AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಮ್ ಸಾಥ್-ಸಾತ್​ ನಹೀ ನೌ ಹೈ ಅನ್ನುತ್ತಿದೆ ಬೈಕ್ ಮೇಲೆ ಸವಾರಿ ಹೊರಟಿರುವ ಕೊಪ್ಪಳದ ಈ ಕುಟುಂಬ!

ಹಮ್ ಸಾಥ್-ಸಾತ್​ ನಹೀ ನೌ ಹೈ ಅನ್ನುತ್ತಿದೆ ಬೈಕ್ ಮೇಲೆ ಸವಾರಿ ಹೊರಟಿರುವ ಕೊಪ್ಪಳದ ಈ ಕುಟುಂಬ!

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ|

Updated on: Mar 10, 2022 | 6:03 PM

Share

ಆತ ಕೂತಿರೋದು ಬೈಕ್ ಹಿಂಭಾಗದಲ್ಲಿ ಅಂದರೆ ಸೀಟಿಗೆ ಅಂಟಿಕೊಂಡಂತೆ ಒಂದು ಉಕ್ಕಿನ ಎಕ್ಸ್ಟೆನ್ಷನ್ ಬರುತ್ತಲ್ಲ...ಅದರ ಮೇಲೆ! ವಾಹನವೇನೋ ಮುಂದೆ ಸಾಗುತ್ತಿದೆ. ಅದರೆ ಈತನ ಮೂಕವೇದನೆ ಯಾರಿಗೆ ಗೊತ್ತಾದೀತು?

ಸಹಕುಟುಂಬ ಸಹಪರಿವಾರದೊಂದಿಗೆ ಆಗಮಿಸಬೇಕು ಅಂತ ನೀಡಿರುವ ಅಮಂತ್ರಣವನ್ನು ಕೊಪ್ಪಳದ ಗಿಣಿಗೇರಾ (Ginigera) ಗ್ರಾಮದ ಈ ಕುಟುಂಬ ಅಕ್ಷರಶಃ ಪಾಲಿಸುತ್ತಿದೆ. ಮಾಧುರಿ ದೀಕ್ಷಿತ್ (Madhuri Dixit) ಅವರ ಏಕ್ ದೋ ತೀನ್ ಹಾಡಿನಲ್ಲಿ ಸಂಖ್ಯೆಗಳ ಎಣಿಕೆ ಮುಗಿಯುತ್ತಾದರೂ ಈ ಬೈಕ್ ಮೇಲೆ ಕುಳಿತು ಸವಾರಿ ಮಾಡುತ್ತಿರುವವರ ಗಣತಿ ಮುಗಿಯಲಾರದು! ನೀವು ಎಣಿಸಲು ಆರಂಭಿಸಿದರೆ ಲೆಕ್ಕ ತಪ್ಪುವುದು ನಿಶ್ವಿತ. ಒಮ್ಮೆ ಪ್ರಯತ್ನಿಸಿ ನೋಡಿ. ಗಿಣಿಗೇರಾ ಗ್ರಾಮದಿಂದ ಗಂಗಾವತಿಗೆ (Gangavati) ಜಂಬೋ ಸವಾರಿ ಮಾಡುತ್ತಿರುವ ಕುಟುಂಬದ ವಿಡಿಯೋ ರೆಕಾರ್ಡ್ ಮಾಡಿ ನಮಗೆ ಕಳಿಸಿರುವವರು ಹೇಳುವ ಪ್ರಕಾರ ಬಡಪಾಯಿ ಬೈಕ್ ಮೇಲೆ ಒಂಬತ್ತು ಜನ ಸವಾರರಾಗಿದ್ದಾರೆ, ಅವರಲ್ಲಿ ನಾಲ್ವರು ವಯಸ್ಕರು ಮತ್ತು ಐವರು ಮಕ್ಕಳು!

ಬೈಕ್ ಓಡಿಸುತ್ತಿರುವ ವ್ಯಕ್ತಿಯ ಮುಖದಲ್ಲಿ ಯಾವುದೇ ಆತಂಕ ಕಾಣುವುದಿಲ್ಲ. ಇದಕ್ಕೆ ಮೊದಲು ಸಹ ಅವರು ಹೀಗೆ ಸವಾರಿ ಹೊರಟಿರಬಹುದು ಅನಿಸುತ್ತದೆ. ಎಲ್ಲರಿಗಿಂತ ಹಿಂದೆ ಕುಳಿತಿರುವ ಸ್ಥಿತಿ ನೆನೆಸಿಕೊಂಡರೆ ಅಯ್ಯೋ ಅನಿಸುತ್ತದೆ ಮಾರಾಯ್ರೇ. ಯಾಕೆ ಅಂತ ನೀವು ಊಹಿಸಬಹುದು. ಆತ ಕೂತಿರೋದು ಬೈಕ್ ಹಿಂಭಾಗದಲ್ಲಿ ಅಂದರೆ ಸೀಟಿಗೆ ಅಂಟಿಕೊಂಡಂತೆ ಒಂದು ಉಕ್ಕಿನ ಎಕ್ಸ್ಟೆನ್ಷನ್ ಬರುತ್ತಲ್ಲ…ಅದರ ಮೇಲೆ! ವಾಹನವೇನೋ ಮುಂದೆ ಸಾಗುತ್ತಿದೆ. ಅದರೆ ಈತನ ಮೂಕವೇದನೆ ಯಾರಿಗೆ ಗೊತ್ತಾದೀತು?

ತಮಾಷೆ ಪಕ್ಕಕ್ಕಿಟ್ಟು ಈ ದೃಶ್ಯವನ್ನು ನೋಡುವುದಾದರೆ, ಬೈಕ್ ಸವಾರ ತನ್ನೊಂದಿಗೆ ಉಳಿದ ಎಂಟು ಜನರ ಪ್ರಾಣವನ್ನು ಪಣಕ್ಕೊಡ್ಡಿ ವಾಹನ ಓಡಿಸುತ್ತಿದ್ದಾನೆ. ಇದು ಹುಚ್ಚು ಸಾಹಸ. ಮಕ್ಕಳು ಬಿಡಿ, ಅವರಿಗೆ ಗೊತ್ತಾಗುವುದಿಲ್ಲ, ಅದರೆ, ಬೈಕ್ ಮೇಲೆ 4 ಜನ ವಯಸ್ಕರಿದ್ದಾರೆ. ಅವರಲ್ಲಿ ಒಬ್ಬರಿಗಾದರೂ ಈ ಸಾಹಸ ಸರಿ ಅಲ್ಲ ಅಂತ ಅನಿಸಬೇಕಿತ್ತು.

ಇದನ್ನೂ ಓದಿ:   Viral Video: ಟ್ರೆಡ್‌ಮಿಲ್‌ ಮೇಲೆ ವಾಕ್ ಮಾಡಿದ ಬಾತುಕೋಳಿ; ಮುದ್ದಾದ ವಿಡಿಯೋ ಕಂಡು ನೆಟ್ಟಿಗರು ಹೇಳಿದ್ದೇನು ಗೊತ್ತಾ?