KPSC Recruitment 2022: ಕರ್ನಾಟಕ ಲೋಕಸೇವಾ ಆಯೋಗ ಗ್ರೂಪ್ ಎ ಹುದ್ದೆಗಳಿಗೆ ಅರ್ಜಿ ಅಹ್ವಾನ; ಇಲ್ಲಿದೆ ಸಂಪೂರ್ಣ ಮಾಹಿತಿ
KPSC Recruitment 2022: ಪೊಲೀಸ್ ಇಲಾಖೆಯ ನ್ಯಾಯ ವಿಜ್ಞಾನ ಪ್ರಯೋಗಾಲಗಳಲ್ಲಿನ ಸಹಾಯಕ ನಿರ್ದೇಶಕರ ಹುದ್ದೆಗಳಿಗೆ ಎಸ್‌ಎಸ್‌ಎಲ್‌ಸಿ ಹಂತದಲ್ಲಿನ ಪ್ರಥಮ ಭಾಷೆ ಕನ್ನಡವನ್ನು ಮಾನದಂಡವನ್ನಾಗಿಟ್ಟುಕೊಂಡು ಪ್ರಶ್ನೆ ಸಿದ್ಧಪಡಿಸಲಾಗುತ್ತದೆ.
ಕರ್ನಾಟಕ ಲೋಕಸೇವಾ ಆಯೋಗವು, ಕರ್ನಾಟಕ ನಾಗರೀಕ ಸೇವಾ ನಿಯಮಗಳು 2021ರನ್ವಯ ಗ್ರೂಪ್-ಎ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಹೊರಡಿಸಿದೆ. ಅರ್ಹ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು. ಗ್ರೂಪ್- ಎ ಹುದ್ದೆಗಳಾದ ಪೊಲೀಸ್ ಇಲಾಖೆಯ ನ್ಯಾಯ ವಿಜ್ಞಾನ ಪ್ರಯೋಗಾಲಗಳಲ್ಲಿ ಸಹಾಯಕ ನಿರ್ದೇಶಕರು (ವಿಷವಿಜ್ಞಾನ ವಿಭಾಗ), ಸಹಾಯಕ ನಿರ್ದೇಶಕರು (ಜೀವಶಾಸ್ತ್ರ ವಿಭಾಗ), ಸಹಾಯಕ ನಿರ್ದೇಶಕರು (ಡಿಎನ್ಎ ವಿಭಾಗ), ಸಹಾಯಕ ನಿರ್ದೇಶಕರು (ರಸಾಯನಿಕ ವಿಭಾಗ), ಸಹಾಯಕ ನಿರ್ದೇಶಕರು (ಪ್ರಶ್ನಿತ ದಸ್ತಾವೇಜು ವಿಭಾಗ) ಅರ್ಜಿ ಸಲ್ಲಿಸಬಹುದಾಗಿದೆ. ಈ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿ ಈ ಕೆಳಗಿನಂತಿವೆ.
KPSC Recruitment 2022: ಹುದ್ದೆಗಳ ವಿವರ:
ಸಹಾಯಕ ನಿರ್ದೇಶಕರು(ವಿಷವಿಜ್ಞಾನ ವಿಭಾಗ): 03 ಹುದ್ದೆಗಳು ಸಹಾಯಕ ನಿರ್ದೇಶಕರು (ಜೀವಶಾಸ್ತ್ರ ವಿಭಾಗ): 02 ಹುದ್ದೆಗಳು ಸಹಾಯಕ ನಿರ್ದೇಶಕರು (ಡಿಎನ್ಎ ವಿಭಾಗ): 01 ಹುದ್ದೆ ಸಹಾಯಕ ನಿರ್ದೇಶಕರು (ರಸಾಯನಿಕ ವಿಭಾಗ): 02 ಹುದ್ದೆಗಳು ಸಹಾಯಕ ನಿರ್ದೇಶಕರು (ಪ್ರಶ್ನಿತ ದಸ್ತಾವೇಜು ವಿಭಾಗ): 02 ಹುದ್ದೆಗಳು ಒಟ್ಟು : 10 ಹುದ್ದೆಗಳು
KPSC Recruitment 2022: ಅರ್ಹತಾ ಮಾನದಂಡ:
ವಿಷವಿಜ್ಞಾನ ವಿಭಾಗ: ವಿಷವಿಜ್ಞಾನ ವಿಭಾಗಕ್ಕೆ ಸಂಬಂಧಿಸಿದ ಪದವಿ ಜೀವಶಾಸ್ತ್ರ ವಿಭಾಗ: ಜೀವಶಾಸ್ತ್ರಕ್ಕೆ ಸಂಬಂಧಿಸಿದ ಪದವಿ ಡಿಎನ್ಎ ವಿಭಾಗ: ಡಿಎನ್ಎ ಪದವಿ ರಸಾಯನಿಕ ವಿಭಾಗ: ರಸಾಯನಿಕ ವಿಜ್ಞಾನ ಪದವಿ ಪ್ರಶ್ನಿತ ದಸ್ತಾವೇಜು ವಿಭಾಗ: ಪ್ರಶ್ನಿತ ದಸ್ತಾವೇಜು ವಿಭಾಗಕ್ಕೆ ಸಂಬಂಧಿಸಿದ ಪದವಿ
KPSC Recruitment 2022: ಅನುಭವ:
ಸದರಿ ಸೂಚನೆಯಲ್ಲಿನ ಹುದ್ದೆಗಳಿಗೆ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಅನುಭವವನ್ನು ನಿಗದಿಪಡಿಸಿದ್ದು, ಈ ಸಂಬಂಧ ಅಧಿಸೂಚನೆಯಲ್ಲಿ ತೋರಿಸಿರುವ ನಮೂನೆಯಲ್ಲಿಯೇ ಅರ್ಜಿಗಳನ್ನು ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕದೊಳಗೆ ಅನುಭವ ಪ್ರಮಾಣ ಪತ್ರವನ್ನು ಪಡೆದುಕೊಂಡು ಕಡ್ಡಾಯವಾಗಿ ಅಪ್ಲೋಡ್ ಮಾಡತಕ್ಕದ್ದು ಹಾಗೂ ಅರ್ಜಿಯಲ್ಲಿ ಅಂಕಣದಲ್ಲಿ ವಿವರಗಳನ್ನು ಭರ್ತಿ ಮಾಡತಕ್ಕದ್ದು, ನಿಗದಿತ ನಮೂನೆಯನ್ನು ಹೊರತುಪಡಿಸಿ ಇತರ ನಮೂನೆಗಳಲ್ಲಿ ಪಡೆದಿರುವ ಪ್ರಮಾಣ ಪತ್ರಗಳನ್ನು ಪರಿಗಣಿಸುವುದಿಲ್ಲ.
KPSC Recruitment 2022: ಅರ್ಜಿ ಶುಲ್ಕ:
ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ: 600 ರೂ. ಪ್ರವರ್ಗ 2(ಎ), 2(ಬಿ), 3(ಎ), 3(ಬಿ) ಗೆ ಸೇರಿದ ಅಭ್ಯರ್ಥಿಗಳಿಗೆ: 300 ರೂ. ಮಾಜಿ ಸೈನಿಕ ಅಭ್ಯರ್ಥಿಗಳಿಗೆ: 50 ರೂ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಪ್ರವರ್ಗ- 1 ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ: ಶುಲ್ಕ ಪಾವತಿಯಿಂದ ವಿನಾಯಿತಿ ಇದೆ.
KPSC Recruitment 2022: ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ನಿಗದಿಪಡಿಸಿರುವ ಪ್ರಾರಂಭಿಕ ದಿನಾಂಕ: 16-03-2022 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 18-04-2022 ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 19-04-2022
KPSC Recruitment 2022: ಅರ್ಜಿ ಸಲ್ಲಿಸುವುದು ಹೇಗೆ?
ಈ ಹುದ್ದೆಗಳಿಗೆ ಈ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬಹುದು.
ಈ ಹುದ್ದೆಗಳ ನೇಮಕಾತಿ ಕುರಿತಾದ ಮತ್ತಷ್ಟು ಮಾಹಿತಿಗಾಗಿ ಹಾಗೂ ಅಧಿಕೃತ ಅಧಿಸೂಚನೆಯನ್ನು ಪರಿಶೀಲಿಸಲು ಇಲ್ಲಿ ಕ್ಲಿಕ್ ಮಾಡಿ.
ಇದನ್ನೂ ಓದಿ: Recruitment 2022: ಆರ್ಮಿ ಪಬ್ಲಿಕ್ ಸ್ಕೂಲ್‌ನಲ್ಲಿನ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ
IOCL Recruitment 2022: ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸಹಾಯಕ ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ