ಪಿಲ್ಲರ್​ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಟಿಪ್ಪರ್; ವಾಹನದಲ್ಲೇ ಚಾಲಕ ಸಜೀವ ದಹನ

ಪಿಲ್ಲರ್​ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಟಿಪ್ಪರ್; ವಾಹನದಲ್ಲೇ ಚಾಲಕ ಸಜೀವ ದಹನ
ಬೆಂಕಿಗಾಹುತಿಯಾದ ಟಿಪ್ಪರ್.

ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪ್ಲೈ ಓವರ್ ಪಿಲ್ಲರ್​ಗೆ ಟಿಪ್ಪರ್ ಡಿಕ್ಕಿಯೊಡೆದಿದೆ. ಡಿಕ್ಕಿ ರಭಸಕ್ಕೆ ಟಿಪ್ಪರ್ ನಜ್ಜುಗುಜ್ಜಾದ ಹಿನ್ನಲೆ ವಾಹನದೊಳಗೆ ಚಾಲಕ ಸಿಲುಕಿಕೊಂಡಿದ್ದಾನೆ. ವಾಹನದಿಂದ ಹೊರಬರಲಾಗದೇ ಚಾಲಕ ಸಜೀವ ದಹನವಾಗಿದ್ದಾನೆ.

TV9kannada Web Team

| Edited By: ಗಂಗಾಧರ್​ ಬ. ಸಾಬೋಜಿ

Mar 17, 2022 | 9:44 AM

ಮಂಡ್ಯ: ಪಿಲ್ಲರ್​ಗೆ ಡಿಕ್ಕಿ ಹೊಡೆದ ಪರಿಣಾಮ ಟಿಪ್ಪರ್ (tipper) ಹೊತ್ತಿ ಉರಿದಿದ್ದು, ಚಾಲಕ ಸಜೀವ ದಹನವಾದಂತಹ ಘಟನೆ ನಡೆದಿದೆ. ಮದ್ದೂರಿನ ಬೆಂ-ಮೈ ಹೆದ್ದಾರಿಯ ಎಲ್.ಐ.ಸಿ ಕಛೇರಿ ಮುಂಭಾಗ ಘಟನೆ ಸಂಭವವಿಸಿದೆ. ಬಿಡದಿಯಿಂದ ಮೈಸೂರಿಗೆ ಜೆಲ್ಲಿ ತುಂಬಿಕೊಂಡು ಟಿಪ್ಪರ್​ ತೆರಳುತ್ತಿದ್ದು, ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯ ಪ್ಲೈ ಓವರ್ ಪಿಲ್ಲರ್​ಗೆ ಟಿಪ್ಪರ್ ಡಿಕ್ಕಿಯೊಡೆದಿದೆ. ಡಿಕ್ಕಿ ರಭಸಕ್ಕೆ ಟಿಪ್ಪರ್ ನಜ್ಜುಗುಜ್ಜಾದ ಹಿನ್ನಲೆ ವಾಹನದೊಳಗೆ ಚಾಲಕ ಸಿಲುಕಿಕೊಂಡಿದ್ದಾನೆ. ವಾಹನದಿಂದ ಹೊರಬರಲಾಗದೇ ಚಾಲಕ ಸಜೀವ ದಹನವಾಗಿದ್ದಾನೆ. ಚಾಲಕನನ್ನು ಹಾಸನ ಮೂಲದ ದಿನೇಶ್ ಎಂದು ಗುರುತಿಸಲಾಗಿದೆ. ಅಗ್ನಿಶಾಮಕ ಮತ್ತು ಪೋಲೀಸ್ ಸಿಬ್ಬಂದಿಗಳು ಬೆಂಕಿ ನಂದಿಸಿ ಚಾಲಕನ ಶವ ಹೊರ ತೆಗೆದಿದ್ದಾರೆ. ಘಟನೆ ಹಿನ್ನೆಲೆ ಕಿಲೋಮೀಟರ್ ಗಟ್ಟಲೇ ಟ್ರಾಫಿಕ್ ಜಾಮ್ ಉಂಟಾಗಿದ್ದು, ಟಿಪ್ಪರ್ ಪಕ್ಕಕ್ಕೆ ಸರಿಸಿ ಸಂಚಾರಕ್ಕೆ ಪೊಲೀಸರು ಅನುವು ಮಾಡಿಕೊಟ್ಟಿದ್ದಾರೆ. ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಒಂಟಿ ಮಹಿಳೆಯ ಬರ್ಬರ ಹತ್ಯೆ:

ಹಾಸನ: ಒಂಟಿ ಮಹಿಳೆಯ ಬರ್ಬರ ಹತ್ಯೆಯಾಗಿರುವಂತಹ ಘಟನೆ ನಡೆದಿದೆ. ಹಾಸನ ತಾಲ್ಲೂಕಿನ ದೊಡ್ಡಪುರ ಗ್ರಾಮದಲ್ಲಿ ಘಟನೆ ಸಂಭವಿಸಿದ್ದು, ಮನೆಯ ಬಳಿಯೇ ಕೊಚ್ಚಿ ಕೊಂದು ಹಂತಕರು ಎಸ್ಕೇಪ್ ಆಗಿದ್ದಾರೆ. ಗ್ರಾಮದ ಗುರುಪ್ರಸಾದ್ ಪತ್ನಿ ರೇವತಿ(35) ಕೊಲೆಯಾದ ಮಹಿಳೆ. ಮನೆಯಲ್ಲಿ ಪತಿ ಹಾಗು ಮಕ್ಕಳು ಇಲ್ಲದ ವೇಳೆ ದಾಳಿ ಮಾಡಿ ಹತ್ಯೆ ಮಾಡಿದ್ದಾರೆ. ಅತ್ಯಾಚಾರಕ್ಕೆ ಯತ್ನಿಸಿದ್ದು, ಮಹಿಳೆ ಪ್ರತಿರೋಧ ತೋರಿದಾಗ ಕೊಚ್ಚಿ ಕೊಂದಿರೊ ಶಂಕೆ ವ್ಯಕ್ಯವಾಗಿದೆ. ನೆನ್ನೆ ಸಂಜೆ ಮನೆ ಹೊರಗೆ ಬಟ್ಟೆ ತೊಳೆಯುತ್ತಾ ಕುಳಿತಿದ್ದ ಮಹಿಳೆ ಮೇಲೆ ಅಟ್ಯಾಕ್ ಮಾಡಿ ಹತ್ಯೆ  ಮಾಡಲಾಗಿದೆ. ಸ್ಥಳಕ್ಕೆ ಶ್ವಾನದಳ, ಹೆಚ್ಚುಎಸ್ಪಿ ಡಾ.ನಂದಿನಿ ಸೇರಿ ಪೊಲೀಸ್ ಅಧಿಕಾರಿಗಳು ಬೇಟಿ ಮಾಡಿದ್ದಾರೆ. ಹಾಸನ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ತಲಾ 5 ಲಕ್ಷ ರೂ. ಪರಿಹಾರ:

ಯಾದಗಿರಿ: ಜಿಲ್ಲೆಯ ಶಹಾಪುರ ತಾಲೂಕಿನ ದೋರನಹಳ್ಳಿಯಲ್ಲಿ ಸಿಲಿಂಡರ್ ಸ್ಫೋಟದಿಂದ ಹದಿನೈದು ಜನ ಸಾವು ಹಿನ್ನೆಲೆ, ಹದಿನೈದು ಮೃತರ ಕುಟುಂಬಕ್ಕೆ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗಿದೆ. ಪರಿಹಾರ ನೀಡುವ ಬಗ್ಗೆ ವಿಧಾನಸಭೆಯಲ್ಲಿ ಒತ್ತಾಯ ವ್ಯಕ್ತವಾಗಿದೆ. ಸಿಎಂ ಪರಿಹಾರ ನಿಧಿಯಿಂದ ನೀಡಲು ಸಿಎಂ ಅನುಮೋದನೆ ಮಾಡಿದ್ದು, ಒಟ್ಟು 75 ಲಕ್ಷ ರೂ. ಸಿಎಂ ಪರಿಹಾರ ನಿಧಿ ಖಾತೆಯಿಂದ ಯಾದಗಿರಿ ಡಿಸಿ ಖಾತೆಗೆ ಬಿಡುಗಡೆಯಾಗಲಿದೆ. ಶನಿವಾರ ದೋರನಹಳ್ಳಿಗೆ ಸಿಎಂ ತೆರಳಿ ಪರಿಹಾರ ವಿತರಿಸಲಿದ್ದಾರೆ.

ಇದನ್ನೂ ಓದಿ:

Puneeth Rajkumar: ರಾಜರತ್ನ ಪುನೀತ್; ಅಪ್ಪು ನೆನಪಿನ ಅಪರೂಪದ ಫೋಟೋ ಆಲ್ಬಂ ಇಲ್ಲಿದೆ

Follow us on

Related Stories

Most Read Stories

Click on your DTH Provider to Add TV9 Kannada