AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಂಚಕ್ಕೆ ಬೇಡಿಕೆಯಿಟ್ಟಿದ್ದ ಸಬ್​​ ಇನ್ಸ್​ಪೆಕ್ಟರ್​​ಗೆ 3 ವರ್ಷ ಜೈಲು; ಪ್ರತಿಕೂಲ ಸಾಕ್ಷ್ಯ ನುಡಿದಿದ್ದ ದೂರುದಾರ!

ಲಂಚಕ್ಕೆ ಬೇಡಿಕೆಯಿಟ್ಟಿದ್ದ ಪೊಲೀಸ್​ ಸಬ್​​ಇನ್ಸ್​ಪೆಕ್ಟರ್​​ಗೆ 3 ವರ್ಷ ಜೈಲು ಸಜೆ ಮತ್ತು 25 ಸಾವಿರ ರೂಪಾಯಿ ದಂಡ ವಿಧಿಸಿ 23ನೇ ಸಿಟಿ ಸಿವಿಲ್ ನ್ಯಾಯಾಲಯ ಆದೇಶ ನೀಡಿದೆ. 2018ರಲ್ಲಿ ಎಸಿಬಿಯಲ್ಲಿ ದಾಖಲಾಗಿದ್ದ ಪ್ರಕರಣ ಇದಾಗಿದೆ. ಅಂದಿನ ಬಿಎಂಟಿಎಫ್ ಠಾಣೆ ಸಬ್​​ಇನ್ಸ್​ಪೆಕ್ಟರ್ ಶಿವಕುಮಾರ್ ಶಿಕ್ಷೆಗೊಳಗಾದ ಪೊಲೀಸ್​ ಅಧಿಕಾರಿ.

ಲಂಚಕ್ಕೆ ಬೇಡಿಕೆಯಿಟ್ಟಿದ್ದ ಸಬ್​​ ಇನ್ಸ್​ಪೆಕ್ಟರ್​​ಗೆ 3 ವರ್ಷ ಜೈಲು; ಪ್ರತಿಕೂಲ ಸಾಕ್ಷ್ಯ  ನುಡಿದಿದ್ದ ದೂರುದಾರ!
ಲಂಚಕ್ಕೆ ಬೇಡಿಕೆಯಿಟ್ಟಿದ್ದ ಸಬ್​​ಇನ್ಸ್​ಪೆಕ್ಟರ್​​ಗೆ 3 ವರ್ಷ ಜೈಲು; ಪ್ರತಿಕೂಲ ಸಾಕ್ಷ್ಯ ನುಡಿದಿದ್ದ ದೂರುದಾರ!
TV9 Web
| Edited By: ಸಾಧು ಶ್ರೀನಾಥ್​|

Updated on:Mar 17, 2022 | 8:47 PM

Share

ಬೆಂಗಳೂರು: ಲಂಚಕ್ಕೆ ಬೇಡಿಕೆಯಿಟ್ಟಿದ್ದ ಪೊಲೀಸ್​ ಸಬ್​​ಇನ್ಸ್​ಪೆಕ್ಟರ್​​ಗೆ 3 ವರ್ಷ ಜೈಲು ಸಜೆ ಮತ್ತು 25 ಸಾವಿರ ರೂಪಾಯಿ ದಂಡ ವಿಧಿಸಿ 23ನೇ ಸಿಟಿ ಸಿವಿಲ್ ನ್ಯಾಯಾಲಯ ಆದೇಶ ನೀಡಿದೆ. 2018ರಲ್ಲಿ ಭ್ರಷ್ಠಾಚಾರ ನಿಗ್ರಹ ದಳ ಎಸಿಬಿಯಲ್ಲಿ (ACB) ದಾಖಲಾಗಿದ್ದ ಪ್ರಕರಣ ಇದಾಗಿದೆ. ಅಂದಿನ ಬಿಎಂಟಿಎಫ್ (BMTF) ಠಾಣೆ ಸಬ್​​ಇನ್ಸ್​ಪೆಕ್ಟರ್ ಶಿವಕುಮಾರ್ ಶಿಕ್ಷೆಗೊಳಗಾದ ಪೊಲೀಸ್​ ಅಧಿಕಾರಿ. ಪ್ರಕರಣವೊಂದರಲ್ಲಿ ಆರೋಪಿಯ ಕೈಬಿಡಲು ಆರೋಪಿಯಿಂದ 80 ಸಾವಿರ ರೂಪಾಯಿ ಲಂಚಕ್ಕೆ (Bribe) ಎಸ್​ಐ ಶಿವಕುಮಾರ್ ಬೇಡಿಕೆಯಿಟ್ಟಿದ್ದರು. ಕ್ಲರ್ಕ್ ಚೇತನ್ ಮುಖಾಂತರ 50 ಸಾವಿರ ಹಣ ಸ್ವೀಕರಿಸುವಾಗ ಸಿಕ್ಕಿಬಿದ್ದಿದ್ದರು. ಪ್ರಕರಣದ ತನಿಖೆ ನಡೆಸಿ ಮಾರ್ಚ್ 2021ರಲ್ಲಿ ನ್ಯಾಯಾಲಯಕ್ಕೆ ಎಸಿಬಿ ಅಧಿಕಾರಿಗಳು ಚಾರ್ಜ್​ಷೀಟ್ ಸಲ್ಲಿಸಿದ್ದರು.

ಪ್ರತಿಕೂಲ ಸಾಕ್ಷ್ಯ ನುಡಿದಿದ್ದ ದೂರುದಾರನಿಗೆ ಕಾರಣ ಕೇಳಿ ಶೋಕಾಸ್ ನೊಟೀಸ್! ವಿಚಾರಣೆ ವೇಳೆ ದೂರುದಾರ ಅಭಿಯೋಜನೆಗೆ ಪ್ರತಿಕೂಲ ಸಾಕ್ಷ್ಯ ನುಡಿದಿದ್ದರು. ಆದರೆ ಸಾಂದರ್ಭಿಕ ಸಾಕ್ಷ್ಯಗಳನ್ನು ಪರಿಗಣಿಸಿ ಕೋರ್ಟ್ ತೀರ್ಪು ಪ್ರಕಟಿಸಿದೆ. ಅಪರಾಧಿ ಶಿವಕುಮಾರ್ (ಪ್ರಸ್ತುತ ಬೆಂಗಳೂರು ರೈಲ್ವೆ ಪೊಲೀಸ್ ಠಾಣೆ ಇನ್ಸ್ಪೆಕ್ಟರ್) ಹಾಗೂ ಕ್ಲರ್ಕ್ ಚೇತನ್ ಗೆ ತಲಾ 3 ವರ್ಷ ಜೈಲು ಸಜೆ ಮತ್ತು 25 ಸಾವಿರ ರೂ ದಂಡ ವಿಧಿಸಲಾಗಿದೆ. ಇನ್ನು ಅಭಿಯೋಜನೆಗೆ ಪ್ರತಿಕೂಲ ಸಾಕ್ಷ್ಯ ನುಡಿದಿದ್ದ ದೂರುದಾರನಿಗೆ ಕಾರಣ ಕೇಳಿ ಶೋಕಾಸ್ ನೊಟೀಸ್ ಜಾರಿ ಮಾಡಲಾಗಿದೆ.

ಐಎಎಸ್ ಅಧಿಕಾರಿ ವರ್ಗ: ಐಎಎಸ್ ಅಧಿಕಾರಿ ಸಿಂಧೂ ಬಿ. ರೂಪೇಶ್ ಅವರನ್ನು ವರ್ಗಾವಣೆ ಮಾಡಲಾಗಿದೆ. ಪ್ರವಾಸೋದ್ಯಮ ಇಲಾಖೆ ನಿರ್ದೇಶಕಿಯಾಗಿದ್ದ ಸಿಂಧೂ ರೇಷ್ಮೆ ಇಲಾಖೆ ಆಯುಕ್ತರಾಗಿ ಸಿಂಧೂ ರೂಪೇಶ್ ವರ್ಗವಾಗಿದ್ದಾರೆ.

ಜ್ಞಾನೇಂದ್ರ ಕುಮಾರ್ ಮನೆಯಲ್ಲಿ ಎರಡನೇ ದಿನವೂ ಎಸಿಬಿ ಪರಿಶೀಲನೆ: ನಿನ್ನೆ ಬುಧವಾರ ರಾಜ್ಯಾದ್ಯಂತ ಬಿರುಗಾಳಿ ಎಬ್ಬಿಸಿ, ಭ್ರಷ್ಟ ಅಧಿಕಾರಿಗಳಿಗೆ ನಡುಕ ಹುಟ್ಟಸಿದ್ದ ಭ್ರಷ್ಟಾಚಾರ ನಿಗ್ರಹ ದಳವು ಇಂದೂ ಸಹ ತನ್ನ ಬೇಟೆ ಮುಂದುವರಿಸಿದೆ. ಸಾರಿಗೆ ಇಲಾಖೆಯ ರಸ್ತೆ ಸುರಕ್ಷತಾ ವಿಭಾಗದ ಹೆಚ್ಚುವರಿ ಆಯುಕ್ತ ಜ್ಞಾನೇಂದ್ರ ಕುಮಾರ್ ಮನೆಯಲ್ಲಿ 2ನೇ ದಿನವೂ ಎಸಿಬಿ ತಲಾಶ್ ನಡೆಸಿದೆ. ಜ್ಞಾನೇಂದ್ರ ಕುಮಾರ್ ಮನೆಯಲ್ಲಿ ಇಂದು ಸಿಕ್ಕ ಆಸ್ತಿ-ಪಾಸ್ತಿಯ ವಿವರ ಹೀಗಿದೆ:

  1. ಮಾನ್ಯತಾ ಟೆಕ್​ಪಾರ್ಕ್​ನಲ್ಲಿ ಒಂದು ಫ್ಲ್ಯಾಟ್ ಇರುವುದು ಪತ್ತೆ
  2. 20 ಗುಂಟೆ ಜಮೀನು, ಒಂದು ಕಾರು, 413 ಗ್ರಾಂ ಚಿನ್ನಾಭರಣ
  3. 5.5 ಗ್ರಾಂ ವಜ್ರಾಭರಣ, 4 ಕೆಜಿ 461 ಗ್ರಾಂ ಬೆಳ್ಳಿ ವಸ್ತು ಪತ್ತೆ
  4. 2.8 ಲಕ್ಷ ನಗದು, ಬ್ಯಾಂಕ್​​ ಉಳಿತಾಯ ಖಾತೆಯಲ್ಲಿ 8 ಲಕ್ಷ
  5. ದಾಳಿ ವೇಳೆ ₹ 16.30 ಲಕ್ಷ ಗೃಹೋಪಯೋಗಿ ವಸ್ತುಗಳು ಪತ್ತೆ

ಇದನ್ನೂ ಓದಿ: KPSC Recruitment 2022: ಕರ್ನಾಟಕ ಲೋಕಸೇವಾ ಆಯೋಗ ಗ್ರೂಪ್ ಎ ಹುದ್ದೆಗಳಿಗೆ ಅರ್ಜಿ ಅಹ್ವಾನ; ಇಲ್ಲಿದೆ ಸಂಪೂರ್ಣ ಮಾಹಿತಿ

ಇದನ್ನೂ ಓದಿ: ಯಲಹಂಕ: ಸಾಲದ ಕಂತು ಕಟ್ಟಿಲ್ಲವೆಂದು ಬೈಕ್ ಅಡ್ಡಗಟ್ಟಿ ನಿಲ್ಲಿಸಿ, ನಡುರಸ್ತೆಯಲ್ಲೇ ಬೈಕಿಗೆ ಬೆಂಕಿ ಹಚ್ಚಿ ಎಸ್ಕೇಪ್!

Published On - 8:28 pm, Thu, 17 March 22

Follow Us
TV9 Web
TV9 Web

TV9 Kannada

Read More
‘ಸತ್ಯ ಇನ್ ಲವ್’, ‘ಜೋಗಯ್ಯ’ ವಿಗ್ ನನಗೆ ಇಷ್ಟ ಆಗಿರಲಿಲ್ಲ: ಶಿವರಾಜ್​ಕುಮಾರ್
‘ಸತ್ಯ ಇನ್ ಲವ್’, ‘ಜೋಗಯ್ಯ’ ವಿಗ್ ನನಗೆ ಇಷ್ಟ ಆಗಿರಲಿಲ್ಲ: ಶಿವರಾಜ್​ಕುಮಾರ್
ಬೆಂಗಳೂರಿನಲ್ಲಿ ಗುಂಡಿ ಮುಕ್ತ ರಸ್ತೆಗೆ ಕೃಷ್ಣಭೈರೇಗೌಡ ಪಣ
ಬೆಂಗಳೂರಿನಲ್ಲಿ ಗುಂಡಿ ಮುಕ್ತ ರಸ್ತೆಗೆ ಕೃಷ್ಣಭೈರೇಗೌಡ ಪಣ
ದೊಮ್ಮಸಂದ್ರ ಫ್ಲೈಓವರ್ ಕಾಮಗಾರಿ ವಿಳಂಬಕ್ಕೆ ಕೃಷ್ಣಬೈರೇಗೌಡ ಅಸಮಾಧಾನ
ದೊಮ್ಮಸಂದ್ರ ಫ್ಲೈಓವರ್ ಕಾಮಗಾರಿ ವಿಳಂಬಕ್ಕೆ ಕೃಷ್ಣಬೈರೇಗೌಡ ಅಸಮಾಧಾನ
ಮಂಗಳೂರು MRPL ಸ್ಪೋಟ: 2 ಕಿ.ಮೀ ದೂರದಲ್ಲಿರುವ ಚರ್ಚ್​​​ಗೆ ಹಾನಿ
ಮಂಗಳೂರು MRPL ಸ್ಪೋಟ: 2 ಕಿ.ಮೀ ದೂರದಲ್ಲಿರುವ ಚರ್ಚ್​​​ಗೆ ಹಾನಿ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
ಬೆಳಗಾವಿ ಪಾಲಿಕೆ ಸಭೆಯಲ್ಲಿ BJP-ಕಾಂಗ್ರೆಸಿಗರ ನಡುವೆ 'ವಂದೇ ಮಾತರಂ' ಗದ್ದಲ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
4 ಮಂದಿ ರಕ್ಷಣೆ, ಆಸ್ಪತ್ರೆಗೆ ದಾಖಲು; 150 ಆಂಬುಲೆನ್ಸ್ ಸಿದ್ಧ
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಬೀದರ್ ಕೋಟೆಗೆ 'ಕರ್ನಾಟಕ ಪ್ರವಾಸೋದ್ಯಮ ಪ್ರಶಸ್ತಿ'
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಕೇಂದ್ರದ 10 ಅಧಿಕಾರಿಗಳ‌ ತಂಡದಿಂದ ಕರ್ನಾಟಕದಲ್ಲಿ ಬರ ಅಧ್ಯಯನ: ಎಲ್ಲೆಲ್ಲಿ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಬೆಂಗಳೂರು: 4 ಗ್ಯಾಸ್ ಸಿಲಿಂಡರ್ ಸ್ಫೋಟ, ತಪ್ಪಿದ ಭಾರೀ ಅನಾಹುತ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ