ಧರ್ಮಾ ಗಾರ್ಡಿಯನ್ 2022 ಅಂಗವಾಗಿ ಅಣುಕು ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು ಭಾರತ ಮತ್ತು ಜಪಾನ್ ಯೋಧರು

ಧರ್ಮಾ ಗಾರ್ಡಿಯನ್ 2022 ಅಂಗವಾಗಿ ಅಣುಕು ಕಾರ್ಯಾಚರಣೆಯಲ್ಲಿ ಪಾಲ್ಗೊಂಡರು ಭಾರತ ಮತ್ತು ಜಪಾನ್ ಯೋಧರು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 09, 2022 | 5:23 PM

ಒಬ್ಬ ಸೈನಿಕ ಗೋಡೆ ಹತ್ತಿ ಮೊದಲ ಮಹಡಿಗೆ ಹೋಗುವುದನ್ನು ಗಮನಿಸಿ ಮಾರಾಯ್ರೇ. ಮೈ ನವಿರೇಳುತ್ತದೆ. ಮೇಲೆ ಹತ್ತಲು ಮೆಟ್ಟಿಲುಗಳಿಲ್ಲ, ಹಗ್ಗದ ನೆರವೂ ಇಲ್ಲ. ಮುರಿದ ಮರದ ಕೊಂಬೆಯನ್ನು ನಿಚ್ಚಣಿಕೆಯ ಹಾಗೆ ಬಳಸಿ ಸೈನಿಕನೊಬ್ಬ ಮೇಲೆ ಹತ್ತುತ್ತಾನೆ.

ಭಾರತ ಮತ್ತು ಜಪಾನ್ ಸೇನೆಯ ಯೋಧರು ಬುಧವಾರದಂದು ‘ಧರ್ಮ ಗಾರ್ಡಿಯನ್ 2022’ (Dharma Guardian 2022) ಅಂಗವಾಗಿ ಕರ್ನಾಟಕ ಬೆಳಗಾವಿಯ (Belagavi) ಮರಾಠಾ ಲೈಟ್ ಇನ್ಫೆಂಟ್ರಿ ರೆಜಿಮೆಂಟಲ್ ಸೆಂಟರ್ ನಲ್ಲಿ ಒಂದು ಜಂಟಿ ಅಣುಕು ಕಾರ್ಯಾಚರಣೆ ನಡೆಸಿದರು. ಭಾರತ ಮತ್ತು ಜಪಾನ್ ಸೇನಾ ತುಕುಡಿಗಳು ವಾರ್ಷಿಕ ಮಿಲಿಟರಿ ತರಬೇತಿ (military training) ಕಾರ್ಯಾಚರಣೆಯರನ್ನು ಫೆಬ್ರುವರಿ 27ರಂದು ಆರಂಭಿಸಿದ್ದು ಮಾರ್ಚ್ 10 ರವರೆಗೆ ಜಾರಿಯಲ್ಲಿರುತ್ತದೆ. ಭಾರತೀಯ ಸೇನಾದಳದ ಮರಾಠಾ ಲೈಟ್ ಇನ್ಫೆಂಟ್ರಿಯ 15 ನೇ ಬೆಟಾಲಿಯನ್ ಮತ್ತು ಜಪಾನೀಸ್ ಗ್ರೌಂಡ್ ಸೆಲ್ಫ್ ಡಿಫೆನ್ಸ್​ 30ನೇ ರೆಜಿಮೆಂಟ್ (ಜೆ ಜಿ ಎಸ್ ಡಿ ಎಫ್) ಅಣುಕು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದವು. ‘ಧರ್ಮಾ ಗಾರ್ಡಿಯನ್ 2022’ ಒಂದು ಮಿಲಿಟರಿ ತರಬೇತಿ ಕಾರ್ಯಾಚರಣೆಯಾಗಿದ್ದು ಇದು 2018 ರಿಂದ ಪ್ರತಿವರ್ಷ ಭಾರತದಲ್ಲಿ ನಡೆಯುತ್ತಿದೆ.

ಭಯೋತ್ಪಾದಕರ ಅಡಗುತಾಣವೊಂದರ ಮೇಲೆ ಹೇಗೆ ಕಾರ್ಯಾಚರಣೆ ನಡೆಯುತ್ತದೆ ಅನ್ನುವುದರ ಡೆಮೋ ಈ ವಿಡಿಯೋನಲ್ಲಿ ನೀವು ನೋಡಬಹುದು. ಉರಿ: ದಿ ಸರ್ಜಿಕಲ್ ಸ್ಟ್ರೈಕ್ ಸಿನಿಮಾ ನೋಡಿದವರಿಗೆ ಸೇನಾ ಕಾರ್ಯಾಚರಣೆ ಹೇಗಿರುತ್ತದೆ ಅಂತ ಗೊತ್ತಿರುತ್ತದೆ. ಆದರೆ ಅದು ನೈಜ ಘಟನೆಯನ್ನು ಆಧರಿಸಿದ ಸಿನಿಮಾ. ಈ ವಿಡಿಯೋ ಅಣುಕು ಕಾರ್ಯಚರಣೆಯ ಭಾಗವಾದರೂ ಅದು ಹೇಗಿರುತ್ತದೆ ಎಂಬ ಚಿತ್ರಣ ನಮಗೆ ಸಿಗುತ್ತದೆ.

ಒಬ್ಬ ಸೈನಿಕ ಗೋಡೆ ಹತ್ತಿ ಮೊದಲ ಮಹಡಿಗೆ ಹೋಗುವುದನ್ನು ಗಮನಿಸಿ ಮಾರಾಯ್ರೇ. ಮೈ ನವಿರೇಳುತ್ತದೆ. ಮೇಲೆ ಹತ್ತಲು ಮೆಟ್ಟಿಲುಗಳಿಲ್ಲ, ಹಗ್ಗದ ನೆರವೂ ಇಲ್ಲ. ಮುರಿದ ಮರದ ಕೊಂಬೆಯನ್ನು ನಿಚ್ಚಣಿಕೆಯ ಹಾಗೆ ಬಳಸಿ ಸೈನಿಕನೊಬ್ಬ ಮೇಲೆ ಹತ್ತುತ್ತಾನೆ. ನೆಲದ ಮೇಲೆ ನಿಂತಿರುವ ಇಬ್ಬರು ಸೈನಿಕರು ರೆಂಬೆಯನ್ನು ಮೇಲಕ್ಕೆತ್ತುತ್ತಾ ಹೋಗುತ್ತಾರೆ, ಹತ್ತವವನು ಅದನ್ನು ಆಧಾರವಾಗಿ ಹಿಡಿದುಕೊಂಡು ಮೇಲಕ್ಕೆ ಹೋಗುತ್ತಾನೆ. ಅವರ ನಡುವೆ ಸಮನ್ವಯತೆ ಮತ್ತು ಟೈಮಿಂಗ್ ಬಹಳ ಮುಖ್ಯ. ಕೊಂಚವೇ ಎಡವಟ್ಟಾದರು ಹತ್ತುವವನು ಕೆಳಗೆ ಬೀಳುತ್ತಾನೆ.

ಇದನ್ನೂ ಓದಿ:   Uttar Pradesh: ಉತ್ತರ ಪ್ರದೇಶದಲ್ಲಿ ಇವಿಎಂ ಪ್ರೋಟೋಕಾಲ್​ನಲ್ಲಿ ಲೋಪವಾಗಿದೆ ಎಂದು ಒಪ್ಪಿಕೊಂಡ ವಿಡಿಯೋ ವೈರಲ್; ಶೀಘ್ರ ತನಿಖೆಗೆ ಎಸ್​ಪಿ ಒತ್ತಾಯ