ರಾಹುಕಾಲ-ಗುಳಿಕಕಾಲ ನೋಡಿಕೊಂಡು ವಿಧಾನಸಭೆಯಲ್ಲಿ ರೇವಣ್ಣ ಕಾಲೆಳೆದ ಸಚಿವ ಅಶೋಕ್
ವಿಧಾನಸಭೆಯಲ್ಲಿ ಬಜೆಟ್ ಚರ್ಚೆ ಮುಂದುವರಿದಿದೆ. ಈ ವೇಳೆ ರೇವಣ್ಣ ಅವರು ರಾಹುಕಾಲ, ಗುಳಿಕಕಾಲ ಎಲ್ಲಾ ನೋಡಿಕೊಂಡು ಬಂದಿದ್ದಾರೆ. ಒಳ್ಳೆಯ ಕಾಲ ಅಂತಾ ಬಂದಿದ್ದಾರೆ. ಅವರಿಗೆ ಮಾತಾಡಲು ಅವಕಾಶ ಕೊಡಿ. ಇಲ್ಲ ಅಂದರೆ ಅವರು ಹೊರಗೆ ಹೋಗಿ ಬಿಡ್ತಾರೆ ಎಂದು ಆರ್. ಅಶೋಕ್ ಕಾಲೆಳೆದಿದ್ದಾರೆ.
ಬೆಂಗಳೂರು: ವಿಧಾನಸಭೆಯಲ್ಲಿ ಸಚಿವ ಆರ್.ಅಶೋಕ್ ಹೆಚ್.ಡಿ.ರೇವಣ್ಣ ಅವರ ಕಾಲೆಳೆದಿದ್ದಾರೆ. ರೇವಣ್ಣ ಅವರು ರಾಹುಕಾಲ, ಗುಳಿಕಕಾಲ ಎಲ್ಲಾ ನೋಡಿಕೊಂಡು ಒಳ್ಳೆಯ ಕಾಲ ಅಂತಾ ಬಂದಿದ್ದಾರೆ. ಅವರಿಗೆ ಮಾತಾಡಲು ಅವಕಾಶ ಕೊಡಿ, ಇಲ್ಲ ಅಂದರೆ ಅವರು ಹೊರಗೆ ಹೋಗಿ ಬಿಡ್ತಾರೆ ಎಂದು ಸಚಿವ ಆರ್.ಅಶೋಕ್ ವಿಧಾನಸಭೆಯಲ್ಲಿ ಕಾಲೆಳೆದಿದ್ದಾರೆ.
ವಿಧಾನಸಭೆಯಲ್ಲಿ ಬಜೆಟ್ ಚರ್ಚೆ ಮುಂದುವರಿದಿದೆ. ಈ ವೇಳೆ ರೇವಣ್ಣ ಅವರು ರಾಹುಕಾಲ, ಗುಳಿಕಕಾಲ ಎಲ್ಲಾ ನೋಡಿಕೊಂಡು ಬಂದಿದ್ದಾರೆ. ಒಳ್ಳೆಯ ಕಾಲ ಅಂತಾ ಬಂದಿದ್ದಾರೆ. ಅವರಿಗೆ ಮಾತಾಡಲು ಅವಕಾಶ ಕೊಡಿ. ಇಲ್ಲ ಅಂದರೆ ಅವರು ಹೊರಗೆ ಹೋಗಿ ಬಿಡ್ತಾರೆ ಎಂದು ಆರ್. ಅಶೋಕ್ ಕಾಲೆಳೆದಿದ್ದಾರೆ. ಈ ವೇಳೆ ಆರ್ ಅಶೋಕ್ಗೆ ಪ್ರತಿಕ್ರಿಯೆ ನೀಡಿದ ಹೆಚ್.ಡಿ. ರೇವಣ್ಣ ನಾವು ಯಾವಾಗಲೂ ಮಾತಾಡಿದ್ರೂ ನಮಗೆ ಅಧಿಕಾರ ಇರುತ್ತದೆ. ಎ ಟೀಮ್, ಬಿ ಟೀಮ್ ಅನ್ನೋರು ಯಾಕ್ರಪ್ಪಾ ಜೆಡಿಎಸ್ ನವರ ಕಾಲು ಕಟ್ಟೋಕೆ ಬರಬೇಕಿತ್ತು ಎಂದು ರೇವಣ್ಣ ಟಾಂಗ್ ಕೊಟ್ಟಿದ್ದಾರೆ.
ಇನ್ನು ರೇವಣ್ಣ ಮಾತಿಗೆ ಕಾಂಗ್ರೆಸ್ ಶಾಸಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವೇಳೆ ಮುಸ್ಲಿಮರಿಗೆ ನೀವು ಏನು ಮಾಡಿದ್ದೀರಪ್ಪಾ ಎಂದು ರೇವಣ್ಣ ಪ್ರಶ್ನಿಸಿದ್ದಾರೆ. ಅಷ್ಟು ವರ್ಷ ಆಡಳಿತದಲ್ಲಿದ್ದ ನೀವು ಏನು ಮಾಡಿದ್ದೀರಾ? ಮೀಸಲಾತಿ ಕೊಡಲು ದೇವೇಗೌಡರು ಬರಬೇಕಾಯಿತು ನಿಮ್ಮ ಸಾಧನೆ ಏನು ಎಂದು ರೇವಣ್ಣ ಪ್ರಶ್ನೆ ಮಾಡಿದ್ದಾರೆ.