್‌ಐಆರ್‌ ದಾಖಲು
ಬೀದಿ ನಾಯಿ (ಸಂಗ್ರಹ ಚಿತ್ರ)
TV9 Web
| Edited By: |

Updated on:Mar 10, 2022 | 11:10 PM

Share

ಬೆಂಗಳೂರು: ನಗರದಲ್ಲಿ ಅಮಾನವೀಯ ಘಟನೆಯೊಂದು ಸಂಭವಿಸಿದೆ. ಕಿಡಿಗೇಡಿಗಳು ಬೀದಿ ನಾಯಿಯನ್ನು(Stray Dog) ಕಟ್ಟಿ ಹಾಕಿ ಥಳಿಸಿ ಆ್ಯಸಿಡ್ ಹಾಕಲು ಯತ್ನಿಸಿದ್ದಾರೆ. ಮಾರ್ಚ್ 4 ರ ರಾತ್ರಿ 10 ಗಂಟೆಗೆ ಬನಶಂಕರಿಯ ಅಂಬೇಡ್ಕರ್ ನಗರದಲ್ಲಿ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.ಈ ಸಂಬಂಧ ಆರೋಪಿಗಳಾದ ಅನ್ಸರ್, ವಾಸಿಂ, ಇಸ್ಮಾಯಿಲ್, ಅಯಾಜ್, ಅಶ್ರಫ್ ವಿರುದ್ಧ ಬನಶಂಕರಿ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಮಾರ್ಚ್ 4 ರ ರಾತ್ರಿ 10 ಗಂಟೆಗೆ ಬನಶಂಕರಿಯ ಅಂಬೇಡ್ಕರ್ ನಗರದಲ್ಲಿ ಕೆಲ ಕಿಡಿಗೇಡಿಗಳು ಬೀದಿ ನಾಯಿಯನ್ನು ಕಟ್ಟಿ ಹಾಕಿ ಅದಕ್ಕೆ ಹೊಡೆದು ಆ್ಯಸಿಡ್ ಹಾಕಲು ಯತ್ನಿಸಿದ್ದರೆ. ಇದನ್ನು ಗಮನಿಸಿದ ಸಫಿಯಾ ಎಂಬ ಮಹಿಳೆ ಕಿಡಿಗೇಡಿಗಳಿಗೆ ಪ್ರಶ್ನೆ ಮಾಡಿದ್ದಕ್ಕೆ ಕಿರಾತಕರು ಮಹಿಳೆಯ ಮೇಲೆಯೇ ಹಲ್ಲೆಗೆ ಯತ್ನಿಸಿದ್ದಾರೆ. ಸದ್ಯ ಈ ಬಗ್ಗೆ ಕಿಡಿಗೇಡಿಗಳು ಬೆದರಿಕೆ ಹಾಕಿದ್ದಾರೆಂದು ಮಹಿಳೆ ಬನಶಂಕರಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಹಿಳೆಯ ದೂರಿನನ್ವಯ ಪೊಲೀಸರು ಐವರ ವಿರುದ್ಧ ಐಪಿಸಿ ಸೆಕ್ಷನ್ 34, 428, 429 ಹಾಗೂ 354ರಡಿ ಎಫ್‌ಐಆರ್‌ ದಾಖಲಿಸಿದ್ದಾರೆ. ಆರೋಪಿಗಳಾದ ಅನ್ಸರ್, ವಾಸಿಂ, ಇಸ್ಮಾಯಿಲ್, ಅಯಾಜ್, ಅಶ್ರಫ್ ವಿರುದ್ಧ ಬನಶಂಕರಿ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ. ಗಾಯಗೊಂಡಿರುವ ನಾಯಿಗೆ ಪ್ರಾಣಿ ರಕ್ಷಣಾ ಕೇಂದ್ರದಲ್ಲಿ ಚಿಕಿತ್ಸೆ ಗಾಯಗೊಂಡಿರುವ ನಾಯಿಗೆ ಪ್ರಾಣಿ ರಕ್ಷಣಾ ಕೇಂದ್ರದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಬೆಂಗಳೂರಿನಲ್ಲಿ ರಸ್ತೆ ಅಪಘಾತದಲ್ಲಿ ವಿದ್ಯಾರ್ಥಿ ದುರ್ಮರಣ ಬೆಂಗಳೂರಿನ ಯಶವಂತಪುರದ ಬಿಹೆಚ್​ಎಲ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು ಅಪಘಾತದಲ್ಲಿ ಡೆಂಟಲ್​ ವಿದ್ಯಾರ್ಥಿ ಮತ್ತಿನ್(22) ಮೃತಪಟ್ಟಿದ್ದಾರೆ. ಬೈಕ್​ನಲ್ಲಿ ತೆರಳುವಾಗ ಖಾಸಗಿ ಟೋಯಿಂಗ್ ವಾಹನಕ್ಕೆ ಮತ್ತಿನ್ ಡಿಕ್ಕಿ ಹೊಡೆದಿದ್ದಾರೆ.ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮತ್ತಿನ್​ನನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಆದ್ರೆ ತಲೆಗೆ ಗಂಭೀರ ಗಾಯವಾಗಿದ್ದರಿಂದ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಯಶವಂತಪುರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಟೋಯಿಂಗ್ ಚಾಲಕನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬಸ್​ಗೆ ಟ್ಯಾಕ್ಟರ್ ಡಿಕ್ಕಿ, 7 ಮಂದಿಗೆ ಗಾಯ ಇನ್ನು ಮತ್ತೊಂದು ಕಡೆ ವಿಜಯನಗರದ ಹಗರಿಬೊಮ್ಮನಹಳ್ಳಿ ತಾಲೂಕಿನ ನಂದಿಬಂಡಿ ಗ್ರಾಮದ ಬಳಿ ಅಪಘಾತ ಸಂಭವಿಸಿದೆ. ಇಟ್ಟಿಗೆ ಸಾಗಾಟ ಮಾಡುತ್ತಿದ್ದ ಟ್ಯಾಕ್ಟರ್ ಬಸ್​ಗೆ ಡಿಕ್ಕಿ ಹೊಡೆದಿದೆ. ಹೊಸಪೇಟೆ ಪಟ್ಟಣದಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಸಾರಿಗೆ ಬಸ್​ಗೆ ಟ್ಯಾಕ್ಟರ್ ಡಿಕ್ಕಿ ಹೊಡೆದ ಪರಿಣಾಮ ಸಾರಿಗೆ ಬಸ್​ನಲ್ಲಿದ್ದ 7 ಜನ ಪ್ರಯಾಣಿಕರಿಗೆ ಗಾಯಗಳಾಗಿವೆ. ಗಾಯಾಳುಗಳು ಮರಿಯಮ್ಮನಹಳ್ಳಿ ಹಾಗೂ ಹೊಸಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ಸಂಬಂಧ ಮರಿಯಮ್ಮನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ನಾನು ಭಯೋತ್ಪಾದಕನಲ್ಲ ಎಂದು ಜನ ಸಾಬೀತು ಮಾಡಿದ್ದಾರೆ, ಇದು ಕೇವಲ ಆರಂಭ; ಪಂಜಾಬ್​ನಲ್ಲಿ ಆಪ್​ ಗೆಲುವಿಗೆ ಕೇಜ್ರಿವಾಲ್ ಸಂತಸ

ಫ್ರೀಡಂ ಪಾರ್ಕ್, ಬೆಂಗಳೂರು: ಹೆಜ್ಜೇನು ದಾಳಿಯಲ್ಲಿ 10 ಪೊಲೀಸರಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ, ಆಸ್ಪತ್ರೆಗೆ ದಾಖಲು

Published On - 10:13 pm, Thu, 10 March 22

Follow Us
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಅಮೆರಿಕದ ಶಿಕಾಗೋನಲ್ಲಿ ಹೇಗಿದೆ ನೋಡಿ ನಟ ದಿಲ್ಜೀತ್ ಹವಾ: ವಿಡಿಯೋ
ಅಮೆರಿಕದ ಶಿಕಾಗೋನಲ್ಲಿ ಹೇಗಿದೆ ನೋಡಿ ನಟ ದಿಲ್ಜೀತ್ ಹವಾ: ವಿಡಿಯೋ
ವಿಚಿತ್ರ ಮನೆ: 3*20 ಅಡಿಯಲ್ಲಿ ಕಟ್ಟಡ; ನೋಡಿದ್ರೆ ದಿಗ್ಭ್ರಮೆ ಗ್ಯಾರಂಟಿ
ವಿಚಿತ್ರ ಮನೆ: 3*20 ಅಡಿಯಲ್ಲಿ ಕಟ್ಟಡ; ನೋಡಿದ್ರೆ ದಿಗ್ಭ್ರಮೆ ಗ್ಯಾರಂಟಿ