ಅಪ್ಪ ಕ್ರಿಮಿನಲ್ ಅಲ್ಲ, ದೇಶ ಕಾಯುವ ಸೈನಿಕ: ದೆಹಲಿ ಹಿಂಸಾಚಾರದಲ್ಲಿ ಗಾಯಗೊಂಡ ಪೋಲಿಸ್ ಎಸ್ಐ ಮಗಳ ಭಾವುಕ ನುಡಿ
ದೆಹಲಿಯ ಜಂತರ್ ಮಂತರ್ ಬಳಿ ನಡೆದ ವಿದ್ಯಾರ್ಥಿ ಪ್ರತಿಭಟನೆಯ ಹಿಂಸಾಚಾರದ ವೇಳೆ ಗಂಭೀರವಾಗಿ ಗಾಯಗೊಂಡ ದೆಹಲಿ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (SI) ಅವರ ಮಗಳು, ತಮ್ಮ ತಂದೆಗೆ ನ್ಯಾಯ ಒದಗಿಸುವಂತೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಜಾಲತಾಣಗಳಲ್ಲಿ ತಮ್ಮ ತಂದೆಯನ್ನು ‘ಕ್ರಿಮಿನಲ್’ ಎಂದು ಬಿಂಬಿಸುತ್ತಿರುವುದಕ್ಕೆ ಆಕೆ ತೀವ್ರ ಆಕ್ರೋಶ ಹಾಗೂ ನೋವು ವ್ಯಕ್ತಪಡಿಸಿದ್ದಾರೆ. "ನನ್ನ ತಂದೆ ದೆಹಲಿ ಪೊಲೀಸ್ ಇಲಾಖೆಗೆ ಸೇರುವ ಮೊದಲು ಭಾರತೀಯ ನೌಕಾಪಡೆಯಲ್ಲಿ 'ಮರೀನ್ ಕಮಾಂಡೋ' (MARCOS) ಆಗಿ 15 ವರ್ಷಗಳ ಕಾಲ ದೇಶ ಸೇವೆ ಮಾಡಿದ್ದಾರೆ.
ನವದೆಹಲಿ, ಜುಲೈ 31: ದೆಹಲಿಯ ಜಂತರ್ ಮಂತರ್ ಬಳಿ ನಡೆದ ವಿದ್ಯಾರ್ಥಿ ಪ್ರತಿಭಟನೆಯ ಹಿಂಸಾಚಾರದ ವೇಳೆ ಗಂಭೀರವಾಗಿ ಗಾಯಗೊಂಡ ದೆಹಲಿ ಪೊಲೀಸ್ ಸಬ್-ಇನ್ಸ್‌ಪೆಕ್ಟರ್ (SI) ಅವರ ಮಗಳು, ತಮ್ಮ ತಂದೆಗೆ ನ್ಯಾಯ ಒದಗಿಸುವಂತೆ ಕೋರಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಜಾಲತಾಣಗಳಲ್ಲಿ ತಮ್ಮ ತಂದೆಯನ್ನು ‘ಕ್ರಿಮಿನಲ್’ ಎಂದು ಬಿಂಬಿಸುತ್ತಿರುವುದಕ್ಕೆ ಆಕೆ ತೀವ್ರ ಆಕ್ರೋಶ ಹಾಗೂ ನೋವು ವ್ಯಕ್ತಪಡಿಸಿದ್ದಾರೆ. “ನನ್ನ ತಂದೆ ದೆಹಲಿ ಪೊಲೀಸ್ ಇಲಾಖೆಗೆ ಸೇರುವ ಮೊದಲು ಭಾರತೀಯ ನೌಕಾಪಡೆಯಲ್ಲಿ ‘ಮರೀನ್ ಕಮಾಂಡೋ’ (MARCOS) ಆಗಿ 15 ವರ್ಷಗಳ ಕಾಲ ದೇಶ ಸೇವೆ ಮಾಡಿದ್ದಾರೆ.
ಅವರು ಜಂತರ್ ಮಂತರ್‌ನಲ್ಲಿ ಕಟ್ಟುನಿಟ್ಟಿನ ಭದ್ರತಾ ಕರ್ತವ್ಯದಲ್ಲಿದ್ದರು” ಎಂದು ಹೇಳಿದ್ದಾರೆ. ತಂದೆ ರಾತ್ರಿ ಮನೆಗೆ ಬಂದಾಗ, ಇದು ಕೇವಲ ವಿದ್ಯಾರ್ಥಿ ಪ್ರತಿಭಟನೆಯಂತೆ ಕಾಣುತ್ತಿಲ್ಲ, ಇದರ ಹಿಂದೆ ಹಲವು ಸಮಾಜಘಾತಕ ಶಕ್ತಿಗಳು ಕೈಜೋಡಿಸಿವೆ ಎಂದು ಆಗಾಗ ಹೇಳುತ್ತಿದ್ದರು ಎಂದು ಆಕೆ ನೆನಪಿಸಿಕೊಂಡಿದ್ದಾರೆ.
ಜುಲೈ 25 ರಂದು ಮಧ್ಯಾಹ್ನ ಸುಮಾರು 7 ಗಂಟೆಯ ವೇಳೆಗೆ ಜಂತರ್ ಮಂತರ್ ಸ್ಟೇಜ್ ಬಳಿ ರೊಚ್ಚಿಗೆದ್ದ ಉಗ್ರ ಗುಂಪೊಂದು ಎಸ್‌ಐ ಅವರನ್ನು ಎಳೆದಾಡಿ, ಭೀಕರವಾಗಿ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದೆ. ಸೋಷಿಯಲ್ ಮೀಡಿಯಾದಲ್ಲಿ ತಮ್ಮ ತಂದೆಯನ್ನೇ ಕ್ರಿಮಿನಲ್ ಎಂದು ಕರೆಯಲಾಗುತ್ತಿದೆ ಹಾಗೂ ಆತನ ಮೇಲೆ ಹಲ್ಲೆ ಮಾಡಿದವರೇ ಸುಪ್ರೀಂ ಕೋರ್ಟ್‌ಗೆ ತೆರಳಿ ಪೊಲೀಸರ ವಿರುದ್ಧ ದೂರು ನೀಡಲು ಯತ್ನಿಸುತ್ತಿದ್ದಾರೆ ಎಂಬ ವಿಷಯ ತಿಳಿದು ಕುಟುಂಬ ತೀವ್ರ ಆಘಾತಕ್ಕೊಳಗಾಗಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

