ಫ್ರೀಡಂ ಪಾರ್ಕ್, ಬೆಂಗಳೂರು: ಹೆಜ್ಜೇನು ದಾಳಿಯಲ್ಲಿ 10 ಪೊಲೀಸರಿಗೆ ಗಾಯ, ಇಬ್ಬರ ಸ್ಥಿತಿ ಗಂಭೀರ, ಆಸ್ಪತ್ರೆಗೆ ದಾಖಲು
ಪಾರ್ಕ್ ನಲ್ಲಿ ಹಲವಾರು ಗಿಡಮರಗಳಿವೆ ಮತ್ತು ಕೆಲವು ಮರಗಳಲ್ಲಿ ಜೇನು ಕಟ್ಟಿವೆ. ಹೆಚ್ಚಿನವು ಹೆಜ್ಜೇನು ಗೂಡುಗಳು ಅಂತ ಹೇಳಲಾಗುತ್ತಿದೆ. ಇವು ಬಹಳ ಅಪಾಯಕಾರಿ. ಹೆಜ್ಜೇನು ದಾಳಿ ಮಾರಣಾಂತಿಕವಾದ ಹಲವಾರು ನಿದರ್ಶನಗಳ ಬಗ್ಗೆ ನಾವು ಕೇಳಿದ್ದೇವೆ ಓದಿದ್ದೇವೆ.
ಗುರುವಾರದಂದು ಫ್ರೀಡಂ ಪಾರ್ಕ್ ನಲ್ಲಿ (Freedom Park) ನಿಯೋಜನೆಗೊಂಡಿದ್ದ ಪೊಲೀಸರ ಪೈಕಿ 10 ಜನರ ಮೇಲೆ ಹೆಜ್ಜೇನು ದಾಳಿ (bee attack) ನಡೆದಿದೆ. ಅವರೆಲ್ಲರನ್ನು ಹತ್ತಿರದ ಖಾಸಗಿ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿದ್ದು ಇಬ್ಬರ ಸ್ಥಿತಿ ಗಂಭೀರವಾಗಿದ್ದರಿಂದ ಅವರನ್ನು ತುರ್ತು ಚಿಕಿತ್ಸಾ ಘಟಕಕ್ಕೆ ಸ್ಥಳಾಂತರಿಸಲಾಗಿದೆ. ದೆಹಲಿಯ ಜಂತರ್-ಮಂತರ್ ಮತ್ತು ಬೆಂಗಳೂರಿನ ಫ್ರೀಡಂ ಪಾರ್ಕ್ ಪ್ರತಿಭಟನೆ ನಡೆಸುವ ಸ್ಥಳಗಳೆಂದು ಗುರುತಿಸಿಕೊಂಡಿವೆ. ಬೆಂಗಳೂರು ನಗರದಲ್ಲಿ ಎಲ್ಲಾ ಸಂಘ ಸಂಸ್ಥೆಗಳು, ಬ್ಯಾಂಕ್ ಮತ್ತು ಖಾಸಗಿ ಹಾಗೂ ಸಾರ್ವಜನಿಕ ವಲಯಗಳ ನೌಕರರು, ಶಿಕ್ಷಕರು, ಆಶಾ ಕಾರ್ಯಕರ್ತೆಯರು (ASHA workers), ಅಂಗನವಾಡಿ ಕಾರ್ಯಕರ್ತರು (Anganwadi workers), ಶಿಕ್ಷಕರು ಇನ್ನೂ ಅನೇಕರು ಪ್ರತಿಭಟನೆ ನಡೆಸಲು ಫ್ರೀಡಂ ಪಾರ್ಕ್ ಆರಿಸಿಕೊಳ್ಳುತ್ತಾರೆ.
ಹಾಗಾಗಿ ಇಲ್ಲಿ ಭದ್ರತೆಯ ದೃಷ್ಟಿಯಿಂದ ಸದಾಕಾಲ ಪೊಲೀಸರನ್ನು ನಿಯೋಜಿಸಲಾಗಿರುತ್ತದೆ. ಹಾಗಾಗೇ ಗುರುವಾರದಂದು ಅಲ್ಲಿ ಪೊಲೀಸ್ ಪಡೆಯೊಂದು ಕರ್ತವ್ಯನಿರತವಾಗಿತ್ತು.
ಪಾರ್ಕ್ ನಲ್ಲಿ ಹಲವಾರು ಗಿಡಮರಗಳಿವೆ ಮತ್ತು ಕೆಲವು ಮರಗಳಲ್ಲಿ ಜೇನು ಕಟ್ಟಿವೆ. ಹೆಚ್ಚಿನವು ಹೆಜ್ಜೇನು ಗೂಡುಗಳು ಅಂತ ಹೇಳಲಾಗುತ್ತಿದೆ. ಇವು ಬಹಳ ಅಪಾಯಕಾರಿ. ಹೆಜ್ಜೇನು ದಾಳಿ ಮಾರಣಾಂತಿಕವಾದ ಹಲವಾರು ನಿದರ್ಶನಗಳ ಬಗ್ಗೆ ನಾವು ಕೇಳಿದ್ದೇವೆ ಓದಿದ್ದೇವೆ.
ವಿಡಿಯೋನಲ್ಲಿ ಕಾಣುತ್ತಿರುವ ಪೊಲೀಸರಲ್ಲಿ ಒಂದಿಬ್ಬರು ಸಹ ಜೇನು ಕಡಿತಕ್ಕೆ ಒಳಗಾಗಿದ್ದಾರೆ. ಆದರೆ ಅವರನ್ನು ಆಸ್ಪತ್ರೆಗೆ ಸೇರಿಸುವ ಸ್ಥಿತಿಯೇನೂ ಉದ್ಭವಿಸಿಲ್ಲ.
ಇದನ್ನೂ ಓದಿ: ಭಾರಿ ಗಾತ್ರದ ಹೆಬ್ಬಾವು ರಸ್ತೆ ದಾಟಲು ನಿಮಿಷಗಳೇ ಬೇಕಾಯ್ತು, ವೈರಲ್ ಆಗಿರುವ ವಿಡಿಯೋ ನೋಡಿದರೆ ನಿಮಗೆ ಗೊತ್ತಾಗುತ್ತದೆ!