ಭಾರಿ ಗಾತ್ರದ ಹೆಬ್ಬಾವು ರಸ್ತೆ ದಾಟಲು ನಿಮಿಷಗಳೇ ಬೇಕಾಯ್ತು, ವೈರಲ್ ಆಗಿರುವ ವಿಡಿಯೋ ನೋಡಿದರೆ ನಿಮಗೆ ಗೊತ್ತಾಗುತ್ತದೆ!

ಅದರ ಎಡಗಣ್ಣು ಫಳಫಳ ಹೊಳೆಯುತ್ತಿದೆ ಮತ್ತು ತೆವಳುತ್ತಾ ಮುಂದೆ ಸಾಗಿದರೂ ಮುಗಿಯಲೊಲ್ಲದ ಅದರ ಉದ್ದನೆಯ ದೇಹ ಮಿರಮಿರ ಮಿಂಚುತ್ತಿದೆ. ಸಾಮಾನ್ಯವಾಗಿ ಹೆಬ್ಬಾವು ಕಚ್ಚುವುದಿಲ್ಲ.

ಭಾರಿ ಗಾತ್ರದ ಹೆಬ್ಬಾವು ರಸ್ತೆ ದಾಟಲು ನಿಮಿಷಗಳೇ ಬೇಕಾಯ್ತು, ವೈರಲ್ ಆಗಿರುವ ವಿಡಿಯೋ ನೋಡಿದರೆ ನಿಮಗೆ ಗೊತ್ತಾಗುತ್ತದೆ!
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 09, 2022 | 4:00 PM

ಇದು ಅಂತಿಂಥ ಹಾವಲ್ಲ ಮಾರಾಯ್ರೇ, ಮೈಯಲ್ಲಿ ನಡುಕ ಹುಟ್ಟಿಸಿ ಹೆದರಿಕೆಯಿಂದ ಚಳಿಜ್ವರ ಬರುವಂತೆ ಮಾಡುವ ಬೃಹತ್ ಗಾತ್ರದ ಹೆಬ್ಬಾವು(python). ಸದ್ಯ, ಇದು ಕಾಣಿಸಿಕೊಂಡಿರೋದು ದೂರದ ಅಸ್ಸಾಮ್ ರಾಜ್ಯದ (Assam) ರಂಗ್ಪುರ್ ಅರಣ್ಯಪ್ರದೇಶದಲ್ಲಿ (Rangpur Forest). ಹಾವು ತನ್ನ ಪಾಡಿಗೆ ತಾನು ಅರಣ್ಯಪ್ರದೇಶದಲ್ಲಿ ಹಾದು ಹೋಗಿರುವ ಟಾರು ರಸ್ತೆಯನ್ನು ತೆವಳುತ್ತಾ ಕ್ರಾಸ್ ಮಾಡುತ್ತಿದೆ. ಈ ಭಾಗದಲ್ಲಿ ಯಾರೋ ಅದರ ವಿಡಿಯೋ ಮಾಡಿದ್ದಾರೆ. ಅವರು ಯಾವುದಾದರೂ ವಾಹನದಲ್ಲಿ ಹೋಗುತ್ತಿದ್ದರೋ ಅಥವಾ ಫಾರೆಸ್ಟ್ ಗಾರ್ಡ್ ಆಗಿರುವರೋ ಅಂತ ನಮಗೆ ಗೊತ್ತಿಲ್ಲ, ನಮಗೆ ಗೊತ್ತಿರುವುದೇನೆಂದರೆ, ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಜನ ಅದನ್ನು ಪದೇಪದೆ ನೋಡುತ್ತಾ ತಮಗೆ ಸ್ನೇಹಿತರಿಗೆ ಫಾರ್ವರ್ಡ್ ಮಾಡುತ್ತಿದ್ದಾರೆ.

ಹಾವಿನ ಗಾತ್ರ ನೋಡಿದರೆ ಭಯವಾಗುವುದಂತೂ ಸತ್ಯ ಮಾರಾಯ್ರೇ. ಅದರ ಎಡಗಣ್ಣು ಫಳಫಳ ಹೊಳೆಯುತ್ತಿದೆ ಮತ್ತು ತೆವಳುತ್ತಾ ಮುಂದೆ ಸಾಗಿದರೂ ಮುಗಿಯಲೊಲ್ಲದ ಅದರ ಉದ್ದನೆಯ ದೇಹ ಮಿರಮಿರ ಮಿಂಚುತ್ತಿದೆ. ಸಾಮಾನ್ಯವಾಗಿ ಹೆಬ್ಬಾವು ಕಚ್ಚುವುದಿಲ್ಲ. ಯಾರಿಗಾದರೂ ಹೆಬ್ಬಾವು ಕಚ್ಚಿದ ಸುದ್ದಿಯನ್ನು ನೀವು ಕೇಳಿದ್ದೀರಾ?

ನಮಗೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ರಂಗ್ಪುರ್ ಅರಣ್ಯಪ್ರದೇಶದಿಂದ ಭಾರಿ ಗಾತ್ರದ ಹೆಬ್ಬಾವುಗಳು ಸುತ್ತಮುತ್ತಲ ಜನವಸತಿ ಪ್ರದೇಶವನ್ನು ಆಗಾಗ ಪ್ರವೇಶಿಸುತ್ತವೆ. ಜನ ಉರಗ ತಜ್ಞರನ್ನು ಕರೆಸಿ ಅವುಗಳನ್ನು ಪುನಃ ಕಾಡಿನೊಳಗೆ ಬಿಡಿಸುತ್ತಾರೆ.

ಅಸಲಿಗೆ ಈ ರಂಗ್ಪುರ್ 1707 ರಲ್ಲಿ ಸ್ವರ್ಗ್ದೇವ್ ರುದ್ರ ಸಿಂಘಾ ಹೆಸರಿನ ದೊರೆ ಸ್ಥಾಪಿಸಿದ ಅಹೋಮ್ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಈಗ ಇದು ಸಿಬ್ ಸಾಗರ್ ಪಟ್ಟಣದ ಒಂದು ಭಾಗವಾಗಿದೆ. ಸದರಿ ಸಾಮ್ರಾಜ್ಯದ ಅರಸರು ನಿರ್ಮಿಸಿದ ಹಲವಾರು ಸ್ಮಾರಕಗಳು ರಂಗ್ಪುರ್ ನಲ್ಲಿ ನೋಡಸಿಗುತ್ತವೆ. ಅವುಗಳಲ್ಲಿ ಪ್ರಮುಖವಾಗಿರುವವು ತಲಾತಲ್ ಘರ್ ಮತ್ತು ರಂಗ್ ಘರ್.

ಇದನ್ನೂ ಓದಿ: Shane Warne: ಬ್ಯಾಟರ್​ಗಳ ಮುಂದಿನ ನಡೆಯನ್ನು ಕರಾರುವಕ್ಕಾಗಿ ಊಹಿಸುತ್ತಿದ್ದ ಶೇನ್ ವಾರ್ನ್; ಇಲ್ಲಿದೆ ವಿಡಿಯೋ ಸಾಕ್ಷಿ

Follow us