ರಷ್ಯಾದ ವೈಮಾನಿಕ ದಾಳಿಗೆ ತುತ್ತಾಗಿರುವ ಸುಂದರ ನಗರ ಸುಮಿ ಈಗ ಬೆಂಗಾಡಿನಂತೆ ಕಾಣುತ್ತಿದೆ!
ಭಾರತೀಯರು ಅಲ್ಲಿಂದ ಹೊರಟ ಮೇಲೆ ಸ್ಥಳೀಯರನ್ನು ಸಹ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ನಾಗರಿಕರನ್ನು ಶಿಫ್ಟ್ ಮಾಡಿದ ಬಳಿಕ ರಷ್ಯಾ ನಗರದ ಮೇಲೆ ವೈಮಾನಿಕ ದಾಳಿ ಆರಂಭಿಸಿದೆ.
ರಷ್ಯಾದ ಸರ್ವಾಧಿಕಾರಿ ವ್ಲಾದಿಮಿರ್ ಪುಟಿನ್ (Vladimir Putin) ಹುಚ್ಚುತನಕ್ಕೆ ಸುಮಿ (Sumy) ನಗರದ ಸ್ಥಿತಿ ನೋಡಿ ಏನಾಗಿದೆ. ಇದೇ ನಗರದಲ್ಲಿ ಮಂಗಳವಾರದವರೆಗೆ ಭಾರತದ ಸುಮಾರು 700 ವಿದ್ಯಾರ್ಥಿಗಳು ಸಿಲಕಿದ್ದರು. ಭಾರತ ಸರ್ಕಾರದ ಆಗ್ರಹ, ಮತ್ತು ಅಂತರರಾಷ್ಟ್ರೀಯ ಒತ್ತಡಕ್ಕೆ ಮಣಿದು ಕೆಲಗಂಟೆಗಳ ಕಾಲ ಯುದ್ದವಿರಾಮ (ceasefire) ಘೋಷಿಸಿದ್ದರಿಂದ ಅವರು ಅಲ್ಲಿಂದ ಪಾರಾಗಿ ಪೋಲಿಷ್ (Polish border) ಗಡಿಭಾಗಕ್ಕೆ ಬರುವುದು ಸಾಧ್ಯವಾಯಿತು. ಆದರೆ ಅವರು 13 ದಿನಗಳ ಅನುಭವಿಸಿದ ಭೀತಿ, ಆತಂಕ ಪದಗಳಲ್ಲಿ ಹೇಳುವುದು ಸಾಧ್ಯವಿಲ್ಲ ಮಾರಾಯ್ರೇ. ಹೊಟ್ಟೆಗೆ ಸರಿಯಾಗಿ ಅಹಾರವಿಲ್ಲ, ನೀರಿಲ್ಲ ಇನ್ನು ಕಣ್ಣಿಗೆ ನಿದ್ರೆ ಹೇಗೆ ಬಂದೀತು. ಅದಲ್ಲದೆ ಬಾಂಬ್ ಗಳು ಸಿಡಿಯುತ್ತಿದ್ದ ಸದ್ದು ಸತತವಾಗಿ ಕಿವಿಗೆ ಬೀಳುತ್ತಿದ್ದರೆ ನಿತ್ರಾಣ, ಆಯಾಸ, ಬಳಲಿಕೆಯಿಂದ ಕಣ್ಣು ತಾನಾಗೇ ಮುಚ್ಚಿಕೊಂಡರೂ ಬಾಂಬ್ ಸದ್ದಿಗೆ ಪಟ್ಟನೆ ತೆರೆದುಕೊಳ್ಳುತ್ತಿದ್ದವು. ಅಲ್ಲಿ ಸಿಲುಕಿದ್ದ ಬಾರತೀಯರಿಗೆ ಈ ದುಸ್ವಪ್ನದಿಂದ ಹೊರಬರಲು ಸಮಯ ಹಿಡಿಯಲಿದೆ.
ಭಾರತೀಯರು ಅಲ್ಲಿಂದ ಹೊರಟ ಮೇಲೆ ಸ್ಥಳೀಯರನ್ನು ಸಹ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ. ನಾಗರಿಕರನ್ನು ಶಿಫ್ಟ್ ಮಾಡಿದ ಬಳಿಕ ರಷ್ಯಾ ನಗರದ ಮೇಲೆ ವೈಮಾನಿಕ ದಾಳಿ ಆರಂಭಿಸಿದೆ. ಸುಂದರವಾಗಿದ್ದ ಪುಟ್ಟ ನಗರ ಯಾವ ಪ್ರಮಾಣದಲ್ಲಿ ಹಾಳಾಗಿದೆ ಅಂತ ನೋಡಿ. ಯುದ್ಧ ನಿಂತ ಮೇಲೆ ಇದು ಮೊದಲಿನ ಸುಮಿ ನಗರ ಆಗಲು ಸಾಧ್ಯವೇ?
ಧ್ವಂಸಗೊಂಡಿರುವ ಕಟ್ಟಡಗಳು, ಬಾಂಬ್ ಗಳು ಸ್ಫೋಟಗೊಂಡು ಅದರಿಂದ ಸೃಷ್ಟಿಯಾದ ಬೆಂಕಿಗೆ ಸುಟ್ಟು ಕರಕಲಾದ ಗಿಡಮರಗಳು-ಇಲ್ಲಿ ವಾಸವಾಗಿದ್ದ ಜನರಿಗೆ ಇಂಥ ವಿಡಿಯೋಗಳನ್ನು ನೋಡಿ ಹೇಗಾಗಿರಬೇಡ ಅಂತ ಯೋಚಿಸಿ. ಸುಮಿ ಮಾತ್ರ ಅಲ್ಲ ಉಕ್ರೇನಿನ ಬೇರೆ ನಗರಗಳ ಸ್ಥಿತಿಯೂ ಹೀಗೆಯೇ ಆಗಿದೆ.
20 ಲಕ್ಷಕ್ಕೂ ಹೆಚ್ಚು ಉಕ್ರೇನಿಯನ್ನರು ಜೀವ ಉಳಿಸಿಕೊಳ್ಳಲು ಪಕ್ಕದ ದೇಶಗಳಿಗೆ ನಿರಾಶ್ರಿತರ ಶಿಬಿರಗಳಲ್ಲಿ ಬದುಕುತ್ತಿದ್ದಾರೆ.