ನನ್ನ ವಾಹನ ಕಳುವಾಗಿದೆ ಅಂತ ಪೊಲೀಸ್ ಮುಖ್ಯಪೇದೆಯೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ!!

ನನ್ನ ವಾಹನ ಕಳುವಾಗಿದೆ ಅಂತ ಪೊಲೀಸ್ ಮುಖ್ಯಪೇದೆಯೊಬ್ಬರು ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ!!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Mar 09, 2022 | 7:31 PM

ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯಾವಳಿಯ ಪ್ರಕಾರ ಮಹಾರಾಜಾ ಸರ್ಕಲ್ ಕಡೆಯಿಂದ ಮಹಾರಾಜಾನಂತೆ ಬರುವ ಕಳ್ಳ ಯಾವುದೇ ಪ್ರಯಾಸಪಡದೆ ಉಮೇಶ್ ಅವರ ವಾಹನವನ್ನು ಸ್ಟಾರ್ಟ್ ಮಾಡಿಕೊಂಡು ಭುರ್ ಅಂತ ಹೋಗಿಬಿಡುತ್ತಾನೆ.

ಪೊಲೀಸ್ ಹೆಡ್ ಕಾನಸ್ಟೇಬಲ್ (head constable) ಒಬ್ಬರು ತಾವು ಕೆಲಸ ಮಾಡುವ ಠಾಣೆಗೆ ತೆರಳಿ ನನ್ನ ಸ್ಕೂಟರ್ (scooter) ಕಳುವಾಗಿದೆ, ದಯವಿಟ್ಟು ಹುಡುಕಿ ಕೊಡಿ ಅಂತ ದೂರು ಸಲ್ಲಿಸಿದರೆ ಅದರಿಂದ ನಾವು ಅರ್ಥ ಮಾಡಿಕೊಳ್ಳಬಹುದಾದ ಸಂಗತಿ ಏನು? ಒಂದಲ್ಲ ಹಲವಾರು ಸಂಗತಿಗಳನ್ನು ನಾವು ಗ್ರಹಿಸಿಕೊಳ್ಳಬಹುದು ಮಾರಾಯ್ರೇ. ಮೊದಲನೆಯದ್ದು-ವಾಹನ ಕಳ್ಳರಲ್ಲಿ ಪೊಲೀಸರ ವಾಹನ ಸಾಮಾನ್ಯರ ವಾಹನ ಎಂಬ ತಾರತಮ್ಯವಿಲ್ಲ. ಅವರ ದೃಷ್ಟಿಯಲ್ಲಿ ಎಲ್ಲರೂ ಸಮಾನರು! ಎರಡನೇಯದ್ದು, ಪೊಲೀಸ್ ಅಂದರೆ ಥರಥರ ನಡುಗುತ್ತಿದ್ದ ಕಳ್ಳರಿಗೆ ಈಗ ಆ ಭಯವಿಲ್ಲ. ಮತ್ತೊಂದು ಸಂಗತಿಯೆಂದರೆ, ಪೊಲೀಸರಿಗೆ ಸೇರಿದ ವಸ್ತುವೊಂದು ಕಳುವಾಗುತ್ತಿರುವುದು ಇದು ಮೊದಲ ಸಲವೇನಲ್ಲ.

ಇದನ್ನೆಲ್ಲ ಯಾಕೆ ಹೇಳಬೇಕಾಗಿದೆಯೆಂದರೆ, ಇಲಾಖೆಯಲ್ಲಿ ಮುಖ್ಯಪೇದೆಯಾಗಿ ಕೆಲಸ ಮಾಡುತ್ತಿರುವ ಉಮೇಶ್ ಅವರು ಬೆಂಗಳೂರು ಕೋರಮಂಗಲದ ಮಹಾರಾಜಾ ಸಿಗ್ನಲ್ ಬಳಿಯಿರುವ ಬ್ಯಾಂಕ್ ಒಂದರ ಬಳಿ ತಮ್ಮ ಸ್ಕೂಟರ್ ನಿಲ್ಲಿಸಿ ಬ್ಯಾಂಕ್ನೊಳಗೆ ಹೋಗಿದ್ದಾರೆ. ಅವರು ಒಳಗೆ ಹೋಗುವಾಗ ಪ್ರಾಯಶಃ ತಮ್ಮ ವಾಹನವನ್ನು ಲಾಕ್ ಮಾಡುವುದ ಮರೆತಂತೆ ಕಾಣುತ್ತದೆ. ಇದು ಕಳೆದ ತಿಂಗಳು ನಡೆದಿರುವ ಘಟನೆ.

ಸಿಸಿಟಿವಿಯಲ್ಲಿ ಸೆರೆಯಾಗಿರುವ ದೃಶ್ಯಾವಳಿಯ ಪ್ರಕಾರ ಮಹಾರಾಜಾ ಸರ್ಕಲ್ ಕಡೆಯಿಂದ ಮಹಾರಾಜಾನಂತೆ ಬರುವ ಕಳ್ಳ ಯಾವುದೇ ಪ್ರಯಾಸಪಡದೆ ಉಮೇಶ್ ಅವರ ವಾಹನವನ್ನು ಸ್ಟಾರ್ಟ್ ಮಾಡಿಕೊಂಡು ಭುರ್ ಅಂತ ಹೋಗಿಬಿಡುತ್ತಾನೆ. ಅವನ ಬಳಿ ಏನಾದರೂ ಮಾಸ್ಟರ್ ಕೀ ಇತ್ತಾ? ಆ ಸಾಧ್ಯತೆಯೂ ಇದೆ.

ಪೊಲೀಸರು ಕಳ್ಳತನವಾಗಿರುವ ಪೊಲೀಸನ ವಾಹನವನ್ನು ಹುಡುಕುತ್ತಿದ್ದಾರೆ!

ಇದನ್ನೂ ಓದಿ:  ಭಾರಿ ಗಾತ್ರದ ಹೆಬ್ಬಾವು ರಸ್ತೆ ದಾಟಲು ನಿಮಿಷಗಳೇ ಬೇಕಾಯ್ತು, ವೈರಲ್ ಆಗಿರುವ ವಿಡಿಯೋ ನೋಡಿದರೆ ನಿಮಗೆ ಗೊತ್ತಾಗುತ್ತದೆ!